ಬೆಂಗಳೂರು ಎಂದರೆ ಕೇವಲ ಉದ್ಯಾನಗಳ ನಗರವಲ್ಲ.  ಇಲ್ಲಿನ ಪ್ರತಿಯೊಂದು ಹಳೆಯ ರಸ್ತೆಯೂ ತನ್ನದೇ ಆದ ಇತಿಹಾಸ, ಸಂಸ್ಕೃತಿ ಮತ್ತು ಬದುಕಿನ ಕಥೆಯನ್ನು ಹೇಳುತ್ತದೆ. ಕೆಲವು ರಸ್ತೆಗಳಿಗೆ ಬ್ರಿಟಿಷ್ ಅಧಿಕಾರಿಗಳ ಹೆಸರುಗಳಿದ್ದರೆ, ಇನ್ನು ಕೆಲವು ರಸ್ತೆಗಳು ಅರಮನೆಗಳು, ಕೆರೆಗಳು, ದೇವಾಲಯಗಳು ಮತ್ತು ಐತಿಹಾಸಿಕ ಘಟನೆಗಳ ನೆನಪನ್ನು ಉಳಿಸಿಕೊಂಡಿವೆ. ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ರಸ್ತೆಗಳ ಪೈಕಿ ಬೆಂಗಳೂರಿನ ಪೂರ್ವ ಭಾಗದಲ್ಲಿರುವ ವೀಲ್ಹರ್ಸ್ ರಸ್ತೆ (Wheeler Road) ಕೂಡ ಒಂದು. ಒಂದು ಕಾಲದಲ್ಲಿ ಬ್ರಿಟಿಷರ ಆಡಳಿತ ವ್ಯವಸ್ಥೆಯ ಭಾಗವಾಗಿದ್ದ ಈ ಪ್ರದೇಶ ಇಂದು ಬೆಂಗಳೂರಿನ ವಿಶಿಷ್ಟ ಆಹಾರ ಸಂಸ್ಕೃತಿ ಮತ್ತು ಬಹುಸಂಸ್ಕೃತಿಯ ಬದುಕಿನ ಪ್ರಮುಖ ತಾಣವಾಗಿ ಬೆಳೆದಿದೆ. ಭಾರತದ ಇತಿಹಾಸದಲ್ಲಿ ವೀಲ್ಹರ್ಸ್ ಎಂಬ ಇಬ್ಬರು ಬ್ರಿಟಿಷ್ ಅಧಿಕಾರಿಗಳ ಪ್ರಸ್ತಾಪವಿದ್ದು, ವೀಲ್ಹರ್ಸ್ ರಸ್ತೆಯ ಹೆಸರಿನ ಹಿಂದಿನ ಕಥೆಯೇನು? ಬ್ರಿಟಿಷರ ಕಾಲದಲ್ಲಿ ಈ ಪ್ರದೇಶ ಹೇಗಿತ್ತು? ಇಂದಿನ ಬೆಂಗಳೂರಿನಲ್ಲಿ ಅದು ಯಾವ ರೀತಿಯ ಸ್ಥಾನವನ್ನು ಪಡೆದುಕೊಂಡಿದೆ?  ಎಂಬ ರೋಚಕತೆಯನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಇಂದಿನ ವೀಲ್ಹರ್ಸ್ ರಸ್ತೆಯನ್ನು ನೋಡಿದರೆ ಜನನಿಬಿಡ ವಾಣಿಜ್ಯ ಪ್ರದೇಶ, ಹಳೆಯ ಮನೆಗಳು, ಬೇಕರಿಗಳು, ಮಾಂಸಾಹಾರಿ ಖಾದ್ಯಗಳ ಅಂಗಡಿಗಳು, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮುದಾಯಗಳ ಸಹಬಾಳ್ವೆ ಕಣ್ಣಿಗೆ ಬೀಳುತ್ತದೆ. ಆದರೆ ಈ ರಸ್ತೆಯ ಹೆಸರಿನ ಹಿಂದೆ 1857ರ ಭಾರತೀಯ ದಂಗೆಯ ಇತಿಹಾಸವಿದೆಯೇ. ಹಾಗೆಯೇ, ಈ ಪ್ರದೇಶದ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಬ್ರಿಟಿಷರ ಕಾಲದ ಬೆಂಗಳೂರು ಕಂಟೋನ್ಮೆಂಟ್, 19ನೇ ಶತಮಾನದ ಪ್ಲೇಗ್ ಸಾಂಕ್ರಾಮಿಕ ಮತ್ತು ನಗರದ ವಿಸ್ತರಣೆಯನ್ನೂ ತಿಳಿದುಕೊಳ್ಳಬೇಕು.

ವೀಲ್ಹರ್ಸ್ ರಸ್ತೆ ಎಂಬ ಹೆಸರು ಬಂದಿದ್ದು ಯಾರಿಂದ?

Wheeler Road Extension , Bangalore: Map, Property Rates, Projects, Photos, Reviews, Info

ವೀಲ್ಹರ್ಸ್ ರಸ್ತೆಯ ಇತಿಹಾಸದಲ್ಲಿ ಮೊದಲು ಸ್ಪಷ್ಟಪಡಿಸಬೇಕಾದ ಒಂದು ಪ್ರಮುಖ ಅಂಶವಿದೆ. ಈ ರಸ್ತೆಗೆ 1857ರ ಭಾರತೀಯ ದಂಗೆಯಲ್ಲಿ ಕಾನ್ಪುರದ ಬ್ರಿಟಿಷ್ ಸೇನಾಪಡೆಯ ಮುಖ್ಯಸ್ಥರಾಗಿದ್ದ ಮೇಜರ್ ಜನರಲ್ ಸರ್ ಹ್ಯೂ ಮಾಸ್ಸಿ ವೀಲ್ಹರ್ (Hugh Massy Wheeler) ಅವರ ಹೆಸರನ್ನು ಇಡಲಾಗಿದೆ ಎಂಬ ಉಲ್ಲೇಖಗಳು ಕೆಲವು ಕಡೆ ಕಂಡುಬರುತ್ತವೆ. ಆದರೆ ಬೆಂಗಳೂರಿನ ಸ್ಥಳೀಯ ಇತಿಹಾಸದ ಕುರಿತು ಪ್ರಕಟವಾಗಿರುವ ವರದಿಗಳ ಪ್ರಕಾರ, ವೀಲ್ಹರ್ಸ್ ರಸ್ತೆ ಮತ್ತು ಕ್ಲೀವ್‌ಲ್ಯಾಂಡ್ ಟೌನ್‌ಗೆ ಹೆಸರು ಬಂದಿರುವುದು ಜನರಲ್ ಜಾನ್ ವೀಲ್ಹರ್ ಕ್ಲೀವ್‌ಲ್ಯಾಂಡ್ (John Wheeler Cleveland) ಅವರಿಂದ ಎಂಬುದಕ್ಕೆ ಹೆಚ್ಚಿನ ಆಧಾರಗಳಿವೆ. ಬೆಂಗಳೂರಿನ Bangalore Mirror ಪತ್ರಿಕೆಯ ಐತಿಹಾಸಿಕ ಬರಹವೂ ಇದನ್ನೇ ದಾಖಲಿಸಿದೆ. ಹೀಗಾಗಿ, ಈ ರಸ್ತೆಯ ಹೆಸರನ್ನು 1857ರ ದಂಗೆಯೊಂದಿಗೆ ನೇರವಾಗಿ ಜೋಡಿಸುವ ಮೊದಲು ಈ ಇಬ್ಬರು ಬ್ರಿಟಿಷ್ ಸೇನಾಧಿಕಾರಿಗಳ ನಡುವಿನ ವ್ಯತ್ಯಾಸವನ್ನು ಗಮನಿಸುವುದು ಅಗತ್ಯ.

ಜನರಲ್ ಜಾನ್ ವೀಲ್ಹರ್ ಕ್ಲೀವ್‌ಲ್ಯಾಂಡ್ ಯಾರು?

ಜಾನ್ ವೀಲ್ಹರ್ ಕ್ಲೀವ್‌ಲ್ಯಾಂಡ್ ಅವರು ಬ್ರಿಟಿಷರ ಆಡಳಿತ ಮತ್ತು ಸೇನಾ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿದ್ದ ಹಿರಿಯ ಅಧಿಕಾರಿ. ಹರ್ ಮೆಜೆಸ್ಟಿಯ ಸೈನ್ಯದಲ್ಲಿ (ಮದ್ರಾಸ್ ಸ್ಥಾಪನೆ)  ಮೇಜರ್ ಜನರಲ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.  ಅವರು 19ನೇ ಶತಮಾನದ ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶದಲ್ಲಿ ವಾಸವಿದ್ದವರು. ಅವರು 1865 ರ ಸುಮಾರಿಗೆ ಬೆಂಗಳೂರಿನ ಕ್ಲೀವ್‌ಲ್ಯಾಂಡ್ ಪಟ್ಟಣದ ಕ್ಲೀವ್‌ಲ್ಯಾಂಡ್ ರಸ್ತೆ ಮತ್ತು ಪ್ರೊಮೆನೇಡ್ ರಸ್ತೆಯ ಮೂಲೆಯಲ್ಲಿ ಕ್ಲೀವ್‌ಲ್ಯಾಂಡ್ ಲಾಡ್ಜ್ (ನಂತರ ಫಿಲೋಮಿನಾ ಪೆವಿಲಿಯನ್ ಎಂದು ಕರೆಯಲ್ಪಟ್ಟಿತು ) ಎಂಬ ಪ್ರಮುಖ ವಿಂಟೇಜ್ ಬಂಗಲೆಯನ್ನು ನಿರ್ಮಿಸಿದರು . ಅವರ ಹೆಸರಿನೊಂದಿಗೆ ಕ್ಲೀವ್‌ಲ್ಯಾಂಡ್ ಟೌನ್ ಮತ್ತು ವೀಲ್ಹರ್ಸ್ ರಸ್ತೆಯನ್ನು ಗುರುತಿಸಲಾಗುತ್ತದೆ. ಅವರ ಪತ್ನಿ ಲೂಯಿಸಾ ಎಲಿಜಬೆತ್ ಕ್ಲೀವ್‌ಲ್ಯಾಂಡ್ ಅವರೊಂದಿಗೆ ಬೆಂಗಳೂರಿನ ಕಲ್ಲಪಲ್ಲಿ ಸ್ಮಶಾನದಲ್ಲಿ ಸಮಾಧಿ ಮಾಡಲಾಗಿದೆ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ