ಚದುರಿಹೋದ ಜನರ ಸುರಕ್ಷತೆ ಸಮಾಜದ ಹೊಣೆ ಅಲ್ಲವೇ?

ಕೆಲವು ಜನರ ಎಂದಿನ ಬಾಳಹಳಿ ತಪ್ಪಿ ಹೇಗೋ ಹರಿದರೆ, ಏನು ಬೇಕಾದರೂ ಆದೀತು. ಇದು ದೆಹಲಿಯ 42 ವರ್ಷದ ಹೆಂಗಸು ಹಾಗೂ ಆಕೆಯ 5, 18 ವರ್ಷದ ಹೆಣ್ಣುಮಕ್ಕಳ ಕರುಣಾಜನಕ ಆತ್ಮಹತ್ಯೆಯಿಂದ ಸ್ಪಷ್ಟವಾಗುತ್ತದೆ. ದೊರೆತಂಥ ತುಸು ಫ್ಯಾಕ್ಟ್ಸ್ ಆಧರಿಸಿ ನೋಡಿದರೆ, ಒಂದು ಮದುವೆ ಮುರಿದ ನಂತರ, ಪೂಜಾ ಎಂಬ ಈ ಹೆಂಗಸು ಅನೇಕ ಗಂಡಸರೊಂದಿಗೆ ಸಂಪರ್ಕ ಹೊಂದಿದ್ದಳು. ಆಕೆ ದೆಹಲಿಯ ಮೋಲರ್‌ ಬಂದ್‌ ಏರಿಯಾದಲ್ಲಿ ಒಂದೇ ಕೋಣೆಯ ಫ್ಲಾಟ್‌ ನಲ್ಲಿದ್ದಳು. ಈಕೆ ಈಗಾಗಲೇ ಒಬ್ಬ ಲಿವಿಂಗ್‌ ಪಾರ್ಟನರ್‌ ನ ಹತ್ಯೆಯ ಆರೋಪ ಸಹ ಎದುರಿಸುತ್ತಿದ್ದಳು. ನಂತರ ಆಕೆ ಮತ್ತು ಅವಳ 25ರ ಮಗ ಜೇಲು ಸೇರಬೇಕಾಯಿತು. ಆದರೆ ಹೇಗೋ ಏನೋ ಅದರಿಂದ ಬಿಡುಗಡೆ ಆಗಿತ್ತು. ಆಕೆಯ ಎರಡನೇ ಲಿವ್ ಇನ್‌ ಪಾರ್ಟ್‌ ನರ್‌ ನ ಸಾವು ಸಹ ಕೆಲವು ದಿನಗಳ ಹಿಂದೆ ಆಗಿತ್ತು. ಅವಳ ಕೆಲಸ ಹೋಗಿತ್ತು. ಇದರಿಂದ ಹತಾಶಳಾದ ಈಕೆ, ಇಬ್ಬರು ಹೆಣ್ಣುಮಕ್ಕಳ ಸಮೇತ ಆತ್ಮಹತ್ಯೆಗೆ ಶರಣಾದಳು.

ಇದುವರೆಗೂ ಸ್ಪಷ್ಟವಾಗದ ಸಂಗತಿ ಎಂದರೆ, ಇಂಥ ಹೆಂಗಸರ ಜೀವನ ಹೇಗೋ ಸೊಟ್ಟಂಪಟ್ಟ ಜರುಗಿದರೂ, ಹೀಗೆಲ್ಲ ಏಕೆ ಆಗುತ್ತದೆ? 25ರ ಮಗ, 18ರ ಹಿರಿ ಮಗಳು, 5ರ ಕಿರಿಮಗಳು, ಬಾಡಿಗೆಯ 1 ಕೋಣೆಯ ಮನೆ, ನೀಟ್‌ ಡ್ರೆಸ್‌, ಫೋಟೋದಿಂದ ಅನುಕೂಲಸ್ಥ ಹೆಣ್ಣು, ಮೂರು ಮಕ್ಕಳೊಂದಿಗೆ ಈಕೆ ಹೇಗೆ ತಾನೇ ಜೀವನ ನಡೆಸುತ್ತಾಳೆ?

ಈ ತರಹದ ಜನರಲ್ಲಿ, ಹೆಣ್ಣುಮಕ್ಕಳೂ ಸೇರಿರುವಾಗ, ಇಂಥವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಏಕೆಂದರೆ ಸಪೋರ್ಟ್‌ ಮಾಡುವ ಫ್ಯಾಮಿಲಿ ಮೆಂಬರ್‌ ಕಡಿಮೆ ಆಗುತ್ತಿದ್ದಾರೆ. ತಾಯಿ ತಂದೆ ಇದ್ದರೂ ಅವರೇನೂ ಸತ್ತಿರುವುದಿಲ್ಲ, ಬಹುಶಃ ಬೇರೆ ಬೇರೆ ಆಗಿರಬಹುದು, ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸದೆ, ಹೇಗೋ ಚಿಂದಿಯಾದ ತಮ್ಮ ಬದುಕನ್ನು ಮುನ್ನಡೆಸಲು ಬಯಸುತ್ತಾರೆ.

ಎಲ್ಲಕ್ಕಿಂತ ದುಃಖದ ಸಂಗತಿ ಎಂದರೆ, ಸಮಾಜ ಯಾ ಸರ್ಕಾರ, ಇವೆಲ್ಲಕ್ಕಿಂತ ಹಿರಿದಾದ ಧರ್ಮ, ಹೀಗೆ ಪೀಡಿತ ವ್ಯಕ್ತಿಗಳಿಗೆ ಯಾವ ಆಸರೆಯನ್ನೂ ನೀಡದು. ಸಮಾಜ ಅತ್ತ ತನ್ನ ನಿಯಮಗಳನ್ನು ಹೇರುತ್ತಿದ್ದರೆ, ಸರ್ಕಾರ ಎಲ್ಲ ರೀತಿಯ ತೆರಿಗೆ ಕೇಳುತ್ತದೆ. ಧರ್ಮ ಕೇವಲ ಕನಸು ತೋರಿಸಿ, ಅಂಗೈಲಿ ಆಕಾಶ ತೋರಿಸಿ, ದಾನದಕ್ಷಿಣೆ ಕಿತ್ತುಕೊಳ್ಳುತ್ತದೆ. ಆದರೆ ಇಂಥ ತೊಂದರೆಗೊಳಗಾದ ಹೆಂಗಸರ ರಕ್ಷಣೆಗೆ ಯಾರೂ ಬರುವುದಿಲ್ಲ.

ಸರಿ ತಪ್ಪುಗಳ ಅಂತರ ಮರೆತ ಇಂಥ ಹೆಂಗಸರು, ತನ್ನ ಮೊದಲ ಪತಿ, ನಂತರದ ಪ್ರೇಮಿಗಳು, ಲಿವ್ ‌ಇನ್‌ ಪಾರ್ಟ್‌ ನರ್‌ ಗಳೇ ಬಲಿ ಆಗಿಹೋಗುತ್ತಾರೆ, ಅಥವಾ ತಾನೇ ಅವರನ್ನು ಬೇಟೆ ಆಡುತ್ತಾರೆ. ಈ ಯಾವ ವಿಷಯಗಳನ್ನೂ ತಿಳಿದುಕೊಳ್ಳುವ ಆಸಕ್ತಿ ಸಮಾಜದ ಯಾರಿಗೂ ಇರುವುದಿಲ್ಲ. ತಂತಮ್ಮ ಬಿಝಿ ಲೈಫ್‌ ನಲ್ಲಿ ಯಾರೂ ಇಂಥ ಹೊರಗಿನರವ ಆಪತ್ತನ್ನು ಮನೆಗೆ ತರಲು ಬಯಸುವುದಿಲ್ಲ. ಆದರೆ ಯಾಕೆ? ಸಮಾಜ, ಸಮುದಾಯ, ನಗರ, ಕಾನೂನು, ನಿಯಮಗಳು ಅದರಲ್ಲಿ ಮುಳುಗಿದ ಜನರಿಗೆ ಸರಿ ದಾರಿ ತೋರುವರು, ಕೈ ಹಿಡಿದು ನಡೆಸುವರು, ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುವವರು ಯಾಕಿಲ್ಲ? ಮಾನವರು ಇಂಥ ದೊಡ್ಡ ಬದುಕು ರೂಪಿಸಿಕೊಂಡು, ವಿಜ್ಞಾನದಿಂದ ಮುನ್ನಡೆಯುತ್ತಾ, ಕೆಲವರು ಮಾತ್ರ ಹೀಗೆ ಅಸಹಾಯಕರಾಗಿ ದಾರಿತಪ್ಪಿ ಹೋಗುತ್ತಾರೇಕೆ? ಬದುಕಿನ ಗಾಡಿಯಲ್ಲಿ ಸುಗಮವಾಗಿ ಚಲಿಸಲಾರದ ಇವರನ್ನು ನಡುದಾರಿಯಲ್ಲಿ ಹೀಗೆ ತಳ್ಳಿಬಿಡುವುದೇಕೇ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ