ಚೇರ್ ಪರ್ಸನ್‌ಮ್ಯಾನೇಜಿಂಗ್ ಡೈರೆಕ್ಟರ್, ಫಸ್ಟ್ ಗ್ಲೋಬಲ್
ಗಣಿತ ಕಲಿಯಲು ಇಷ್ಟ, ಆದರೆ ಸೇರಲು ಇಷ್ಟವಿಲ್ಲ ಎಂದಾಗ ಬೇರೇನು ಮಾಡಬಹುದು, ಈ ವಿವರಗಳನ್ನು ದೇವೀನಾರಿಂದ ಕೇಳಿ ತಿಳಿಯಿರಿ....
ದೇವೀನಾ ಮೆಹ್ರಾ ಭಾರತದ ಪ್ರಪ್ರಥಮ ಇನ್ ವೆಸ್ಟಿಂಗ್ ಫರ್ಮ್ `ಫಸ್ಟ್ ಗ್ಲೋಬಲ್'ನ ಫೌಂಡರ್ ಎನಿಸಿದ್ದಾರೆ. ಈಕೆ ವಿಶ್ವದ ಪ್ರತಿಯೊಂದು ಸ್ಟಾಕ್ ಮಾರ್ಕೆಟ್‌ಪತ್ರಿಕೆಗಳಲ್ಲಿ ಹೆಸರು ಗಳಿಸಿದ್ದಾರೆ. ಇಂದು ಗೃಹಶೋಭಾ ಇವರ ಸಂದರ್ಶನದಿಂದ, ಕಾಲೇಜ್ ನಲ್ಲಿ ಹೊಸ ಕೋರ್ಸುಗಳ ಅಡ್ಮಿಶನ್ ಕೋರುವ ವಿದ್ಯಾರ್ಥಿಗಳಿಗೆಂದೇ ವಿಶೇಷ ಸಲಹೆಗಳನ್ನು ಸಂಗ್ರಹಿಸಿದೆ :
ನಿಮ್ಮ ಎಜುಕೇಶನ್ ಜರ್ನಿ ಹೇಗಿತ್ತು?
ನಾನು ಅಂಡರ್ ಗ್ರಾಜುಯೇಶನ್ ಗಾಗಿ ದೆಹಲಿಗೆ ಹೋದಾಗ, ಇಲ್ಲಿ ಆನರ್ಸ್ ನಲ್ಲಿ ಸಬ್ಸಿಡರಿ ಸಬ್ಜೆಕ್ಟ್ ನ ಅಂಕಗಳು ಕೂಡುವುದಿಲ್ಲ ಅಂತ ಗೊತ್ತಾಗಿ, 1 ವರ್ಷದ ನಂತರ ನಾನು ಲಖ್ನೌನ ವಿ.ವಿ.ದಲ್ಲಿ ಅಡ್ಮಿಶನ್ ಪಡೆದೆ. ಇಲ್ಲಿ ನಾನು ಗಣಿತ, ಇಂಗ್ಲಿಷ್, ಸಂಖ್ಯಾಶಾಸ್ತ್ರ ಆರಿಸಿಕೊಂಡಿದ್ದೆ. ಅದು ನನ್ನ ಮುಂದಿನ ಜೀವನಕ್ಕೆ ಆಧಾರವಾಯ್ತು. ಅಲ್ಲಿ ನನ್ನ ಪರ್ಫಾರ್ಮೆನ್ಸ್ ನಿಂದಾಗಿ ಮುಂದೆ ನನಗೆ ಅಹಮದಾಬಾದಿನಲ್ಲಿ ಅಡ್ಮಿಶನ್ ಪಡೆದೆ.
ನಿಮ್ಮ ಪ್ರೊಫೆಶನ್ ನಲ್ಲಿ ಅತಿ ಆನಂದದಾಯಕ ಹಾಗೂ ಸವಾಲುಭರಿತ ಕ್ಷಣಗಳ ಬಗ್ಗೆ ಹೇಳಿ?
ಆನಂದ ಅಂದ್ರೆ, ಇಡೀ ಪ್ರೊಫೆಶನಲ್ ಒಂದು ಲರ್ನಿಂಗ್ ಪ್ರೋಸೆಸ್ ಆಗಿದ್ದು, ಈ ಸ್ಟಾಕ್ ಮಾರ್ಕೆಟ್ ನಲ್ಲಿ ಪ್ರತಿ ದಿನ ಏನಾದರೊಂದು ಹೊಸತನ್ನು ಕಲಿಯುವ ಅವಕಾಶವಿದೆ! ಮತ್ತೆ ಸವಾಲು ಅಂದ್ರೆ, ಸ್ಟಾಕ್ ಮಾರುಕಟ್ಟೆ ಇರುವುದೇ ನಿಮ್ಮ ತಲೆ ಕೆಡಿಸಿಡಲು.... ಇಂಥ ಅನಿಶ್ಚಿತ ಮಾರುಕಟ್ಟೆಯಲ್ಲಿ ದುಡಿಯುವುದು ಪ್ರತಿ ದಿನ ರಿಸ್ಕೇ!
ಅಕಾಡೆಮಿ ಜೊತೆಗೆ ವಿದ್ಯಾರ್ಥಿಗಳು ಬೇರೆ ಯಾವ ಯಾವ ಸ್ಕಿಲ್ಸ್ ಗೆ ಕಡಿಮೆ ಫೋಕಸ್ ಮಾಡಬೇಕು ಅಂತೀರಿ?
ಎಲ್ಲಕ್ಕೂ ಮೊದಲು ಅವರು ತಮ್ಮ ಕಮ್ಯುನಿಕೇಶನ್ ಸ್ಕಿಲ್ಸ್ ನತ್ತ ಹೆಚ್ಚಿನ ನಿಗಾ ವಹಿಸಬೇಕು. ನೀವು ಜೀವನದಲ್ಲಿ ಮುನ್ನೇರಲು, ಕೆರಿಯರ್ ನಲ್ಲಿ ಅಭಿವೃದ್ಧಿ ಕಾಣಲು, ವಿಶ್ವದ ಅನೇಕ ಜನರನ್ನು ಭೇಟಿಯಾಗಲು, ಡೀಲ್ ಮಾಡಬೇಕೆಂದಿದ್ದರೆ, ನಿಮ್ಮ ಕಮ್ಯುನಿಕೇಶನ್ ಸ್ಕಿಲ್ಸ್ ಉನ್ನತ ಮಟ್ಟದ್ದಾಗಿರಬೇಕು. ಜೊತೆಗೆ ಆಂಗ್ಲ ಭಾಷೆಯ ಮೇಲಿನ ನಿಮ್ಮ ಹಿಡಿತ ಸುಪರ್ಬ್ ಆಗಿರಬೇಕು. ಇಂದು ನೀವು ಯಾವ ಕ್ಷೇತ್ರಕ್ಕೇ ಹೋದರೂ ಮೊದಲು ಚೆನ್ನಾಗಿ ಇಂಗ್ಲಿಷ್ ನಲ್ಲಿ ಸಂಭಾಷಿಸಲು ಬರುತ್ತದೆಯೇ ಎಂದೇ ನೋಡುತ್ತಾರೆ. ಹೀಗಾಗಿ ಇದನ್ನು ಚೆನ್ನಾಗಿ ಇಂಪ್ರೂವ್ ಮಾಡಿಕೊಳ್ಳಿ. ನೀವು ಯಾವ ವಿಭಾಗದಲ್ಲಿ ಪದವಿ ಪಡೆದಿರುತ್ತೀರೋ, ಅದರ ಕುರಿತಾಗಿ ಸಕಲ ವಿವರಗಳ ಮಾಹಿತಿ ಪಡೆದಿಟ್ಟುಕೊಳ್ಳಿ. ಕೇವಲ ಪಠ್ಯ ಪುಸ್ತಕಗಳ ಮಾಹಿತಿ ಸಾಕಾಗುವುದಿಲ್ಲ, ಅದು ಪರೀಕ್ಷೆಗಷ್ಟೇ ಸೀಮಿತ.
ತಮ್ಮ ಮಕ್ಕಳನ್ನು ಯಾವ ಕೋರ್ಸಿಗೆ ಸೇರಿಸುವುದು ಎಂದು ಯಾರೋ ನನ್ನ ತಾಯಿಯನ್ನು ವಿಚಾರಿಸುತ್ತಿದ್ದುದು, ನನಗೆ ಚೆನ್ನಾಗಿ ನೆನಪಿದೆ. ಯಾವ ಕೋರ್ಸ್ ಗೆ (ವಿಜ್ಞಾನ, ಆರ್ಟ್ಸ್, ಕಾಮರ್ಸ್) ಸೇರುವುದು ಎಂಬುದು ಮುಖ್ಯವಲ್ಲ, ಅದನ್ನು ಮುಂದೆ ನೀವು ಹೇಗೆ ನಿಭಾಯಿಸಿಕೊಂಡು ಹೋಗುತ್ತೀರಿ ಎಂಬುದೇ ಮುಖ್ಯ. ಅದರಲ್ಲಿ ನೀವು ಬೆಸ್ಟ್ ಆಗಿರಿ, 100% ಪರಿಶ್ರಮ ವಹಿಸಿ ಎಂದು ಅವರು ಉತ್ತರಿಸಿದ್ದರು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಅರ್ಥ ಮಾಡಿಕಂಡೆ. ಡಿಗ್ರಿ ಸಿಕ್ಕಿತು, ಕೆಲಸ ಗ್ಯಾರಂಟಿ ಎಂದು ಕುಳಿತರೆ ಆಗಲ್ಲ. ಕಾಲಕ್ಕೆ ತಕ್ಕಂತೆ ಯಾವ ಸ್ಕಿಲ್ಸ್ ಬೆಳೆಸಿಕೊಂಡು ಉದ್ಯೋಗ ಗಿಟ್ಟಿಸುವಿರಿ ಎಂಬುದೇ ಮುಖ್ಯ.





