ಎಜುಕೇಶನ್‌ ಅಂದ್ರೆ ಕೇವಲ ಶಾಲಾ ಕಾಲೇಜುಗಳಿಂದ ಡಿಗ್ರಿ ಯಾವ ಪುಸ್ತಕೀಯ ಜ್ಞಾನ ಪಡೆಯುವುದಷ್ಟೇ ಅಲ್ಲ, ಬದಲಿಗೆ ಉನ್ನತ ಮಾಹಿತಿಗಳಿಂದ ಯೋಚನೆ, ಚಿಂತನೆ, ಅರ್ಥೈಸಿಕೊಳ್ಳುವಿಕೆ, ಆಯ್ಕೆ, ಜೀವನ ಶೈಲಿಯ ವಿಧಾನ ಇತ್ಯಾದಿ ಬದಲಾಯಿಸುವ ತಾಕತ್ತು ಹೊಂದಿರುವುದಾಗಿದೆ. ನಮ್ಮ ದೈನಂದಿನ ನಿರ್ಧಾರಗಳಿಂದ ಹಿಡಿದು, ದೊಡ್ಡ ಸಾಮಾಜಿಕ ಬದಲಾವಣೆಗಳವರೆಗೂ ಎಜುಕೇಶನ್‌ ಎಂಬುದು ಎಷ್ಟೋ ಮಟ್ಟಗಳಲ್ಲಿ ಇದೆ. ಎಜುಕೇಶನ್‌ ಇದೆ ಎಂದರೆ ನಿಮ್ಮ ಜೀವನದಲ್ಲಿ ಎಲ್ಲ ಸಾಧ್ಯ. ಜೀವನದ ಸಂಘರ್ಷಗಳಲ್ಲಿ ವಿಜಯ ನಿಶ್ಚಿತ! ಏಕೆಂದರೆ, ಎಜುಕೇಶನ್‌ ಎಂಬ ಆಯುಧದಿಂದ ನೀವು ನಿಮ್ಮ ಜೀವನದ ಪ್ರತಿ ಹೂಡಿಕೆಯನ್ನೂ ಸಂಭಾಳಿಸಬಹುದು, ಹೆಚ್ಚಿಸಬಹುದು ಹಾಗೂ ಮುಂದಿನ ಪೀಳಿಗೆಗೆ ಹಂಚಬಹುದು. ಸೂಕ್ತ ಜ್ಞಾನ ಹಾಗೂ ಉನ್ನತ ಶಿಕ್ಷಣ ಮಾತ್ರವೇ ನಿಮ್ಮ ಬುದ್ಧಿವಂತಿಕೆಗೆ ಸಾಣೆ ಹಿಡಿಯಬಲ್ಲದು, ಯೋಚಿಸಿ, ವಿಚಾರಿಸಿ, ಅರಿಯುವ ಶಕ್ತಿ ನೀಡಬಲ್ಲದು. ಕತ್ತಲೆ ದಾರಿಯಲ್ಲಿ ಬೆಳಕಾಗಿ ನಿಮ್ಮನ್ನು ಗುರಿ ತಲುಪಿಸುತ್ತದೆ!

ಶಿಕ್ಷಣದ ಕಾರಣದಿಂದ ನಾವು ಗಾಳಿಮಾತು, ಭ್ರಮೆ ತುಂಬು ಜಾಹೀರಾತು ಯಾವ ಸುಳ್ಳು ಭರವಸೆಗಳಿಂದ ದೂರವಾಗಿ ನಮ್ಮ ಕೆರಿಯರ್‌, ಆರೋಗ್ಯ, ಹಣ, ಸಂಬಂಧಗಳ ಕುರಿತಾಗಿ ಉತ್ತಮ ನಿರ್ಧಾರಗಳನ್ನು ತಳೆಯಬಹುದಾಗಿದೆ. ಶಿಕ್ಷಣ ಇದ್ದರೆ ಆತ್ಮವಿಶ್ವಾಸ ಹೆಚ್ಚುತ್ತದೆ. ಈ ಭರವಸೆಯೇ ನಮ್ಮನ್ನು ರಿಸ್ಕ್ ತೆಗೆದುಕೊಳ್ಳಲು, ನೌಕರಿ ಬದಲಾಯಿಸಲು, ನಮ್ಮದೇ ಬಿಸ್‌ ನೆಸ್‌ಶುರು ಮಾಡಲು, ಸಾಹಸದ ಪ್ರೇರಣೆ ನೀಡುತ್ತದೆ. ಶಿಕ್ಷಣ ಕೇವಲ `ಡಿಗ್ರಿ' ಗಳಿಸುವುದೊಂದೇ ಅಲ್ಲ, ಬದಲಿಗೆ ಸಮಸ್ಯೆ ನಿವಾರಿಸಲು, ನಮ್ಮ ಮಾತನ್ನು ನಡೆಸಲು, ಸತ್ಯಾಸತ್ಯತೆಗಳ ಬಗ್ಗೆ ತಿಳಿಯಲು ಜ್ಞಾನ ತುಂಬುತ್ತದೆ.

ಸುಶಿಕ್ಷಿತ ತಾಯಿತಂದೆ ಮಾತ್ರ ಮಕ್ಕಳ ಶಿಕ್ಷಣದ ಕುರಿತಾಗಿ ಸರಿಯಾದ ಮಾರ್ಗದರ್ಶನ ನೀಡಬಲ್ಲರು. ಅವರು ಮಕ್ಕಳ ಆರೋಗ್ಯ, ಪೌಷ್ಟಿಕತೆಗಳ ಕುರಿತು ಸೂಕ್ತ ಆಯ್ಕೆ ಮಾಡಬಲ್ಲರು. ಜೊತೆಗೆ ಲಿಂಗಭೇದವಿಲ್ಲದೆ ಗಂಡುಹೆಣ್ಣುಮಕ್ಕಳನ್ನು ಸಮಾನವಾಗಿ ಕಾಣುವ ಸಮಾಜ ನಿರ್ಮಿಸಬಲ್ಲರು. ಅವರು ತಮ್ಮ ಮಕ್ಕಳನ್ನು ವಿಭಿನ್ನ ತರಹದ ಜನರ ಭೇದಭಾವ ನೀತಿಯನ್ನು ಮಾನಸಿಕವಾಗಿ ದೂರ ಮಾಡಬಲ್ಲರು. ಶಿಕ್ಷಣವೆಂದೇ ಜನರಿಗೆ ವೋಟ್‌, ಕಾನೂನು, ಹಕ್ಕುಗಳ ಕುರಿತು ಸ್ಪಷ್ಟ ಚಿತ್ರಣ ನೀಡಬಲ್ಲದು.

ಶಿಕ್ಷಣದಿಂದ ವೈಯಕ್ತಿಕ ಸ್ವಾತಂತ್ರ್ಯ, ಕುಟುಂಬದ ಕ್ಷೇಮ, ಸಮಾಜದ ಪ್ರಗತಿ, ದೇಶದ ಅಭಿವೃದ್ಧಿ ಸಾಧ್ಯ. ಉನ್ನತಿ ಹಾಗೂ ಸಮೃದ್ಧಿಗೆ ಶಿಕ್ಷಣ ಪರ್ಯಾಯವಾಗಿದೆ. ಈ ಕಾರಣದಿಂದಲೇ ಗೃಹಶೋಭಾ ಈ ಸಂಚಿಕೆಯಲ್ಲಿ ಶೈಕ್ಷಣಿಕ ಲೇಖನಗಳಿಗೆ ಮಹತ್ವ ನೀಡಿದೆ. ಇದರಿಂದ ಓದುಗರು ಹೆಚ್ಚಿನ ಲಾಭ ಪಡೆಯಬಹುದು. ತಮಗೂ, ತಮ್ಮ ಮಕ್ಕಳಿಗೂ ಸೂಕ್ತ ನಿರ್ಧಾರ ಕೈಗೊಳ್ಳಲು ಸಹಾಯಕ ಆಗಲಿದೆ. ಹೀಗಾಗಿ ಈ ಸಂಚಿಕೆ ಪೇರೆಂಟ್ಸ್ ಹಾಗೂ ಯುವಜನತೆ ಇಬ್ಬರಿಗೂ ಆಗುವಂತೆ ರೂಪುಗೊಂಡಿದೆ.

ಪ್ರಸ್ತುತ ದಿನಗಳಲ್ಲಿ ಸುಶಿಕ್ಷಿತ ಯುವಜನತೆಯ ಕೆರಿಯರ್‌ ಗೆ ವಿಪುಲ ಅವಕಾಶಗಳಿವೆ.

ಮುಗಿಸಿದ ನಂತರ ಮುಂದೇನು ಎಂಬುದರ ನಿರ್ಧಾರ ಕೈಗೊಳ್ಳುವುದು ಸುಲಭವಲ್ಲ. ರೆಗ್ಯುಲರ್‌ ಕೋರ್ಸ್‌ ಗಳು ಒಂದು ಕಡೆ ಇರಲಿ, ಪ್ರೊಫೆಶನಲ್ ಕೋರ್ಸ್‌ ಗಳು ಸಹ ದಂಡಿಯಾಗಿವೆ. ಯಾವ ಕೋರ್ಸ್‌ ಗೆ ಸೇರಿದರೆ ಭವಿಷ್ಯತ್ತಿಗೆ ಉತ್ತಮ ರಿಟರ್ನ್ಸ್ ಸಾಧ್ಯ ಎಂಬುದನ್ನು ಒಂದಲ್ಲ 4-5 ಸಲ ಯೋಚಿಸಬೇಕು. ಯಾವುದರಿಂದ ಪ್ಲೇಸ್ಮೆಂಟ್‌ ಉತ್ತಮ ಆದೀತು ಎಂಬುದನ್ನೆಲ್ಲ ಯೋಚಿಸಬೇಕು. ಏನು ಮಾಡಿದರೆ ಲೈಫ್‌ ಸೆಕ್ಯೂರ್‌ ಆಗುತ್ತದೆ ಎಂಬುದು ಬಲು ಮುಖ್ಯ. ಇದರ ಜೊತೆಗೆ ಯುವಜನತೆ ಆಯಾ ಕೋರ್ಸ್‌ ನಲ್ಲಿ ಆಸಕ್ತಿ ವಹಿಸಬೇಕಾದುದು ಅತ್ಯಗತ್ಯ. ಯಾವುದರಲ್ಲಿ ಆಸಕ್ತಿ ಇದೆಯೋ, ಆ ಫೀಲ್ಡ್ ನಲ್ಲಿ ಯಾವ ತರಹದ ಕೋರ್ಸ್‌ ಯಶಸ್ಸು ನೀಡಲಿದೆ ಎಂಬುದನ್ನು ಬಲು ಎಚ್ಚರಿಕೆಯಿಂದ ನಿರ್ಧರಿಸಬೇಕಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ