ಕಲಿಕೆಯಲ್ಲಿ ಎಷ್ಟೇ ಪರಿಶ್ರಮಪಟ್ಟರೂ, ನೀವು ಬಯಸಿದ ಕಾಲೇಜು ಯಾ ಪ್ರೊಫೆಶನಲ್ ಕೋರ್ಸ್‌ ನಲ್ಲಿ ಅಡ್ಮಿಶನ್‌ ಸಿಗಲಿಲ್ಲವೇ? ಹಾಗಾದರೆ ಅದಕ್ಕಾಗಿ ಹೀಗೆ ತಯಾರಿ ಮಾಡಿಕೊಳ್ಳಿ......

ಸಂಧ್ಯಾಳಿಗೆ ಮೊದಲಿನಿಂದಲೂ ಟೀಚಿಂಗ್‌ ನಲ್ಲಿ ಬಹಳ ಆಸಕ್ತಿ. ತನ್ನ ಕಾಲೇಜಿನ ದಿನಗಳಿಂದಲೇ ವಠಾರದ ಎಲ್ಲಾ ಮಕ್ಕಳಿಗೂ ಟ್ಯೂಶನ್‌ ಹೇಳುತ್ತಿದ್ದಳು. ತಾನು ವಿದ್ಯಾಭ್ಯಾಸ ಮುಗಿಸಿ ಹೈಸ್ಕೂಲ್ ‌ಟೀಚರ್‌ ಆಗುವುದು ಅವಳ ಗುರಿ. ಸಕಾಲಕ್ಕೆ ಸರಿಯಾಗಿ ಅವಳು ಎಂಟ್ರೆನ್ಸ್ ಎಗ್ಸಾಮ್ ತೆಗೆದುಕೊಂಡಾಗ, ಅದರಲ್ಲಿ ಪಾಸಾಗಲಿಲ್ಲ. ಅದರ ಮಾರನೇ ವರ್ಷ ಅವಳು ಮತ್ತೆ ಪ್ರಯತ್ನಿಸಿದಳು. ಆದರೆ ಈ ಸಲ ಆಗಲಿಲ್ಲ. ಅಸಲಿಗೆ ಈ ಎಂಟ್ರೆನ್ಸ್ ಎಗ್ಸಾಮ್ ಗೆ ಹೇಗೆ ಸೂಕ್ತ ತಯಾರಿ ನಡೆಸಬೇಕಿತ್ತೋ, ಅವಳು ಹಾಗೆ ತಯಾರಿ ಮಾಡಿಕೊಂಡಿರಲಿಲ್ಲ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ಎಂಟ್ರೆನ್ಸ್ ಪರೀಕ್ಷೆಗೆ ತಯಾರಿ ನಡೆಸುವಾಗ, ಅವರ ಗಮನ ರಿಸಲ್ಟ್ ಕಡೆ ಇರುವುದಿಲ್ಲ. ಅವರು ಸಿಲೆಬಸ್‌ ಪ್ರಕಾರ ಉರುಹೊಡೆದು ಸಿದ್ಧರಾಗುತ್ತಾರೆ, ಟೆಸ್ಟ್ ಬರೆಯುತ್ತಾರೆ. ಆದರೆ ಪ್ರೊಫೆಶನಲ್ ಪ್ರವೇಶ ಪರೀಕ್ಷೆಗಳು ಇಂಥ ವಿದ್ಯಾರ್ಥಿಗಳನ್ನು ಕಠಿಣಕರ ಪ್ರಶ್ನೆಗಳಿಂದ ಒರೆಹಚ್ಚುತ್ತದೆ. ಅವರು ಎಷ್ಟು ಮಾತ್ರ ಪ್ರಾಕ್ಟಿಕಲ್ ಆಗಿ ಯೋಚಿಸಬಲ್ಲರು, ಅಧಾರಣಾತ್ಮಕ ತಿಳಿವಳಿಕೆ, ಒತ್ತಡದಲ್ಲಿ ನಿರ್ಣಯ ತೆಗೆದುಕೊಳ್ಳುವ ಯೋಗ್ಯತೆ ಇದೆಯೇ ಎಂದು ನೋಡುತ್ತದೆ. ಈ ಆಧಾರದಿಂದಲೇ ಪ್ರಶ್ನೆಪತ್ರಿಕೆಗಳು ತಯಾರಾಗುತ್ತವೆ.

ಹೀಗಾಗಿ ಸಿಲೆಬಸ್‌ ಪ್ರಕಾರ ಉರು ಹೊಡೆಯುವುದರಿಂದ ಎಂಟ್ರೆನ್ಸ್ ನಲ್ಲಿ ಪಾಸಾಗುವುದು ಸುಲಭವಲ್ಲ. ಇದೇ ನೀತಿ ಬೇರೆ ಪರೀಕ್ಷೆಗಳಿಗೂ ಅನ್ವಯಿಸುತ್ತದೆ. ಹೀಗಿರುವಾಗ ಕಾಲೇಜುಗಳಲ್ಲಿ ಅಡ್ಮಿಶನ್‌ ತಯಾರಿ, ಕೇವಲ ಒಂದು ಪರೀಕ್ಷೆಯ ತಯಾರಿ ತರಹ ಅಲ್ಲ, ಬದಲಿಗೆ ಒಂದು ಮಾನಸಿಕ, ಸಾಮಾಜಿಕ ಹಾಗೂ ವೈಚಾರಿಕ ಜರ್ನಿ ಆಗುತ್ತದೆ. ನಾವು ಈ ತಯಾರಿಯನ್ನು ಸರಿಯಾಗಿ ಅರ್ಥೈಸಿಕೊಂಡಿದ್ದೇವೆಯೇ?

ಗುರಿಯ ಆಯ್ಕೆ ಮುಖ್ಯ : ನಮ್ಮ ಗುರಿ ಯಾವುದಿರಬೇಕೆಂದು ಮೊದಲೇ ಸ್ಪಷ್ಟವಾಗಿ, ಪ್ರಾಮಾಣಿಕ ಪ್ರಯತ್ನಗಳಿಂದ ನಿಶ್ಚಯಿಸಿಕೊಂಡರೆ, ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಲು ಮೊದಲ ಪ್ರಮುಖ ಹೆಜ್ಜೆಯಾಗಿದೆ. ಸಾಮಾನ್ಯವಾಗಿ ಯಾವುದು ಹೆಚ್ಚು ಚಾಲ್ತಿಯಲ್ಲಿದೆಯೋ ವಿದ್ಯಾರ್ಥಿಗಳು ಅದನ್ನೇ ಆರಿಸಿಕೊಳ್ಳುತ್ತಾರೆ. ಹೆತ್ತನರು ಸುರಕ್ಷಿತ ಎಂಬುದನ್ನೇ ಅನುಸರಿಸುತ್ತಾರೆ. ಎಲ್ಲರೂ ಮಾಡುತ್ತಿದ್ದಾರೆ, ತಾನಿ ಎಂಜಿನಿಯರಿಂಗ್‌ ಮಾಡಬೇಕು, ಡಾಕ್ಟರ್‌ ಆದರೆ ಪ್ರೆಸ್ಟೀಜ್‌ ಹೆಚ್ಚು ಎಂದು ತಮಗೆ ಆ ವಿಷಯದಲ್ಲಿ ಆಸಕ್ತಿ ಇರಲಿ ಬಿಡಲಿ, ಇಂಥ ಪ್ರನೋಶ ಪರೀಕ್ಷೆಗಳಿಗೆ ಬಲವಂತದ ತಯಾರಿ ನಡೆಸುತ್ತಾರೆ. ಪ್ರೊಫೆಶನಲ್ ಕಾಲೇಜ್ ಗೆ ಸೇರಲು ತಯಾರಿ ಶುರು ಮಾಡುವ ಮೊದಲೇ, ನಿಮ್ಮನ್ನು ನೀವು, ನಿಮ್ಮ ಅಭಿರುಚಿಗೆ ತಕ್ಕಂತೆ ಇದು ಇದೆ ತಾನೇ ಎಂದು ಕೇಳಿಕೊಳ್ಳಿ. ಏಕೆಂದರೆ ಗುರಿಯೇ ತಪ್ಪಾಗಿರುವಾಗ, ಅದಕ್ಕೆ ಬೇಕಾದ ತಯಾರಿ ಎಲ್ಲವೂ ವ್ಯರ್ಥ ಆದೀತು, ಪ್ರತಿ ಖರ್ಚೂ ದಂಡ ಆದೀತು.

ಉತ್ತಮ ಕೋಚಿಂಗ್‌ ನ ನೆರವು : ಕೋಚಿಂಗ್‌ ಸಂಸ್ಥೆಗಳು ಇಂದು ಪ್ರೊಫೆಶನಲ್ ಕೋರ್ಸಿನ ತಯಾರಿಯ ಪರ್ಯಾಯ ಆಗಿ ಕೂತಿವೆ. ಕೋಚಿಂಗ್‌ ಜಾಯಿನ್‌ ಆಗುವುದರಿಂದ ವಿದ್ಯಾರ್ಥಿ ಕೇವಲ ಸಿಲೆಬಸ್‌ ಮಾತ್ರವಲ್ಲ, ಇಡೀ ಪರೀಕ್ಷಾ ವಿಧಾನದ ರೂಪುರೇಷೆ ಅರಿತುಕೊಳ್ಳಬೇಕು. ಯಾವ ಪ್ರಶ್ನೆಯನ್ನು ಎಷ್ಟು ನಿಮಿಷದಲ್ಲಿ ಉತ್ತರಿಸಬೇಕು, ಎಲ್ಲಿ ಸ್ಟ್ರಕ್‌ ಆಗಬಾರದು, ನೆಗೆಟಿವ್ ಮಾರ್ಕ್ಸ್ ಬರದಂತೆ ಎಚ್ಚರಿಕೆ ವಹಿಸುವುದು ಹೇಗೆ? ಇವೆಲ್ಲ ವಿಷಯಗಳೂ ಕೇವಲ ಪಠ್ಯಪುಸ್ತಕ ಓದುವುದರಿಂದಲ್ಲ, ಬದಲಿಗೆ ಸತತ ಪರಿಶ್ರಮ, ಅಭ್ಯಾಸ, ಗೈಡೆಡ್‌ ಟ್ರೇನಿಂಗ್‌ ನಿಂದ ಸಿಗುತ್ತದೆ. ನಿಯಮಿತ ಮಾಕ್‌ ಟೆಸ್ಟ್, ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ, ಅನುಭವೀ ಶಿಕ್ಷಕರ ರಣನೀತಿ ಇತ್ಯಾದಿ ಮಾತ್ರವೇ ವಿದ್ಯಾರ್ಥಿಗಳನ್ನು ವಾಸ್ತವಿಕ ಪರೀಕ್ಷೆಯ ಒತ್ತಡ ಎದುರಿಸಲು ಸಜ್ಜಾಗಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ