ಮನೆಯನ್ನು ಸ್ವಚ್ಛಗೊಳಿಸಲು ನಾವು ಸದಾ ಕೆಮಿಕಲ್ಸ್ ಬೆರೆತ ಉತ್ಪನ್ನಗಳನ್ನೇ ಬಳಸುತ್ತೇವೆ. ಇವು ದುಬಾರಿ ಆಗಿರುವುದರ ಜೊತೆ ಒಮ್ಮೊಮ್ಮೆ ಕೈಗಳಲ್ಲಿ ರಾಶೆಸ್‌ ಯಾ ಅಲರ್ಜಿ ಸಹ ಮೂಡಿಸುತ್ತವೆ. ಹೀಗಿರುವಾಗ ನೀವು ಎಂದಾದರೂ ಸೋಡ ಬೈ ಕಾರ್ಬೋನೇಟ್‌ ಎಷ್ಟು ಲಾಭಕರ ಎಂದು ಯೋಚಿಸಿದ್ದೀರಾ? ಇದನ್ನು ಅಡುಗೆ ಸೋಡ, ಬೇಕಿಂಗ್‌ ಸೋಡ ಎಂದೂ ಹೇಳುತ್ತಾರೆ. ಪ್ರತಿ ಮನೆಯಲ್ಲೂ ಲಭ್ಯವಿರುವ ಇದನ್ನು ಕೇಕ್‌, ಇಡ್ಲಿ, ಢೋಕ್ಲಾ ಇತ್ಯಾದಿಗಳಿಗೆ ಬಳಸುತ್ತಾರೆ. ಇದನ್ನು ಅಷ್ಟೇ ಸಮರ್ಥವಾಗಿ ಮನೆಯನ್ನು ಶುಚಿಗೊಳಿಸಲಿಕ್ಕೂ ಬಳಸಬಹುದು ಎಂದು ನಿಮಗೆ ಗೊತ್ತೇ? ಬನ್ನಿ, ವಿವರವಾಗಿ ಗಮನಿಸೋಣ :

ಟೈಲ್ಸ್ ಇರುವ ನೆಲ, ಗೋಡೆ ಶುಚಿಗೊಳಿಸಲು ಮುಕ್ಕಾಲು ಬಕೆಟ್‌ ನೀರಿಗೆ ಅರ್ಧ ಕಪ್‌ ಬೇಕಿಂಗ್‌ ಸೋಡ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದರಿಂದ ಟೈಲ್ಸ್ ಚಮಕಾಯಿಸುತ್ತವೆ.
ಕೆಮಿಕಲ್‌ಯುಕ್ತ ಏರ್‌ ಫ್ರೆಶ್‌ನರ್‌ಗೆ ಬದಲಾಗಿ ಬೇಕಿಂಗ್‌ ಸೋಡ ಬಳಸಿರಿ. 1 ಸಣ್ಣ ಬಟ್ಟಲಿಗೆ ಸೋಡ ತುಂಬಿಸಿ, ಅದಕ್ಕೆ ಕೆಲವು ಹನಿ ಎಸೆನ್ಶಿಯಲ್ ಆಯಿಲ್ ‌ಬೆರೆಸಿ ಕೋಣೆ ಮಧ್ಯೆ ಇರಿಸಿ. ಆಗ ಕೋಣೆಯಲ್ಲಿ ದುರ್ವಾಸನೆ ಮಾಯವಾಗುತ್ತದೆ, ಸುಗಂಧ ಹರಡುತ್ತದೆ. 3 ತಿಂಗಳಿಗೊಮ್ಮೆ ಹೀಗೆ ಮಾಡಿ.

ಯಾವುದೇ ತೆಳುವಾದ ಮೃದು ಬಟ್ಟೆಗೆ ತುಸು ಸೋಡ ಹಾಕಿ ಮೈಕ್ರೋವೇವ್‌ನ್ನು ಕ್ಲೀನ್‌ ಮಾಡಿ. ಇದರಿಂದ ಓವನ್‌ ಶುಚಿಗೊಳಿಸಲು, ಮೊದಲು ಓವನ್‌ ಮೇಲೆ ಸೋಡ ಉದುರಿಸಿ ತುಸು ನೀರು ಸಿಂಪಡಿಸಿ. ಇಡೀ ರಾತ್ರಿ ಹಾಗೇ ಬಿಡಿ. ಮಾರನೇ ಬೆಳಗ್ಗೆ ಒಣ ಬಟ್ಟೆಯಿಂದ ಉಜ್ಜಿ ಶುಚಿಗೊಳಿಸಿ, ನಂತರ ಒದ್ದೆ ಬಟ್ಟೆಯಿಂದ ಒರೆಸಬೇಕು.

ಬಟ್ಟೆ ಒಗೆಯುವಾಗ ಡಿಟರ್ಜೆಂಟ್‌ ಪೌಡರ್‌ಗೆ ಅರ್ಧ ಕಪ್‌ ಬೇಕಿಂಗ್‌ ಸೋಡ ಬೆರೆಸಿರಿ. ಇದರಿಂದ ಬಟ್ಟೆ ಇನ್ನೂ ಹೆಚ್ಚು ಹೊಳಪಾಗುತ್ತದೆ.

ಕಿಚನ್‌ನಲ್ಲಿ ಸಿಂಕ್‌ ಕಟ್ಟಿಕೊಂಡಿದ್ದರೆ, ರಾತ್ರಿ ಅರ್ಧ ಕಪ್‌ ಸೋಡಾಗೆ ಅರ್ಧ ಕಪ್‌ ವಿನಿಗರ್‌ ಬೆರೆಸಿ ಸಿಂಕ್‌ ಪೈಪ್‌ಗೆ ಹಾಕಿಡಿ. ಬೆಳಗ್ಗೆ  ತುಸು ಬಿಸಿ ನೀರು ಹಾಕಿ, ಕಟ್ಟಿರುವ ಸಿಂಕ್‌ ಸರಿಹೋಗುತ್ತದೆ.

ಕಾರ್ಪೆಟ್‌ ಮೇಲೆ ರಾತ್ರಿ ಸೋಡ ಉದುರಿಸಿ. ಬೆಳಗ್ಗೆ ವ್ಯಾಕ್ಯೂಂ ಕ್ಲೀನರ್‌ನಿಂದ ಶುಚಿಗೊಳಿಸಿ. ಕಾರ್ಪೆಟ್‌ನ ಕೊಳಕು ದೂರವಾಗುತ್ತದೆ.

ಕಿಚನ್ನಿನ ಸ್ಲ್ಯಾಬ್‌, ಕ್ಯಾಬಿನೆಟ್‌, ಗ್ಯಾಸ್‌ ಒಲೆ ಇತ್ಯಾದಿಗಳಿಂದ ಜಿಡ್ಡು ಕಲೆ ತೊಲಗಿಸಲು ಒದ್ದೆ ಬಟ್ಟೆ ಮೇಲೆ ಸೋಡ ಉದುರಿಸಿ ಆ ಭಾಗ ಕ್ಲೀನ್‌ ಮಾಡಿ. ಎಲ್ಲಾ ಜಿಡ್ಡೂ ಮಂಗಮಾಯ!

ಯಾವುದೋ ಸಮಾರಂಭಕ್ಕಾಗಿ ಒಂದೇ ಸಮ ಬೆಳ್ಳುಳ್ಳಿ ಸುಲಿದು, ಈರುಳ್ಳಿ ಹೆಚ್ಚಿ ಕೈಗಳು ದುರ್ವಾಸನೆ ಬೀರುತ್ತಿವೆಯೇ? ಅದನ್ನು ದೂರ ಮಾಡಲು ಕೈಗಳ ಮೇಲೆ ಬೇಕಿಂಗ್‌ ಸೋಡ ಹಾಕಿಕೊಂಡು ಚೆನ್ನಾಗಿ ಉಜ್ಜಬೇಕು, ಆಮೇಲೆ ಬೆಚ್ಚಗಿನ ನೀರಲ್ಲಿ ಕೈ ತೊಳೆಯಿರಿ.

ಸಮಾನ ಪ್ರಮಾಣದಲ್ಲಿ ಉಪ್ಪು, ಬೇಕಿಂಗ್‌ ಸೋಡ ಬೆರೆಸಿಕೊಂಡು ಮನೆಯ ಮೂಲೆಗಳಲ್ಲಿ ಇರುವೆ, ಇತರ ಕೀಟಗಳ ಕಾಟವಿದ್ದರೆ ಅಲ್ಲೆಲ್ಲ ಸಿಂಪಡಿಸಿ, ಅವು ಮಾಯವಾಗುತ್ತವೆ.

ಹೂಗಳ ತಾಜಾತನ ಕಾಪಾಡಿಕೊಳ್ಳಲು ಹೂಕುಂಡಗಳಿಗೆ 1 ಸಣ್ಣ ಚಮಚ ಬೇಕಿಂಗ್‌ ಸೋಡ ಹಾಕಿಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ