ರಾತ್ರಿ 2 ಗಂಟೆ ಆಗುವುದರಲ್ಲಿತ್ತು. ಮಾಮಾ ಮಾಮಿ ಇಬ್ಬರೂ ಗಾಢ ನಿದ್ದೆಯಲ್ಲಿದ್ದರು. ಇದ್ದಕ್ಕಿದ್ದಂತೆ ಮಾಮಿಯ ಮೊಬೈಲ್‌ಗೆ ಎಲ್ಲಿಂದಲೋ ಒಂದು ಮೇಸೇಜ್‌ ಬಂದಿತು... ಬ್ಯೂಟಿಫುಲ್! ಮಾಮನ ನಿದ್ದೆ ಹಾರಿಹೋಯ್ತು. ಮಾಮಿ ಮುಖಕ್ಕೆ ನೀರು ಚಿಮುಕಿಸಿ ಎಬ್ಬಿಸಿದರು.

``ಏನ್ರಿ ನಿಮ್ಮ ಗೋಳು? ನೆಮ್ಮದಿಯಾಗಿ ನಿದ್ದೆ ಮಾಡೋಕ್ಕೂ ಬಿಡೋಲ್ಲ....'' ಮಾಮಿ ಗೊಣಗಿದರು.

``ಏನೇ ಇದು? ಇಷ್ಟು ಹೊತ್ತಿನಲ್ಲಿ ಯಾವನು ನಿನಗೆ ಬ್ಯೂಟಿಫುಲ್ ಅಂತ ಮೆಸೇಜ್‌ ಕಳುಹಿಸಿದ್ದಾನೆ?'' ಮಾಮ ಗುಡುಗಿದರು.

ಒಂದು ಕ್ಷಣ ಕಸಿವಿಸಿಗೊಂಡ ಮಾಮಿ 50ರ ಹರೆಯದಲ್ಲಿ ಯಾರಪ್ಪ ತಮಗೆ ಹೀಗೆ ಮೆಸೇಜ್‌ ಕಳುಹಿಸಿದ್ದು ಎಂದು ನೋಡುತ್ತಾರೆ, ``ಅಯ್ಯೋ ಬಡ್ಕೊಂಡ್ರು..... ಕನ್ನಡಕ ಹಾಕಿಕೊಂಡು ಓದಿ ಅನ್ನೋದು ಅದಕ್ಕೇ..... ಬ್ಯೂಟಿಫುಲ್ ಅಲ್ಲ ಅದು.... ಬ್ಯಾಟ್ರಿ ಫುಲ್ ಅಂತ!'' ಮಾಮ ಫುಲ್ ಸುಸ್ತು.

ಹಾಗೆ ನೋಡಿದರೆ ತಾಯಿ ಮತ್ತು ಪತ್ನಿ ಇಬ್ಬರೂ ಗುರುಗಳೇ ಆಗುತ್ತಾರೆ. ತಾಯಿ ಹೇಳುವುದು, ಮುಂದೆ ನಿನ್ನ ಹೆಂಡತಿ ಕಲಿಸುತ್ತಾಳೆ ಬಿಡು ಅಂತ. ಹೆಂಡತಿ ಹೇಳುವುದು, ತಾಯಿಯೇ ಕಲಿಸುತ್ತಾರೆ ಅಂತ. ಇಬ್ಬರಿಗೂ ಎಷ್ಟು ವಿನಮ್ರತೆ ಎಂದರೆ, ಅದರ ಪರಾಕಾಷ್ಠೆ ಪ್ರದರ್ಶಿಸುವ ಸಲುವಾಗಿ, ಕಲಿಸುವ ಶ್ರೇಯಸ್ಸನ್ನು ಕೂಡ ತಾವೇ ತೆಗೆದುಕೊಳ್ಳಲಾರರು.

ನವ ದಂಪತಿಗಳು ಮಧುಚಂದ್ರಕೆ ಹೊರಟಿದ್ದರು. ಅಲ್ಲಿನ ಸಾಗರ ತೀರ ಕಂಡು ಭಾವುಕಳಾದ ಪತ್ನಿ, ``ಏನ್ರಿ, ಎಲ್ಲಿಯವರೆಗೂ ನೀವು ನನ್ನನ್ನು ಹೀಗೆ ಪ್ರೀತಿಸುತ್ತೀರಿ?'' ಎಂದು ಕೇಳಿದಳು. ಅವಳ ಕಂಗಳು ಅಷ್ಟು ಹೊತ್ತಿಗೆ ಕಂಬನಿ ಮಿಡಿದಿದ್ದವು.

``ಅಷ್ಟೊಂದು ಸೆಂಟಿಮೆಂಟ್‌ ಆಗ್ಬೇಡ ಡಿಯರ್‌....'' ಎನ್ನುತ್ತಾ ಗಂಡ ಅವಳ ಕಂಬನಿಯ ಒಂದು ಹನಿಯನ್ನು ತೆಗೆದು ಸಾಗರಕ್ಕೆ ಬೆರೆಸುತ್ತಾ, ``ಸಮುದ್ರದ ನೀರಿನಲ್ಲಿ ನಿನ್ನ ಕಣ್ಣೀರನ್ನು ನೀನು ಎಂದು ಗುರುತಿಸಬಲ್ಲೆಯೋ ಅಲ್ಲಿಯವರೆಗೂ...'' ಎಂದಾಗ ಅವಳು ಮುಗುಳ್ನಕ್ಕಳು.

ತಲೆ ಚಚ್ಚಿಕೊಳ್ಳುತ್ತಾ ಸಮುದ್ರ ಹೇಳಿತಂತೆ, ``ಪ್ರತಿ ವರ್ಷ ಒಬ್ಬೊಬ್ಬ ಗರ್ಲ್ ಫ್ರೆಂಡ್‌ನ್ನು ಇಲ್ಲಿಗೆ ಕರೆದುಕೊಂಡು ಬಂದಾಗಲೂ ಇವನ ಡೈಲಾಗ್‌ ಇದೇ ಆಯ್ತಲ್ಲ...''

ಮನೆಯಲ್ಲಿ  ಕರೆಂಟು ಹೋಗಿತ್ತು. ಮನೆ ಯಜಮಾನಿ ಕೆಲಸದಾಕೆಗೆ, ``ಸರೋಜಾ, ಕರೆಂಟ್‌ ಬರೋವರೆಗೂ ಹಾಗೆ ಅಲುಗಾಡದೆ ನಿಂತಿರು. ಜಾರಿ ಬಿದ್ದೀಯಾ ಹುಷಾರು...'' ಎಂದಳು.

ಕೆಲಸದಾಕೆ, ``ಚಿಂತೆ ಮಾಡಬೇಡಿ ಅಮ್ಮಾವ್ರೇ...! ಯಜಮಾನರು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ,'' ಎನ್ನುವುದೇ?

ಗಿರಾಕಿ : ಒಂದು ಪ್ಲೇಟು ಉಪ್ಪಿಟ್ಟು.... ಹೀಗೇ ಒಂದೆರಡು ಒಳ್ಳೇ ಮಾತು.

ಮಾಣಿ : ತಗೊಳ್ಳಿ ಸಾರ್‌ ಉಪ್ಪಿಟ್ಟು.

ಗಿರಾಕಿ : ಒಳ್ಳೆ ಮಾತು....?

ಮಾಣಿ : ಪಾಪ ಇದನ್ನು ನೀವು ತಿನ್ನಬೇಕಲ್ಲ....

ಹೆಂಡತಿ : ನಾನು ಯಾವುದಾದರೂ ಕೆಲಸ ಶುರು ಮಾಡಿದರೆ ಅದರಲ್ಲೇ ಮುಳುಗಿ ಹೋಗ್ತೀನಿ.

ಗಂಡ : ಮತ್ತೆ ನೀನ್ಯಾಕೆ ಒಂದು ಬಾವಿ ತೋಡಬಾರದು?

ಗಂಡ : ಲೇ ಹಸುವಿನ ಮೇಲೆ ಸಾಲ ತಗೊಂಡಿದ್ದಿಯಲ್ಲ.... ಹೇಗೆ ಕಟ್ಟುತ್ತೀಯಾ?

ಹೆಂಡತಿ : ಹಗ್ಗದಿಂದ ಕಟ್ತೀನಿ.

ಗಂಡ : ಒಂದಲ್ಲಾ ಒಂದು ದಿನ ನಮ್ಮ ಮಗು ಈ ದೇಶದ ಪ್ರಧಾನಿಯಾಗಬಹುದು.

ಹೆಂಡತಿ : ಹೌದು ರೀ! ಇದುವರೆಗೂ ಯಾವ ಮಗು ಈ ದೇಶದ ಪ್ರಧಾನಿಯಾಗಿದ್ದನ್ನು ನಾನು ನೋಡಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ