ಮಕ್ಕಳಿಗೆ ಎಲ್ಲಕ್ಕಿಂತಲೂ ಹೆಚ್ಚು ಇಷ್ಟ ಎಂದರೆ ಆಟ ಆಡುವುದು. ಅವರು ಏನಾದರೂ ಪಾಠ ಕಲಿಯುವುದಿದ್ದರೆ ಆಟದಿಂದ ಮಾತ್ರ. ಹಾಗಾಗಿ ಬಲಂತವಾಗಿ ಅವರಿಗೆ ಏನಾದರೂ ಕಲಿಸುವ ಬದಲು, ಆಟಗಳ ಮೂಲಕ ಅವರಿಗೆ ಪಾಠ ಕಲಿಸುವ ಮಾರ್ಗವೇ ಅತಿ ಸರಳವಾದುದು. ಇದರಿಂದಾಗಿ ಆಟದ ಜೊತೆ ಅವರಿಗೆ ಪಾಠ ಕೂಡ ಸಿಗುತ್ತದೆ.

ಕಳೆದ ಹಲವು ವರ್ಷಗಳಿಂದ ಅಮೆರಿಕಾದ ಮಲ್ಟಿನ್ಯಾಶನಲ್ ಟಾಯ್‌ ಕಂಪನಿ `ಮೆಟಲ್' ಪುಟಾಣಿಗಳಿಗಾಗಿ ಇಂಥ ಅಪರೂಪದ ಆಟಿಕೆಗಳನ್ನು ತಯಾರಿಸಿ, ಮಕ್ಕಳು ಹೊಸದಾಗಿ ಏನನ್ನಾದರೂ ಕಲಿಯುವುದರ ಜೊತೆ ಕ್ರಿಯೇಟಿವ್ ‌ಆಗುವಂತೆ ಮಾಡುತ್ತಿದೆ. ಟಾಡ್ಲರ್‌ ರಾಕರ್‌, ಸ್ಮಾರ್ಟ್ ಫೋನ್‌ ಟ್ಯಾಬ್ಲೆಟ್‌, ಫ್ರೂಟ್ಸ್ ಫನ್‌ ಲರ್ನಿಂಗ್‌ ಮಾರ್ಕೆಟ್‌, ಪಿಯಾನೋ ಗೇಮ್ ಲರ್ನ್‌ ಕಂಟ್ರೋಲ್ ಮುಂತಾದ ಗೇಮ್ಸ್ ಮಕ್ಕಳ ಮನಸೂರೆಗೊಳಿಸುವಲ್ಲಿ ಸಂದೇಹವಿಲ್ಲ, ಬಹು ಚರ್ಚಿತ ಕೂಡ.

ಆಟಿಕೆಗಳು ಪ್ರಯೋಜನಕಾರಿ ಹೇಗೆ?

ಮಕ್ಕಳ ಬೆಳವಣಿಗೆ ಆಗತೊಡಗಿದಂತೆ ಅವರು ತಮ್ಮ ಅಕ್ಕಪಕ್ಕದ ಪುಟಾಣಿಗಳನ್ನು ನೋಡಿ ಹೊಸ ಹೊಸ ವಿಷಯಗಳನ್ನು ಕಲಿಯ ಬಯಸುತ್ತಾರೆ. ಹೀಗಿರುವಾಗ ಈ ನವೀನ ಗೇಮ್ಸ್ ಅವರಿಗೆ ಏನಾದರೂ ಹೊಸತನ್ನು ಮಾಡಲು, ಕಲಿಯಲು ಪ್ರೇರೇಪಿಸುತ್ತವೆ. ಅಂದ್ರೆ ಅವರ ಟಾಯ್‌ ಗಾಡಿಯಲ್ಲಿ ಅಳವಡಿಸಲಾದ ಬೆಲ್ಸ್, ಗಾಡಿ ಮೂವ್ ‌ಆದಂತೆ ಸದ್ದು ಮಾಡುವುದರಿಂದ, ಪುಟಾಣಿಗಳ ಕಂಗಳು, ಕಿವಿಗಳಿಗೆ ಹಬ್ಬ ಎನಿಸುತ್ತದೆ. ಹೀಗಾಗಿ ಈ ಮುದ್ದು ಮಕ್ಕಳು ಮತ್ತೆ ಮತ್ತೆ ಅವನ್ನೇ ಆಡಲು ಬಯಸುತ್ತವೆ. ಮತ್ತೊಮ್ಮೆ ತಾಯಿ ಈ ಮಕ್ಕಳ ಟಾಯ್‌ ಗಾಡಿಯನ್ನು ಹಿಂದುಮುಂದು ಓಡಿಸಿ ತೋರಿಸಿದರೆ, ಅವು ಕಿಲಕಿಲನೆ ನಗುತ್ತಾ ಮನೆಯನ್ನು ನಂದಗೋಕುಲ ಆಗಿಸುತ್ತವೆ. ಅದಾದ ಮೇಲೆ ಈ ಮಕ್ಕಳು ಅಮ್ಮನಂತೆಯೇ ಆ ಗಾಡಿಯನ್ನು ತಾವೇ ಓಡಿಸುವ ಪ್ರಯತ್ನ ಮಾಡುತ್ತವೆ. ಈ ರೀತಿ ಇವು ತಮ್ಮ ಆಟಿಕೆಗಳೊಂದಿಗೆ ಕಲಿಕೆ ಶುರು ಮಾಡುತ್ತವೆ.

ಅದೇ ರೀತಿ ಸ್ಮಾರ್ಟ್‌ ಫೋನ್‌ಟ್ಯಾಬ್ಲೆಟ್‌ ಇತ್ಯಾದಿಗಳ ಮೂಲಕ ಮಕ್ಕಳು ನಂಬರ್ಸ್‌, ಕೌಂಟಿಂಗ್‌, ಆಲ್ಫಾಬೆಟ್ಸ್, ಪಶುಪಕ್ಷಿಗಳ ಹೆಸರು, ಅವುಗಳು ಧ್ವನಿ ಹೊರಡಿಸುವ ವಿಧಾನ ಗುರುತಿಸುತ್ತವೆ. ಈ ಆಟಿಕೆಗಳ ಮೂಲಕ ಅವರ ಕೇಳುವಿಕೆಯ ಜಿಜ್ಞಾಸೆ ಹೆಚ್ಚುತ್ತದೆ. ಮಕ್ಕಳು ಇಂಥವನ್ನು ಕೇಳಿ ಕೇಳಿ ಅದನ್ನೇ ರಿಪೀಟ್‌ ಮಾಡಿ ಹೆಸರುಗಳನ್ನು ಕಲಿಯುತ್ತವೆ. ಹೀಗೆ ಈ ಗೇಮ್ಸ್ ರೊಟೀನ್‌ ಆದಾಗ, ಅದನ್ನು ಚೆನ್ನಾಗಿ ಅಭ್ಯಾಸ ಮಾಡುವುದರ ಜೊತೆ ಇನ್ನಷ್ಟು ಹೊಸತನ್ನು ಹುಡುಕ ತೊಡಗುತ್ತವೆ. ಇದು ಮಕ್ಕಳ ಕಲ್ಪನಾಶೀಲತೆ ಹೆಚ್ಚಿಸುತ್ತದೆ. ಈ ಆಟಗಳಿಂದ ಪುಟಾಣಿಗಳು ಮಾತು, ಓದು, ಡ್ಯಾನ್ಸ್, ಅಕ್ಷರ, ಚಿತ್ರಗಳನ್ನು ಗುರುತಿಸುವಿಕೆ ಇತ್ಯಾದಿ ಕಲಿಯುತ್ತವೆ. ಮನೆಯೇ ಮಕ್ಕಳಿಗೆ ಮೊದಲ ಪಾಠಶಾಲೆ ಅಲ್ಲವೇ? ಈ ರೀತಿ ಆಟಿಕೆಗಳಿಂದ ಅವು ಪ್ರಾಕ್ಟಿಕಲ್ ಆಗಿ ಹೆಚ್ಚು ಕಲಿಯಲು ಅವಕಾಶ ಸಿಗುತ್ತದೆ. ನೀವು ಇಲ್ಲಿ ಗಮನಿಸಿಕೊಳ್ಳಬೇಕಾದ ಮುಖ್ಯ ವಿಷಯ ಎಂದರೆ ಹೆಚ್ಚುತ್ತಿರುವ ಅವರ ವಯಸ್ಸಿಗೆ ತಕ್ಕಂತೆ ಅವರ ಆಸಕ್ತಿ ಯಾವ ಕಡೆ ತಿರುಗುತ್ತಿದೆ ಎಂದು ನೋಡುವುದು. ಅಂದರೆ ಮಗು ಯೆಲ್ಲೋ ಕಲರ್‌ ಕಂಡು ಆಕರ್ಷಿತನಾಗಿದ್ದಾನೆ ಎಂದರೆ, ಅದಕ್ಕೆ ಬಣ್ಣಗಳನ್ನು ಗುರುತಿಸುವಂಥ ಆಟಿಕೆಗಳನ್ನೇ ಒದಗಿಸಿ ಅಭ್ಯಾಸ ಮಾಡಿಸಿ.ಈ ತರಹ ಗೇಮ್ಸ್ ಮಕ್ಕಳ ವಿಕಾಸದಲ್ಲಿ ಹೆಚ್ಚು ಸಹಾಯ ಮಾಡುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ