ಹಬ್ಬಗಳನ್ನು ಸ್ವಾಗತಿಸಲು ನಾವೆಷ್ಟು ಮನೆ ಹೊಳೆಯುಂತೆ, ಅಲಂಕರಿಸುವುದಕ್ಕೆ ಮಾಡುತ್ತೇವೋ ಅಷ್ಟೇ ಗಮನವನ್ನು ಮನೆ ಮತ್ತು ವಿಶೇಷವಾಗಿ ಅಡುಗೆಮನೆಯನ್ನು ಹೈಜಿನಿಕ್‌ ಆಗಿಟ್ಟುಕೊಳ್ಳಲು ನೀಡಬೇಕಾದುದು ಅಗತ್ಯ. ಮನೆಯ ಕೇಂದ್ರ ಭಾಗ ಎನಿಸುವ ಕಿಚನ್‌, ಅನೇಕ ಬಗೆಯ ಕೀಟಾಣುಗಳು ಅಭಿವೃದ್ಧಿಗೊಳ್ಳಲು ಅವಕಾಶ ನೀಡುತ್ತದೆ. ಇದನ್ನು ಸಮಯಕ್ಕೆ ಸರಿಯಾಗಿ ಕ್ಲೀನ್‌ ಮಾಡದಿದ್ದರೆ, ಯಾವಾಗ ಅದು ನಿಮ್ಮ ಆಹಾರದಲ್ಲಿ ಬೆರೆತು ಹಿಂಸೆ ನೀಡುತ್ತದೋ ಹೇಳಲಾಗದು.

ಸಾಮಾನ್ಯವಾಗಿ ನಾವು ಆಗಾಗ ಕಿಚನ್‌ ಶುಚಿ ಮಾಡುತ್ತಿರುತ್ತೇವೆ. ಆದರೆ ಅದು ಕೇವಲ ನಮ್ಮ ದೃಷ್ಟಿ ತಾಕುವುದಕ್ಕೆ ಸೀಮಿತವಾಗುತ್ತದೆ.

ಆದರೆ ನಿಮಗೆ ಗೊತ್ತೇ? ಕಿಚನ್ನಿನ ಮೂಲೆಗಳು ಸಿಂಕ್‌ನ ಕೆಳಭಾಗ, ವಾರ್ಡ್‌ರೋಬ್‌ ಸರ್ಫೇಸ್‌ ಇತ್ಯಾದಿಗಳ ಮೇಲೆ ಜಮೆಗೊಂಡ ಕೊಳೆ, ಧೂಳು ಮಣ್ಣುಗಳಿಂದ ಈ ಜಾಗಗಳ ಮೇಲೆ ಫಂಗಸ್‌, ಕೀಟ, ಜಿರಲೆಗಳು ಅಡಗಿದ್ದು, ಮನಬಂದಾಗ ಅಲ್ಲಿಂದ ಹೊರಬಂದು ಆಹಾರ ಪದಾರ್ಥಗಳತ್ತ ದಾಳಿ ಇಡುತ್ತವೆ. ಆಗ ಆಹಾರ ಹಾಳಾಗದೆ ಉಳಿದೀತೇ?

ಮತ್ತೊಂದು ವಿಷಯ, ನಾವು ಮನೆಯ ಕ್ಲೀನಿಂಗ್‌ ಅಂತೂ ಮಾಡುತ್ತಲೇ ಇರುತ್ತೇವೆ. ಆದರೆ ಎಲ್ಲಕ್ಕೂ ಹೆಚ್ಚಾಗಿ ಕಿಚನ್ನಿನ ಶುಚಿತ್ವಕ್ಕೆ ಮಹತ್ವ ಕೊಡಬೇಕು. ಏಕೆಂದರೆ ಕಿಚನ್‌ ಶುಚಿಯಾಗಿದ್ದರೆ, ಹೈಜೆನಿಕ್‌ ಆಗಿದ್ದರೆ ಮಾತ್ರ ಪರಿವಾರದ ಮಂದಿ ಅದರಲ್ಲೂ ಸಣ್ಣಮಕ್ಕಳ ಆರೋಗ್ಯ ಬಿಗಡಾಯಿಸುವುದಿಲ್ಲ.

ಲೈಜಾಲ್‌ ಕಿಚನ್‌ ಪವರ್‌ ಕ್ಲೀನರ್‌, ಕಿಚನ್‌ನಲ್ಲಿ ಅಡಗಿರುವ ಕೀಟಾಣುಗಳನ್ನು ಶುಚಿಗೊಳಿಸಲು ನಿಮಗೆ ಹೆಚ್ಚಿನ ನೆರವು ನೀಡುತ್ತದೆ. ಆದರೆ ಇದಕ್ಕೆ ಮೊದಲು ಕಿಚನ್‌ನಲ್ಲಿ ಕೀಟಾಣು ಹರಡುವುದು ಹೇಗೆ ಅಂತ ತಿಳಿಯೋಣ. ಎಲ್ಲಿಂದ ಹೇಗೆ ಇವು ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತವೆ ಹಾಗೂ ಯಾವ ಯಾವ ರೋಗಗಳನ್ನು ಹರಡಬಲ್ಲವು ಎಂದೂ ಅರಿಯೋಣ.

ಕಿಚನ್‌ ಸಿಂಕ್‌

ಸಿಂಕ್‌ ಮತ್ತು ಅದರ ಸುತ್ತಮುತ್ತಲೂ ಹೆಚ್ಚಾಗುವ ಕೀಟಾಣುಗಳು, ನಿಮ್ಮ ಕೈ ಅಥವಾ ಆಹಾರದ ಮೂಲಕ ನಿಮ್ಮ ಹೊಟ್ಟೆ ಸೇರುವ ಸಾಧ್ಯತೆಗಳಿವೆ. ಇದರಿಂದಾಗಿ ಡಯೇರಿಯಾ (ಅತಿ ಭೇದಿ)ದಂಥ ರೋಗ ಆಕ್ರಮಿಸಬಹುದು. ಈ ಕೀಟಾಣುಗಳು `ಈಕೋಲಿ'ಯಂಥ ಬ್ಯಾಕ್ಟೀರಿಯಾ ಆಗಿದ್ದು, ಸಿಂಕ್‌ನಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಕ್ಲೀನಿಂಗ್‌ ಟಿಪ್ಸ್ : ಸಿಂಕ್‌ ಕೊಳೆಯಲ್ಲಿ ಆಹಾರ ಕಣಗಳು ಜಾರಿಹೋಗದಂತೆ ಎಚ್ಚರವಹಿಸಿ. ಸಿಂಕ್‌ ಬಳಸಿದ ನಂತರ ಅಲ್ಲಿನ ಸುತ್ತಮುತ್ತಲ ಏರಿಯಾವನ್ನು ಶುಚಿಗೊಳಿಸಲು, ಲೈಜಾಲ್ ‌ಕಿಚನ್‌ ಪವರ್‌ ಕ್ಲೀನರ್‌ ಸ್ಪ್ರೇ ಬಳಸಿರಿ. ನಂತರ ಕಿಚನ್‌ ಪೈಪ್‌ ಬಳಸಿ ಶುಭ್ರಗೊಳಿಸಿ, ಹಾಗೆ ಮಾಡಿದಾಗ ಮಾತ್ರ ಕೀಟಾಣು ಹರಡುವುದಿಲ್ಲ.

ಕುಕ್‌ ಟಾಪ್‌

ಸಾಮಾನ್ಯವಾಗಿ ನಾವು ಗ್ಯಾಸ್‌ ಒಲೆ ಯಾವ ಕುಕ್‌ ಟಾಪ್‌ನ್ನು ನೀರು ಚಿಮುಕಿಸಿ ಕ್ಲೀನ್‌ ಮಾಡುತ್ತೇವೆ. ಆದರೆ ಅಡುಗೆಯ ಪಾತ್ರೆಗಳೆಲ್ಲ ಸದಾ ಇದರ ಮೇಲೆಯೇ ಇರುತ್ತವೆ. ಇದರಿಂದ ಹುಟ್ಟಿಕೊಳ್ಳುವ ಕೀಟಾಣು, ಆಹಾರದ ಮೂಲಕ ನಿಮ್ಮ ದೇಹ ಪ್ರವೇಶಿಸುತ್ತದೆ. ಇದರಿಂದಾಗಿ ಹೊಟ್ಟೆನೋವು ಮತ್ತಿತರ ಬಾಧೆಗಳು ತಪ್ಪವು.

ಕ್ಲೀನಿಂಗ್‌ ಟಿಪ್ಸ್ : ಕುಕ್‌ ಟಾಪ್‌ ಬಳಸಿದ ನಂತರ ಅದರ ಮೇಲೆ ಬಿದ್ದಿರುವ ಗಲೀಜನ್ನು ನಿವಾರಿಸಿ. ನಂತರ ಲೈಜಾಲ್ ‌ಕಿಚನ್‌ ಪವರ್‌ ಕ್ಲೀನರ್‌ನ ಸಹಾಯದಿಂದ ಇದನ್ನು ನೀಟಾಗಿ ಒರೆಸಿ ಕ್ಲೀನ್‌ ಮಾಡಿ. ಮುಖ್ಯವಾಗಿ ನಾಬ್‌, ಕುಕ್‌ ಟಾಪ್‌ ಅಡಿ ಭಾಗದಲ್ಲಿ ಅಡಗಿರುವ ಕೀಟಾಣುಗಳನ್ನು ತೊಲಗಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ