ನಗ್ಮಾ ಕಾಲೇಜು ವಿದ್ಯಾರ್ಥಿನಿ. ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬಂದು ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಳು. ಮನೆಯಿಂದ ಕಾಲೇಜಿಗೆ ಬಸ್‌ನಲ್ಲಿ ಹೋಗಿ ಬರುತ್ತಿದ್ದಳು. ಬಸ್‌ ಪ್ರಯಾಣಕ್ಕೆ 45 ನಿಮಿಷ ಹಿಡಿಯುತ್ತಿತ್ತು.

ಆ ದಿನ ಕಾಲೇಜ್‌ನಲ್ಲಿ ಯೂತ್‌ ಫೆಸ್ಟಿವಲ್ ‌ಇದ್ದುದರಿಂದ ಮನೆಗೆ ಹಿಂದಿರುಗಲು ತಡವಾಗಿತ್ತು. ಅವಳು ತನ್ನ ಗೆಳತಿಯ ಜೊತೆ ಬಸ್‌ನಿಂದ ಇಳಿದಾಗ ರಾತ್ರಿ 11 ಗಂಟೆ. ಬಸ್‌ ಸ್ಟಾಪ್‌ನಿಂದ 3-4 ನಿಮಿಷ ನಡೆಯುವಷ್ಟು ದೂರದಲ್ಲಿ ಅವಳ ಮನೆ ಇತ್ತು. ಗೆಳತಿಯ ಮನೆ ಇವಳ ಮನೆಯಿಂದ ತುಸು ದೂರದಲ್ಲಿತ್ತು.

ಆ ದಿನದ ಘಟನೆಯ ಬಗ್ಗೆ ನಗ್ಮಾ  ಹೇಳುತ್ತಾಳೆ, ``ನಾವು ಬಸ್‌ನಿಂದ ಇಳಿದಾಗ ಕೆಲವು ಹುಡುಗರು ನಮ್ಮತ್ತಲೇ ನೋಡುತ್ತಾ ನಿಂತಿದ್ದರು. ನಾವು ಕಾಲೇಜಿಗೆ ಹೋಗಿ ಬರುವಾಗೆಲ್ಲ ನಮ್ಮ ಬಗ್ಗೆ ಕಾಮೆಂಟ್‌ ಮಾಡುತ್ತಿದ್ದ ಹುಡುಗರೇ ಅವರು. ನಾವು ಬಸ್ ಇಳಿದು ನಡೆಯುತ್ತಿದ್ದಂತೆ ಅವರು ಕಾರಿನಲ್ಲಿ ನಿಧಾನವಾಗಿ ಹಿಂಬಾಲಿಸತೊಡಗಿದರು. ನಾವು ವೇಗವಾಗಿ ನಡೆದು ನನ್ನ ಮನೆಯ ಬಳಿ ಬಂದವು. ನಾನು ಗೆಳತಿಗೆ ನನ್ನ ಮನೆಯಲ್ಲೇ ಇದ್ದುಬಿಡು ಎಂದು ಹೇಳಿದೆ. ಆದರೆ ಅವಳು ತನ್ನ ಅಣ್ಣನಿಗೆ ಮೈ ಚೆನ್ನಾಗಿಲ್ಲವೆಂದು ಹೇಳಿ ಹೊರಟುಬಿಟ್ಟಳು.

``ಆದರೆ ಸ್ವಲ್ಪ ಸಮಯದ ನಂತರ ಅವಳಿಂದ ಫೋನ್‌ ಬಂದಿತು. ಅವಳು ಅಳುತ್ತಾ, `ಆ ಹುಡುಗರು ಹಿಂದೆ ಬಿದ್ದಿರುವವರೆಂದೂ, ಕಾರಿನೊಳಕ್ಕೆ ಎಳೆದುಕೊಳ್ಳಲು ಪ್ರಯತ್ನಿಸುತ್ತಿರುವರೆಂದೂ,' ತಿಳಿಸಿದಳು. ನಾನು ಕೂಡಲೇ ಅವಳ ಅಣ್ಣನಿಗೆ ಮತ್ತು ನನ್ನ ಅಕ್ಕಪಕ್ಕದವರಿಗೆ ವಿಷಯ ತಿಳಿಸಿ ಅವಳ ಸಹಾಯಕ್ಕೆ ಕಳುಹಿಸಿದೆ.

``ಈ ಮಧ್ಯೆ ಆ ಪುಂಡರಿಂದ ತಪ್ಪಿಸಿಕೊಳ್ಳಲು ಅವಳು ಮೇನ್‌ರೋಡ್‌ ಬಿಟ್ಟು ಗಲ್ಲಿಯಲ್ಲಿ ಓಡತೊಡಗಿದಳು. ಅಲ್ಲಿ ಕಟ್ಟಡ ಕಟ್ಟುತ್ತಿದ್ದುದರಿಂದ ಮರಳು, ಜಲ್ಲಿ ಎಲ್ಲ ರಸ್ತೆಯಲ್ಲಿ ಹರಡಿತ್ತು. ಕಾರ್‌ ಚಲಿಸಲು ಅಲ್ಲಿ ಅವಕಾಶವಿರಲಿಲ್ಲ. ಈ ಹುಡುಗರು ಕಾರನ್ನು ನಿಲ್ಲಿಸಿ ಅವಳ ಹಿಂದೆ ಬಿದ್ದಿದ್ದರು. ಅವರು ಅವಳನ್ನು ಹಿಡಿಯುವಷ್ಟರಲ್ಲಿ ಅವಳ ಅಣ್ಣ ಮತ್ತು ನಮ್ಮ ನೆರೆಮನೆಯ ಹುಡುಗ ಅಲ್ಲಿಗೆ ತಲುಪಿದ್ದರು. ಒಂದು ಅಚಾತುರ್ಯ ಆಗುತ್ತಿದ್ದುದು ತಪ್ಪಿತು.

``ಪೊಲೀಸರಿಗೆ ದೂರು ಕೊಡಬೇಕೆಂದಿದ್ದಾಗ ಎಲ್ಲರೂ ಬೇಡವೆಂದು ತಡೆದರು. ಪೊಲೀಸರು ಸಹಾಯವನ್ನೇನೋ ಮಾಡುವರು, ಆದರೆ ನೀವು ತೊಂದರೆಗೆ ಸಿಕ್ಕಿಕೊಳ್ಳುತ್ತೀರಿ ಎನ್ನುವುದು ಅವರ ಅಭಿಪ್ರಾಯವಾಗಿತ್ತು.

``ದುರ್ದೈವದ ಸಂಗತಿಯೆಂದರೆ ಮನೆ ಮಾಲೀಕರಿಂದ ಹಿಡಿದು ಪ್ರತಿಯೊಬ್ಬರೂ ನಮ್ಮನ್ನೇ ದೋಷಿಗಳೆಂದು ದೂರಿದರು. ಅವರ ಪ್ರಕಾರ ತಡರಾತ್ರಿಯವರೆಗೆ ಮನೆಯಿಂದ ಹೊರಗಿರುವುದು ಮತ್ತು ಜೀನ್ಸ್ ನಂತಹ ಪ್ರಚೋದಕ ಡ್ರೆಸ್‌ ಧರಿಸುವುದು ನಮ್ಮ ತಪ್ಪು.''

ಈಗ ನಗ್ಮಾ ಮಿನಿಸ್ಟ್ರಿ ಆಫ್‌ ಸೋಶಿಯಲ್ ಜಸ್ಟೀಸ್‌ನಲ್ಲಿ ಕನ್ಸಲ್ಟೆಂಟ್ ಆಗಿದ್ದಾಳೆ. ಮೆಟ್ರೊ ಸಿಟಿಯಲ್ಲಿ ವಾಸಿಸುತ್ತಿರುವ ಅವಳು ಸಾಕಷ್ಟು ಎಚ್ಚರಿಕೆಯಾಗಿರುತ್ತಾಳೆ. ಲೇಟ್‌ ನೈಟ್‌ನಲ್ಲಿ ಮನೆಯಿಂದ ಹೊರಗಿರುವುದಿಲ್ಲ. ಯಾರಾದರೂ ಹಿಂಬಾಲಿಸುತ್ತಿದ್ದರೆ ರಸ್ತೆ ಬದಲಾಯಿಸುತ್ತಾಳೆ. ರಾತ್ರಿ ವೇಳೆ ಸಾಧ್ಯವಾದಷ್ಟು ಆಟೋ ಹಿಡಿಯದೆ ಕ್ಯಾಬ್‌ ಬುಕ್‌ ಮಾಡುತ್ತಾಳೆ. ಮೀಡಿಯಾದ ಮಿತ್ರರೊಡನೆ ಸಂಪರ್ಕವಿರಿಸಿಕೊಂಡಿದ್ದಾಳೆ.

ಸ್ಟೇಕಿಂಗ್‌ ಅಂದರೆ ಹಿಂಬಾಲಿಸುವಿಕೆ, ನಮ್ಮ ದೇಶದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋದ 2015ರ ವರದಿಯ ಪ್ರಕಾರ ಅತಿ ಹೆಚ್ಚು ಸ್ಟೇಕಿಂಗ್‌ ಘಟನೆಗಳು ಮಹಾರಾಷ್ಟ್ರದಲ್ಲಿ, ನಂತರ ದೆಹಲಿಯಲ್ಲಿ ನಡೆಯುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ