ಮಧು ಬಂಗಾರಪ್ಪ ಹೇಳಿಕೆಯ ಹಿನ್ನೆಲೆ, ಮೆಕಾಲೆಗೂ ಮುನ್ನ ಭಾರತದ ಶಿಕ್ಷಣ ವ್ಯವಸ್ಥೆ ಮತ್ತು ದೇವಾಲಯಗಳ ಜ್ಞಾನ ಪರಂಪರೆ

ಮೈಸೂರಿನ ಕೆ.ಎಚ್.ಬಿ.ಐ. ಬಡಾವಣೆಯಲ್ಲಿ ಸೆಪ್ಟೆಂಬರ್ 17, 2026ರಂದು ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಹಾಗೂ ಶ್ರೀ ಘನಲಿಂಗ ಶಿವಯೋಗಿ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ದೇವಸ್ಥಾನದ ಗಂಟೆ ಹೊಡೆಯದಿದ್ದರೂ ಪರವಾಗಿಲ್ಲ, ಆದರೆ ಶಾಲೆಗಳ ಗಂಟೆ ಹೊಡೆದರೆ ಮಕ್ಕಳು ಉದ್ಧಾರವಾಗುತ್ತಾರೆ, ದೇಶ ಉದ್ಧಾರವಾಗುತ್ತದೆ ಎಂದು ಹೇಳಿರುವುದು ನಿಜಕ್ಕೂ  ಅವರ ಬೌದ್ಧಿಕ ದೀವಾಳಿತನ ಮತ್ತು ಇನ್ನೂ ಬ್ರಿಟೀಷರ ದಾಸ್ಯದಿಂದ ಹೊರ ಬಾರದೇ ಇರುವುದು  ಸ್ಪಷ್ಟವಾಗುತ್ತದೆ.

ಈ ಸಮಾರಂಭದಲ್ಲಿ ಪದೇ ಪದೇ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯುವುದು ಅವಶ್ಯ. ಆದ್ದರಿಂದಲೇ ನಾನು ದೇವಸ್ಥಾನದ ಗಂಟೆ ಹೊಡೆಯದಿದ್ದರೂ ಪರವಾಗಿಲ್ಲ, ಆದರೆ ಶಾಲೆಗಳ ಗಂಟೆ ಹೊಡೆದರೆ ಮಕ್ಕಳು ಉದ್ಧಾರವಾಗುತ್ತಾರೆ, ದೇಶ ಉದ್ಧಾರವಾಗುತ್ತದೆ ಎಂದು ಹೇಳುತ್ತಲೇ ಇರುತ್ತೇನೆ. ಮಕ್ಕಳ ಕೆಲಸವೆಂದರೆ ದೇವರ ಕೆಲಸ ಎಂಬ ಕಾರಣಕ್ಕೇ ಮತ್ತೆ ಶಿಕ್ಷಣ ಇಲಾಖೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಅವರು ಉದ್ಘಾಟನೆ ಮಾಡಿದ  ಪದವಿ ಪೂರ್ವ ಕಾಲೇಜು ಕಟ್ಟಡ ಮತ್ತು ಶ್ರೀ ಘನಲಿಂಗ ಶಿವಯೋಗಿ ಸಭಾಭವನ  ಸುಮಾರು ₹4.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು  ಅದಕ್ಕೆ ಸರ್ಕಾರದ ಯಾವುದೇ ಅನುದಾನವಿಲ್ಲದೇ, ಸಂಪೂರ್ಣವಾಗಿ ಸುತ್ತೂರು ಮಠದವತಿಯಿಂದ ನಿರ್ಮಾಣವಾಗಿದ್ದು, ಆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಸುತ್ತೂರು ಶ್ರೀಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ವಹಿಸಿದ್ದಲ್ಲದೇ,  ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀರಂಗಪಟ್ಟಣದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.

ಮಾನ್ಯ ಮಧು ಬಂಗಾರಪ್ಪನವರು ರಾಜ್ಯದ ಘನವೆತ್ತ ಶಿಕ್ಷಣ ಮಂತ್ರಿಗಳಾಗಿರುವ ಕಾರಣ ಔಪಚಾರಿಕತೆಗಳು ಮತ್ತು ಶಿಷ್ಟಾಚಾರ ಪಾಲಿಸುವ ದೃಷ್ಟಿಯಿಂದಾಗಿ  ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಮಧು ಬಂಗಾರಪ್ಪವರಿಂದ  ಉದ್ಘಾಟನೆ ಮಾಡಿಸಿರುವುದಲ್ಲದೇ,  ಸ್ಥಳೀಯ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀಡಿ  ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ ಅವರು ಮತ್ತೊಬ್ಬ  ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್. ಉಪಸ್ಥಿತಿಯಲ್ಲಿ  ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿದ್ದಾರೆ.

ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿರುವ ಕಾರಣ ಅಂತಹ ಮಕ್ಕಳಿಗೆ ಉತ್ತಮ ಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕೆಲಸವಾಗಿರುವಾಗ,  ಹೇಳೀ ಕೇಳಿ ಸುತ್ತೂರು ಮಠದ ಒಂದು ಧಾರ್ಮಿಕ ಮಠವಾಗಿದ್ದು ಅದು ಈ ರೀತಿಯಾಗಿ ಲೋಕಕಲ್ಯಾಣಕ್ಕಾಗಿ ಮಕ್ಕಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಶಿಕ್ಷಣ ಸಂಸ್ಥೆಯನ್ನು ನಡೆಸಲು ಹಣ ಎಲ್ಲಿಂದ ಬರುತ್ತದೆ?

ಈ  ಮಠಗಳಿಗೆ  ನಡೆದುಕೊಳ್ಳುವವರು, ಒಕ್ಕಲಿನವರು ಮತ್ತು ಇತರೇ ಭಕ್ತಾದಿಗಳು ಬರಲೇ ಬೇಕು, ಅಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಮಗಳು ನಡಯಲೇ ಬೇಕು ಮತ್ತು ಅಲ್ಲಿರುವ ದೇವಾಲಯದ ಗಂಟೆಗಳು ಬಾರಿಸಲೇ ಬೇಕು, ಮಂಗಳಾರತಿ ಆಗಲೇ ಬೇಕು, ಆ ಮಂಗಳಾರತಿ ತಟ್ಟೆಗೆ ಅಥವಾ ವಿವಿಧ ಪೂಜೆ ಪುನಸ್ಕಾರಗಳಿಗೆ ಭಕ್ತಾದಿಗಳು ನೀಡುವ ಹಣವನ್ನೇ  ಒಟ್ಟುಗೂಡಿಸಿ ಮಠ ಮಾನ್ಯಗಳು, ತ್ರಿವಿಧ ದಾಸೋಹಗಳನ್ನು ನಡೆಸುವಂತಾಗುವಾಗ, ಒಬ್ಬ ಶಿಕ್ಷಣ ಮಂತ್ರಿಯಾಗಿದ್ದುಕೊಂಡು ಒಂದು ಧಾರ್ಮಿಕ ಮಠದ ಆಶ್ರಯದಲ್ಲಿ ನಡೆಯುವ ಶಿಕ್ಷಣ ಸಂಸ್ಥೆಯಲ್ಲಿ ನೂತನವಾಗಿ  ನಿರ್ಮಿಸಿರುವ  ಕಟ್ಟಡಗಳನ್ನು ಉಧ್ಘಾಟಿಸುವ ಸಮಯದಲ್ಲಿ, ದೇವಸ್ಥಾನದ ಗಂಟೆ ಹೊಡೆಯದಿದ್ದರೂ ಪರವಾಗಿಲ್ಲ ಎಂಬ  ಉದ್ಧಟತನದ ಮಾತುಗಳನ್ನು ಆಡುವುದು ಎಷ್ಟು ಸರಿ? ಈಗಾಗಲೇ ತಿಳಿಸಿದಂತೆ ಆ ಮಠದ ದೇವಾಲಯದಲ್ಲಿ ಗಂಟೆ ಹೊಡಯದೇ ಹೋಗಿದ್ದಲ್ಲಿ,  ಅವರು ಉದ್ಭಾಟಿಸಿದ ಶಾಲೆ ಗಂಟೆ ಹೊಡೆಯಲು ಆಗುತ್ತಲೇ ಇರಲಿಲ್ಲಾ? ಶಾಲೆಯೇ ಇಲ್ಲದಿದ್ದಲ್ಲಿ ಇನ್ನು  ಮಕ್ಕಳು ಹೇಗೆ ಉದ್ಧಾರವಾಗ್ತಾರೆ? ಎನ್ನುವುದನ್ನು ಮಾನ್ಯ ಮಂತ್ರಿಗಳು ಕರ್ನಾಟಕದ ಜನರಿಗೆ ತಿಳಿಸಿಕೊಡಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ