ಬಾಲ್ಯದಿಂದ ವೈರಾಗ್ಯದ ಪಯಣ, ಪವಾಡಗಳೆಂದು ಪ್ರಸಿದ್ಧವಾದ ನೀಂ ಕರೋಲಿ ಬಾಬಾ  ಲೀಲೆಗಳು, ರಾಮದಾಸ್‌ನಂತಹ ಶಿಷ್ಯರ ಮೂಲಕ ವಿಶ್ವಕ್ಕೆ ತಲುಪಿದ ಸಂದೇಶ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ

HANUMAN ANSH MOVIE POSTER DESIGN #hanumanansh #neemkaroli #hanuman #hanumananshmovie

ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಚಿತ್ರಗಳು ಮಕಾಡೆ ಮಲಗುತ್ತಿರುವ ಸಂಧರ್ಭದಲ್ಲಿ ಕೇವಲ ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ, ವಿಶ್ವಾದ್ಯಂತ ಸುಮಾರು ₹300 ಕೋಟಿಗೂ ಅಧಿಕ ಗಳಿಸುವ ಮೂಲಕ ಹನುಮಾನ್ ಆಂಶ್ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾ ಸ್ವಾತಂತ್ರ್ಯ ಪೂರ್ವ ಭಾರತದ ಕಥೆಯಾಗಿದ್ದು, ತಾಯಿಯ ಮರಣದ ಬಳಿಕ ದೇವರನ್ನು ಹುಡುಕುತ್ತಾ ಹೊರಡುವ ಲಕ್ಷ್ಮಿ ನಾರಾಯಣ್ ಎಂಬ ಬಾಲಕನ ಪ್ರಯಾಣ ಮತ್ತು ಅಂತಿಮವಾಗಿ ಅವರು ನೀಮ್ ಕರೋಲಿ ಬಾಬಾ ಆಗಿ ರೂಪುಗೊಳ್ಳುವ ಹಾದಿಯನ್ನು ಇದು ಹೊಂದಿರುವ ಈ ಸಿನಿಮಾ ಆಗಸ್ಟ್ 7, 2026ರಂದು ಬಿಡುಗಡೆಯಾಗಿ ಅಪಾರ ಜನಮನ್ನಣೆಗಳಿಸಿ ಹೋದ ಬಂದ ಕಡೆಯೆಲೆಲ್ಲಾ ಇನ್ನೂ ನೋಡಿಲ್ವಾ, ಆ ಸಿನಿಮಾದ ಬಗ್ಗೆ ಇನ್ನೂ ಏನೂ ಬರದೇ ಇಲ್ವಲ್ಲಾ ಎಂದು ಕೇಳುತ್ತಿದ್ದನ್ನು ಕೇಳಿ ಈ ವಾರಾಂತ್ಯದಲ್ಲಿ ಸಿನಿಮಾ ನೋಡಿದಾಗ, ಬಹಳ ದಿನಗಳ ನಂತರ ಕತ್ತಲಿನಲ್ಲಿ ಬರೇ ಕತ್ತಲೆ ಜಗತ್ತಿನ ಹೊಡಿ ಬಡೀ ಕಡೀ ಸಿನಿಮಾ ನೋಡಿ ಬೇಸತ್ತಿದ್ದವರಿಗೆ ಬಹಳ ನೆಮ್ಮದಿದಯ ಸಿನಿಮಾ ನೋಡಿದ ತೃಪ್ತಿಯಾಗುವುದಂತೂ ಖಂಡಿತ. ಓಟಿಟಿಗೆ ಕಾಯದೇ ಎಲ್ಲರೂ ಚಿತ್ರಮಂದಿರದಲ್ಲೇ ನೋಡಲೇ ಬೇಕಾದ ಸಿನಿಮಾ ಆಗಿರುವುದರಿಂದ ಆ ಸಿನಿಮಾದ ವಿಮರ್ಶೆಗಿಂತಲೂ ನೇರವಾಗಿ ಆ ಸಿನಿಮಾದ ಮುಖ್ಯ ನಾಯಕರಾದ ನೀಂ ಕರೋಲಿ ಬಾಬಾ  ಅವರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ ಬನ್ನಿ.

ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಕೆಲವು ಸಂತರು ದೊಡ್ಡ ದೊಡ್ಡ ಗ್ರಂಥಗಳನ್ನು ಬರೆದಿಲ್ಲ. ಅರಮನೆಗಳನ್ನೂ ಕಟ್ಟಲಿಲ್ಲ. ತಮ್ಮ ಹೆಸರಿನಲ್ಲಿ ಪ್ರಚಾರವನ್ನೂ ಮಾಡಿಕೊಳ್ಳಲಿಲ್ಲ. ಆದರೆ ಅವರ ಬದುಕಿನ ಸರಳತೆ, ಮಾತಿನಲ್ಲಿದ್ದ ಆಳ ಮತ್ತು ಜನರ ಮೇಲಿನ ಕರುಣೆ ಅವರನ್ನು ಪೀಳಿಗೆಗಳವರೆಗೆ ಜೀವಂತವಾಗಿರಿಸಿದೆ. ಅಂತಹ ಅಪರೂಪದ ಸಂತ ಪರಂಪರೆಯಲ್ಲಿ ನೀಂ ಕರೋಲಿ ಬಾಬಾ, ಭಕ್ತರಿಂದ ಪ್ರೀತಿಯಿಂದ ಕರೆಯಲ್ಪಡುವ ಮಹಾರಾಜ್ಜಿ, ಅತ್ಯಂತ ವಿಶಿಷ್ಟ ವ್ಯಕ್ತಿತ್ವ. ಒಂದು ಸಾಮಾನ್ಯ ಕಂಬಳಿ ಹೊದ್ದು, ಮರದ ಮಂಚದ ಮೇಲೆ ಕುಳಿತು, ಬರುವವರಿಗೆ ಊಟ ಮಾಡಿಸಿ, ಕೆಲವೊಮ್ಮೆ ಗದರಿಸಿ, ಕೆಲವೊಮ್ಮೆ ನಗಿಸಿ, ಕೆಲವೊಮ್ಮೆ ಒಂದು ಮಾತಿನಲ್ಲಿ ಅವರ ಬದುಕನ್ನೇ ಬದಲಾಯಿಸಿದ ಈ ಸಂತನ ಜೀವನವೇ ಒಂದು ವಿಶಿಷ್ಟ ಅಧ್ಯಾಯ.

ಇಂದು ಉತ್ತರಾಖಂಡದ ಕೈಂಚಿ ಧಾಮ ವಿಶ್ವದ ಅನೇಕ ದೇಶಗಳ ಆಧ್ಯಾತ್ಮಿಕ ಅನ್ವೇಷಕರನ್ನು ಸೆಳೆಯುತ್ತಿದೆ. 1967ರಲ್ಲಿ ಹಾರ್ವರ್ಡ್‌ನ ಮನೋವಿಜ್ಞಾನಿ ರಿಚರ್ಡ್ ಅಲ್ಪರ್ಟ್, ನಂತರ ರಾಮದಾಸ್ ಎಂದು ಪ್ರಸಿದ್ಧರಾದವರು, ಬಾಬಾರನ್ನು ಭೇಟಿಯಾದ ನಂತರ ಅವರ ಜೀವನದ ದಿಕ್ಕೇ ಬದಲಾಯಿತು.  ಆದರೆ ನೀಂ ಕರೋಲಿ ಬಾಬಾ ಅವರ ಕಥೆ ಕೇವಲ ರಾಮದಾಸ್‌ನಿಂದ ಆರಂಭವಾಗುವುದಿಲ್ಲ. ಅದು ಅಕಬರ್‌ಪುರದ ಲಕ್ಷ್ಮೀನಾರಾಯಣ ಶರ್ಮಾ ಎಂಬ ಬಾಲಕನಿಂದ ಆರಂಭವಾಗುತ್ತದೆ.

ಅಕಬರ್‌ಪುರದಲ್ಲಿ ಹುಟ್ಟಿದ ಲಕ್ಷ್ಮೀನಾರಾಯಣ

ನೀಂ ಕರೋಲಿ ಬಾಬಾ ಅವರ ಮೂಲ ಹೆಸರು ಲಕ್ಷ್ಮೀನಾರಾಯಣ ಶರ್ಮಾ. ಅವರು ಸುಮಾರು 1900ರ ಹೊತ್ತಿಗೆ ಉತ್ತರ ಪ್ರದೇಶದ ಅಕಬರ್‌ಪುರದಲ್ಲಿ ಒಂದು ಶ್ರೀಮಂತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೇ ಅವರಲ್ಲಿ ಸಾಮಾನ್ಯ ಮಕ್ಕಳಿಗಿಂತ ವಿಭಿನ್ನವಾದ ವೈರಾಗ್ಯದ ಲಕ್ಷಣಗಳು ಕಂಡುಬಂದವು ಎಂದು ಭಕ್ತ ಪರಂಪರೆ ಹೇಳುತ್ತದೆ. ಮನೆಯಲ್ಲಿದ್ದ ಆಹಾರ, ಬಟ್ಟೆ ಮುಂತಾದವುಗಳನ್ನು ಸಾಧು-ಸಂತರಿಗೆ ನೀಡುತ್ತಿದ್ದರೆಂದು ಅವರ ಜೀವನಕಥೆಗಳಲ್ಲಿ ಉಲ್ಲೇಖವಿದೆ. ಐಶ್ವರ್ಯದ ನಡುವೆ ಬೆಳೆದರೂ ಐಶ್ವರ್ಯದ ಮೇಲಿನ ಆಸಕ್ತಿ ಕಡಿಮೆಯಾಗುತ್ತಾ ಹೋಗಿತ್ತು ಎಂಬುದು ಅವರ ಭಕ್ತರ ನಂಬಿಕೆ.  ಇದು ಮುಂದೆ ಅವರ ಜೀವನದ ಪ್ರಮುಖ ಗುಣವಾಗಿ ರೂಪುಗೊಂಡಿತು: ಸರಳ ಜೀವನ,  ಆಳವಾದ ಆಧ್ಯಾತ್ಮಿಕತೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ