ಈ ಭೇದಭಾವ ಸಲ್ಲದು

ದೇಶದಲ್ಲಿ ಬಡ ಶ್ರೀಮಂತರ ನಡುವಿನ ಕಂದಕವನ್ನು ಹೆಚ್ಚಿಸುವ ಪ್ರಯತ್ನ ಈ ಹಿಂದೆ ಪ್ರತಿಯೊಂದು ನಗರದಲ್ಲಿ ನಡೆದಿತ್ತು. ಒಂದು ಕಾಲದಲ್ಲಿ ಒಂದೇ ಬೀದಿಯಲ್ಲಿ  ಚಿಕ್ಕಮನೆಗಳು, ದೊಡ್ಡಮನೆಗಳು ಜೊತೆ ಜೊತೆಗೇ ಇರುತ್ತಿದ್ದವು. ಆದರೆ ಈಗ ಶ್ರೀಮಂತರ ಏರಿಯಾಗಳೇ ಬೇರೆ, ಬಡವರ ಏರಿಯಾಗಳೇ ಬೇರೆ, ಕಾರ್ಮಿಕರದ್ದು ಬೇರೆ. ಇವುಗಳಲ್ಲೂ ಜಾತಿಧರ್ಮದ ಭೇದಭಾವ ಇತ್ತು. ಈಗ ಶ್ರೀಮಂತ ಮಹಿಳೆಯರಿಗೆ ಬಡಜನರ ಸಂಪರ್ಕವೆಂದರೆ ಕೆಲಸಗಾರರ ಮಟ್ಟಿಗೆ ಮಾತ್ರ ಸೀಮಿತವಾಗಿದೆ. ಈಗ ತರಕಾರಿಯವರ ಮಳಿಗೆಗಳು ಮಾಲ್‌ಗಳಲ್ಲೂ ತೆರೆಯುತ್ತಿವೆ.

ಈ ವರ್ಗಭೇದದ ಅರ್ಥ ಶ್ರೀಮಂತ ವರ್ಗದವರ ಬಡಾವಣೆಗಳು ಸ್ವಚ್ಛ, ಹೈಫೈ ಗಾಡಿಗಳು, ಪಾರ್ಕ್‌ಗಳು ಇರುವಂತಹ ಸ್ಥಳ. ಅಲ್ಲಿ ಪ್ರತಿಯೊಂದು ಮನೆ ಮುಂದೆ ಕಾವಲುಗಾರರ ಕೊಠಡಿ ಕಂಡುಬರುತ್ತದೆ. ಅದು ಮಾರ್ಕೆಟ್‌ನಿಂದ ಸಾಕಷ್ಟು ದೂರದಲ್ಲಿರುತ್ತದೆ. ಅಲ್ಲಿ ಸ್ವಚ್ಛತೆಯ ಕೆಲಸಗಾರರು ನಿಯಮಿತವಾಗಿ ಕಂಡುಬರುತ್ತಾರೆ. ಅದು ಬಡದೇಶದ ಭಾಗ ಎಂದೆನಿಸುವುದಿಲ್ಲ. ವಿದೇಶದಿಂದ ವಾಪಸ್‌ ಬಂದು ಭಾರತೀಯರು ಇರುವುದು ಇಂತಹ ಕಡೆಯೇ.

ಆದರೆ ಈಗ ಕೊಳಕೆನ್ನುವುದು ಕೇವಲ ನೆಲಕ್ಕಷ್ಟೇ ಸೀಮಿತವಾಗಿಲ್ಲ. ಅದು ಆಕಾಶಕ್ಕೂ ತಲುಪಿಬಿಟ್ಟಿದೆ. ಅದು ಎಲ್ಲ ನಗರಗಳನ್ನೂ ಆಪೋಶನ ತೆಗೆದುಕೊಳ್ಳುತ್ತಿದೆ. ಕಲುಷಿತ ಹವೆ ಈಗ ಬಡವರ ಮನೆಗಳಲ್ಲಷ್ಟೇ ಅಲ್ಲ, ಶ್ರೀಮಂತರ ಮನೆಗಳಲ್ಲೂ ಕಂಡು ಬರುತ್ತದೆ. ಮಾಲಿನ್ಯ ಅದ್ಭುತ ಸರಿಸಮಾನ ಧೋರಣೆ ಹೊಂದಿದೆ. ಮನೆ ಕೆಲಸದವಳು ಕೆಮ್ಮುತ್ತಾ ಒಳಗೆ ಬಂದರೆ, ಶ್ರೀಮಂತ ಮಹಿಳೆ ಮನೆಯಲ್ಲಿಯೇ ಕೆಮ್ಮುತ್ತಾ ಕೂತಿರುತ್ತಾಳೆ.

ಮಾಲಿನ್ಯವನ್ನು ಟೀಕಿಸುವರು, ಈ ದೇಶದ ಶೇ.90ರಷ್ಟು ಜನರು ಹಿಂದಿನಿಂದಲೂ ಮಾಲಿನ್ಯವನ್ನು ಸಹಿಸಿಕೊಂಡು ಬಂದಿದ್ದಾರೆ ಎಂಬುದನ್ನು ಮರೆಯುತ್ತಾರೆ. ಈಗ ನಿಸರ್ಗ ಅದರ ಸೇಡು ತೀರಿಸಿಕೊಂಡಿದೆ. ತನಗೆ ಎಲ್ಲರೂ ಸರಿಸಮಾನರು, ಮೇಲು ಕೀಳು ಯಾವುದೂ ಇಲ್ಲ ನಾನು ಎಲ್ಲರನ್ನೂ ಸಮನವಾಗಿ ಸತಾಯಿಸುತ್ತೇನೆ ಎನ್ನುವುದು ಅದರ ಧೋರಣೆ.

ಕೇರಳ, ಕರ್ನಾಟಕ, ಪಾಟ್ನಾ, ಮುಂಬೈ, ಚೆನ್ನೈ ಮುಂತಾದ ಕಡೆ ಮಹಾ ಮಳೆ ತನ್ನ ಮಹಾಕೋಪಕ್ಕೆ ಶ್ರೀಮಂತರು ಬಡವರೆನ್ನದೆ ಎಲ್ಲರನ್ನೂ ಆಪೋಶನ ತೆಗೆದುಕೊಂಡು ಬಿಟ್ಟಿತ್ತು. ಜಾಗತಿಕ ತಾಪಮಾನ ಬರುವ ಬೇಸಿಗೆಯಲ್ಲಿ ಏರ್‌ಕಂಡೀಶನರ್‌ಗಳು, ವಿದ್ಯುತ್‌ ವ್ಯತ್ಯಯ ಉಂಟಾಗುವಂತೆ ಮಾಡಬಹುದು. ನಿಸರ್ಗ ಸರ್ವರಿಗೂ ಪಾಠ ಕಲಿಸಿದೆ. ನಕಲಿ ಭೇದಭಾವ ಸಲ್ಲದು ಎಂದು ಅದು ಹೇಳುತ್ತದೆ.

ಒಂದು ವೇಳೆ ಮಾಲಿನ್ಯದಿಂದ ರಕ್ಷಿಸಿಕೊಳ್ಳಬೇಕೆಂದರೆ ದೊಡ್ಡ ಸಾಹೇಬರು ಹಾಗೂ ಮೇಡಂಗಳು ಜನಸಾಮಾನ್ಯರಿಂದ ಪಾಠ ಕಲಿಯಬೇಕು. ಅವರನ್ನು ನಿರಾಕರಿಸಿ ಅಥವಾ ತಿರಸ್ಕರಿಸಿ ದೇಶ, ಸಮಾಜ ಮುಂದೆ ಸಾಗದು. ಮಾಲಿನ್ಯ ಒಂದು ನಗರದಿಂದ ಇನ್ನೊಂದು ನಗರ, ಹಾಗೆಯೇ ದೇಶಕ್ಕೆ ಸಾಗುತ್ತಿದೆ. ಪರ್ವತ, ಸಮುದ್ರಗಳನ್ನು ದಾಟಿ ಹೊರಟಿದೆ. ಅದರ ಕಪಿಮುಷ್ಟಿಯಿಂದ ಪಾರಾಗಲು ಪ್ರತಿಯೊಂದರ ಬಗ್ಗೆಯೂ ಕಾಳಜಿ ವಹಿಸಬೇಕು. ಕೆಲವರು ಹಸಿರು ಟೀ ಶರ್ಟ್‌ ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸೆಕ್ಯೂರಿಟಿ ಏಜೆನ್ಸಿಗಳು ಹಾಗೂ ಕ್ಯಾಮೆರಾಗಳ ಸಮ್ಮುಖದಲ್ಲಿ ರಸ್ತೆ ಗುಡಿಸಿ ಸಮುದ್ರ ತೀರದಲ್ಲಿ ಕಸ ಸಂಗ್ರಹಿಸಿ ಶಭಾಷ್‌ಗಿರಿ ಪಡೆಯುತ್ತಿರಬಹುದು. ಆದರೆ `ಮಿಸ್‌ ಪೊಲ್ಯೂಶನ್‌'ನ್ನು ಖುಷಿಯಿಂದಿಡಲು ಆಗುವುದಿಲ್ಲ. ಅದಕ್ಕಾಗಿ ಬಡವರು, ಮಧ್ಯಮ ವರ್ಗದವರು ಹಾಗೂ ಶ್ರೀಮಂತರ ಭುಜಕ್ಕೆ ಭುಜ ಕೊಟ್ಟು ನಡೆಯಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ