ಆಕರ್ಷಣೆ ಇನ್ನೂ ಇದೆ : ನಮ್ಮ ದೇಶದಲ್ಲಿ ಅದು ಹೆಚ್ಚು ಹೆಸರು ಗಳಿಸಲಿಲ್ಲ. ಆದರೆ ಯೂರೋಪ್ ಅಮೆರಿಕಾಗಳಲ್ಲಿ ಅದು ಬೇಕಾದಷ್ಟು ಖ್ಯಾತಿ ಗಳಿಸಿತು. ಅದರ ಅವಾರ್ಡ್ ಫಂಕ್ಷನ್ಸ್ ಗೆ ಖ್ಯಾತ ಗಾಯಕರು ಆಗಮನಿಸುತ್ತಾರೆ. ಹೆಸರಾಂತ ಗಾಯಕಿ ನಿಕ್ಕಿ ಮಿನಾಜ್ ನವೆಂಬರ್ ಮೊದಲ ವಾರದಲ್ಲಿ ಸ್ಪೇನ್‌ನಲ್ಲಿ ನಡೆದ ಫಂಕ್ಷನ್‌ಗೆ ಬಂದಿದ್ದಳು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರಾದ ಈಕೆ ಅತ್ಯಧಿಕ ಹಣದ ಜೊತೆಗೆ ಕೀರ್ತಿಯನ್ನೂ ಹೊಂದಿದ್ದಾಳೆ. ಈ ತಂಡದ ಗ್ಲಾಮರ್ ನೋಡಿದರೆ ಅದು ತಿಳಿಯುತ್ತದಲ್ಲವೇ?
ಹೀಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ : ಜಿಮ್ ಗೆ ಹೋಗಿ ಫಿಟ್ ಸ್ಲಿಮ್ ಆಗುವುದು ಸುಲಭದ ಮಾತೇನಲ್ಲ. ಎಲ್ಲಕ್ಕೂ ದೊಡ್ಡ ಕಷ್ಟವೆಂದರೆ, ಪ್ರಾರಂಭದಲ್ಲಿ ತೂಕ ತಗ್ಗುವುದಿಲ್ಲ ಹಿಗ್ಗುತ್ತದೆ! ಏಕೆಂದರೆ ಪರಿಶ್ರಮ ಪಟ್ಟ ನಂತರ ಹೆಚ್ಚು ನೀರು ಕುಡಿದು ಹೆಚ್ಚೆಚ್ಚು ತಿನ್ನಬೇಕೆನಿಸುತ್ತದೆ. ಆದರೆ ಗಾಬರಿ ಬೇಡ, ಸಿನಿ ಹೀರೋಗಳ ಹಾಗೆ ಆ್ಯಬ್ಸ್ ಬೆಳೆಸಿಕೊಳ್ಳಲು ಸತತ ಪ್ರಯತ್ನ ನಡೆಸಿ. ಇದು ಸೌಂದರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ನಮ್ಮ ಧ್ವನಿ ಆಲಿಸಿ : ವಿಶ್ವಸಂಸ್ಥೆಯ ಈ ನಾಲ್ವರು ಮಹಾ ನಾಯಕರೆಂದರೆ ದ. ಆಫ್ರಿಕಾದ ಮಂತ್ರಿ ನೀದೀ ಪಾಂಡೋರ್ ನೊಬೆಲ್ ಪ್ರಶಸ್ತಿ ವಿಜೇತ ನಾದಿಯಾ ಮುರಾದ್, ಸೆಕ್ರೆಟರಿ ಜನರಲ್‌ರ ಸೆಕ್ಶುಯಲ್ ವಾಯ್ಲೆನ್ಸ್ ಸ್ಪೆಷಲ್ ರೆಪ್ರೆಸೆಂಟೆಟಿವ್ ಪ್ರಮೀಳಾ ಪ್ಯಾಟನ್, ಮತ್ತೊಬ್ಬ ನೊಬೆಲ್ ಪ್ರಶಸ್ತಿ ವಿಜೇತ ಡೆನಸ್ ಮುಕ್ವಾಗೇ ಇದ್ದಾರೆ. ಇವರೆಲ್ಲ ಇಲ್ಲಿ ಸೇರಿದ ಉದ್ದೇಶ, ಯುದ್ಧ ಕ್ಷೇತ್ರದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯದ ವಿರುದ್ಧ ದನಿಯೆತ್ತುವುದಕ್ಕಾಗಿ! ಸೀರೆ ಉಟ್ಟ ಪ್ರಮೀಳಾ ಭಾರತೀಯರಲ್ಲ, ಮಾರಿಶಸ್‌ನವರು. ಇವರ ಧ್ವನಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಾಂತಿ ಮಾಡೀತೇ? ಕಾದು ನೋಡೋಣ.
ಫ್ಯೂಷನ್ ಡ್ರೆಸ್‌ನ ಮೋಡಿ : ಈ ಕಶೀದಾಕಾರಿ ಕಸೂತಿ ಕಾಶ್ಮೀರದ ಮೂಲದ್ದಲ್ಲ. ಆ ಜಾಗದಲ್ಲಿ ಸರ್ಕಾರ ತನ್ನ ಕಾಕಾರಿ ಜೇಲು ನಿರ್ಮಿಸಿ ತೋರಿಸುತ್ತಿದೆ. ಇವಳ ಈ ಕಸೂತಿ ವಿಶ್ವದ ಇನ್ನೊಂದು ಭಾಗವಾದ ಪೆರು ದೇಶದ ರಾಜಧಾನಿ ಲೀಮಾದಲ್ಲಿ ನಡೆದ ಫ್ಯಾಷನ್ ಪೆರೇಡ್‌ನ ಒಬ್ಬ ಮಾಡೆಲ್‌ದು. ಕೆಲವೇ ದಿನಗಳಲ್ಲಿ ಇದನ್ನು ನಕಲಿಗೊಳಿಸಿ ನಮ್ಮ ದೇಶದಲ್ಲಿ ಮಾರಾಟ ಮಾಡಿದರೆ ಆಶ್ಚರ್ಯವಿಲ್ಲ.
ಹೆಚ್ಚುತ್ತಿರುವ ಮಹಿಳೆಯರ ಶ್ರೀಮಂತಿಕೆ : ಇದೀಗ ವಿಶ್ವದಲ್ಲಿ ಎಲ್ಲೆಡೆ ಚೀನಾದ ಶ್ರೀಮಂತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ವ್ಯಾಂಕೋರ್‌ನ ಈ ಮೂರು ಚೀನೀ ತರುಣಿಯರು ಎಮೀರಂಗ್, ಚೇಲ್ಸಾ ಜಿಯಾಂಗ್, ಜೋಲಿ ಜೋನಿ ಒಂದು ಬರ್ತ್‌ಡೇ ಪಾರ್ಟಿಯಲ್ಲಿ ಮಜಾ ಉಡಾಯಿಸುತ್ತಿದ್ದಾರೆ. ಭಾರತೀಯ ಮಹಿಳೆಯರ ಶ್ರೀಮಂತಿಕೆಗೇನೂ ಕೊರತೆ ಇಲ್ಲದಿದ್ದರೂ ಈ ಬೋಲ್ಡ್ ನೆಸ್ ಅವರಲ್ಲಿಲ್ಲ.
ಭೂತ ಪಿಶಾಚಿಗಳಿಗೊಂದು ದಿನಾಚರಣೆ : ಅಮೆರಿಕಾದ ಖ್ಯಾತಿವೆತ್ತ ಹಬ್ಬ ಹ್ಯಾಲೋವೀನ್ ಭೂತಪಿಶಾಚಿಗಳ ಹಬ್ಬವೆಂದೇ ಹೆಸರಾಗಿದೆ. ಈ ದಿನ ಜನ ದೆವ್ವಗಳಂತೆ ಡ್ರೆಸ್ ಮಾಡಿಕೊಂಡು ಇತರರನ್ನು ಭಯಪಡಿಸುತ್ತಾರೆ. ಈ ಬಂಗಲೆ ನೋಡಿದ ತಕ್ಷಣ ಇದು ಭೂತ ಬಂಗಲೆ ಎನಿಸುವುದಿಲ್ಲವೇ? ಇಂಥ ಹ್ಯಾಲೋವೀನ್ ಪಾರ್ಟಿಗಳಲ್ಲಿ ಜನ ದೆವ್ವಗಳಾಗಿ ಮೆರೆದು ಮೋಜು ಮಜಾ ಉಡಾಯಿಸುತ್ತಾರೆ.