ಸಿಂಧೂ ನದಿಯ ಒಪ್ಪಂದ: ಬದಲಾಯಿಸುವ ಸಮಯ

ಗಂಗಾ, ಯಮುನ, ಶುತದ್ರಿ (ಸಟ್ಲೆಜ್), ಪರುಷ್ಣಿ (ರಾವಿ), ಅಸಿಕ್ನಿ (ಚೀನಾಬ್), ವಿತಸ್ತೆ (ಜೀಲಮ್), ಮತ್ತು ಸುಷೋಮಾ (ಸಿಂಧೂ) ಈ ಏಳನ್ನು (ಸಪ್ತಸ್ವಸಾ -ಗಂಗಾದಿ ಸಪ್ತನದಿಗಳು) ಪ್ರಮುಖ ನದಿಗಳನ್ನಾಗಿಯೂ, ಮರುದ್ವೃದೆ (ಜೀಲಮ್ ಮತ್ತು ಚೀನಾಬ್ ನದಿಗಳ ಸಂಗಮದಿಂದಾದ ಒಂದು ನದಿ) ಮತ್ತು ಆರ್ಜಿಕಾ (ಬಿಯಾಸ್) ಈ ಎರಡು ಉಪನದಿಗಳು ಎಂದು ಋಗ್ವೇದದಲ್ಲಿ ವಿವರಣೆ ಇದೆ. ಭಾರತೀಯ ಸಂಸ್ಕೃತಿಯಲ್ಲಿ ನದಿಗಳಿಗೆ ವಿಶೇಷವಾದ ಪೂಜನೀಯ ಸ್ಥಾನವಿದೆ. ನದೀ ಕೇಂದ್ರಿತವಾದ ಸಂಸ್ಕೃತಿ ನಮ್ಮದು. ಸಿಂಧೂನದಿ ಪಾತ್ರದ ಜನಗಳನ್ನು "ಹಿಂದೂಗಳು" ಎಂದು, ಸನಾತನ ಧರ್ಮವನ್ನು "ಹಿಂದೂ ಧರ್ಮ" ಎಂದು ಅಪಭ್ರಂಶಗೊಳಿಸಿದ್ದು ಪರ್ಶಿಯನ್ನರು ಮತ್ತು ಗ್ರೀಕರು. ಸಿಂಧೂನದಿ ಯೂರೋಪಿಯನ್ನರ ಬಾಯಲ್ಲಿ "ಇಂಡಸ್" ಆಯಿತು ಮತ್ತು ನಮ್ಮ ದೇಶ, "ಇಂಡಿಯಾ" ಎಂದು ಕರೆಯಲ್ಪಟ್ಟಿತು.

ಕೈಲಾಸ ಪರ್ವತಶ್ರೇಣಿಯಲ್ಲಿ ಮಾನಸ ಸರೋವರದ ಸಮೀಪದಲ್ಲಿ ಉಗಮಿಸಿ, ಲಡಾಖಿನ, ಕಾಶ್ಮೀರದ ಪ್ರದೇಶಗಳಲ್ಲಿ ಹರಿಯುತ್ತಾ ಉಪನದಿಗಳನ್ನು ಜೋಡಿಸಿಕೊಳ್ಳುತ್ತಾ, ನೆಲ, ಜನ, ನಗರ, ಹಳ್ಳಿಗಳನ್ನು ಪೋಷಿಸುತ್ತಾ ಕೊನೆಗೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬಳಿ ಅರಬ್ಬೀ ಸಮುದ್ರದಲ್ಲಿ ಲೀನವಾಗುವ ಈ ಸಿಂಧೂನದಿ ಕ್ರಮಿಸುವ ದೂರ ಬರೋಬ್ಬರಿ 3200 ಕಿಲೋಮೀಟರುಗಳಷ್ಟು. ಸುಮಾರು 800 ಕಿಮೀಗಳಷ್ಟು ಭಾರತದಲ್ಲಿ ಹರಿಯುತ್ತದೆ ಈ ನದಿ, ಆದರೆ ಈ ನದಿಯ ನೀರನ್ನು  ಅವಶ್ಯಕತೆ ಇರುವ ಜನಗಳಿಗೆ ನೆಲಗಳಿಗೆ ಸಂಪೂರ್ಣ ವಾಗಿ ಒದಗಿಸುವ ಅಧಿಕಾರ ಭಾರತಕ್ಕಿಲ್ಲ.

ಎಂತಹ ವಿಪರ್ಯಾಸ ನೋಡೀ..ಯಾವ ನದೀ ಪಾತ್ರದ ಹೆಸರಿನಲ್ಲಿ ಸಿಂಧೂಸ್ಥಾನ..ಹಿಂದೂಸ್ಥಾನವೆಂದು ಈ ದೇಶವನ್ನು ಸಂಭೋದಿಸಲಾಗುತ್ತದೋ ಆ ದೇಶಕ್ಕೆ ಸಿಂಧೂ ನದಿಯ ನೀರಿನ್ನು ಬಾಯಾರಿದ ಬಾಯಿಗಳ ತೃಷೆ ನೀಗಿಸುವ ಅಧಿಕಾರವಿಲ್ಲ, ಏಕೆಂದರೆ ಈ ನದಿಯ ಮೇಲೆ ಪಾಕಿಸ್ತಾನಕ್ಕೆ ಅನಿರ್ಬಂಧ ಅಧಿಕಾರವಿದೆ. ಇಂತಹದೊಂದು ದುರಂತಕ್ಕೆ ಸಹಿ ಹಾಕಿದವರು ಬೇರಾರೂ ಅಲ್ಲ, ದೇಶದ ಪ್ರಜೆಗಳ ಹಿತರಕ್ಷಣೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದ್ದ ಪ್ರಧಾನಮಂತ್ರಿ ಜವಹರಲಾಲ್ ನೆಹರು.19 ಸೆಪ್ಟೆಂಬರ್ 1960 ರಂದು ಲಾಹೋರಿನಲ್ಲಿ ವಿಶ್ವ ಬ್ಯಾಂಕನ ಮಧ್ಯಸ್ತಿಕೆಯಲ್ಲಿ ಅಧಿಕೃತಗೊಂಡ ಈ ಅವಘಡದ ಹೆಸರು Indus Water Treaty (IWT) ಸಿಂಧೂ ನದಿಯ ಒಪ್ಪಂದ. ಇದೊಂದು ಅಸಮತೋಲನ ಸಂಧಾನ, ಆದರೂ ಈ 64 ವರ್ಷಗಳಲ್ಲಿ ಪಾಕೀಸ್ತಾನದ ದುರ್ನಡತೆ, ಎರಡು ದೇಶಗಳ ನಡುವೆ ನಡೆದ ಮೂರು ಯುದ್ಧಗಳು, ಅಸಂಖ್ಯಾತ ಪಾಕಿಸ್ತಾನ ನಿಯೋಜಿತ ಭಯೋತ್ಪಾದಕರ ದಾಳಿ ಎಲ್ಲವನ್ನೂ ತಾಳ್ಮೆಯಿಂದ ಸಹಿಸಿಕೊಂಡು ಈ ಸಂಧಾನಕ್ಕೆ ಚ್ಯುತಿ ಬಾರದಂತೆ ಸಿಂಧೂನದಿಯನ್ನು ಪಾಕಿಸ್ತಾನಕ್ಕೆ ಹರಿಯ ಬಿಡಲಾಗುತ್ತಿದೆ.

border 1

ಯಾಕೆ ಬೇಕಿತ್ತು ಇಂತಹದೊಂದು ಒಪ್ಪಂದ, ಏನಿದರ ಹಿನ್ನಲೆ, ಏನಿದೆ ಈ ಒಪ್ಪಂದದಲ್ಲಿ?

IWT  ಸಿಂಧೂನದಿಯ ಪಾತ್ರಗಳಲ್ಲಿರುವ ಆರು ನದಿಗಳನ್ನು ಮೂರು ಪೂರ್ವದ ನದಿಗಳು ಮತ್ತು ಮೂರು ಪಶ್ಚಿಮದ ನದಿಗಳಾಗಿ ವಿಂಗಡಿಸಿದೆ. ಬಿಯಾಸ್, ಸಟ್ಲೆಜ್ ಮತ್ತು ರಾವಿ ಈ ಮೂರು ಪೂರ್ವದ ನದಿಗಳನ್ನು ಭಾರತಕ್ಕೆ ಬಿಟ್ಟುಕೊಟ್ಟರೆ, ಸಿಂಧೂನದಿಯೂ ಸೇರಿದಂತೆ ಝೇಲಮ್ ಮತ್ತು ಚೆನಾಬ್ ಈ ಮೂರು ಪಶ್ಚಿಮದ ನದಿಗಳನ್ನು ಪಾಕಿಸ್ತಾನದ ಅಧಿಪತ್ಯಕ್ಕೆ ಬಿಟ್ಟುಕೊಡಲಾಗಿದೆ. ಅವರಿಗೆ ಮೂರು ನಮಗೆ ಮೂರು ಸಮಾ ಆಯ್ತಲ್ಲಾ! ಇಲ್ಲ..ಅದು ಹಾಗಾಗಲಿಲ್ಲ ಭಾರತಕ್ಕೆ ಬಿಟ್ಟುಕೊಟ್ಟ  ಪೂರ್ವನದಿಗಳ 34 ಮಿಲಿಯನ್ ಎಕರೆ-ಅಡಿ ನೀರನ್ನು ಭಾರತ ಉಪಯೋಗಿಸತಕ್ಕದ್ದು ಆದರೆ ಭಾರತ ಕೇವಲ 31 ಮಿಲಿಯನ್ ಎಕರೆ-ಅಡಿ ಮಾತ್ರ ಉಪಯೋಗಿಸಿಕೊಳ್ಳುತ್ತಿದೆ ಉಳಿದದ್ದೆಲ್ಲಾ ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದೆ, ಇದು ಭಾರತದ ತಪ್ಪಲ್ಲವೇ? ಪಶ್ಚಿಮ ನದಿಗಳಿಂದ ಪಾಕಿಸ್ತಾನಕ್ಕೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗದಂತೆ ಭಾರತ ಈ ನದಿಗಳಿಗೆ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಅವಕಾಶವಿದೆ ಆದರೆ ಇದಕ್ಕೂ ಪಾಕೀಸ್ತಾನ ಲಬಾ ಲಬಾ ಅಂತಾ ಹೊಡೆದುಕೊಳ್ಳುತ್ತಿದೆ. ಯಾಕೆ ಇಂತಹ ಅಸಮಾನತೆ ನೀರು ಹಂಚಿಕೆಯಲ್ಲಿ? ಇಂತಹದೊಂದು ದುರಂತಕ್ಕೆ ಸಹಿ ಹಾಕಿ ಬಂದ ನೆಹರು, ಸಂಸತ್ತಿನಲ್ಲಿ ಇದರ ಬಗ್ಗೆ ಅಪಸ್ವರವೆತ್ತಿದವರಿಗೆ ಕೊಟ್ಟ ವಿವರಣೆಯಂತೂ ಇನ್ನೂ ಹಾಸ್ಯಸ್ಪದವೆನಿಸುವಷ್ಟು ಅಸಹನೀಯವಾದ ಸಮಜಾಯಿಷಿ. ನೆಹರೂ ಹೇಳಿಕೆಯ ಪ್ರಕಾರ ಇಂತಹದೊಂದು ಸಂಧಾನದಿಂದ ಪಾಕೀಸ್ತಾನದ ಜೊತೆ ಶಾಂತಿಯ ಹೊಂದಾಣಿಕೆ ಖಚಿತವಂತೆ! ಹೌದೇ ಮುಂದೆ ಹಾಗಾಯಿತೇ? ಖಂಡಿತಾ ಇಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ