- ರಾಘವೇಂದ್ರ ಅಡಿಗ ಎಚ್ಚೆನ್.

  • ಲಿವರ್‌ಪೂಲ್‌ ವಿಶ್ವವಿದ್ಯಾಲಯದ ಮೊದಲ ಸಾಗರೋತ್ತರ ಕ್ಯಾಂಪಸ್‌ಗೆ ನೆಲೆ ಕಲ್ಪಿಸಲಿರುವ ಬೆಂಗಳೂರು
  • ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಇಂಗ್ಲೆಂಡ್‌ ಹಾಗೂ ಭಾರತದ ನಡುವಣ ಬಾಂಧವ್ಯದಲ್ಲಿನ ಹೊಸ ಅಧ್ಯಾಯಕ್ಕೆ ಮುನ್ನುಡಿ
  • 2026ರ ವೇಳೆಗೆ ಈ ಕ್ಯಾಂಪಸ್‌ ಕಾರ್ಯಾರಂಭ
  • ಲಿವರ್‌ಪೂಲ್‌ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‌ಗೆ ಹಿರಿಯ ಸಚಿವರ ಬೆಂಬಲ ಪ್ರಕಟ
  • ಬೆಂಗಳೂರು ಮೂಲದ ಐಟಿ ದೈತ್ಯ ಸಂಸ್ಥೆ ವಿಪ್ರೊ ಜೊತೆಗಿನ ಪಾಲುದಾರಿಕೆ ಒಪ್ಪಂದಕ್ಕೂ ಲಿವರ್‌ಪೂಲ್ ವಿಶ್ವವಿದ್ಯಾಲಯ ಅಂಕಿತ

FB_IMG_1748371577965

ಇಂಗ್ಲೆಂಡ್‌ನ ಪ್ರತಿಷ್ಠಿತ ರಸೆಲ್ ಗ್ರೂಪ್‌ನ ಭಾಗವಾಗಿರುವ ಲಿವರ್‌ಪೂಲ್ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ತನ್ನ ಮೊದಲ ಸಾಗರೋತ್ತರ ಕ್ಯಾಂಪಸ್  ಆರಂಭಿಸುವುದಾಗಿ ಇಂದು ಇಲ್ಲಿ ಪ್ರಕಟಿಸಿತು. ವಿದೇಶಿ ವಿಶ್ವವಿದ್ಯಾಲಯದ  ಈ ಮೊದಲ ಕ್ಯಾಂಪಸ್‌ 2026ರ ವೇಳೆಗೆ ಕಾರ್ಯನಿರ್ವಹಿಸಲಿದೆ.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ  ಇಂಗ್ಲೆಂಡ್‌ ಹಾಗೂ ಭಾರತದ ನಡುವಣ ಬಾಂಧವ್ಯದಲ್ಲಿನ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಈ ಸಮಾರಂಭಕ್ಕೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರ್ಕಾರದ ಹಿರಿಯ ಸಚಿವರು, ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳು  ಸಾಕ್ಷಿಯಾದರು.  ವಿಶ್ವವಿದ್ಯಾಲಯದ ಈ ನಿರ್ಧಾರ ಸ್ವಾಗತಿಸಿದ ಹಿರಿಯ ಸಚಿವರು  ಕ್ಯಾಂಪಸ್‌ ಕಾರ್ಯಾರಂಭಕ್ಕೆ ತಮ್ಮ ಇಲಾಖೆಗಳ ವತಿಯಿಂದ ಅಗತ್ಯ ಸಹಕಾರ ನೀಡುವುದಾಗಿ  ಭರವಸೆ ನೀಡಿದರು.

FB_IMG_1748371581967

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಶ್ರೀ ಎಂ.ಬಿ ಪಾಟೀಲ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ದಿನೇಶ್ ಗುಂಡೂರಾವ್   ಅವರು ಭಾಗವಹಿಸಿದ್ದರು.

ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬರಲಿರುವ  ಈ ಹೊಸ ಕ್ಯಾಂಪಸ್,  ಉನ್ನತ ಶಿಕ್ಷಣದ  ವಿಶ್ವ ದರ್ಜೆಯ ಕಲಿಕಾ ಕೇಂದ್ರವಾಗಿ  ಉದ್ಯಾನ ನಗರದ ಖ್ಯಾತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಲಿವರ್‌ಪೂಲ್‌ ವಿಶ್ವವಿದ್ಯಾಲಯದ ಸಂಶೋಧನೆಗೆ ಒತ್ತು ನೀಡುವ  ಸಂಸ್ಕೃತಿಗೆ ಮತ್ತು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಶೈಕ್ಷಣಿಕ ಮಾನದಂಡಗಳಿಗೆ ನೆಲೆಯಾಗಿರಲಿದೆ.

FB_IMG_1748371574775

ಭಾರತ ಮತ್ತು  ಇಂಗ್ಲೆಂಡ್‌ನ ಪ್ರವರ್ಧಮಾನಕ್ಕೆ ಬರುತ್ತಿರುವ ಕೈಗಾರಿಕೆಗಳ ಅಗತ್ಯಗಳಿಗೆ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಸನ್ನದ್ಧಗೊಳಿಸುವ ಕರ್ನಾಟಕದ ಕ್ರಿಯಾಶೀಲ ಹಾಗೂ ನಾವೀನ್ಯತೆಯ ಶೈಕ್ಷಣಿಕ ಪರಿಸರದ ಜೊತೆಗೆ  ಪಾಲುದಾರಿಕೆ  ಬಲಪಡಿಸಲು ವೇಗವರ್ಧಕವಾಗಿಯೂ ಕಾರ್ಯನಿರ್ವಹಿಸಲಿದೆ.

ಆರಂಭಿಕ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ  ಬಿಸಿನೆಸ್‌ ಮ್ಯಾನೇಜ್‌ಮೆಂಟ್‌,  ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು, ಕಂಪ್ಯೂಟರ್ ವಿಜ್ಞಾನ,   ಬಯೊಮೆಡಿಕಲ್‌ ಸೈನ್ಸ್‌, ಮತ್ತು ಗೇಮ್ ಡಿಸೈನ್‌ ಸೇರಿವೆ. ತದನಂತರದ ಹಂತಗಳಲ್ಲಿ ವೈವಿಧ್ಯಮಯ ಬೋಧನಾ ವಿಷಯಗಳನ್ನು ಸೇರ್ಪಡೆ ಮಾಡುವ ನಿರೀಕ್ಷೆ ಇದೆ.

ರಾಜ್ಯಕ್ಕೆ ವಿಶ್ವವಿದ್ಯಾಲಯದ ಪ್ರವೇಶವನ್ನು ಸ್ವಾಗತಿಸಿದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು, "ಕರ್ನಾಟಕವು ಯಾವಾಗಲೂ ಶಿಕ್ಷಣ ಮತ್ತು ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿದೆ. ಲಿವರ್‌ಪೂಲ್ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ತನ್ನ ಮೊದಲ ವಿದೇಶಿ ಕ್ಯಾಂಪಸ್   ಸ್ಥಾಪಿಸುವ ನಿರ್ಧಾರವು ಜಾಗತಿಕ ಜ್ಞಾನ ತಾಣವಾಗಿ ರಾಜ್ಯದ ಸ್ಥಾನಮಾನವನ್ನು ಬಲಪಡಿಸಲಿದೆ. ನಾವು ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಈ ಶೈಕ್ಷಣಿಕ ಪಾಲುದಾರಿಕೆಯು  ಯಶಸ್ವಿಗೊಳಿಸಲು ಅಗತ್ಯವಾಗಿರುವ ಎಲ್ಲ ಬಗೆಯ ಬೆಂಬಲ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆʼ ಎಂದು ಹೇಳಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ