ಕೇರಳದ ಫರೂಕ್ ಹೈಯರ್ ಸೆಕೆಂಡರಿ ಶಾಲೆ 64ನೇ ಸುಬ್ರೋತೋ ಕಪ್ ಅಂತರರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಯ ಜೂನಿಯರ್ ಬಾಲಕರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.
ನವದೆಹಲಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ, ಫರೂಕ್ ಶಾಲೆಯವರು ಅಮೆನಿಟಿ ಪಬ್ಲಿಕ್ ಸ್ಕೂಲ್, CBSE ತಂಡವನ್ನು 2-0 ಗೋಲುಗಳಿಂದ ಸೋಲಿಸಿದ್ದಾರೆ.
ವಾಯುಪಡೆ ಮುಖ್ಯಸ್ಥ ಹಾಗೂ ಸುಬ್ರೋತೋ ಮುಖರ್ಜಿ ಕ್ರೀಡಾ ಶಿಕ್ಷಣ ಸಮಾಜದ ಅಧ್ಯಕ್ಷರಾದ ವಾಯುಪಡೆ ಮಾರ್ಷಲ್ ಎ.ಪಿ.ಸಿಂಗ್ (PVSM, AVSM) ಹಾಗು ಅತಿಥಿಯಾಗಿ ಪಾಲ್ಗೊಂಡಿದ್ದ ಭಾರತೀಯ ಶೂಟಿಂಗ್ ತಂಡದ ಸದಸ್ಯ ಹಾಗೂ ಒಲಿಂಪಿಯನ್ ದಿವ್ಯಾನ್ಷ್ ಸಿಂಗ್ ಪವಾರ್ ವಿಜೇತರಿಗೆ ಟ್ರೋಫಿಯನ್ನು ನೀಡಿದರು.
ಸುಬ್ರೋತೋ ಕುರಿತು ಮಾತನಾಡಿದ ವಾಯುಪಡೆ ಮಾರ್ಷಲ್ ಎ.ಪಿ.ಸಿಂಗ್, 64ನೇ ಸುಬ್ರೋತೋ ಕಪ್ ಯಶಸ್ವಿಯಾಗಿ ಮುಕ್ತಾಯವಾಗುತ್ತಿದ್ದು, ಇದು ಯುವ ಫುಟ್ಬಾಲ್ ಪ್ರತಿಭೆಗಳಿಗೆ ಉತ್ತಮ ಅವಕಾಶವಾಗಿದೆ. ಈ ವರ್ಷ ನಾವು ಹಲವಾರು ಭರವಸೆಯ ಕ್ರೀಡಾಪಟುಗಳು ಕಂಡುಬರುತ್ತಿದ್ದಾರೆ. ಮುಂದೆ ಅವರು ಭಾರತವನ್ನು ಉನ್ನತ ಮಟ್ಟದಲ್ಲಿ ಪ್ರತಿನಿಧಿಸುತ್ತಾರೆ ಎಂದರು.
ವಿಜೇತ ತಂಡಕ್ಕೆ ₹5,00,000, ರನ್ನರ್-ಅಪ್ ತಂಡಕ್ಕೆ ₹3,00,000, ಸೋತ ಸೆಮಿಫೈನಲಿಸ್ಟ್ ತಂಡಗಳಿಗೆ ತಲಾ ₹75,000, ಹಾಗೂ ಸೋತ ಕ್ವಾರ್ಟರ್ ಫೈನಲಿಸ್ಟ್ ತಂಡಗಳಿಗೆ ತಲಾ ₹40,000 ನೀಡಲಾಯಿತು.