ನ್ಯೂಯಾರ್ಕಿನ ರಸ್ತೆಗಿಳಿದ ಚೀನಾ ಮೋಡಿ : ಇದು ಚೀನಾದ ಹೊಸ ವರ್ಷಾಚರಣೆಯ ಪರಿ. ಆದರೆ ಅಮೆರಿಕಾದವರಿಗೆ ಭಯವೇನೆಂದರೆ, ವಾಸ್ತವದಲ್ಲಿ ಚೀನಾ ಎಲ್ಲಿ ಅಮೆರಿಕಾವನ್ನೇ ತನ್ನ ತೆಕ್ಕೆಗೆ ಎಳೆದುಕೊಂಡುಬಿಡುತ್ತದೋ ಎಂದು. 2 ದಶಕಗಳ ಹಿಂದಷ್ಟೇ ಸಾವಿರಾರು ಚೀನೀಯರನ್ನು ಅಮೆರಿಕಾಗೆ ಕೂಲಿನಾಲಿ ಮಾಡಲೆಂದೇ ಕರೆಸಲಾಗಿತ್ತು. ಆಗ ರೂಪುಗೊಂಡ ಚೈನಾ ಟೌನ್, ಚೀನಾಗಾಗಿ ಅಮೆರಿಕಾವನ್ನೇ ಇಡಿಯಾಗಿ ಆಪೋಷನೆಗೈಯುವ ಹುನ್ನಾರದಲ್ಲಿತ್ತು. ಶಿಶುನಾಳರು ಹೇಳಿದಂತೆ, ಕೋಳಿ ಕೋಡಗನನ್ನೇ ನುಂಗುತ್ತದೋ ಹಗ್ಗ ಮಗ್ಗವನ್ನೇ ನುಂಗುವುದೋ ಹೇಳಲಾಗದು.
ಗಾಲ್ಫ್ ಕಲಿಸುವ ನೆಪದಲ್ಲಿ : ರೀ ಸ್ವಾಮಿ, ಬರೀ ಗಾಲ್ಫ್ ಆಡೋದು ಕಲಿಸಿ ಸಾಕು. ಗಾಲ್ಫ್ ಕಲಿಸುವ ನೆಪದಲ್ಲಿ ಲವ್ ಟ್ರೇನಿಂಗ್ ಕೊಟ್ಟೀರಿ! ಇಂಥ ಟ್ರೇನರ್‌ಗಳಿಂದ ತುಸು ಜೋಪಾನವಾಗಿರುವುದೇ ಕ್ಷೇಮ. ಇವರು ಆಕರ್ಷಕ ರೂಪದ, ಸದಾ ಹಸನ್ಮುಖಿಗಳಾದ, ದಿಲ್‌ದಾರ್ ಆಸಾಮಿಗಳು. ಯಾವಾಗ ಯಾರ ಮೇಲೆ ಮನಸ್ಸಾಗುತ್ತದೋ, ಆಗ ಸ್ಟಿಕ್ ಎಲ್ಲೋ ಬಾಲ್ ಎಲ್ಲೋ.....
ಬದಲಾಗುತ್ತಿರುವ ಮಾರ್ಕೆಟ್ ಫಂಡಾ : ಊ.....ಆ.....ವಾಹ್! ಎಂಥ ಡ್ರೆಸ್‌ಗಳು! ಈ ಫ್ಯಾಷನ್ ಶೋದ ಸ್ಪೆಷಾಲಿಟಿ ಎಂದರೆ, ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿ ಬೇರೆಯವರಿಗೆ ಕಳುಹಿಸಿ. ಯಾರಿಗೆ ಇಷ್ಟವಾಗುತ್ತದೋ ತಕ್ಷಣ ಆರ್ಡರ್ ಮಾಡು! ಹೀಗಾಗಿ ರಾಂಪ್ ಮೇಲೆ ವಾಕ್ ಜೊತೆ ಬಾಡಿ ಮೂಲಕ ಟಾಕ್ ಸಹ ಮಾಡುತ್ತಿದ್ದಾರೆ. ಆಗ ವೀಕ್ಷಕರು ಹಾಯಾಗಿ ಫೋಟೋ ಕ್ಲಿಕ್ಕಿಸಿ ಆನ್‌ಲೈನ್ ಪರ್ಚೇಸ್ ಮಾಡಬಹುದು.
ಗಂಡಹೆಂಡಿರ ಜಗಳ ಬೀದಿಗೆ ಬಂತೆ? : ಈ ಕಲಿಗಾಲದಲ್ಲಿ ಗಾದೆ ಬದಲಾಗಿ ದಿನನಿತ್ಯ ಮನೆಮನೆಗಳಲ್ಲಿ ನಡೆಯುವ ಜಗಳ ಬೀದಿಗೆ ಬಂತೆ ಎಂದುಕೊಳ್ಳಬೇಡಿ. ಜಪಾನಿನ ಸುಮೋ ಕುಸ್ತಿ ತುಸು ವಿಭಿನ್ನವಾಗಿರುತ್ತದೆ ಹಾಗೂ ಇದರಲ್ಲಿ ಹೆಂಗಸರು ಬಲು ಅಪರೂಪ. ಹೀಗಾಗಿ ಟ್ರೇನರ್ ಗಂಡಸರೇ ಆಗಿರ್ತಾರೆ.
ಇವರುಗಳ ಪ್ರೇಮ ಪಡೆಯಬೇಕೆಂದರೆ : ಇವರನ್ನು ನೋಡಿ ವೀಕ್ಷಕರು ತಮ್ಮನ್ನೇ ಕರೆಯುತ್ತಿದ್ದಾರೆ ಅಂದುಕೊಳ್ಳಬಾರದು. ಇಲ್ಲಿ ನಡೆಯುತ್ತಿರುವುದು ಬ್ಯಾಸ್ಕೆಟ್ ಬಾಲ್ ಚಾಂಪಿಯನ್‌ಶಿಪ್ ಟೂರ್ನಮೆಂಟ್. ಈ ಹುಡುಗಿಯರು ತಮ್ಮ ನೆಚ್ಚಿನ ತಂಡಗಳು ಜಯ ಗಳಿಸಲೆಂದು ಹೀಗೆ ಚೀಯರ್ ಅಪ್ ಮಾಡುತ್ತಿದ್ದಾರೆ.
ಇದರ ಮುಂದೆ ಬೇರೆಲ್ಲ ಗೌಣ : ಇಂದಿನ ಸ್ಪೋರ್ಟಿವ್ ಸ್ಪಿರಿಟ್ ಹೇಗಿರುತ್ತದೆ ಎಂದರೆ, ಪ್ರೇಮಿ ಅಥವಾ ಪತಿಗಿಂತಲೂ ಅವಾರ್ಡ್‌ಗೆ ಚುಂಬನ ನೀಡುವುದೇ ಹೆಚ್ಚು ಹಿತಕರ ಎಂಬಂತೆ! ಅಮೆರಿಕನ್ ಗಾಯಕಿ ಟೇಲರ್ ಸ್ವಿಫ್ಚ್ ಗೆ ಇಂಟರ್ ನ್ಯಾಷನಲ್ ಫೀಮೇಲ್ ಸೋಲೋ ಆರ್ಟಿಸ್ಟ್ 2015ರ ಅವಾರ್ಡ್ ಸಿಕ್ಕಿದಾಗ, ಲಂಡನ್ನಿನಲ್ಲಿ ಟ್ರೋಫಿ ಪಡೆದು ಅದನ್ನು ಮುತ್ತಿಟ್ಟ ಪರಿ ಇದು.
ನಡೆ ಮುಂದೆ.... ನೆಪೋಲಿಯನ್ ಬರುತ್ತಿದ್ದಾನೆ! : ಹಿಂದೆ 1814ರಲ್ಲಿ ನೆಪೋಲಿಯನ್‌ಎಬೋಲಾ ದ್ವೀಪಕ್ಕೆ ಬಂದಿಯಾಗಿ ಬಂದಿದ್ದ. ಫ್ರಾನ್ಸ್ ನ ಮಹಾರಾಜ ಆಗಿದ್ದ ನೆಪೋಲಿಯನ್ ಬೋನಾಪಾರ್ಟೆ, ಒಮ್ಮೆ ಸೆರೆಯಾಳಾಗಿದ್ದರೆ ಮತ್ತೊಮ್ಮೆ ಗ್ರೇಟ್ ಡಿಕ್ಟೇಟರ್ ಆಗಿ ಮೆರೆದಿದ್ದ. ಅವನ ನೆನಪಿಗಾಗಿ ಫ್ರಾನ್ಸ್ನ ರಕ್ಷಣಾ ಪಡೆಯ ಪೆರೇಡ್ ಇದು.