ಮಹಾನ್ಸಂಸ್ಕೃತಿ

ಕೇಂದ್ರ ಸಚಿ ಗಿರಿರಾಜ್‌ ಸಿಂಗ್‌ ಈ ಪ್ರಶ್ನೆ ಕೇಳಿ ತಪ್ಪೇನೂ ಹೇಳಿಲ್ಲ. ಒಂದು ವೇಳೆ ರಾಜೀವ್ ‌ಗಾಂಧಿ ನೈಜೀರಿಯಾದ ಹುಡುಗಿಯನ್ನು ಮದುವೆಯಾಗಿದ್ದರೆ ಕಾಂಗ್ರೆಸ್‌ ಪಕ್ಷ ಆ ಕಪ್ಪು ಹೆಂಡತಿಯನ್ನು ತನ್ನ ನಾಯಕಿಯೆಂದು ಒಪ್ಪಿಕೊಳ್ಳುತ್ತಿತ್ತೇ ಎಂಬುದೇ ಆ ಪ್ರಶ್ನೆ. ಇದಂತೂ ಖಂಡಿತಾ ಸತ್ಯ, ಈ ದೇಶದಲ್ಲಿ ವರ್ಣ ವ್ಯವಸ್ಥೆ, ಮನುಸ್ಮೃತಿಯ ಅಧಿಕಾರ, ಬ್ರಾಹ್ಮಣರಿಗೆ ಗೋದಾನ, ಹೋಮ ಹವನ ಮತ್ತು ಗುಡಿ ಕಟ್ಟಿಸುವುದು ಇತ್ಯಾದಿಗಳ ಸಂಕಲ್ಪದಿಂದ ಬದುಕುತ್ತಿರುವ ಭಾರತೀಯ ಜನತಾ ಪಾರ್ಟಿಯ ನಾಯಕ ಒಂದು ಯೋಜನಾಬದ್ಧ ವಿಧಾನದಿಂದ ಮಹಾನ್‌ ಹಿಂದೂ ಸಂಸ್ಕೃತಿಯೆಂದರೆ ಏನೆಂದು ಜನರಿಗೆ ಜ್ಞಾಪಿಸುತ್ತಿದ್ದಾರೆ.

ಮಹಾನ್‌ ಹಿಂದೂ ಸಂಸ್ಕೃತಿಯಲ್ಲಿ ಎಲ್ಲ ದೇವಾನುದೇವತೆಯರು, ಅವತಾರ ಪುರುಷರು ತಮ್ಮ ಸ್ವಾರ್ಥ ಸಾಧಿಸಲು ಸುಳ್ಳು, ಮೋಸ, ಅತ್ಯಾಚಾರ, ಅನಾಚಾರ, ಹಿಂಸೆಯ ಮೊರೆ ಹೋಗುತ್ತಿದ್ದಾರೆ. ಅದೇ ರೀತಿ ಗಿರಿರಾಜ್‌ ಸಿಂಗ್‌ ಮಾಡುತ್ತಿದ್ದಾರೆ, ಸಾಧ್ವಿ ನಿರಂಜನ್‌ ಜ್ಯೋತಿ ಮಾಡುತ್ತಿದ್ದಾರೆ, ಸಾಕ್ಷಿ ಮಹಾರಾಜ್‌ ಮಾಡುತ್ತಿದ್ದಾರೆ, ಪ್ರವೀಣ್‌ ತೊಗಾಡಿಯಾ ಮಾಡುತ್ತಿದ್ದಾರೆ,  ರಾಜನಾಥ್‌ ಸಿಂಗ್‌ ಕೂಡ ಅದನ್ನೇ ಮಾಡುತ್ತಿದ್ದಾರೆ. ಗಿರಿರಾಜ್‌ ಸಿಂಗ್‌ ಏನೇ ಹೇಳಿದ್ದರೂ ಅದನ್ನು ಹಿಂದೂ ಧರ್ಮದ ಮಾನ್ಯತೆಗೆ ಅನುಸಾರವಾಗಿ ಹೇಳಿದ್ದಾರೆ. ಅದರಲ್ಲಿ ತ್ವಚೆಯ ಬಣ್ಣಕ್ಕೆ ಬಹಳ ಮಹತ್ವವಿದೆ. ವಿಶೇಷವಾಗಿ ಪತ್ನಿಯರಿಗೆ.

ಆದರೆ ಗಿರಿರಾಜ್‌ ಕ್ಷಮೆ ಯಾಚಿಸಿದ್ದು ಹೃದಯದಿಂದಲ್ಲ. ಇದು ಎಂತಹ ಬೈಗುಳವೆಂದರೆ ಸ್ವಯಂ ಶ್ರೀಕೃಷ್ಣ ಅರ್ಜುನನಿಂದ ಕರ್ಣನಿಗೆ ಕೊಡಿಸಿದ್ದು. ಅರ್ಜುನ ಯುದ್ಧದಲ್ಲಿ ತನ್ನ ಅಣ್ಣನಾದ ಕರ್ಣನನ್ನು ಕೊಲ್ಲಲು ಸನ್ನದ್ಧನಾಗುತ್ತಾನೆ. ಒಂದುವೇಳೆ ನಮ್ಮ ಕೆಲಸವಾಗಬೇಕಿದ್ದರೆ ಸುಳ್ಳು ಕ್ಷಮೆ ಕೇಳುವುದು ನಮ್ಮ ಸಂಸ್ಕೃತಿಯ ನಿಯಮವಾಗಿದೆ. ಪ್ರತಿದಿನ ಮನೆಗಳಲ್ಲಿ ನೋಡುತ್ತಿರುವುದು ಏನೆಂದರೆ ಒಬ್ಬರು ಯಾರ ಬಗ್ಗೆಯಾದರೂ ಏನಾದರೂ ಹೇಳಿದರೆ ಅವರ ಕೋಪ ಹಾಗೂ ಅವರು ಉಪಯೋಗಿಸಿದ ಪದಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ಅವರದು ನಿರ್ಮಲ ಹೃದಯ ಎನ್ನುತ್ತಾರೆ. ಆದರೆ ನಿರ್ಮಲ ಹೃದಯದವರು ಕೆಟ್ಟ ಮಾತುಗಳನ್ನು ಹೇಗೆ ಹೇಳುತ್ತಾರೆ ಎಂಬುದು ಅರ್ಥವಾಗುವುದಿಲ್ಲ.

ನಮ್ಮ ಸಮಾಜದ ವಿಡಂಬನೆಯೇನೆಂದರೆ ನಮ್ಮಲ್ಲಿ ಮಹಿಳೆಯರನ್ನು ಎಂದಿಗೂ ಕ್ಷಮಿಸುವುದಿಲ್ಲ. ಸೋನಿಯಾ ಗಾಂಧಿಯವರನ್ನು ಅವರು ವಿವಾಹವಾಗಿ 4 ದಶಕಗಳ ನಂತರ ಅವರ ಮೂಲ ಸ್ಥಳ ಯಾವುದು ಎಂದು ನೆನಪಿಸಲಾಗುತ್ತಿದೆ. ಇಲ್ಲಿ ಹುಟ್ಟು ಗುಣಕ್ಕೆ ಮಹತ್ವ ಇದೆ, ಬಣ್ಣಕ್ಕಲ್ಲ. ಆದ್ದರಿಂದ ಎಂ.ಬಿ.ಎ. ಮಾಡಿದವರು, ಎಂಜಿನಿಯರ್‌ಗಳು ಕೂಡ ಮದುವೆಯಾಗುವಾಗ ತಮ್ಮ ಜಾತಕ ಕೈಲಿ ಹಿಡಿದು ತಾವು ಹುಟ್ಟಿದಾಗ ಯಾವ ಯಾವ ದೋಷಗಳಿದ್ದ ಎಂದು ಅರ್ಧಂಬರ್ಧ ತಿಳಿದ ಜ್ಯೋತಿಷಿಗಳ ಬಳಿ ಕೇಳುತ್ತಾರೆ. ಕುಜ ದೋಷವಿದೆಯೆಂದು ಸಾವಿರಾರು ಸುಂದರ, ಸುಶಿಕ್ಷಿತ ಹಾಗೂ ಸೌಮ್ಯ ಹುಡುಗಿಯರನ್ನು ತಮ್ಮ ಜಾತಿ ಹಾಗೂ ತಮ್ಮ ಅಂತಸ್ತಿಗೆ ತಕ್ಕವರಾಗಿದ್ದರೂ ಹುಡುಗರು ತಿರಸ್ಕರಿಸಿಬಿಡುತ್ತಾರೆ. ಏಕೆಂದರೆ ಸಾಕ್ಷಿ, ಗಿರಿರಾಜ್‌,  ಜ್ಯೋತಿ ಮುಂತಾದವರ ಇಸಂ ನಮ್ಮ ಕಣಕಣದಲ್ಲೂ ಇದೆ ಹಾಗೂ ಹೊಸ ಸರ್ಕಾರ ಪ್ರತಿ ದಿನ ಅದನ್ನೇ ನಮ್ಮ ಮೇಲೆ ಹೇರುತ್ತಿದೆ.

ಹಿಂದಿನ ಕಾಂಗ್ರೆಸ್‌ ಸರ್ಕಾರ ಇದಕ್ಕಿಂತ ಭಿನ್ನವಾಗಿರಲಿಲ್ಲ. 1947ರ ನಂತರದ ಗಾಂಧಿ, ನೆಹರು, ಪಟೇಲ್‌, ರಾಜೇಂದ್ರ ಪ್ರಸಾದ್‌ರವರು ಕೊಟ್ಟ ಸರ್ಕಾರ ಇಂದಿನ ಭಾಜಪ ಸರ್ಕಾರಕ್ಕಿಂತ ಹೆಚ್ಚು ಸಂಪ್ರದಾಯವಾದಿಯಾಗಿತ್ತು. ಅದರಿಂದಾಗಿ ಎಲ್ಲಾ ಮೀಸಲಾತಿ, ಭೂಸುಧಾರಣೆ ಮತ್ತು ತಿದ್ದುಪಡಿ ಮಾಡಿದ ವೈವಾಹಿಕ ಕಾನೂನುಗಳ ನಾಟಕಗಳ ಹೊರತಾಗಿಯೂ ದೇಶ ಹಾಗೂ ಸಮಾಜ ಜಾತಿ, ವರ್ಣ, ಮೂಢನಂಬಿಕೆ, ಗೋದಾನ, ಹೋಮ ಹವನ, ಸಂಸ್ಕೃತಿ ಮತ್ತು ದೇವಾನುದೇವತೆಯರ ಪ್ರಾರ್ಥನೆಗಳ ಚಕ್ರವ್ಯೂಹದಲ್ಲೇ ಸಿಲುಕಿಕೊಂಡಿವೆ. ಇವೆಲ್ಲದರ ಗುರಿ ಹೆಚ್ಚಾಗಿ ಮಹಿಳೆಯರೇ ಆಗಿದ್ದಾರೆ. ಅವರು ಬ್ರಾಹ್ಮಣರೇ ಆಗಲಿ, ದಲಿತರೇ ಆಗಲಿ. ಅವರನ್ನು ಇಂದಿಗೂ ಸಾಮಾಜಿಕ ಪರಂಪರೆಗಳ ಹೆಸರಿನಲ್ಲಿ ಹೆಜ್ಜೆ ಹೆಜ್ಜೆಗೂ ಅಪಮಾನಿಸಲಾಗುತ್ತಿದೆ. ಅವರನ್ನು ಮಸೀದಿ, ಗುಡಿಗಳ ಉದ್ದನೆಯ ಕ್ಯೂಗಳಲ್ಲಿ ನಿಲ್ಲಿಸಲಾಗುತ್ತಿದೆ. ವಾರಗಟ್ಟಲೇ ಉಪವಾಸ ಮಾಡಿಸಲಾಗುತ್ತಿದೆ. ಅಪರಿಚಿತರ ಕೊಳಕು ಕಾಲುಗಳನ್ನು ತೊಳೆಸಲಾಗುತ್ತಿದೆ. ಸಾಕ್ಷಿ, ಗಿರಿರಾಜ್‌, ಜ್ಯೋತಿ ಮುಂತಾದವರ ಇಸಂ ಎಲ್ಲಿಯರೆಗೆ ಇರುತ್ತದೋ, ಮಹಿಳೆಯರು ತಮ್ಮನ್ನು ಸ್ವತಂತ್ರರೆಂದು ತಿಳಿಯುವುದಿಲ್ಲ. ದೀಪಿಕಾ ಪಡುಕೋಣೆಯ `ಮೈ ಚಾಯ್ಸ್’ ವೀಡಿಯೋ ಅಂತೂ ಸದಾ ಒಟ್ಟೊಟ್ಟಿಗಿರುವ ಗುಬ್ಬಚ್ಚಿಗಳ ಒಂದು ಗುಂಪನ್ನು ಖಾಲಿ ಮಾಡಿಸುವ ಪ್ರಯತ್ನದಂತಿದೆ.

ವೈವಾಹಿಕ ಜೀವನ ಉಳಿಸಿಕೊಳ್ಳಲು….

ಮದುವೆಯ ಆರಂಭದ ದಿನಗಳಲ್ಲಿ ದಂಪತಿಗಳು ಪರಸ್ಪರರಿಗಾಗಿ ಅದೆಷ್ಟು ಕಾತರಿಸುತ್ತಾರೆ ಅದನ್ನು ಶಬ್ದಗಳಲ್ಲಿ ವರ್ಣಿಸುವುದು ಕಷ್ಟ. ಹುಡುಗಿಯರಂತೂ ಮೇಕಪ್‌ನಿಂದ ರಂಜಿತವಾದ ಮುಖ, ಲಿಪ್‌ಸ್ಟಿಕ್‌ ಹಚ್ಚಿದ ತುಟಿಗಳು, ಬಣ್ಣಬಣ್ಣದ ಬಳೆಗಳನ್ನು ಧರಿಸಿ ಅದನ್ನು ಅವರವರಿಗೆ ತೋರಿಸುವುದರಲ್ಲಿ ಸಂಭ್ರಮಪಡುತ್ತಾರೆ. ಆಗ ಅವರ ಕಣ್ಣುಗಳಲ್ಲಿ ಆತ್ಮವಿಶ್ವಾಸ ಮಿನುಗುತ್ತಿರುತ್ತದೆ. ಗಂಡನಂತೂ ಆಗ ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿರುತ್ತಾನೆ. ತನ್ನ ಗೆಳೆಯರಿಗೂ, ತನ್ನ ಆಫೀಸ್‌ ಸಿಬ್ಬಂದಿಗೂ ಹೆಮ್ಮೆಯಿಂದ ಅವಳನ್ನು ಪರಿಚಯಿಸುತ್ತಾನೆ.

ಆದರೆ ಇದೇ ಪ್ರೀತಿ ವಿಶ್ವಾಸ ಏಕೆ ಮುಂದುವರಿಯುವುದಿಲ್ಲ. ಗಂಡನೂ ಬದಲಾಗುವುದಿಲ್ಲ, ಹೆಂಡತಿಯೂ ಬದಲಾಗುವುದಿಲ್ಲ. ಬದಲಾಗುವುದು ಬರೀ ಯೋಚನೆಯಷ್ಟೆ. ಕೆಲಸದ ಹೊರೆ ಹೆಚ್ಚುತ್ತದೆ. ಮನೆಯವರ, ಸ್ನೇಹಿತರ ವರ್ತನೆಯೂ ಬದಲಾಗುತ್ತದೆ. ಕೆಲವು ವಿಘ್ನ ಸಂತೋಷಿಗಳು ಅವರಿಬ್ಬರ ನಡುವಿನ ಜಗಳ ಮನಸ್ತಾಪದ ಖುಷಿ ಅನುಭವಿಸುತ್ತಾರೆ. ಅವರ ಅಗತ್ಯಗಳು ಬದಲಾಗುತ್ತದೆ. ಈ ಬದಲಾವಣೆಗಳು ಸ್ವಾಭಾವಿಕವಾಗಿವೆ. ಆದರೆ ಇವುಗಳ ಮೇಲೆ ವಿಜಯ ಸಾಧಿಸುವುದು ಕಠಿಣವೇನೂ ಅಲ್ಲ. ಅದು ಅಸಲಿಯಾಗಿರದಿದ್ದರೂ ಅಡ್ಡಿಯಿಲ್ಲ. ಗಂಡ ಹೆಂಡತಿ ತಮ್ಮ ತುಟಿಗಳ ಮೇಲೆ ಕೃತಕ ನಗುವನ್ನಾದರೂ ತಂದುಕೊಂಡು ಪ್ರೀತಿಯನ್ನು, ಪರಸ್ಪರರ ಬಗೆಗಿನ ಗೌರವವನ್ನು ತೋರ್ಪಡಿಸಿಕೊಳ್ಳಬೇಕು. ನಾವು ಮನೆಗಳಲ್ಲಿ ಒಂದು ರೀತಿಯ ವ್ಯವಹಾರ ಮಾಡುತ್ತೇವೆ, ಆಫೀಸುಗಳಲ್ಲಿ ಇನ್ನೊಂದು ರೀತಿ ವರ್ತಿಸುತ್ತೇವೆ. ಯಾವುದಾದರೂ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಹೋದರೆ ಅಲ್ಲಿನ ನಮ್ಮ ರೀತಿನೀತಿಯೇ ಬದಲಾಗಿರುತ್ತದೆ. ವ್ಯಕ್ತಿ ವ್ಯಕ್ತಿಗಳ ನಡುವೆ ನಮ್ಮ ವರ್ತನೆ ಬೇರೆಯಾಗಿರುತ್ತದೆ. ಹಿರಿಯ ನಾಗರಿಕರ ಜೊತೆ ವರ್ತನೆಯಂತೂ ಇನ್ನೂ ಬೇರೆ ರೀತಿಯಲ್ಲಿರುತ್ತದೆ. ನಾವು ನಿರಂತರವಾಗಿ ಬದಲಾಗುತ್ತಿರುತ್ತೇವೆ.

ಬಹುದೊಡ್ಡ ಮುಂಗೋಪಿಗಳು ತಮ್ಮಷ್ಟೇ ಕೋಪಿಷ್ಟರಾಗಿರುವವರ ಅಥವಾ ಬೇರೆ ದೇಶದ ಮುಖ್ಯಸ್ಥರೆದುರು ರೆಪ್ಪೆ ಬಡಿಯದೇ ಹಾಗೆ ನಿಂತುಬಿಡುತ್ತಾರೆ.

ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಇಡೀ ಯೂರೋಪನ್ನು ಒಂದು ಯುದ್ಧದಲ್ಲಿ ತೊಡಗಿಸುವ ಸನ್ನಾಹದಲ್ಲಿದ್ದಾರೆ. ಈಚೆಗಷ್ಟೇ ಅವರು 12 ದಿನಗಳ ಕಾಲ ನಾಪತ್ತೆಯಾಗಿದ್ದರು ಹಾಗೂ ತಮ್ಮ ಗರ್ಲ್ ಫ್ರೆಂಡ್‌ ಡೆಲಿವರಿಗಾಗಿ ಸ್ವಿಡ್ಜರ್ಲೆಂಡಿನ ಯಾವುದೊ ಒಂದು ಪುಟ್ಟ ಕ್ಲಿನಿಕ್‌ನಲ್ಲಿ ಅವಳ ಕೈ ಹಿಡಿದುಕೊಂಡಿದ್ದರು.

ಅಂಥವರೇ ಹೀಗೆ ಬದಲಾಗುವುದಾದರೆ, ಗಂಡ ಹೆಂಡತಿಯ ಜೊತೆ, ಹೆಂಡತಿ ಗಂಡನ ಜೊತೆ ಯಾಕೆ ಬದಲಾಗುವುದಿಲ್ಲ? ಆ ಪ್ರೀತಿ ಕೃತಕವಾದರೂ ಸರಿ ಮದುವೆಯ ಆರಂಭದ ದಿನಗಳಲ್ಲಿ ವ್ಯಕ್ತಪಡಿಸುತ್ತಿದ್ದ ರೀತಿಯಲ್ಲಿ ಪ್ರೀತಿ ತೋರ್ಪಡಿಸಬಹುದು.

ಅಡುಗೆಮನೆ ಮಕ್ಕಳು, ಆಫೀಸು ಹೀಗೆ ಏನೆಲ್ಲ ಸಮಸ್ಯೆಗಳಿವೆ. ಪ್ರೀತಿ ಪ್ರೀತಿಯೇ. ಅದನ್ನು ವ್ಯಕ್ತಪಡಿಸುವಲ್ಲಿ ಜಿಪುಣತನ ಏಕೆ?

ಈ ಜಿಪುಣತನದಲ್ಲಿ ಸಮಾಜದ ಪಾಲು ಸಾಕಷ್ಟಿದೆ. ಸಾಮಾನ್ಯವಾಗಿ ಸಮಾಜ ಪ್ರೀತಿಯ ಸಾಮಾಜಿಕ, ಸಾರ್ವಜನಿಕ ಪ್ರದರ್ಶನದ ಮೇಲೆ ನಿರ್ಬಂಧ ಹಾಕುತ್ತದೆ. ಅದು ವಿವಾಹಿತರದ್ದೇ ಆಗಿರಬಹುದು ಅಥವಾ ಅವಿವಾಹಿತರದ್ದು. ಇದೆಲ್ಲ ಏಕೆ? ಇದಕ್ಕೆ ಉತ್ತರ ಬಹುಶಃ ಸಿಗಲಿಕ್ಕಿಲ್ಲ.

ಇಬ್ಬರು ಮಹಿಳೆಯರು ಅಥವಾ ಪುರುಷರು ಅಕ್ಕಪಕ್ಕ ಕುಳಿತಿರುತ್ತಿದ್ದರೆ, ಏನೂ ತೊಂದರೆಯಿಲ್ಲ. ಅದೇ ಒಬ್ಬ ಪುರುಷ ಮತ್ತು ಮಹಿಳೆಯ ಜೊತೆ ಕುಳಿತಿದ್ದರೆ ಇವರ ಕೋಪ ನೆತ್ತಿಗೇರುತ್ತದೆ. ಹೋಟೆಲ್ ಆಗಿರಬಹುದು, ಮೆಟ್ರೊ ಇರಬಹುದು ಇಲ್ಲಿ ಬಸ್‌ಗಳಲ್ಲಿ ಕೆಲವರಂತೂ ತಮಾಷೆ ಮಾಡಿ ನಗುತ್ತಾರೆ. ಆದರೆ ಅದೆಲ್ಲ ಗಂಡಹೆಂಡತಿಯ ಪ್ರೀತಿಯನ್ನು ಕೊನೆಗೊಳಿಸುವುದಿಲ್ಲ.

ಮದುವೆ ಎಂಬ ವ್ಯವಸ್ಥೆಯನ್ನು ಜೀವಂತಾಗಿಟ್ಟುಕೊಳ್ಳಬೇಕೆಂದರೆ, ಕುಟುಂಬಗಳನ್ನು ಒಗ್ಗೂಡಿಸಬೇಕೆಂದರೆ ಪ್ರೀತಿಯ ಆಮ್ಲಜನಕ ಮತ್ತು ಸಿಮೆಂಟಿನ ಬಗ್ಗೆ ಜಿಪುಣತನ ಬೇಡ. ಅವು ಧಾರಾಳವಾಗಿ ಸಿಗುವಂತಾಗಲಿ, ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತಾಗಲಿ.

ತಾಳಿ : ಬಂಧಿತರವಾಗಿರುವ ಸಂಚು

ತಾಳಿಯನ್ನು ಧರಿಸಬೇಕೊ ಬೇಡವೋ, ಒಂದು ತಮಿಳು ಚಾನೆಲ್ ‌ಈ ಬಗ್ಗೆ ಒಂದು ಬಹಿರಂಗ ಚರ್ಚೆ ಏರ್ಪಡಿಸಿತ್ತು. ಧರ್ಮಾಂಧರ  ಗಾಬರಿ ಹೆಚ್ಚಾಯಿತು. ಈಗ ತಾಳಿಯ ಬಗ್ಗೆ ಚರ್ಚೆ ನಡೆಯುತ್ತದೆ. ನಾಳೆ ಜನಿವಾರದ ಬಗ್ಗೆ, ನಾಡಿದ್ದು ಕೈ ಬಳೆಗಳ ಬಗ್ಗೆ, ಆ ಬಳಿಕ ತಿಲಕದ ಬಗ್ಗೆ ಕೊನೆಗೊಮ್ಮೆ ಕ್ಯೂನಲ್ಲಿ ನಿಂತು ಪೂಜೆ ಮಾಡುವ ಕಲ್ಲು ದೇವರ ಬಗ್ಗೆ ಚರ್ಚೆ ಆಗಬಹುದು. ಅಂತಹವರಿಗೆ ತಕ್ಕ ಪಾಠ ಕಲಿಸಲೆಂದು ಗೂಂಡಾಗಳನ್ನು ಕಳಿಸಿ ಚಾನೆಲ್‌ನ ಕಚೇರಿಯ ಮೇಲೆ ಬಾಂಬ್‌ ಎಸೆಯಲು ಕಳಿಸಿಕೊಟ್ಟರು.

ತಾಳಿಯ ಬಗ್ಗೆ ಬಹಿರಂಗ ಚರ್ಚೆಯಾಗಬೇಕು. ಮಹಿಳೆಯರು ಆಭರಣವನ್ನು ಎಷ್ಟೇ ಧರಿಸಲಿ, ಮಂಗಳಸೂತ್ರವನ್ನು ಏಕೆ ಧರಿಸಬೇಕೆಂದರೆ, ಆಕೆ ಮದುವೆಯಾಗಿದ್ದಾಳೆ ಎಂಬುದನ್ನು ಬಿಂಬಿಸಲು, ಅದರಿಂದ ಆಕೆಯ ಮುತ್ತೈದೆತನದ ರಕ್ಷಣೆ ಆಗಲೆಂದು ಎಂದು ಹೇಳುವುದು ಮೂರ್ಖತನದ ವಿಷಯವೇ ಸರಿ. ಮಂಗಳಸೂತ್ರ ಧರಿಸಿದರೆ ಮದುವೆ ಯಶಸ್ವಿಯಾಗುತ್ತದೆಂಬ ಖಚಿತತೆ ಮೊದಲೂ ಇರಲಿಲ್ಲ, ಈಗಲೂ ಇಲ್ಲ.

ಇತ್ತೀಚಿನ ವರ್ಷಗಳಲ್ಲಿ ವೈಜ್ಞಾನಿಕ ಸಂಶೋಧನೆಯ ಕಾರಣದಿಂದ ವಿಧವೆಯರ ಸಂಖ್ಯೆ ಕಡಿಮೆಯಾಗಿದೆ. 100 ವರ್ಷಗಳ ಹಿಂದಿನತನಕ ವಿಧವೆಯರ ಸಂಖ್ಯೆ ಹೇರಳವಾಗಿತ್ತು. ಅವರು ಮಂಗಳಸೂತ್ರ ಧರಿಸಿದ್ದಾಗ್ಯೂ ಅವರ ಪತಿಯಂದಿರು ಸಾವಿನ ಮನೆ ಸೇರಿದ್ದರು.

ಮಂಗಳಸೂತ್ರದ ಹೆಸರಿನಲ್ಲಿ ಮಹಿಳೆಯರ ಬಳಿ ಒಂದು ಆಭರಣ ಇರುತ್ತದೆ ಎಂಬ ಯೋಚನೆಯೂ ತಪ್ಪು. ಏಕೆಂದರೆ ಅಗತ್ಯ ಉಂಟಾದಾಗ ಅದನ್ನು ಮಾರಲು ಕೂಡ ಸಾಧ್ಯವಿಲ್ಲ. ಅದು ಒಮ್ಮೊಮ್ಮೆ ಕುತ್ತಿಗೆಗೆ ಉರುಳಾಗಿ ಪರಿಣಮಿಸುತ್ತದೆ. ಏಕೆಂದರೆ ಕಳ್ಳರು ಮಂಗಳಸೂತ್ರವನ್ನು ಸುಲಭವಾಗಿ ಕಿತ್ತುಕೊಂಡು ಹೋಗುವಷ್ಟು ಬೇರಾವುದೇ ಆಭರಣವನ್ನು ಕಿತ್ತುಕೊಂಡು ಹೋಗುವುದಿಲ್ಲ.

ಹಿಂದೂ ಧರ್ಮ ವಾಸ್ತವದಲ್ಲಿ ಎಷ್ಟೊಂದು ಪೊಳ್ಳು ಎಂದರೆ, ಹಿಂದೂ ಕಳ್ಳರ ಮನಃಪರಿವರ್ತನೆ ಮಾಡಲು ಕೂಡ ಆಗಿಲ್ಲ. ಹಿಂದೂಗಳ ತಾಳಿಗಳನ್ನಾದರೂ ಕನಿಷ್ಠ ಕದಿಯಬೇಡಿ ಎಂದು ಅವರಿಗೆ ಹೇಳಲು ಆಗಿಲ್ಲ. ಒಂದುವೇಳೆ ಧರ್ಮ ತನ್ನ ಭಕ್ತರಿಗೆ ಈ ಪಾಠವನ್ನೂ ಬೋಧಿಸಲು ಆಗದಿದ್ದರೆ ಅದಕ್ಕಾಗಿ ಹೋರಾಡಿ ಸಾಯುವುದು ಎಷ್ಟರಮಟ್ಟಿಗೆ ಅವಶ್ಯಕ?

ಮಂಗಳಸೂತ್ರದ ಹಿಂದೆ ಗಂಡನ ಜೀವದ ರಕ್ಷಣೆಯಿಲ್ಲ ಹಾಗೂ ಬಲಾತ್ಕಾರಿಗಳಿಂದ ರಕ್ಷಣೆಯೂ ಇಲ್ಲ. ಮಂಗಳಸೂತ್ರ ಧರಿಸುವವರ ಸ್ಥಿತಿ ಅದನ್ನು ಧರಿಸದೇ ಇರುವವರಂತೆಯೇ ಇದೆ. ಗಂಡ ತನ್ನ ಹೆಂಡತಿಯ ಮಂಗಳ ಸೂತ್ರದ ಗತಿ ಏನಾಗಬಹುದೆಂದು ಬೇರೆ ಸ್ತ್ರೀಯರ ಸಂಗ, ಜೂಜು, ಕುಡಿತವನ್ನಂತೂ ಬಿಡುವುದಿಲ್ಲ.

ಮಂಗಳಸೂತ್ರ ವಾಸ್ತವದಲ್ಲಿ ಮಹಿಳೆಯರನ್ನು ಬಂಧಿಯಾಗಿಸುವ ಒಂದು ಸಂಚು. ಇದು ಅವರ ಸ್ವಾತಂತ್ರ್ಯ, ಅವರ ವ್ಯಕ್ತಿತ್ವದ, ಅವರ ಖುಷಿಯ ಮೇಲೆ ಮಾನಸಿಕ ಪಹರೆಯಾಗಿದೆ. ವಿವಾಹವೆನ್ನುವುದು ಜೊತೆಗೆ ಇರುವ ಭರವಸೆಯಾಗಿದೆ. ಇದು ಕೊರಳಿಗೆ ಅಥವಾ ಕಾಲಿಗೆ ಹಾಕುವ ಬೇಡಿಯಾಗಬಾರದು.

Tags:
COMMENT