ಫ್ಯಾಷನ್‌ಗೆ ಒಂದು ಹೊಸ ರೂಪ ಕೊಟ್ಟು ಜನರಿಗೆ ತಲುಪಿಸುತ್ತಿರುವ ಡಿಸೈನರ್‌ ಕರಿಶ್ಮಾ ಶಾಹನಿ ಖಾನ್‌ ಪುಣೆಯವರು. ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ಅವರು ಡಿಸೈನ್‌ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ. ಅತ್ಯಂತ ಶಾಂತ ಹಾಗೂ ನಮ್ರ ಸ್ವಭಾವದ ಕರಿಶ್ಮಾರ ಬ್ರ್ಯಾಂಡ್‌ `ಕ.ಶ.’ ದೇಶದ `ಹ್ಯಾಂಡಿಕ್ರ್ಯಾಫ್ಟ್’ನ್ನು ವಿಶ್ವ ಮಟ್ಟದವರೆಗೆ ತಲುಪಿಸುವಲ್ಲಿ ಸತತವಾಗಿ ತತ್ಪರವಾಗಿದೆ.

ಮುಂದೆ ಏನಾಗಬೇಕೆಂದು ಕರಿಶ್ಮಾ ಮೊದಲೇ ನಿರ್ಧರಿಸಿರಲಿಲ್ಲ. ಯಾವುದನ್ನು ಮಾಡಲು ಮನಸ್ಸಾಗುತ್ತಿತ್ತೋ ಅದನ್ನೇ ಮಾಡುತ್ತಿದ್ದರು. ಮನಸ್ಸು ಒಂದು ಕಡೆ ನಿಲ್ಲುತ್ತಿರಲಿಲ್ಲ. ಹೀಗಾಗುತ್ತಿದ್ದಕ್ಕೆ ಕಾರಣ ಬಹುಶಃ ಮುಂದೊಂದು ದಿನ ಅವರು ದೊಡ್ಡ ಕೆಲಸ ಮಾಡಬೇಕಾಗಿತ್ತು. ಕರಿಶ್ಮಾ ತಮ್ಮ ಬಗ್ಗೆ ಹೀಗೆ ಹೇಳುತ್ತಾರೆ.

“ನಾನು ಪುಣೆಯವಳು. ನಾನು ಯು.ಕೆಯ ಲಂಡನ್‌ ಕಾಲೇಜ್‌ ಆಫ್‌ ಫ್ಯಾಷನ್‌ನಿಂದ ಫ್ಯಾಷನ್‌ ಬಗ್ಗೆ ಅಧ್ಯಯನ ಮಾಡಿದೆ. ಬಾಲ್ಯದಿಂದ ಹಿಡಿದು ಇದುವರೆಗೆ ನನ್ನ ಆಯ್ಕೆಗಳು ಬದಲಾಗುತ್ತಿದ್ದವು. ನಾನು ಫ್ಯಾಷನ್‌ ಡಿಸೈನರ್‌ ಆಗಬೇಕೆಂದು ಯೋಚಿಸಿರಲಿಲ್ಲ. ನಾನು ಇತಿಹಾಸದ ಪುಸ್ತಕವನ್ನು ತೆರೆದಾಗ ನನ್ನ ಅಭ್ಯಾಸದಂತೆ ಅದರಲ್ಲಿ ಟೈವೈ್‌ ನ್‌ ಅಗತ್ಯವಾಗಿ ನೋಡುತ್ತಿದ್ದೆ.

“ಇತಿಹಾಸದ ಕಾಲದಲ್ಲಿ ಅಥವಾ ಯುಗದಲ್ಲಿ ಉಡುಪುಗಳ ಉಲ್ಲೇಖದ ಬಗ್ಗೆ ಓದುವಾಗ ಮಹಿಳೆಯರು ಯಾವ ಯುಗದಲ್ಲಿ ಯಾವ ರೀತಿಯ ಉಡುಪುಗಳನ್ನು ಧರಿಸುತ್ತಿದ್ದರು ಮತ್ತು ಹೇಗೆ ಅಲಂಕರಿಸಿಕೊಳ್ಳುತ್ತಿದ್ದರು ಎಂದು ತಿಳಿದುಕೊಳ್ಳುತ್ತಿದ್ದೆ. ಉಡುಪುಗಳು ನಮ್ಮ ಜೀವನದಲ್ಲಿ ಯಾವಾಗಲೂ ಬಹಳ ಮಹತ್ವಪೂರ್ಣ ಪಾತ್ರ ನಿಭಾಯಿಸುತ್ತವೆ. ಆ ಕಾಲಘಟ್ಟದಲ್ಲಿನ ಸಂಸ್ಕೃತಿಗೆ ಅನುಗುಣವಾಗಿ ಅವು ಚಾಲನೆಯಲ್ಲಿದ್ದವು. ಆರ್ಥಿಕ ಹಿಂಜರಿತದ ಕಾಲದಲ್ಲಿ ಬಟ್ಟೆಗಳ ಬಣ್ಣ ಗಾಢವಾಗಿದ್ದನ್ನು ನೀವು ಗಮನಿಸಿರಬಹುದು. ಜನರ ಬಳಿ ಹಣ ಇಲ್ಲದ್ದರಿಂದ ಅವರೇನೂ ಮಾಡಲು ಸಾಧ್ಯವಿರಲಿಲ್ಲ.”

ಅವರು ಮುಂದುವರಿಸುತ್ತಾ, “ನನಗೆ ಪ್ರವಾಸ ಮಾಡಲು ಬಹಳ ಇಷ್ಟ. ಒಂದು ಕಾಲದಲ್ಲಿ ನಾನು ಆರ್ಕಿಯಾಲಜಿಸ್ಟ್ ಆಗಲು ಇಚ್ಛಿಸಿದ್ದೆ. ಆಫ್ರಿಕಾಗೆ ಹೋಗಿ ನೆಲೆಸಲು ಬಯಸಿದ್ದೆ. ಆದರೆ ಅದರ ಮಧ್ಯೆ ಈ ಫ್ಯಾಷನ್‌ ಡಿಸೈನಿಂಗ್‌ ಬಂತು,” ಎಂದರು.

ಹೀಗೆ ಆರಂಭವಾಯ್ತು

ತಮ್ಮ ಶಿಕ್ಷಣದ ಸಂದರ್ಭದಲ್ಲಿ ಕರಿಶ್ಮಾ ಅನೇಕ ದೇಶಗಳನ್ನು ಸುತ್ತಿದರು ಹಾಗೂ ವಿಭಿನ್ನ ಸ್ಥಳಗಳ ಸಂಸ್ಕೃತಿ ಮತ್ತು ಉಡುಪುಗಳ ಬಗ್ಗೆ ಮಾಹಿತಿ ಪಡೆದರು. ನಂತರ ಅವರು ಭಾರತಕ್ಕೆ ಹಿಂದಿರುಗಿ ತಮಗಾಗಿ ಕಾರ್ಯ ನಿರ್ವಹಿಸಲು ಯೋಚಿಸಿದರು.

“ಶಿಕ್ಷಣದ ಸಂದರ್ಭದಲ್ಲಿ ನಾನು ಹಲವು ಕಡೆ ಇಂಟರ್ನ್‌ಶಿಪ್‌ ಮಾಡಿದೆ. 34 ವರ್ಷ ಅದನ್ನೇ ಮಾಡಿದೆ. ನಂತರ ನನಗಾಗಿ ಏನಾದರೂ ಮಾಡಬೇಕೆಂದು ಯೋಚಿಸಿ ನಾನು ಭಾರತಕ್ಕೆ ಹಿಂದಿರುಗಿದೆ. ಇಲ್ಲಿ ಜನ ನನ್ನ ಕೆಲಸವನ್ನು ಪ್ರಶಂಸಿಸಿದರು ಮತ್ತು ನನಗೆ ಆರ್ಡರ್‌ಗಳು ಸಿಗತೊಡಗಿದರು. ನಂತರ ನಾನು ನನ್ನ ಬ್ರ್ಯಾಂಡ್‌ ತಯಾರಿಸಲು ಇಚ್ಛಿಸಿದೆ. ಇದಕ್ಕೆ ಕುಟುಂಬದ ಸಹಕಾರ ಅಗತ್ಯವಾಗಿದ್ದು ಆರಂಭದಲ್ಲಿ ನನ್ನ ತಾಯಿ ಹಾಗೂ ಅಕ್ಕನಿಂದ ಸಿಕ್ಕಿತು. ಈಗ ನನ್ನ ಗಂಡನಿಂದ ಸಿಗುತ್ತಿದೆ.

“ನನ್ನ ಬ್ರ್ಯಾಂಡ್‌ ಉತ್ಪನ್ನಗಳಲ್ಲಿ ಪ್ರಾಕೃತಿಕ ಟೆಕ್ಸ್ ಟೈಮ್‌, ನ್ಯಾಚುರಲ್ ಕ್ರಾಫ್ಟ್, ಹ್ಯಾಂಡ್‌ ಎಂಬ್ರಾಯಿಡರಿ ಮತ್ತು ಹ್ಯಾಂಡಿ ಕ್ರ್ಯಾಫ್ಟ್ ಮತ್ತು ಆರ್ಗ್ಯಾನಿಕ್‌ ಕಲರ್‌ ಬಳಕೆಯಾಗುತ್ತದೆ. ನಾನು ತಯಾರಿಸಿದ ಉಡುಪನ್ನು ವರ್ಷಗಟ್ಟಲೆ ಧರಿಸಬಹುದು.”

ಟರ್ನಿಂಗ್ಪಾಯಿಂಟ್

ಪ್ರತಿಯೊಬ್ಬರ ಜೀವನದಲ್ಲಿ ಒಂದು ಹೊಸ ದಿಕ್ಕನ್ನು ಕೊಡುವ ಕ್ಷಣ ಬರುತ್ತದೆ. ತಮ್ಮ ಜೀವನದ ಟರ್ನಿಂಗ್‌ ಪಾಯಿಂಟ್‌ ಬಗ್ಗೆ ಕರಿಶ್ಮಾ ಹೀಗೆ ಹೇಳುತ್ತಾರೆ.

“ಜನ ಆಗಾಗ್ಗೆ ನನ್ನ ಜೀವನದ ಟರ್ನಿಂಗ್‌ ಪಾಯಿಂಟ್‌ ಬಗ್ಗೆ ಕೇಳುತ್ತಾರೆ. ನಾನು ಹೇಳುವುದೇನೆಂದರೆ ಫೇಬ್‌ ಪಾಯಿಂಟ್‌ ಬಗ್ಗೆ ಕೇಳುತ್ತಾರೆ. ನಾನು ಹೇಳುವುದೇನೆಂದರೆ ಫೇಬ್‌ ಮೂಲಕ ನನ್ನ ಕಲೆಯನ್ನು ತೋರಿಸುವ ಅವಕಾಶ ಈಗ ಸಿಗುತ್ತಿದೆ. ಆದರೆ ಕಾಲೇಜಿನಲ್ಲಿ ನನ್ನ ಅಂತಿಮ ಶೋ ಕೊಟ್ಟಾಗ ಅದಕ್ಕೆ ಬಹಳ ಪ್ರಶಂಸೆ ಸಿಕ್ಕಿತು. ಅದೇ ನನ್ನ ಟರ್ನಿಂಗ್‌ ಪಾಯಿಂಟ್‌ ಆಗಿತ್ತು. ಅದರಿಂದ ನನ್ನ ಕೆಲಸ ಆರಂಭಿಸಲು ಪ್ರೋತ್ಸಾಹ ಸಿಕ್ಕಿತು.”

ತನ್ನ ಸ್ವಂತ ಬಲದಿಂದ ಹೆಸರು ಮಾಡಿದ್ದೇ ಒಂದು ಸಾಧನೆ ಎಂಬುದನ್ನು ಕರಿಶ್ಮಾ ಒಪ್ಪುವುದಿಲ್ಲ ಎಂದು ನಮ್ಮ ದೇಶದ ಹೆಸರನ್ನು ಎತ್ತರಕ್ಕೆ ಏರಿಸುತ್ತೇನೋ ಅಂದು ನಿಜವಾದ ಅರ್ಥದಲ್ಲಿ ನಾನು ಯಶಸ್ವಿ ಎಂದುಕೊಳ್ಳುತ್ತೇನೆ ಎನ್ನುತ್ತಾರೆ. ಅವರು ಹೀಗೆ ಹೇಳುತ್ತಾರೆ, “ನನ್ನ ಬದುಕಿನ ಅತ್ಯಂತ ದೊಡ್ಡ ಸಾಧನೆಯ ಬಗ್ಗೆ ಹೇಳುವುದಾದರೆ ನನಗೆ ಇದುವರೆಗೆ ಯಾವುದೂ ಸಿಕ್ಕಿಲ್ಲ. ಮುಂದೆ ಸಿಗುವುದು ಬಾಕಿ ಇದೆ. ನಾನು ನನ್ನ ದೇಶವನ್ನು ವಿಶ್ವಮಟ್ಟಕ್ಕೆ ತಲುಪಿಸಲು ಇಚ್ಛಿಸುತ್ತೇನೆ. ಅಲ್ಲಿ ಜನ ಇಲ್ಲಿನ ಉಡುಪನ್ನು ಧರಿಸುವುದಷ್ಟೇ ಅಲ್ಲ ಅದನ್ನು ಆಧರಿಸುವಂತಿರಬೇಕು. ನಾನು ವಿದೇಶದಲ್ಲಿ ಓದಿರುವುದರಿಂದ ವಿದೇಶಗಳಲ್ಲಿ ನಮ್ಮ ಉಡುಪುಗಳಿಗೆ ಬಹಳ ಪ್ರಾಮುಖ್ಯತೆ ಇರುವುದು ಗೊತ್ತಿದೆ.”

ಪ್ರವಾಸ ಹಾಗೂ ಅಡುಗೆ ಇಷ್ಟ

ಕರಿಶ್ಮಾಗೆ ಕುಕಿಂಗ್‌ ಹಾಗೂ ಟ್ರ್ಯಾವೆಲಿಂಗ್‌ ಬಹಳ ಇಷ್ಟ. ಅವರಿಗೆ ಹೊಸ ಹೊಸ ತಿಂಡಿಗಳನ್ನು ತಯಾರಿಸುವುದು ಎಷ್ಟು ಇಷ್ಟವೋ ಅಷ್ಟೇ ಹೊಸ ಹೊಸ ಸ್ಥಳಗಳಿಗೆ ಟೂರ್‌ ಮಾಡಲೂ ಇಷ್ಟ. ತಮ್ಮ ಹವ್ಯಾಸಗಳ ಬಗ್ಗೆ ಕರಿಶ್ಮಾ ಹೀಗೆ ಹೇಳುತ್ತಾರೆ, “ನನಗೆ ಅಡುಗೆ ಮಾಡಲು ಬಹಳ ಇಷ್ಟ. ಸಂಜೆ ಮನೆಗೆ ಹೋಗಿ ಕೆಲವು ಡಿಶೆಸ್‌ ತಯಾರಿಸುತ್ತೇನೆ. ಅದರಿಂದ ನನಗೆ ರಿಲ್ಯಾಕ್ಸ್ ಆದ ಅನುಭವವಾಗುತ್ತದೆ. ನನ್ನ ಪತಿ ಸೀಮ್ ಖಾನ್‌ಗೆ ನಾನು ಮಾಡುವ ಥಾಯ್‌ ಅಡುಗೆ, ಕ್ಯಾರೆಟ್‌ ಹಲ್ವಾ ಮತ್ತು ಬದನೆ ರಾಯ್ತಾ ಬಹಳ ಇಷ್ಟ. ನನಗೆ ಸುತ್ತಾಡುವುದೂ ಬಹಳ ಇಷ್ಟ. ಪ್ರಾಕೃತಿಕ ಸ್ಥಳಗಳಲ್ಲದೆ ಐತಿಹಾಸಿಕ ಸ್ಥಳಗಳಿಗೂ ಹೋಗುತ್ತೇನೆ. ಭಾರತದಲ್ಲಿ ಸಿಕ್ಕಿಂ ನನಗೆ ಬಹಳ ಇಷ್ಟ.”

ವ್ಯಸ್ತತೆಯಿಂದಾಗಿ ಕರಿಶ್ಮಾಗೆ ಜಿಮ್ ಗೆ ಹೋಗಲು ಸಮಯ ಸಿಗುವುದಿಲ್ಲ. ಫಿಟ್ನೆಸ್‌ ಬಗ್ಗೆ ಹೀಗೆ ಹೇಳುತ್ತಾರೆ, “ನನ್ನ ಮನೆಯಿಂದ ಆಫೀಸಿಗೆ 15 ನಿಮಿಷದ ನಡಿಗೆ ಅಷ್ಟೇ. ಒಮ್ಮೊಮ್ಮೆ ನಾನು ಕಾರಿನಲ್ಲಿ ಹೋಗದೆ ನಡೆದೇ ಹೋಗುತ್ತೇನೆ. ಇದಲ್ಲದೆ ಫಿಟ್ನೆಸ್‌ಗೆ ಏನಾದರೂ ಮಾಡಲು ಸಮಯ ಸಿಗುವುದಿಲ್ಲ.”

ಬದುಕಿನಲ್ಲಿ ಬಂದ ಕಷ್ಟ

ಭಾರತದಲ್ಲಿ ಪ್ರೇಮ ವಿವಾಹ ಅದರಲ್ಲೂ ಬೇರೊಂದು ಧರ್ಮದಲ್ಲಿ ಮದುವೆಯಾಗುವುದು ಬಹಳ ಕಷ್ಟ. ಒಂದುವೇಳೆ ಆದರೂ ಪುರಾತನ ಸಾಮಾಜಿಕ ಆಲೋಚನೆಯಲ್ಲಿ ಅದನ್ನು ನಿಭಾಯಿಸುವುದು ಇನ್ನೂ ಕಷ್ಟ. ಹೀಗೆಯೇ ಕರಿಶ್ಮಾಗೂ ಆಯಿತು. ಆದರೆ ಅವರ ಕುಟುಂಬದವರು ಅವರಿಗೆ ಬೆಂಬಲ ಕೊಟ್ಟರು. ಅದರ ಬಗ್ಗೆ ಅವರು ಹೀಗೆ ಹೇಳುತ್ತಾರೆ, “ನನ್ನ ಬದುಕಿನಲ್ಲಿ ನಾನು ಮದುವೆಯಾದಾಗ ದೊಡ್ಡ ಸಮಸ್ಯೆ ಬಂತು. ಏಕೆಂದರೆ ನಾನು ಹಿಂದೂ, ನನ್ನ ಪತಿ ಮುಸ್ಲಿಂ. ಆದರೆ ನಮ್ಮ ಮದುವೆಯಾದಾಗ ಅದು ನನಗೆ ಅತ್ಯಂತ ಸಂತಸದ ಕ್ಷಣವಾಗಿತ್ತು. ಏಕೆಂದರೆ ನನಗೆ ನನ್ನ ಖುಷಿ ಸಿಕ್ಕಿತು. ಜೊತೆಗೆ ಮನೆಯವರೂ ತಮ್ಮ ಮೈಂಡ್‌ಸೆಟ್‌ ಬದಲಾಯಿಸಿ ಮುಂದುವರಿದರು ಹಾಗೂ ಇದನ್ನು ಸಂತೋಷದಿಂದ ಸ್ವೀಕರಿಸಿದರು.

ಪ್ರಗತಿಶೀಲ ಮಹಿಳೆಯರಿಗೆ ಸಂದೇಶ ಕೊಡುತ್ತಾ ಕರಿಶ್ಮಾ ಹೀಗೆ ಹೇಳುತ್ತಾರೆ, “ಅವರು ತಮ್ಮೊಳಗೆ ಕುತೂಹಲ ಮತ್ತು ಆತ್ಮವಿಶ್ವಾಸ ಇಟ್ಟುಕೊಳ್ಳಬೇಕು, ಜೊತೆಗೆ ನೀವೇನು ಬಯಸುತ್ತಾರೋ ಅದನ್ನು ಮಾಡುವಂತಿರಬೇಕು. ತಮ್ಮ ಶಿಕ್ಷಣವನ್ನು ಅಗತ್ಯವಾಗಿ ಪೂರ್ತಿ ಮಾಡಿ ಒಬ್ಬ ಯಶಸ್ವಿ ಪತ್ನಿ, ತಾಯಿ ಹಾಗೂ ಉದ್ಯಮಿಯಾಗಬೇಕು.

ಜಿ. ಸೀಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ