ಆಫೀಸಿನ ಸಹೋದ್ಯೋಗಿಗಳೊಂದಿಗೆ ನಿಕಟತೆ ಬೆಳೆಸಿಕೊಳ್ಳಿ. ಆದರೆ ಅವರೊಂದಿಗೆ ನಿಮ್ಮ ಖಾಸಗಿ ವಿಷಯಗಳನ್ನು ಎಷ್ಟರಮಟ್ಟಿಗೆ ಶೇರ್ಮಾಡಬೇಕು ಎನ್ನುವುದರ ಬಗ್ಗೆ ಇಲ್ಲಿವೆ ಒಂದಿಷ್ಟು ಸಲಹೆಗಳು......!

ಶಾಲಿನಿ 2 ತಿಂಗಳ ಹಿಂದಷ್ಟೇ ಒಂದು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿಕೊಂಡಿದ್ದಳು. ಅದು ಅವಳ ಮೊದಲ ಉದ್ಯೋಗ. ಹೀಗಾಗಿ ಅವಳಿಗೆ ತನ್ನ ಸಹೋದ್ಯೋಗಿಗಳೊಂದಿಗೆ ಎಷ್ಟರಮಟ್ಟಿಗೆ ಸಂಬಂಧ ಕಾಯ್ದುಕೊಂಡು ಹೋಗಬೇಕು, ಏನು ಮಾತನಾಡಬೇಕು ಎಂಬುದು ಗೊತ್ತಿರಲಿಲ್ಲ. ಅವಳು ಸಹೋದ್ಯೋಗಿಗಳೊಂದಿಗೆ ತನ್ನ ಬಗೆಗಿನ ಪ್ರತಿಯೊಂದು ವಿಷಯಗಳನ್ನು ಹೇಳಿಕೊಂಡು ತನ್ನ ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದಳು. ತನ್ನ ಸಂಬಳದ ಪೂರ್ತಿ ಭಾಗವನ್ನು ಅತ್ತೆಯೇ ತೆಗೆದುಕೊಳ್ಳುತ್ತಾರೆ, ಅತ್ತೆ ಹೇಳಿದ ಹಾಗೆಯೇ ಗಂಡ ಕೇಳುತ್ತಾನೆ. ಈ ಎಲ್ಲ ವಿಷಯಗಳು ಬಹುಬೇಗನೇ ಎಲ್ಲರ ಕಿವಿ ತಲುಪಿದವು. ಈಗ ಅವಳು ಇಷ್ಟಪಟ್ಟೂ ಕೂಡ ತನ್ನ ಯಾವುದೇ ಮಾತುಗಳನ್ನು ಸಹೋದ್ಯೋಗಿಗಳ ಮುಂದೆ ಹೇಳಿಕೊಳ್ಳಲು ಆಗುತ್ತಿಲ್ಲ.

ಇನ್ನೊಂದಡೆ ನೀಲಾ ಮದುವೆಯ ಬಳಿಕ ಬಹಳ ಮೌನವಾಗಿ ಇರುತ್ತಿದ್ದಳು. ಅವಳು ತನ್ನ ಮನಸ್ಸಿನಲ್ಲಿ ನಡೆಯುತ್ತಿದ್ದ ಗೊಂದಲಗಳ ಬಗ್ಗೆ ಆತ್ಮೀಯ ಸಹೋದ್ಯೋಗಿ ನಿಹಾರಿಕಾಳ ಮುಂದೆ ತನ್ನೆಲ್ಲ ವಿಷಯಗಳನ್ನು ಹೇಳಿಕೊಂಡಳು. ತನ್ನ ಗಂಡ ಸೆಕ್ಸ್ ಬಗ್ಗೆ ಯಾವುದೇ ಆಸಕ್ತಿ ತೋರಿಸುವುದಿಲ್ಲ ಎನ್ನುವುದು ಅವಳ ಮನದಾಳದ ಮಾತಾಗಿತ್ತು. ಆದರೆ ಈಗ ಪರಿಸ್ಥಿತಿ ಏನಾಗಿಬಿಟ್ಟಿದೆ ಎಂದರೆ, ಅವಳ ರಹಸ್ಯ ಮಾತು, ಗೌಪ್ಯವಾಗಿ ಉಳಿಯದೆ ಪುರುಷ ಸಹೋದ್ಯೋಗಿಗಳ ಕಿವಿಯವರೆಗೂ ತಲುಪಿಬಿಟ್ಟಿದೆ. ಕೆಲವರಂತೂ ಅವಳ ಮುಂದೆ ತಮ್ಮ ಪ್ರಸ್ತಾಪ ಇಡತೊಡಗಿದರು. ಗೆಳತಿಯ ಮೇಲೆ ವಿಶ್ವಾಸವಿಟ್ಟು ತನ್ನ ಮನದಾಳದ ಮಾತು ಹೇಳಿದ್ದಕ್ಕೆ ಈಗ ಅವಳು ಪರಿತಪಿಸುವಂತಾಗಿದೆ.

ನಿಖಿತಾ ಆಫೀಸ್‌ ಕೆಲಸ ಮುಗಿದ ಬಳಿಕ ಹೆಚ್ಚಿನ ಕೆಲಸಕ್ಕಾಗಿ ಆಫೀಸಿನಲ್ಲಿಯೇ ಉಳಿಯುತ್ತಿದ್ದಳು. ಈ ಕಾರಣಕ್ಕಾಗಿ ಮನೆಯಲ್ಲಿ ಜಗಳ ಆಗುತ್ತಿತ್ತು. ಈ ವಿಷಯವನ್ನು ಅವಳು ತನ್ನ ಸಹೋದ್ಯೋಗಿಗಳ ಮುಂದೆ ಹೇಳಿದಳು. ಈಗ ಪರಿಸ್ಥಿತಿ ಏನಾಗಿಬಿಟ್ಟಿದೆಯೆಂದರೆ, ರಜೆಯ ದಿನಗಳಲ್ಲಿ ಆಫೀಸಿನ ಕೆಲಸದ ಪ್ರಯುಕ್ತ ಹೊರಗೆ ಹೋಗಬೇಕಾದ ಪ್ರಸಂಗ ಬಂದರೆ, ಆಗ ನಿಖಿತಾಳ ಹೆಸರೇ ಪ್ರಸ್ತಾಪವಾಗುತ್ತದೆ. ಅನಳಿಗೆ ಮನೆಯಲ್ಲಿ ಕೆಲಸವಾದರೂ ಏನಿರುತ್ತದೆ? ಅವಳಿಗೆ ಆ ಕೆಲಸ ಮಾಡಲು ಹೇಳಿ ಎನ್ನುವುದು ಎಲ್ಲರ ಸಲಹೆಯಾಗಿರುತ್ತದೆ. ಆ ಕಾರಣದಿಂದಾದರೂ ಅವಳು ಟೆನ್ಷನ್‌ ನಿಂದ ದೂರ ಇರಲು ಅನುಕೂಲವಾಗುತ್ತದೆ ಎನ್ನುವುದು ಎಲ್ಲರ ಅಭಿಪ್ರಾಯವಾಗಿರುತ್ತದೆ.

ನಿಖಿತಾಳಿಗೆ ತಾನು ಮನುಷ್ಯಳಲ್ಲ, ಕೆಲಸ ಮಾಡುವ ಯಂತ್ರ ಎಂಬಂತೆ ಭಾಸವಾಗುತ್ತದೆ. ಆದರೆ ಅವಳ ಈ ಸ್ಥಿತಿಗೆ ಸ್ವತಃ ಅವಳೇ ಜವಾಬ್ದಾರಳು.ಇನ್ನೊಂದೆಡೆ ನಿರ್ಮಾಲ ದುರ್ಬಲ ಕ್ಷಣಗಳಲ್ಲಿ ತನ್ನ ಬಾಸ್‌ ಮುಂದೆ ತನಗೆ ಈ ನೌಕರಿ ಎಷ್ಟು ಮಹತ್ವದ್ದು ಎನ್ನುವುದನ್ನು ಬಾಯಿಬಿಟ್ಟಳು. ಗಂಡನ ಜೊತೆಗಿನ ತನ್ನ ಸಂಬಂಧ ಕಳಚಿ ಹೋಗಲಿದೆ ಎನ್ನುವುದು ಅವಳ ಹೇಳಿಕೆಯಾಗಿತ್ತು. ಬಾಸ್‌ ಅವಳಿಗೆ ಭಾವನಾತ್ಮಕವಾಗಿ ಸಪೋರ್ಟ್‌ ಮಾಡುವ ಬದಲು, ಅವಳನ್ನು ಪ್ರತಿಯೊಂದು ರೀತಿಯಲ್ಲಿ ಶೋಷಣೆ ಮಾಡಲು ಶುರು ಮಾಡಿದ. ತಾನ್ಯಾಕೆ ತನ್ನ ವಿಷಯವನ್ನು ಬಾಸ್‌ ಗೆ ಹೇಳಿದೆ ಎಂದು ಆಕೆ ಈಗ ಪಶ್ಚಾತ್ತಾಪಪಡುತ್ತಿದ್ದಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ