ಆಂಗ್ಲರು ತಮ್ಮ ಆಡಳಿತಾವಧಿಯಲ್ಲಿ ಗಿರಿಧಾಮಗಳನ್ನು ನಿರ್ಮಿಸಿದರು. ಬೇಸಿಗೆಯ ತೀವ್ರ ಉಷ್ಣತೆಯಿಂದ ರಕ್ಷಿಸಿಕೊಳ್ಳಲು ಅವರು ಈ ಸಾಹಸಕ್ಕೆ ಕೈ ಹಾಕಿದರು. ಬೇಸಿಗೆಯ ದಿನಗಳಲ್ಲಿ ಒಂದಷ್ಟು ದಿನಗಳನ್ನು ಶಾಂತ, ತಂಪು ತಾಣಗಳಲ್ಲಿ ಕಳೆಯಬೇಕೆಂಬ ದೃಷ್ಟಿಯಿಂದ ಬ್ರಿಟಿಷರು ದೇಶದ ಪರ್ವತ ಪ್ರದೇಶಗಳಲ್ಲಿ ಸುಂದರ ಹಾಗೂ ನಯನ ಮನೋಹರ ಸ್ಥಳಗಳನ್ನು ಹುಡುಕಿ, ಅವುಗಳನ್ನು ಹಿಲ್ ‌ಸ್ಟೇಷನ್‌ನ ಹಾಗೆ ಅಭಿವೃದ್ಧಿಪಡಿಸಲು ಪರಂಪರೆ ಶುರು ಮಾಡಿದರು. ದೇಶದ ಬೇರೆ ಬೇರೆ ಕಡೆ ಇಂತಹ ಹಲವು ರಮ್ಯ ಸ್ಥಳಗಳಿದ್ದು, ಅವುಗಳಲ್ಲಿ ಹಿಮಾಚಲ ಪ್ರದೇಶದ `ಡಾಲ್‌‌ಹೌಸಿ' ಕೂಡ ಒಂದು.

ಡಾಲ್‌‌ಹೌಸಿ ಪರ್ವತ ಪ್ರದೇಶದ ಸೌಂದರ್ಯ ಪ್ರವಾಸಿಗರ ಹೃದಯದಲ್ಲಿ ಎಂತಹದೊಂದು ಪಡಿಯಚ್ಚು ಮೂಡಿಸುತ್ತದೆ ಎಂದರೆ ಅಲ್ಲಿಗೆ ಮತ್ತೆ ಮತ್ತೆ ಹೋಗಬೇಕೆಂದು ಮನಸ್ಸಾಗುತ್ತದೆ. 19ನೇ ಶತಮಾನದಲ್ಲಿ ಆಂಗ್ಲ ಆಡಳಿತಗಾರರ ಮುಖಾಂತರ ನಿರ್ಮಾಣಗೊಂಡ ಈ ಟೌನ್‌ ತನ್ನ ಐತಿಹಾಸಿಕ ಮಹತ್ವ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿರುವ ವಿಶಿಷ್ಟ ಗಾಲ್ಫ್ ಕೋರ್ಟ್‌, ನೈಸರ್ಗಿಕ ಅಭಯಾರಣ್ಯ, ನದಿಗಳು ಜಲಪಾತಗಳ ಸಂಗಮ ಹೀಗೆ ಅನೇಕ ಆಕರ್ಷಣೆಗಳ ಅಭಿಲಾಷೆ ಹೊತ್ತು ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬರುತ್ತಿರುತ್ತಾರೆ.

ನೈಸರ್ಗಿಕ ಸೌಂದರ್ಯ ಮನಮೋಹಕ ವಾತಾವರಣ, ಅನೇಕ ಪ್ರೇಕ್ಷಣೀಯ ಸ್ಥಳಗಳು ಹಾಗೂ ದೇವದಾರು ವೃಕ್ಷಗಳಿಂದ ಸುತ್ತುವರಿದಿರುವ ಡಾಲ್‌ಹೌಸಿ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಒಂದು ಸುಂದರ ಗಿರಿಧಾಮ. ಈ ಸ್ಥಳ ಪ್ರಮುಖವಾಗಿ 5 ಪರ್ವತಗಳು ಅಂದರೆ ಕಠ್ಲಾಂಗ್‌, ಪೋಟ್ರೇನ್‌, ತಹಾರಾ, ಬಕರೋಟಾ, ಬಲೂನ್‌ ಮೇಲೆ ನೆಲೆ ನಿಂತಿದೆ.

ಸಮುದ್ರ ಮಟ್ಟದಿಂದ 2000 ಮೀ. ಎತ್ತರದ ಮೇಲಿರುವ ಈ ಪಟ್ಟಣ ಕೇವಲ 13 ಕಿ.ಮೀ. ವ್ಯಾಪ್ತಿಯಲ್ಲಿ ಪಸರಿಸಿದೆ. ಒಂದೆಡೆ ದೂರ, ಬಹುದೂರದ ತನಕ ವ್ಯಾಪಿಸಿಕೊಂಡಿರುವ ಹಿಮಚ್ಛಾದಿತ ಗಿರಿಗಳು, ಇನ್ನೊಂದೆಡೆ ಚಿನಾಬ್‌, ಬಿಯಾಸ್‌ ಮತ್ತು ರಾವಿ ನದಿಗಳ ಕಲರವ ಮನಮೋಹಕ ದೃಶ್ಯಗಳನ್ನು ಪ್ರಸ್ತುತಪಡಿಸುತ್ತದೆ.

ಪಂಚಪುಲಾ ಮತ್ತು ಸತಧಾರಾ

ಡಾಲ್‌‌ಹೌಸಿಯಿಂದ 2 ಕಿ.ಮೀ. ದೂರದಲ್ಲಿದೆ. ಪಂಚಪುಲಾ. ಇಲ್ಲಿನ ನೈಸರ್ಗಿಕ ಕುಂಡ ಹಾಗೂ ಅದರ ಮೇಲೆ ನಿರ್ಮಾಣಗೊಂಡಿರುವ 5 ಚಿಕ್ಕ ಚಿಕ್ಕ ಸೇತುವೆಗಳ ಆಧಾರದ ಮೇಲೆ ಅದಕ್ಕೆ ಪಂಚಪುಲಾ ಎಂದು ಹೆಸರಿಡಲಾಗಿದೆ. ಇಲ್ಲಿಂದ ಸ್ವಲ್ಪ ದೂರದಲ್ಲಿ ಮತ್ತೊಂದು ರಮ್ಯ ತಾಣ ಸತಧಾರಾ ಜಲಪಾತ ಇದೆ. ಒಂದು ಕಾಲಕ್ಕೆ ಇಲ್ಲಿಂದ 7 ಜಲಪಾತಗಳನ್ನು ಕಾಣಬಹುದಾಗಿತ್ತು. ಈಗ 1 ಮಾತ್ರ ಅಸ್ತಿತ್ವದಲ್ಲಿದೆ. ಅದರ ರಮಣೀಯ ಸೌಂದರ್ಯ ಎಂಥವರನ್ನೂ ಬೆರಗುಗೊಳಿಸುತ್ತದೆ. ಈ ಸತಧಾರಾದ ಜಲ ನೈಸರ್ಗಿಕ ಔಷಧೀಯ ಗುಣಗಳು ಮತ್ತು ಅನೇಕ ರೋಗಗಳನ್ನು ನಿವಾರಿಸುವ ಶಕ್ತಿ ಹೊಂದಿದೆ ಎಂದು ಹೇಳಲಾಗಿದೆ.

ಖಝಿಯಾರ್‌ ರಮ್ಯ ತಾಣ

ಡಾಲ್‌ಹೌಸಿಯ ಗಿರಿಧಾಮದ ಪ್ರವಾಸ ಖಝಿಯಾರ್‌ ನೋಡದ ಹೊರತು ಪೂರ್ಣಗೊಳ್ಳುವುದಿಲ್ಲ. ಇದು ಡಾಲ್‌ಹೌಸಿಯಿಂದ 27 ಕಿ.ಮೀ. ದೂರದಲ್ಲಿದೆ. ಖಝಿಯಾರ್‌ ಒಂದು ಮನಮೋಹಕ ಸರೋವರಕ್ಕೆ ಹೆಸರುವಾಸಿಯಾಗಿದ್ದು, ಅದು ತಟ್ಟೆಯ ಆಕಾರದಲ್ಲಿದೆ. ಈ ಸ್ಥಳ  ದಟ್ಟ, ಉದ್ದನೆಯ ದೇವದಾರು ವೃಕ್ಷಗಳ ನಟ್ಟನಡುವೆ ಇದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ