ನಾವು ಅಭಿವೃದ್ಧಿ ಹೊಂದುವವರಲ್ಲ!

ಪ್ರತಿಯೊಂದು ದುರವಸ್ಥೆಗೆ ಬಿಜೆಪಿಯನ್ನೇ ಹೊಣೆಗಾರರನ್ನಾಗಿಸುವುದು ಸರಿಯಲ್ಲ. ಆದರೆ ಪ್ರತಿಯೊಂದು ಒಳ್ಳೆಯ ಕೆಲಸಕ್ಕೆ ಮೋದಿ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುತ್ತಿದ್ದರೆ, ಅವರ ಅಧಿಕಾರಾವಧಿಯಲ್ಲಿ ಆಗುವ ಪ್ರತಿಯೊಂದು ಕೆಟ್ಟ ಕಹಿ ಘಟನೆಗೆ ಅವರನ್ನೇ ಹೊಣೆಗಾರ ಆಗಿಸಬೇಕಾಗುತ್ತದೆ.

ನಗರಗಳ ಮಾಲಿನ್ಯ ದೇಶಕ್ಕೆ ಬಹು ದೊಡ್ಡ ರೋಗ. ಅದು ಹಸಿವಿನ ರೀತಿಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನ 15 ಕೊಳಕು ನಗರಗಳಲ್ಲಿ 14 ಭಾರತದಲ್ಲಿಯೇ ಇವೆ. ಈ 14 (ಉಳಿದವುಗಳನ್ನು ಬಿಟ್ಟುಬಿಡಿ) ನಗರಗಳಲ್ಲಿನ ಮಹಿಳೆಯರಿಗೆ ರೋಗಗಳು, ಕೊಳಕು ಬಟ್ಟೆಗಳು, ಸೊಳ್ಳೆಗಳು, ನೊಣಗಳು ಇವೆಲ್ಲವುಗಳಿಗಾಗಿ ಸರ್ಕಾರವನ್ನೇ ದೂಷಿಸಬೇಕಾಗುತ್ತದೆ.

2014ರ ಜಗತ್ತಿನ ಅತ್ಯಂತ ಕೊಳಕು 15 ನಗರಗಳಲ್ಲಿ ಭಾರತ 3 ಸ್ಥಾನ ಮಾತ್ರ ಪಡೆದಿತ್ತು. ಸ್ವಚ್ಛತಾ ಅಭಿಯಾನದ ಮರ್ಮವನ್ನು ಭೇದಿಸುವ ಈ ನಗರ ಹೇಳುವುದೇನೆಂದರೆ, ಕೇವಲ 4 ವರ್ಷಗಳಲ್ಲಿ ಇನ್ನೂ 11 ನಗರಗಳು ಸೇರ್ಪಡೆಗೊಂಡವು. ಗಂಗಾ ತೀರದ ಕಾನಪುರ ಅತ್ಯಂತ ಕೊಳಕು ನಗರ. ಯುಮುನಾ ತೀರದ ಫರೀದಾಬಾದ್‌ ನಂತರದ ಸ್ಥಾನದಲ್ಲಿದೆ. ಗಂಗಾ ತೀರದ ವಾರಾಣಸಿ ಹಾಗೂ ತೀರ್ಥಸ್ಥಳ ಗಯಾ 3 ಹಾಗೂ 4ನೇ ಸ್ಥಾನದಲ್ಲಿವೆ. ಪಾಟ್ನಾ 5ನೇ ಸ್ಥಾನ. ನರೇಂದ್ರ ಮೋದಿ ಅವರ ಸೀಟು ದೆಹಲಿ 6ನೇ ಕ್ರಮಾಂಕದಲ್ಲಿವೆ. ಯೋಗಿ ಆದಿತ್ಯನಾಥರ ಆಶ್ರಮ ಲಖನೌ 7ನೇ ಸ್ಥಾನ ಪಡೆದುಕೊಂಡಿದೆ.

ವೃಂದಾವನ ಮಥುರಾದಿಂದ ಸ್ವಲ್ಪ ದೂರದಲ್ಲಿರುವ ಗ್ರಾಮ 8ನೇ ಸ್ಥಾನದಲ್ಲಿ, ನಿಸರ್ಗದ ಸ್ವರ್ಗ ಎಂದು ಕರೆಯಲ್ಪಡುವ ಶ್ರೀನಗರ 9ನೇ ಸ್ಥಾನದಲ್ಲಿದೆ.

ದಕ್ಷಿಣ ಭಾರತದ ಯಾವೊಂದು ನಗರ ಈ 15 ನಗರಗಳ ಪಟ್ಟಿಯಲ್ಲಿ ಸೇರಿಲ್ಲ. 15ರಲ್ಲಿನ 14 ನಗರಗಳು ಭಾರತೀಯ ಜನತಾ ಪಕ್ಷದ ಸರ್ಕಾರ ಇರುವ ರಾಜ್ಯಗಳು.

ಕೊಳಕು ಎನ್ನುವುದು ಹಳೆಯ ಸರ್ಕಾರಗಳ ಕೊಡುಗೆ ಎನ್ನುವುದೇನೋ ಸರಿ, ಆದರೆ ಹೊಗಳಿಕೆ ಸ್ವೀಕರಿಸುವವರಿಗೆ ಹಿಂದಿನ ಸರ್ಕಾರಗಳ ಒಳ್ಳೆಯ ಕೊಡುಗೆಯ ಬಗ್ಗೆ ನಿರ್ಲಕ್ಷ್ಯ ಮಾಡಿದರೆ, ಥೂ….ಥೂ…. ಎನ್ನುವುದನ್ನು ಕೇಳಿಸಿಕೊಳ್ಳಬೇಕಾಗುತ್ತದೆ.

ಮಕ್ಕಳಿಗೆ ಒಳ್ಳೆಯ ಮಾರ್ಕ್ಸ್ ಬಂದರೆ, ಅದರ ಹೊಗಳಿಕೆ ಪತ್ನಿಗೆ ಸಿಗುತ್ತದೆ. ಒಂದು ವೇಳೆ ಮಗು ಫೇಲ್ ‌ಆದರೆ ಅದರ ತಪ್ಪನ್ನು ಅಜ್ಜಿ ತಾತನ ಮೇಲೆ ಹೊರಿಸುವುದಿಲ್ಲ.

ಆ ನಗರಗಳು ಏಕೆ ಅಷ್ಟೊಂದು ಕೊಳಕು ಆಗಿವೆ ಎಂದರೆ, ಕೊಳಕನ್ನು ಎತ್ತುವುದು ನಮ್ಮ ಪ್ರತಿಷ್ಠೆಗೆ ಧಕ್ಕೆ ಎಂದು ಭಾವಿಸುತ್ತೇವೆ. ಭಾರತದಲ್ಲಿ ಈಗ ದಲಿತರೂ ಕೂಡ ಆ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ ಈ ಕೆಲಸಕ್ಕೆ ಆರ್ಥಿಕವಾಗಿ ಅಷ್ಟೇ ಅಲ್ಲ, ಸಾಮಾಜಿಕವಾಗಿಯೂ ದುಷ್ಪರಿಣಾಮಗಳಾಗುತ್ತವೆ. ಬೇರೆ ದೇಶಗಳಲ್ಲಿ ಕೊಳಕು ನಿವಾರಿಸುವ ಕೆಲಸವನ್ನು ಅಲ್ಲಿನ ಅನಕ್ಷರಸ್ಥರು, ಬಡವರು ಹಾಗೂ ಹೊರದೇಶಗಳಿಂದ ಬಂದ ಜನರ ಕಡೆ ಮಾಡಿಸುತ್ತಾರೆ. ಆದರೆ ಈ ಕೆಲಸ ಮಾಡುವವರು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುವುದಿಲ್ಲ.

ಇಲ್ಲಿನ ಸಫಾಯಿ ಕೆಲಸಗಾರರು ಈ ಕೆಲಸವನ್ನು ಹುಟ್ಟು ಹೊರೆ ಎಂದು ಭಾವಿಸುತ್ತಾರೆ. ಅವರಿಗೆ ಈ ಕೆಲಸದಲ್ಲಿ ಮನಸ್ಸೇ ಇಲ್ಲ. ಇತರರಿಗೆ ಹೇಗೆ ಇರಲು ಸಾಧ್ಯ? ವಿಧವೆಯೊಬ್ಬಳಿಗೆ ಬಿಳಿ ಬಟ್ಟೆ ಕೊಟ್ಟು ಮನೆಯಲ್ಲಿ ಮೆಟ್ಟಿಲಿನ ಕೆಳಗಡೆ ವಾಸಿಸಲು ಹೇಳಿದರೆ ಆಕೆ ಮನೆಯ ಉಸ್ತುವಾರಿಯನ್ನು ಹೇಗೆ ಸರಿಯಾಗಿ ನಿಭಾಯಿಸಲು ಸಾಧ್ಯ? ಅವಳು ತನ್ನ ಜೀವಿತಕ್ಕೆ ಎಷ್ಟು ಬೇಕೊ ಅಷ್ಟು ಕೆಲಸ ಮಾಡುತ್ತಾಳೆ ಅಷ್ಟೆ.

ಕೊಳಕನ್ನು ಪಸರಿಸುವವರು ಉನ್ನತ ವರ್ಗದವರಾಗಿದ್ದರೆ, ಅದನ್ನು ನಿವಾರಿಸಬೇಕಾದವರು ಕೂಡ ಅವರೇ. ಕೈಯಿಂದ ತೆಗೆಯಲು ಆಗದಿದ್ದರೆ, ಈಗ ಯಂತ್ರಗಳೇ ಬಂದಿವೆಯಲ್ಲ, ಉನ್ನತ ವರ್ಗದವರು ಕೊಳಕನ್ನು ಪಸರಿಸುವುದು ತಮ್ಮ ಜನ್ಮಸಿದ್ಧ ಪೌರಾಣಿಕ ಹಕ್ಕು ಎಂದುಕೊಂಡು ಸಾಗುತ್ತಿದ್ದಾರೆ. ಇದೇ ದುರವಸ್ಥೆಗೆ ಮೂಲಕಾರಣ.

ನಾವು ಅಭಿವೃದ್ಧಿ ಹೊಂದುತ್ತೇವೆ ಎಂಬುದನ್ನು ಮರೆತುಬಿಡಿ. ನಾವು ಇನ್ನಷ್ಟು ಕೊಳಕನ್ನು ಪಸರಿಸುವವರಿದ್ದೇವೆ. ಆಸ್ತಮಾ, ಚರ್ಮ ರೋಗಗಳು, ಸೋಂಕು, ಕ್ಯಾನ್ಸರ್‌ ಇವು ನಮ್ಮನ್ನು ಹಿಂಬಾಲಿಸುತ್ತಿರುತ್ತವೆ. ಮೂಢನಂಬಿಕೆಯುಳ್ಳವರು ಎಷ್ಟೇ ಹೋಮ, ಹವನ ಮಾಡಿಕೊಂಡರೂ, ಕೈಗವಸು ಹಾಕಿಕೊಂಡು ನಮ್ಮದು ಹಾಗೂ ಇತರರ ಕೊಳೆಯನ್ನು ತೆಗೆಯಲು ಸಿದ್ಧರಾದಾಗಲೇ ಪರಿಸರ ಸ್ವಚ್ಛ ಆಗುತ್ತದೆ.

ದೆಹಲಿಯನ್ನು ಹೀಗೆ ರಕ್ಷಿಸಿ

ದೆಹಲಿಯ ಸೀಲಿಂಗ್‌ ಬಾಬತ್ತಿನಲ್ಲಿ ಸುಪ್ರೀಂ ಕೋರ್ಟ್‌ ಫ್ಲೆಕ್ಸಿಬಲ್ ಆಗದೇ ಇರುವುದು ಒಂದು ಒಳ್ಳೆಯ ಸಂಕೇತವೇ ಹೌದು. ದೆಹಲಿ ಅಷ್ಟೇ ಅಲ್ಲ, ಬೇರೆ ಬೇರೆ ನಗರಗಳ ಸ್ಥಿತಿ ಕೂಡ ಅಷ್ಟೇ ದಯನೀಯವಾಗಿದೆ. ಅಧಿಕಾರಿಗಳಿಗೆ ಹಾಗೂ ಮುಖಂಡರಿಗೆ ತಮ್ಮ ಜೇಬು ಭರ್ತಿ ಮಾಡಿಕೊಳ್ಳುವುದೇ ಚಿಂತೆಯಾಗಿಬಿಟ್ಟಿದೆ. ಅವರಿಗೆ ಮಹಿಳೆಯರು, ಮಕ್ಕಳು, ವೃದ್ಧರ ಬಗ್ಗೆ ಕಾಳಜಿಯೇ ಇಲ್ಲ. ನಗರಕ್ಕೆ ಉದ್ಯೋಗಕ್ಕೆಂದು ಬಂದ ಜನರು ಮೂಲನಿವಾಸಿಗಳ ಜೀವನವನ್ನಂತೂ ನರಕ ಮಾಡಿಬಿಟ್ಟರು, ಜೊತೆಗೆ ತಮ್ಮನ್ನು ತಾವು ಕೊಳಕು ಪರಿಸರದಲ್ಲಿ ವಾಸಿಸುವುದು, ಕೆಲಸ ಮಾಡುವುದನ್ನು ರೂಢಿ ಮಾಡಿಕೊಂಡರು.

ದೆಹಲಿಯ ನಗರಗಳಲ್ಲಿ ಕೇವಲ ಪ್ರಾಣಿಗಳೇ ವಾಸಿಸುತ್ತವೆ ಎಂಬಂತಾಗಿದೆ. ಅದರಲ್ಲೂ ಕೊಳಕು ಪ್ರಿಯ ಹಂದಿಗಳೇ ಇಲ್ಲಿ ಹೆಚ್ಚಾಗಿವೆ.

ಮನೆ ಮಾಲೀಕರು ಹಾಗೂ ಅಂಗಡಿಕಾರರ ಬೇಡಿಕೆಯ ಮುಂದೆ ತಾವೇ ಮಂಡಿಯೂರುವ ಮುಖಂಡರು ಕೇವಲ ಭಜನೆ, ಪೂಜೆಗಷ್ಟೇ ಸಮಯ ಮೀಸಲಿಟ್ಟುಕೊಳ್ಳದೆ ನಾಗರಿಕರು ಅಂಗಡಿಕಾರರು ಹಾಗೂ ಅತಿಕ್ರಮಣಕಾರರಿಂದ ಹಣ ವಸೂಲಿ ಮಾಡಲು ಸಾಕಷ್ಟು ಬಿಡುವು ಹೊಂದಿರುತ್ತಾರೆ.

ದೆಹಲಿಯಂಥ ನಗರಗಳನ್ನು ಅಭಿವೃದ್ಧಿಪಡಿಸಲು ಆಗುವುದಿಲ್ಲ ಎಂಬುದು ಅರ್ಥವಿಲ್ಲದ ಮಾತು. ಜಗತ್ತಿನ ಅದೆಷ್ಟೋ ಬಡ ರಾಷ್ಟ್ರಗಳ ರಾಜಧಾನಿಗಳು ದೆಹಲಿಗಿಂತ ಸಾಕಷ್ಟು ಚೆನ್ನಾಗಿವೆ. ಪ್ರಧಾನಮಂತ್ರಿ ಕಾರ್ಯಾಲಯದಿಂದ ಕೇವಲ 1 ಕಿ.ಮೀ. ಅಂತರದಲ್ಲಿ ರಸ್ತೆ ಮಗ್ಗುಲಲ್ಲಿ ಸಾಕಷ್ಟು ಪೆಟ್ಟಿಗೆ ಅಂಗಡಿಗಳು, ಎಲ್ಲೆಂದರಲ್ಲಿ ವಾಹನ ನಿಲ್ಲಿಸಿರುವುದು ಕಂಡುಬರುತ್ತದೆ.

ಕೇವಲ 1 ಕಿ.ಮೀ. ಅಂತರದಲ್ಲಿ ಮುನ್ಸಿಪಲ್ ಕಾರ್ಪೊರೇಶನ್‌, ದೆಹಲಿ ಸರ್ಕಾರ ಹಾಗೂ ಮೋದಿ ಸರ್ಕಾರ ಇದೇ ಎಂದು ಅನಿಸುವುದೇ ಇಲ್ಲ. ಈ 1 ಕಿ.ಮೀ. ಸ್ವಚ್ಛ ಭಾರತ ಅಭಿಯಾನದ ಗುಟ್ಟನ್ನು ರಟ್ಟು ಮಾಡೋಕೆ ಸಾಕು. ಸುಪ್ರೀಂ ಕೋರ್ಟ್‌ನ್ಯಾಯಮೂರ್ತಿಗಳ ನಿವಾಸಗಳು ಈ ಪ್ರದೇಶದಲ್ಲಿಯೇ ಇವೆ. ಅವರ ಬಗೆಗಿನ ಚಿಂತೆ ಸರಿ.

ದೆಹಲಿ ಸುಧಾರಣೆಗೆ ಒಂದಿಷ್ಟು ಉದಾರತೆ, ಸ್ವಲ್ಪ ದೂರದರ್ಶಕತ್ವ, ಒಂದಿಷ್ಟು ತಿಳಿವಳಿಕೆ ಬೇಕು. ಆದರೆ ಅಧಿಕಾರಿಗಳು ಹಾಗೂ ಮುಖಂಡರಲ್ಲಿ ಅದೇ ಇಲ್ಲವಾಗಿದೆ.

ದೆಹಲಿ ಸುಧಾರಣೆಗೊಳ್ಳಬೇಕೆಂದರೆ ಅದನ್ನು ಬಹುಮಹಡಿ ನಗರವಾಗಿ ಪರಿವರ್ತಿಸಬೇಕು. ಬೇಸ್‌ ಮೆಂಟ್‌ನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಆಗಬೇಕು. 20-25 ಮಹಡಿಗಳ ಕಟ್ಟಡದಲ್ಲಿ ವರ್ಟಿಕಲ್ ಗಾರ್ಡನ್‌ ಇರಬೇಕು. 23ನೇ ಮಹಡಿಯಲ್ಲಿ ಆಫೀಸುಗಳು, ಅಂಗಡಿಗಳು ಇರಬೇಕು. ಯಾರಿಗೂ ಹೆಚ್ಚು ದೂರ ಹೋಗುವಂತಾಗಬಾರದು. ಶಾಲೆಗಳನ್ನು ಕೂಡ 2ನೇ, 3ನೇ ಮಹಡಿಯಲ್ಲಿ  ಶುರು ಮಾಡಬಹುದು. ಏಕೆಂದರೆ ಲಿಫ್ಟ್ ನ ಉಪಯೋಗ ಹೆಚ್ಚಬೇಕೇ ವಿನಾ ವಾಹನಗಳ ಬಳಕೆ ಅಲ್ಲ.

ದೆಹಲಿಯನ್ನು ಸ್ವಚ್ಛಗೊಳಿಸಲು ದೊಡ್ಡ ಒಳಚರಂಡಿ ವ್ಯವಸ್ಥೆ ಆಗಬೇಕು. ಅವು ಎಷ್ಟು ದೊಡ್ಡದಾಗಿರಬೇಕು ಎಂದರೆ, ಅವುಗಳಲ್ಲಿ ಮನುಷ್ಯರು ನಡೆದಾಡುವಷ್ಟು. ಯೂರೋಪ್‌ನಾದ್ಯಂತ 2-3 ದಶಕಗಳ ಹಿಂದೆಯೇ ಅಂತಹ ಒಳಚರಂಡಿಗಳು ನಿರ್ಮಾಣಗೊಂಡಿವೆ. ಮೆಟ್ರೋಗೆ ಸುರಂಗ ಕೊರೆಯಲು ಸಾಧ್ಯವಾಗುವುದಾದರೆ, ಒಳಚರಂಡಿಗೆ ಏಕೆ ಸಾಧ್ಯವಾಗುವುದಿಲ್ಲ?

ರಸ್ತೆ ಜನದಟ್ಟಣೆ ಕಡಿಮೆ ಮಾಡಲು ಅತಿಕ್ರಮಣ ತಡೆಯಬೇಕು. ಮಲ್ಟಿ ಲೆವೆಲ್ ‌ರಸ್ತೆಗಳ ಯೋಜನೆ ರೂಪಿಸಬೇಕು. ಎರಡು, ಮೂರು ಅಂತಸ್ತಿನ ರಸ್ತೆಗಳು ಉಪಯುಕ್ತ ಎನಿಸುವಷ್ಟು, ಅಗಲ ರಸ್ತೆಗಳು ಪ್ರಯೋಜನ ಎನಿಸುವುದಿಲ್ಲ. ಹಾಗೆ ಮಾಡುವುದು ನಗರ ಪ್ರದೇಶದಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಪರಿಹಾರ ದುಬಾರಿ ಎನಿಸುವುದಿಲ್ಲ.

ಸರ್ಕಾರ ಜನರಿಗಾಗಿ ಕಾನೂನು ರೂಪಿಸುವ ಬದಲು ತನಗಾಗಿಯೂ ಕಾನೂನು ರಚಿಸಿಕೊಳ್ಳಬೇಕು. ಸರ್ಕಾರಿ ಅಧಿಕಾರಿಗಳು ಏನು ಮಾಡಿದರೆ, ಏನು ಮಾಡದೇ ಇದ್ದರೆ ಎಷ್ಟು ದಂಡ ತೆರಬೇಕು ಎನ್ನುದನ್ನು ಸ್ಪಷ್ಟಪಡಿಸಬೇಕು. ಅಧಿಕಾರಿಗಳು ತಪ್ಪು ಮಾಡಿದರೆ ಅವರೂ ಕೂಡ ನ್ಯಾಯಾಲಯಗಳಿಗೆ ಎಡತಾಕುವಂತಾಗಬೇಕು.

ಫ್ಯಾಷನ್‌ಗೂ ಧರ್ಮಕ್ಕೂ ನಂಟು ಬೇಡ

ಹಿಜಾಬ್‌, ಬುರ್ಖಾ, ಪರದೆ, ಸೆರಗು, ಇವೆಲ್ಲ ಸಾಮಾಜಿಕ ನಿಯಮಗಳೊಂದಿಗೆ ಬಂಧಿಸಲ್ಪಟ್ಟಿವೆ. ಇವನ್ನು ಮನ್ನಿಸದೆ ಇದ್ದವರನ್ನು ಧರ್ಮದಿಂದ ಹೊರಗೇನೂ ಹಾಕುವುದಿಲ್ಲ. ಕೆಲವರನ್ನು ಹೊರತುಪಡಿಸಿ ಬಹುತೇಕರು ಅವನ್ನು ಸಾಮಾಜಿಕ ಮತ್ತು ಕೌಟುಂಬಿಕ ಗುಲಾಮತನದ ಸಂಕೇತ ಎಂದೇ ಭಾವಿಸುತ್ತಾರೆ.

ಅರಬ್‌ ದೇಶದ ಯುವತಿಯರು, ಹಿಜಾಬ್‌ ಮತ್ತು ಬುರ್ಖಾ ಧರಿಸುವುದು ಅನಿವಾರ್ಯ. ಯೂರೋಪ್‌ ಖಂಡದಲ್ಲಿ ಕಾಲಿಡುತ್ತಿದ್ದಂತೆ ಅವನ್ನು ಪೆಟ್ಟಿಗೆಯಲ್ಲಿ ಬಂಧಿಯಾಗಿರಿಸಿ ತಮ್ಮ ರೂಪ ಸೌಂದರ್ಯದ ಬಗ್ಗೆ ಹೆಮ್ಮೆಪಡುವ ಲೋಭವನ್ನು ಅವರು ಬಿಟ್ಟುಕೊಡುವುದಿಲ್ಲ.

ಭಾರತದ ಧರ್ಮನಿಷ್ಠ ಮನೆಯಿಂದ ಹೊರಗೆ ಬರುತ್ತಿದ್ದಂತೆ ಮಹಿಳೆಯರ ಮುಖಪರದೆ ಅಥವಾ ಸೆರಗು ಕೆಳಗೆ ಭುಜದ ಮೇಲೆ ಸರಿದುಬಿಡುತ್ತದೆ. ಅವರ ಕಪ್ಪು ಕೂದಲಿನ ಸೌಂದರ್ಯ ಜಗಮಗಾಯಿಸುತ್ತದೆ.

ಇದನ್ನು ಹೇಳುವ ಉದ್ದೇಶ ಇಷ್ಟೆ, ಮಹಿಳೆಯರು ಸ್ವಮನಸ್ಸಿನಿಂದ ಸಾಮಾಜಿಕ ಸಂಸ್ಕೃತಿ ಕಾಪಾಡಲು ಅದನ್ನು ಅನುಸರಿಸುತ್ತಾರೆ ಎನ್ನುವುದು ಸುಳ್ಳು. ತಲೆಯ ಮೇಲೆ ಏನನ್ನು ಹೊದ್ದುಕೊಳ್ಳಬೇಕು ಎನ್ನುವುದು ಮಹಿಳೆಯರ ವಿವೇಚನೆಗೆ ಬಿಟ್ಟ ವಿಚಾರ. ಅದೊಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿ ತಲೆಗೆ ಹೂ ಮುಡಿದುಕೊಳ್ಳುವ ಪದ್ಧತಿ ಇತ್ತು. ಆದರೆ ಅದು ಅನಿವಾರ್ಯವಾಗಿರಲಿಲ್ಲ. ಉತ್ತರ ಭಾರತದಲ್ಲೂ ಇದರ ಫ್ಯಾಷನ್‌ ಇತ್ತು. ಆದರೆ ಈಗಿಲ್ಲ.

ಹಿಂದೊಮ್ಮೆ ಹುಡುಗಿಯರು ಸಾಧನಾ ಕಟ್‌ ಮಾಡಿಸಿಕೊಳ್ಳುತ್ತಿದ್ದರು. ಬಳಿಕ ಹೇರ್‌ ಸ್ವಿಚ್‌ ಯುಗ ಶುರುವಾಯಿತು. ಈಗ ಅದೇನೂ ಇಲ್ಲ. ಹೀಗೆ ಮಾಡುವಾಗ ಯಾರ ಒತ್ತಾಯ ಇರಲಿಲ್ಲ. ತಮ್ಮದೇ ಆದ ಸ್ವಾತಂತ್ರ್ಯವಿತ್ತು. ಚೆನ್ನಾಗಿದೆ ಅನ್ನಿಸಿ ಅನುಸರಿಸಿದರು, ಬೇಡ ಅಂದಾಗ ಬಿಟ್ಟುಬಿಟ್ಟರು.

ಯೂರೋಪ್‌ನಲ್ಲಿ ಉದ್ದನೆಯ ಕೂದಲು ಗಾಳಿಯಲ್ಲಿ ತೂರಾಡದಿರಲಿ ಎಂದು ಸ್ಕಾರ್ಫ್‌ ಧರಿಸುತ್ತಿದ್ದರು. ಈಗ ಎಂತಹ ಕೆಮಿಕಲ್ಸ್ ಬಂದಿವೆ ಎಂದರೆ ಸಂಜೆ ತನಕ ಕೂದಲು ಅತ್ತಿತ್ತ  ಹಾರಾಡುವುದಿಲ್ಲ. ಈಗ ಅಲ್ಲಿ ಸ್ಕಾರ್ಫ್‌ ಧರಿಸುವುದು ಅಪರೂಪ ಆಗಿಬಿಟ್ಟಿದೆ. ಚಳಿಗಾಲದಲ್ಲಿ ತಂಪಿನಿಂದ ರಕ್ಷಿಸಿಕೊಳ್ಳಲು ಗಂಡಸರು, ಹೆಂಗಸರು ಕ್ಯಾಪ್‌ ಧರಿಸುತ್ತಾರೆ. ಬೇಸಿಗೆಯಲ್ಲಿ ಅಂಥದ್ದೇನೂ ಧರಿಸುವುದಿಲ್ಲ. ಇದು ಫ್ಯಾಷನ್‌ ಮತ್ತು ಅವಶ್ಯಕತೆಯ ವಿಷಯ.

ಇಸ್ಲಾಂನಲ್ಲಿ ಮಹಿಳೆಯ ಹಿಜಾಬ್‌ ಮತ್ತು ಪುರುಷರು ಸ್ಕಾರ್ಫ್ ಧರಿಸುವುದು ಕಡ್ಡಾಯ. ಇಸ್ಲಾಂನ ಪ್ರಚಾರಕರು ಇದನ್ನು ಸಾಮಾಜಿಕ ಹಾಗೂ ಧಾರ್ಮಿಕ ಹೆಗ್ಗುರುತಿನ ಭಾಗ ಎಂದು ಪರಿಗಣಿಸಿದೆ. ಆದರೆ ಇದು ಮಾನಸಿಕ ಗುಲಾಮತನದ ಸ್ವರೂಪ. ನೀವು ಯಾವುದನ್ನು ಧರಿಸುತ್ತೀರೊ, ಅದು ಯಾವುದಾದರೂ ನಿಯಮಕ್ಕೆ ಬದ್ಧವಾಗಿದ್ದರೆ, ಇದರರ್ಥ ನೀವು ಆ ನಿಯಮ ರೂಪಿಸುವ ಮತ್ತು ಆಚರಣೆಯನ್ನು ಒಪ್ಪುವರೆಂದೇ ಅರ್ಥ. ಹಾಗೆಂದೇ ಪೊಲೀಸ್‌, ಮಿಲಿಟರಿ ಹಾಗೂ ದೊಡ್ಡ ಕಾರ್ಖಾನೆಗಳ ಕಾರ್ಮಿಕರು ಧರಿಸುವ ಬಟ್ಟೆ ಒಂದೇ ತೆರನಾಗಿರುತ್ತದೆ. ಅದು ಕೆಲಸ ಮಾಡುವ ಒಂದು ಮಾನಸಿಕ ವಿಧಾನ. ಆದರೆ ಪೊಲೀಸ್‌, ಸೇನೆ ಮತ್ತು ಕಾರ್ಖಾನೆಗಳು ಮನೆಯಲ್ಲೂ ಇಂಥದ್ದೇ ನಿರ್ದಿಷ್ಟ ಪೋಷಾಕು ಧರಿಸಿ ಎಂದು ಹೇಳುವುದಿಲ್ಲ. ಹಿಜಾಬ್‌, ಬುರ್ಖಾ, ಪರದೆ ಮತ್ತು ಸೆರಗು ಹೊದ್ದುಕೊಳ್ಳುವ ಸಮರ್ಥಕರು 24 ಗಂಟೆ ಅವುಗಳ ಉಪಯೋಗ ಅನಿವಾರ್ಯ ಎನ್ನುತ್ತಾರೆ.

ಫ್ರಾನ್ಸ್ ಆ ನಿಯಮನ್ನು ವಿರೋಧಿಸುತ್ತಿದೆ ಎಂದರೆ, ಅದು ಸರಿಯಾಗಿಯೇ ಮಾಡುತ್ತಿದೆ. ಶಾಲೆ, ಕಾಲೇಜು ಮತ್ತು ಆಫೀಸುಗಳಲ್ಲಿ ಸಾಮಾಜಿಕವಾಗಿ ಪ್ರತ್ಯೇಕವಾಗಿ ಕಂಡುಬರುವಂಥವನ್ನು ಅನುಸರಿಸಲು ತಡೆ ಇರಬೇಕು. ಅದು ತಿಲಕ ಆಗಿರಬಹುದು ಇಲ್ಲವೆ ಟೋಪಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ