ಕೊರೋನಾದ ಅವಧಿಯಲ್ಲಿ ಕೌಟುಂಬಿಕ ಕಲಹಗಳು ಸಾಕಷ್ಟು ಏರಿಕೆಯಾಗಿದ್ದವು. ಪೂಜೆ, ಪುನಸ್ಕಾರದ ಕಾರಣವೊಡ್ಡಿ ದೇವಸ್ಥಾನಗಳನ್ನು ತೆರೆದು ಮಹಿಳೆಯರಿಗೆ ದೇವರಲ್ಲಿ ಶರಣಾಗಿ ಕಷ್ಟದಿಂದ ಪಾರಾಗಲು ಉಪದೇಶ ನೀಡಲಾಯಿತು. ಕೊರೋನಾ ಬಂದ್‌ ಆದ್ದರಿಂದ ಜನರ ಭರವಸೆ ಕಡಿಮೆಯಾಗುತ್ತ ಹೊರಟಿತ್ತು. ಇಂತಹ ಸ್ಥಿತಿಯಲ್ಲಿ ನೈವೇದ್ಯ, ಆರತಿ ತಟ್ಟೆಯ ವಹಿವಾಟು ನಿಂತು ಹೋಗದಿರಲಿ ಎಂದು ಎಲ್ಲ ಧರ್ಮಗಳಲ್ಲೂ ಪೂಜಾ ಸ್ಥಳಗಳನ್ನು ತೆರೆಯುವ ಆಗ್ರಹ ಹೆಚ್ಚುತ್ತಲೇ ಹೊರಟಿತ್ತು.

ಧಾರ್ಮಿಕ ಸ್ಥಳಗಳಿಗೆ ಹೋದರೆ ಕೊರೋನಾದಿಂದ ರಕ್ಷಣೆ ಸಿಗುವುದಿಲ್ಲ ಎನ್ನುವುದು ಜನರಿಗೆ ಗೊತ್ತಾಗಿ ಹೋಯಿತು. ಆ ಕಾರಣದಿಂದ ಈಗಲೂ ಈ ಸ್ಥಳಗಳಲ್ಲಿ ಅಷ್ಟೊಂದು ದಟ್ಟಣೆ ಕಣ್ಣಿಗೆ ಬೀಳುತ್ತಿಲ್ಲ. ಈಗ ದಾನ ಹಾಗೂ ಕಾಣಿಕೆಗಾಗಿ ಆನ್‌ ಲೈನ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆದಾಗ್ಯೂ ಮಹಿಳೆಯರ ನಂಬಿಕೆ ಮಾತ್ರ ತಗ್ಗುತ್ತಿಲ್ಲ. ದರ್ಶನ ಮಾಡುವವರಿಂದ ಹಿಡಿದು ಪೂಜಾರಿಗಳ ತನಕ ಎಲ್ಲರೂ ಭಯದಲ್ಲಿ ಬದುಕುತ್ತಿರುವಾಗ ಅವರು ಬೇರೆಯವರಿಗೆ ಕಷ್ಟನ್ನು ಹೇಗೆ ಬಗೆಹರಿಸಲು ಸಾಧ್ಯ?

ಕೊರೋನಾ ಸಂಕಷ್ಟದ ಕಾಲದಲ್ಲಿ ಮೂಲಭೂತ ಹಕ್ಕುಗಳು ಮೂಲೆಗುಂಪಾಗಿದ್ದವು. ಲಾಕ್‌ ಡೌನ್‌ ಅವಧಿಯಲ್ಲಿ ಪೂಜೆ ಮಾಡುವ ಹಕ್ಕಿನ ಕುರಿತಂತೆ ದೇಗುಲ ಹಾಗೂ ಚರ್ಚ್‌ನಂತಹ ಪೂಜಾಸ್ಥಳಗಳನ್ನು ತೆರೆಯುವಂತಹ ಬೇಡಿಕೆ ಅಮೆರಿಕಾದಿಂದ ಹಿಡಿದು ಭಾರತದ ತನಕ ಎಲ್ಲೆಡೆ ಕೇಳಿಬಂದಿತ್ತು. ಆದರೆ ಕೊರೋನಾದ ಸಂಕಷ್ಟದಲ್ಲಿ ದೇಗುಲಗಳನ್ನು ತೆರೆಯಲು ನಿರ್ಬಂಧವಿತ್ತೇ ಹೊರತು, ಮನೆಯಲ್ಲಿ ಪೂಜೆ ಪುನಸ್ಕಾರಕ್ಕೆ ಯಾವುದೇ ಅಡೆ ತಡೆ ಇರಲಿಲ್ಲ.

ದೇಗುಲಗಳನ್ನು ತೆರೆಯುವುದರ ಹಿಂದಿನ ಉದ್ದೇಶ ಇಷ್ಟೇ ಆಗಿತ್ತು. ಅದೇನೆಂದರೆ ಪೂಜಾರಿಗಳಿಗೆ ಕಾಣಿಕೆಗಳು ದೊರೆಯುತ್ತಿರಲಿಲ್ಲ. ದೇವಸ್ಥಾನದ ಹುಂಡಿಗಳಿಗೆ ಹಣ ಬೀಳುತ್ತಿರಲಿಲ್ಲ. ದೇವಸ್ಥಾನಗಳಿಗೆ ದಾನ ಕಾಣಿಕೆ ನೀಡುವವರಲ್ಲಿ, ಹೆಚ್ಚಿನವರು ಮಹಿಳೆಯರೇ. ಇಂತಹ ಸ್ಥಿತಿಯಲ್ಲಿ ಮಹಿಳೆಯರನ್ನು ದೇವಸ್ಥಾನಕ್ಕೆ ಕರೆತರುವುದು ಹಾಗೂ ಪೂಜೆ ಪುನಸ್ಕಾರಗಳಿಗೆ ದೇವಸ್ಥಾನಗಳನ್ನು ತೆರೆಯಬೇಕೆನ್ನುವ ಬೇಡಿಕೆ ಪ್ರಬಲವಾಗಿತ್ತು.

3 ತಿಂಗಳ ಲಾಕ್‌ ಡೌನ್‌ ಅವಧಿಯಲ್ಲಿ ಪೂಜಾರಿಗಳು ಹಾಗೂ ಬ್ರಾಹ್ಮಣರ ಕೆಲವು ಸಂಘಟನೆಗಳು ಪೂಜಾರಿ ಪುರೋಹಿತರಿಗೆ ದೈನಂದಿನ ಹೊಟ್ಟೆಪಾಡಿಗೆ ತೊಂದರೆಯಾಗುತ್ತಿದೆ. ಅದಕ್ಕಾಗಿ ದೇವಸ್ಥಾನದ ಬಾಗಿಲುಗಳನ್ನು ತೆರೆಯಿರಿ ಎಂಬ ಲಿಖಿತ ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ಕೊರೋನಾ ಕಾಲದಲ್ಲಿ ದೇವಸ್ಥಾನಗಳು ಹಾಗೂ ಇತರೆ ಪೂಜಾ ಸ್ಥಳಗಳಿಗೆ ಬೀಗ ಜಡಿಯಲಾಗಿತ್ತು. ದೇವಸ್ಥಾನಗಳು ಭಕ್ತರಿಂದ ದೊರೆಯುವ ದಾನ ಹಾಗೂ ಕಾಣಿಕೆಗಳ ಮೇಲೆ ನಿಂತಿದ್ದವು.

ಆದರೆ ಅವು ಯಾವವೂ ದೊರೆಯದ್ದರಿಂದ ಆದಾಯದ ಸಂಕಷ್ಟ ತಲೆದೋರಿತ್ತು. ದೇವಸ್ಥಾನಗಳ ಬಳಿ ಈ ಮುಂಚೆಯೇ ಸಂಗ್ರಹವಾಗಿದ್ದ ಚಿನ್ನಬೆಳ್ಳಿ ಹಾಗೂ ಇತರೆ ಕಾಣಿಕೆ ವಸ್ತುಗಳನ್ನು ಅವು ಇಂತಹ ಸಂಕಷ್ಟದ ಸಮಯದಲ್ಲಿ ಬಳಸಿಕೊಳ್ಳಲು ತಯಾರಿರಲಿಲ್ಲ. ಮತ್ತೊಂದೆಡೆ ಜನರ ಮನಸ್ಸಿನಲ್ಲಿ ಒಂದು ವಿಷಯ ಕುಳಿತುಬಿಟ್ಟಿತ್ತು. ಕೊರೋನಾದ ಭಯದಿಂದ ದೇವರು ತನ್ನ ಬಾಗಿಲು ಮುಚ್ಚಿಕೊಂಡು ಕುಳಿತಿರುವಾಗ ಅವನು ಜನರನ್ನು ಕೊರೋನಾದಿಂದ ಹೇಗೆ ರಕ್ಷಿಸಲು ಸಾಧ್ಯ

ಧಾರ್ಮಿಕತೆ ಉಳಿಸುವ ಕಸರತ್ತು

ಲಾಕ್‌ ಡೌನ್‌ ಅವಧಿಯಲ್ಲಿ ಪ್ರಧಾನಿ ಮೋದಿ ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಕಾಯ್ದುಕೊಂಡು ಹೋಗಲು ಪರಿಪೂರ್ಣ ಪ್ರಯತ್ನ ಮಾಡಿದರು. ಮಾರ್ಚ್‌ 22 `ಜನತಾ ಕರ್ಫ್ಯೂ' ದಿನದಂದು ಜನರಿಗೆ ಚಪ್ಪಾಳೆ ಹಾಗೂ ಜಾಗಟೆ ಬಾರಿಸಲು ವಿನಂತಿಸಿಕೊಂಡಿದ್ದರು. ಆ ಬಳಿಕ ಸಂಪೂರ್ಣ ಲಾಕ್‌ ಡೌನ್‌ ಬಳಿಕ ಶಂಖ ಊದುವುದು, ಚಪ್ಪಾಳೆ ಹೊಡೆಯುವುದು, ದೀಪ ಉರಿಸುವುದರ ಮೂಲಕ ಮನೆಯಲ್ಲಿಯೇ ಉಳಿದುಕೊಂಡು ದೇವರ ಪೂಜೆ ಮಾಡಲು ಸಂದೇಶ ನೀಡಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ