ಹುಡುಗಿಯರ ಸ್ವಾತಂತ್ರ್ಯದ ದುರ್ದೆಸೆ ಎಲ್ಲಿಯತನಕ?

ಹೆಚ್ಚುತ್ತಿರುವ ನಿರುದ್ಯೋಗದ ಒಂದು ಪರಿಣಾಮ ಏನಾಗಿದೆಯೆಂದರೆ, ಹುಡುಗಿಯರು ಓದು ಮುಗಿಸುತ್ತಿದ್ದಂತೆಯೇ ಕೆರಿಯರ್ ಕಾರಣದಿಂದಾಗಿ ಕೆಲವು ವರ್ಷ ಮನೆಯಿಂದ ಹೊರಗೆ ಇರುತ್ತಿದ್ದರು. ಆ ಅವಧಿಯಲ್ಲಿ ಇಷ್ಟವಾದವರೊಂದಿಗೆ ಪ್ರೀತಿ, ಸೆಕ್ಸ್ ಹಾಗೂ ವಿವಾಹ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಮನೆಯಲ್ಲಿಯೇ ಇದ್ದಾರೆ ಹಾಗೂ ಮನೆಯವರ ಮದುವೆಯ ಒತ್ತಡವನ್ನು ಎದುರಿಸಬೇಕಾಗಿ ಬರುತ್ತಿದೆ. ತಂದೆತಾಯಿ ಎಷ್ಟೇ ಉದಾರಿಗಳಾದರೂ, ಮಗಳು ದುಡಿಯುತ್ತಿಲ್ಲವೆಂದರೆ ಆಕೆಗೆ ಸೂಕ್ತ ವರ ಸಿಗುವುದಿಲ್ಲ ಎಂದು ಭಾವಿಸುತ್ತಾರೆ.

ಪೋಷಕರ ಒತ್ತಡ ಅವರಿಗೆ ಅಪ್ರಿಯ ಎನಿಸುತ್ತದೆ. ಏಕೆಂದರೆ ಹಳ್ಳಿಗಳಲ್ಲಿ, ಪುಟ್ಟ ನಗರಗಳಲ್ಲಿ ವಾಸಿಸುವ ಹೆಚ್ಚಿನ ಹುಡುಗರು ಅರೆಬರೆ ಓದಿದವರು ಹಾಗೂ ಅಷ್ಟಿಷ್ಟು ಯಶಸ್ವಿಯಾದರು. ಯಶಸ್ವಿ ಮತ್ತು ಸ್ಮಾರ್ಟ್‌ ಯುವಕರಂತೂ ದೊಡ್ಡ ದೊಡ್ಡ ನಗರಗಳಲ್ಲಿ ನೌಕರಿಗೆಂದು ಹೊರಟು ಹೋಗಿರುತ್ತಾರೆ. ಹುಡುಗಿಯರು 5-6 ಹುಡುಗರನ್ನು ನಿರಾಕರಿಸಿದ ಬಳಿಕ ಏನು ಮಾಡುವುದೆಂದು ಚಿಂತೆ ಶುರುವಾಗುತ್ತದೆ. ಮಧ್ಯವರ್ತಿಗಳು ಯಾವ್ಯಾವುದೊ ಸಂಬಂಧಗಳನ್ನು ತೆಗೆದುಕೊಂಡು ಬರುತ್ತಾರೆ. ಅವರು ಹುಡುಗಿಯರಿಗೆ ಇಷ್ಟವಾಗುವುದೇ ಇಲ್ಲ.

ಓದುಬರಹ ಬಲ್ಲ ನಿಪುಣ ಹುಡುಗಿಯರು ಸರ್ಕಾರದ ತಪ್ಪು ನೀತಿಗಳಿಂದಾಗಿ ಮತ್ತಷ್ಟೂ ತೊಂದರೆ ಅನುಭವಿಸುವಂತಾಗಿದೆ. ಆದರೆ ಚುಕ್ಕಾಣಿ ಹಿಡಿದವರಿಗೆ ಇದರ ಅರಿವೇ ಇಲ್ಲ. ಪ್ರತಿಯೊಂದು ಸಂಗತಿಯನ್ನು ಕರ್ಮ ಹಾಗೂ ಹಣೆಬರಹದ ಮೇಲೆ ಹೇರುತ್ತಾರೆ. ಪ್ರಧಾನಿ ಯಾವುದೇ ಶಾಸ್ತ್ರದ ಹೆಸರು ಉಲ್ಲೇಖಿಸದೆಯೇ ಸಂಸ್ಕೃತದಲ್ಲಿ ಮಾತನಾಡುತ್ತಾರೆ ಹಾಗೂ ವಿತ್ತ ಸಚಿವರು ದೇಶದ ಆರ್ಥಿಕ ದುರವಸ್ಥೆಯನ್ನು `ಆ್ಯಕ್ಟ್ ಆಫ್‌ ಗಾಡ್‌' ಎನ್ನುತ್ತಾರೆ. ಇಂತಹ ಸ್ಥಿತಿಯಲ್ಲಿ ಒಬ್ಬ ಯುವತಿಗಾಗಿ ಹೇಳಲು, ಮಾಡಲು ಉಳಿದಿರುವುದಾದರೂ ಏನಿದೆ?

ಕಳೆದ 4-5 ದಶಕಗಳಿಂದ ಹುಡುಗಿಯರು ಹುಡುಗರಿಗೆ ಸರಿಸಮಾನ ಆಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಆ ಅಪೇಕ್ಷೆ ಈಗ ದೂರವಾಗುತ್ತಿದೆ. ಏಕೆಂದರೆ ಹುಡುಗಿಯರಿಗೆ ನೌಕರಿ ದೊರೆಯದೇ ಇದ್ದರೆ ಅವರು ಅಡುಗೆಮನೆಗೆ ಸೀಮಿತರಾಗಬೇಕಾಗುತ್ತದೆ. ಅವರು ಬಯೋಕೆಮಿಸ್ಟ್ರಿ ಮಾಡಿರಬಹುದು ಅಥವಾ ಪಿಎಚ್‌ಡಿ. ಮನೆಯಲ್ಲಿ ಹುಡುಗರು ಏನೂ ಮಾಡದೇ ಕೂತಿದ್ದರೆ ಪೋಷಕರು ಅವರನ್ನು ಹೊರಗೆ ಕಳಿಸುತ್ತಾರೆ. ಏಕೆಂದರೆ ಮನೆಯಲ್ಲಿ ಶಾಂತಿ ಇರಬೇಕು. ಇದರರ್ಥ ಇಷ್ಟೇ, ಮೈಗಳ್ಳ ಹುಡುಗರು ಹಾಗೂ ಮನೆಯಲ್ಲಿ ಕೆಲಸ ಮಾಡುವ ಹುಡುಗಿಯರ ಸಂಖ್ಯೆ ಹೆಚ್ಚುತ್ತದೆ.

ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದ ದೇಶದ ಅರ್ಥವ್ಯವಸ್ಥೆ ಹೆಚ್ಚು ಹದಗೆಟ್ಟಿದೆ. ಕೊರೋನಾ ಪೂರ್ವಾರ್ದದಲ್ಲಿಯೇ ಕಾರ್ಖಾನೆಗಳು ಬಂದ್‌ ಆಗುತ್ತಿದ್ದವು. ಉತ್ಪಾದನೆ ಕಡಿಮೆ ಆಗುತ್ತಿತ್ತು. ದೇಶದ ಮುಖಂಡರಿಗೆ ಹಿಂದೂ ಮುಸ್ಲಿಂ ಮತ್ತು ಮಂದಿರದ್ದೇ ಚಿಂತೆಯಾಗಿದೆ. ಹುಡುಗಿಯರ ತಂದೆ ತಾಯಿಯರಿಗೆ ಪ್ರವಚನ, ತೀರ್ಥಯಾತ್ರೆ, ಪವಿತ್ರ ಸ್ನಾನದಿಂದ ತಮ್ಮ ಮಕ್ಕಳ ಉದ್ಧಾರವಾಗುತ್ತದೆ ಎಂಬ ನಂಬಿಕೆ ಇದೆ.

ಹಲವು ದಶಕಗಳ ಬಳಿಕ ಹುಡುಗಿಯರಿಗೆ ನೌಕರಿ ದೊರಕುವುದರ ಮೂಲಕ ಅವರಿಗೆ ಒಂದಿಷ್ಟು ಸ್ವಾತಂತ್ರ್ಯ ಲಭಿಸಿತ್ತು. ಹುಡುಗರ ಸರಿಸಮಾನ ನಡೆಯುವುದು ಸಾಧ್ಯವಾಗುತ್ತಿತ್ತು. ಆದರೆ ಭಾರತದಲ್ಲಿ ಇದೇ ಪ್ರಥಮ ಬಾರಿಗೆ ಹಾಗೂ ಇತರೆ ದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅವರ ಕೈಲಾದ ಅವಕಾಶಗಳು ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ