ಅದೊಂದು ಸುಂದರ ಸಂಗೀತ ಸಾಹಿತ್ಯ ಸಮಾರಂಭ. ಖ್ಯಾತ ಕವಿಗಳಾದ ಡಾ. ಕೆ.ಎಸ್‌. ನಿಸಾರ್‌ ಅಹಮದ್‌ರವರು ಈ ಕಾರ್ಯಕ್ರಮ ನಿರೂಪಣೆಯಲ್ಲಿ `ನನಗೆ ಅದೇ ಹುಡುಗಿ ಇರಲಿ, ಕನ್ನಡಕ್ಕೆ, ಕನ್ನಡ ಭಾಷೆಗೆ ಆ ಹುಡುಗಿಯಿಂದ ಎಂದೂ ಕುಂದುಬಾರದು. ಸ್ಪಷ್ಟ ಕನ್ನಡ ಪದಗಳ ಉಚ್ಚಾರಣೆಯಿಂದಾಗಿ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಹಾಗಾಗಿ ಸಂಧ್ಯಾ ಭಟ್ಟೇ ನಿರೂಪಣೆಯಲ್ಲಿ ಇರಲಿ,' ಎಂದು ಆಯೋಜಕರಲ್ಲಿ ಹೇಳಿಕಳಿಸಿದಾಗ ಜೀವನದ ಸಾರ್ಥಕತೆಯನ್ನು ಕಂಡವರು ಮಲೆನಾಡಿನ ಈ ಅಪ್ಪಟ ದೇಸೀ ಪ್ರತಿಭೆ!

ಸ್ವಚ್ಛ ಪದ ಉಚ್ಚಾರಣೆ, ಪ್ರಚಲಿತ ವಿದ್ಯಮಾನಗಳ ವಿಷಯ ಜ್ಞಾನ, ಮಾತಲ್ಲಿ ಘನತೆ ಅವುಗಳ ಮೇಲಿನ ಹಿಡಿತವಿದ್ದರೆ ಎಂತಹ ಕಾರ್ಯಕ್ರಮವನ್ನೂ ಬಹಳ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಿರೂಪಿಸಲು ಸಾಧ್ಯ. ಇತ್ತೀಚಿನ ಟ್ರೆಂಡ್‌ ಹೇಗಾಗಿದೆ ಎಂದರೆ, ಸಂಘ ಸಂಸ್ಥೆ, ಸಾರ್ವಜನಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಕುಟುಂಬ ಸಮಾರಂಭಗಳಲ್ಲೂ ಸಹ ಈ ನಿರೂಪಣಾ ವಿಧಾನ ಬೆಳವಣಿಗೆ ಕಾಣುತ್ತಿರುವುದು ಸ್ವಾಗತಾರ್ಹವೇ. ಪ್ರಭಾಶಾಲಿಯಾಗಿ ಬೆಳೆಯುತ್ತಿರುವ ಈ ಕ್ಷೇತ್ರದ ಸಾಲಿಗೆ ಸೇರುವ ಮಲೆನಾಡಿನ ಬೆಡಗಿ, ನಿರೂಪಕಿ, ಕಂಠದಾನ ಕಲಾವಿದೆ, ಲೇಖಕಿ, ಛಾಯಾಗ್ರಾಹಕಿ ಸಂಧ್ಯಾ ಭಟ್‌.

ಪದಗಳೊಟ್ಟಿಗೆ ಆಟವಾಡೋದು ಒಂದು ಕಲೆಯೇ. ಇದಕ್ಕೆ ಭಾಷಾ ಜ್ಞಾನವಿರಬೇಕಷ್ಟೆ! ಅಂತಹ ಭದ್ರ ಬುನಾದಿ ಹಾಕಿಕೊಡೋದು ಶಾಲಾ ದಿನಗಳು. ಪ್ರಾರ್ಥನಾ ಸಮಯದಲ್ಲಿ ಸುದ್ದಿ ವಾಚನವೊಂದು ಅಜೆಂಡಾ ಆಗಿರುತ್ತದೆ. ಗಂಗಮ್ಮ ಹಾಗೂ ಸರೋಜಮ್ಮ ಮೇಡಂರವರುಗಳ ಅಂದಿನ ಆ ಪ್ರೋತ್ಸಾಹವೇ ಇವರ ಇಂದಿನ ಈ ಅಕ್ಷರ ಲೋಕಕ್ಕೆ ನಾಂದಿ ಹಾಡಿತು.

IMG_20190115_205858_849

ತೀರ್ಥಹಳ್ಳಿಯ ಹೊರಣೆ ಬೈಲಿನ ಬಡ ಕುಟುಂಬ. ಬೇಸಾಯವೇ ಆದಾಯ. ತಂದೆ ಶಂಕರ್‌ಭಟ್‌ ತಾಯಿ ಸುಶೀಲಾ ಭಟ್‌. ಸುಸಂಸ್ಕೃತ ಸಂಪ್ರದಾಯಸ್ಥ ಕೂಡು ಕುಟುಂಬ. ದೊಡ್ಡಪ್ಪನ ಯಜಮಾನಿಕೆ. ಅಕ್ಕ ತಮ್ಮ ಇವರೊಟ್ಟಿಗೆ ಹುಟ್ಟಿದರು. ಆಸೆ ಕನಸುಗಳಿದ್ದರೂ ಸಾಕಾರಗೊಳ್ಳೋದು ವಿರಳವೇ ಆಗಿತ್ತು. ಸಜ್ಜನಿಕೆ ಸೌಹಾರ್ದತೆಗಳೇ ಕುಟುಂಬದ ಗುರುತು. ಕಷ್ಟಗಳೇ ಜೀವನವಾದರೂ ಬಾಲ್ಯ ಸುಂದರವಾಗಿತ್ತು. ಶಾಲೆಗೆ 48 ಕಿ.ಮೀ. ನಡೆಯಬೇಕಿತ್ತು. ಮೇಳಗೆ ಸರ್ಕಾರಿ ಶಾಲೆ, ತೀರ್ಥಹಳ್ಳಿಯ ಸೇವಾ ಭಾರತಿಯಲ್ಲಿ ಶಾಲಾ ವಿದ್ಯಾಭ್ಯಾಸ. ತುಂಗಾ ಮಹಾವಿದ್ಯಾಲಯದಿಂದ ಪದವಿ. ಕನ್ನಡ ಮಾಧ್ಯಮದ ಕುರಿತ ಭಾಷಾಭಿಮಾನ ಹೆಚ್ಚು, ಸಮಾಜ ಶಾಸ್ತ್ರ ಫೇವರೇಟ್‌, ಗಣಿತ ಕಷ್ಟ ಕಷ್ಟ! ಎಸ್‌.ಎಸ್‌.ಎ್‌.ಸಿವರೆವಿಗೂ ಚಿಮಣಿ ದೀಪದಲ್ಲೇ ಓದು. ಸೌಲಭ್ಯ ಸವಲತ್ತುಗಳು ಬಹಳವೇ ಕಡಿಮೆ. ಹೊಸ ಬಟ್ಟೆ ಶಾಲಾ ಶುಲ್ಕಕ್ಕೂ ಪರದಾಡಿದ ದಿನಗಳು ಹಲವು. ಇವೆಲ್ಲ ಆಗ ಏನೂ ಅನಿಸುತ್ತಿರಲಿಲ್ಲ. ನೆನೆಸಿಕೊಂಡರೆ ಒಂಥರಾ ಎನಿಸುತ್ತದೆ ಎನ್ನುತ್ತಾರೆ. ಮತ್ತೊಂದೆಡೆಗೆ ಚುರುಕಾದ ಹುಡುಗಿ ಗುರುಗಳ ನೆಚ್ಚಿನ ಶಿಷ್ಯೆ, ಸ್ನೇಹವೃಂದ ಅಷ್ಟಾಗಿರಲಿಲ್ಲ, ಅಪಾರ ಗುರು ಭಕ್ತಿ, ಪಠ್ಯೇತರ ಚಟುವಟಿಕೆಗಳಲ್ಲೂ ಮುಂದು. ರಾಜ್ಯ ಮಟ್ಟದ ವಾಲಿಬಾಲ್ ಆಟಗಾರ್ತಿ, ಶಾಲಾ ಮಟ್ಟಿಗಿನ ಶಾಟ್‌ಪುಟ್‌ ಬಹುಮಾನಿತೆ. ಡಿಸ್ಕ್ ಥ್ರೋ, ಆಶುಭಾಷಣ ಸ್ಪರ್ಧೆ, ಪ್ರಬಂಧ ಲೇಖನ ಹೀಗೆ ಸಕ್ರಿಯರಾಗಿದ್ದರೂ ಕೂಡ ಪದವಿಯೊಂದಿಗೆ ಶಿಕ್ಷಣ ಮುಕ್ತಾಯವಾಯಿತು.

ಪ್ರತಿಯೊಬ್ಬರಲ್ಲೂ ಕಲೆ ಎಂಬುದಿರುತ್ತದೆ. ಬಡತನ, ಹಳ್ಳಿಯ ಬದುಕಲ್ಲೇ ಬೆಳೆದ ಈ ಪ್ರತಿಭೆಯೊಳಗಿದ್ದ ಕಲೆ ಅನಾವರಣಗೊಳ್ಳಲು ಅಂಥಾ ಹೆಚ್ಚಿನ ಸಮಯವೇನು ಬೇಕಾಗಲಿಲ್ಲ. ಶಾಲಾ ದಿನಗಳಲ್ಲಿ ಮೇಷ್ಟ್ರು ಒಬ್ಬರಿಂದ ಮೂದಲಿಕೆಯ ಅಣಕದ ಮಾತುಗಳಿಂದ ಮನದಲ್ಲಿ ಏನಾದರೂ ಸಾಧಿಸಬೇಕೆಂಬ ಹಠ ಮೂಡಿತು. ಆಗಾಗ ದೊರೆಯುತ್ತಿದ್ದ ಅವಕಾಶಗಳನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತ ನಡೆದಿದ್ದರು. 8ನೇ ತರಗತಿಯಲ್ಲಿದ್ದಾಗ ಸ್ವಂತ ಅಕ್ಕ ರೇಖಾಳನ್ನು ಕುರಿತು ಬರೆದ ಪದ್ಯ ಸ್ಥಳೀಯ ಪತ್ರಿಕೆ `ಪ್ರಚಂಡ'ದಲ್ಲಿ  ಪ್ರಕಟಗೊಂಡಾಗ ಅಪ್ಪ ಏನೂ ಮಾತಾಡಲಿಲ್ಲ. ಅಮ್ಮನ ಹೊಗಳಿಕೆಯ ಪ್ರೋತ್ಸಾಹ ದೊರೆಯಿತು. ವಯಸ್ಸಿನ ಸ್ಥಿತಿಗತಿ ಭಾವನೆಗಳ ಮನಸ್ಥಿತಿ, ಕವನ ರೂಪದಿ ಹೊರಹೊಮ್ಮಿ ಪತ್ರಿಕೆಗಳಲ್ಲಿ ಪ್ರಕಟ. ಕಾಲೇಜು ದಿನಗಳಲ್ಲಿನ ಇವರ ಚುರುಕುತನ ನೋಡಿದ ಆಗಿನ `ನಾವಿಕ' ಪತ್ರಿಕೆಯ ವೈದ್ಯ ಶಿವಮೊಗ್ಗರವರಿಂದ ತೀರ್ಥಹಳ್ಳಿಯ ವರದಿಗಾರ್ತಿಯಾಗುವ ಸುಯೋಗ. ಹಾಗೇ ಸಾಗುತ್ತಾ ಬಂದ ಹಾದಿಗೆ ಬೆಳಕು ನೀಡಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ