ಗಂಡ ಗುಂಡನ ಮೇಲೆ ಗುಂಡಿಗೆ ಬಹಳ ದಿನಗಳಿಂದ ಒಂದು ಗುಮಾನಿ ಇತ್ತು. ಅವನು ಹೊರಗೆ ಏನೋ ಆಟ ಆಡುತ್ತಿದ್ದಾನೆ ಅಂತ ಡೌಟು. ಈ ಸಲ ಮಳೆ ಶುರುವಾದಾಗಿನಿಂದ, ಅವನು ತಪ್ಪದೆ ಛತ್ರಿ ತೆಗೆದುಕೊಂಡು ಹೋಗುತ್ತಿದ್ದರೂ, ಅವನ ಬಲ ಭುಜ ಮಾತ್ರ ನೆಂದಿರುತ್ತಿತ್ತು. ತಲೆ ನೆನೆಯದ ಕಾರಣ ಶೀತ, ನೆಗಡಿ ಆಗಿರಲಿಲ್ಲ.

ಹೀಗೆ ಒಮ್ಮೆ ಗುಂಡ ಕೈಯಲ್ಲಿ ಒದ್ದೆ ಛತ್ರಿ ಹಿಡಿದುಕೊಂಡು ಸಂಜೆ ತಡವಾಗಿ ಮನೆ ಪ್ರವೇಶಿಸಿದಾಗ, ಗುಂಡಿ ಬಲು ಕಾಳಜಿಯಿಂದ ಕೇಳಿದಳು, ``ಬಹಳ ದಿನಗಳಿಂದ ನೋಡ್ತಿದ್ದೀನಿ, ಮಳೆ ಬಂದಾಗೆಲ್ಲ ನೀವು ಬಹಳ ಕಷ್ಟಪಡ್ತಿದ್ದೀರಿ. ಛತ್ರಿ ಇದ್ದೂ ಸಹ ಸದಾ ನಿಮ್ಮ ಬಲ ಭುಜ ನೆಂದು ಹೋಗಿರುತ್ತೆ, ದೊಡ್ಡ ಗಾತ್ರದ ಛತ್ರಿ ತೆಗೆದುಕೊಳ್ಳಿ, ಜೊತೆಗೆ ಯಾರಿಂದ ನಿಮ್ಮ ಬಲ ಭುಜ ನೆನೆಯುತ್ತಿದೆಯೋ ಅವಳನ್ನೂ ಒಮ್ಮೆ ಮನೆಗೆ ಕರೆದು ತನ್ನಿ..... ಒಟ್ಟಿಗೆ ಟೀ ಕುಡಿಯೋಣ!'' ಇದನ್ನು ಕೇಳಿಸಿಕೊಂಡ ಗುಂಡ ಫುಲ್ ಕಕ್ಕಾಬಿಕ್ಕಿ!

ಹೀಗೆ ಒಮ್ಮೆ ಗುಂಡ ಗುಂಡಿ ಶಾಪಿಂಗ್‌ ಮಾಡಲೆಂದು ಮಾಲ್‌ಗೆ ಹೊರಟರು. ಮೆನ್ಸ್ ಡ್ರೆಸ್‌ ಕೌಂಟರ್‌ನಲ್ಲಿ ಗುಂಡನನ್ನು ಕೂರಿಸಿ, ತಾನು ಈಗಲೇ ಸೀರೆ ಕೌಂಟರ್‌ಗೆ ಹೋಗಿ ಬರುತ್ತೇನೆಂದು ಹೋದ ಗುಂಡಿ 2 ಗಂಟೆ ಕಾಲ ಕಳೆದರೂ ವಾಪಸ್ಸು ಬರುವುದು ಬೇಡವೇ? ಅವಳಿಗಾಗಿ ಕಾದೂ ಕಾದೂ ರೋಸಿ ಹೋದ ಗುಂಡ, ಹತ್ತಿರದಲ್ಲಿದ್ದ ಬ್ಯೂಟಿಫುಲ್ ಸೇಲ್ಸ್ ಗರ್ಲ್ಸ್ ನ್ನು ಸಮೀಪಿಸಿ ಕೇಳಿದ, ``2 ನಿಮಿಷ ಫ್ರೀ ಮಾಡಿಕೊಂಡು ನನ್ನ ಜೊತೆ ಏನಾದರೂ ಮಾತಾಡ್ತೀರಾ......?''

ಸೇಲ್ಸ್ ಗರ್ಲ್ : ಇದ್ಯಾಕ್ರಿ.... ಹೀಗೆ ಕೇಳ್ತಿದ್ದೀರಿ?

ಗುಂಡ : ಅಸಲಿಗೆ ನನ್ನ ಹೆಂಡತಿ ನನ್ನನ್ನು ಇಲ್ಲಿ ಬಿಟ್ಟು 2 ಗಂಟೆಗಳಿಗೂ ಹೆಚ್ಚಾಗಿ ಇದೇ ಮಾಲ್‌ನಲ್ಲಿ ಫ್ಲೋರ್‌ ಫ್ಲೋ0ರಾಗಿ ಸುತ್ತಾಡುತ್ತಾ ಶಾಪಿಂಗ್‌ ಮಾಡುತ್ತಿದ್ದಾಳೆ. ನನಗಂತೂ ಅವಳನ್ನು ಹುಡುಕಲು ಆಗುವುದಿಲ್ಲ. ನೀವು ನನ್ನ ಜೊತೆ ನಗುನಗುತ್ತಾ 2 ನಿಮಿಷ ಮಾತನಾಡುತ್ತಾ ನಿಂತರೆ, ಎಲ್ಲೇ ಇದ್ದರೂ ಅವಳು ಕ್ಷಣಾರ್ಧದಲ್ಲಿ ಇದನ್ನು ಗ್ರಹಿಸಿ, ನನ್ನ ಬಳಿ ಬಂದೇ ಬರುತ್ತಾಳೆ. ನನ್ನ ಹೆಂಡತಿಯನ್ನು ಹುಡುಕಲು ಸಹಾಯ ಮಾಡಿ, ಪ್ಲೀಸ್‌......!

ಗಿರೀಶ್‌ : ನಮ್ಮವರ ಆಂಗ್ಲ ವ್ಯಾಮೋಹ ಹೇಳತೀರದು. ಕನ್ನಡದ ಎಲ್ಲಾ ಪದಗಳನ್ನೂ ಕಂಗ್ಲೀಷ್‌ ಮಾಡಿರಿಸಿದ್ದಾರೆ ನೋಡು.

ಸತೀಶ್‌ : ನೀನು ಯಾವುದರ ಕುರಿತಾಗಿ ಹೀಗೆ ಹೇಳುತ್ತಿದ್ದೀಯಾ?

ಗಿರೀಶ್‌ : ನಾನು ಹೇಳೋದು ಅಂದ್ರೆ.... ಅಮ್ಮ ಮಾಮ್ ಆದಳು, ಅಪ್ಪ ಡ್ಯಾಡ್‌ ಆದ, ಚಿಕ್ಕಪ್ಪ ಚಿಕ್ಕಪ್ಸ್ ಆದರೆ, ಹಸ್ಬೆಂಡ್‌ ಹಬಿ ಆದ. ಹೀಗೆ ಎಲ್ಲದಕ್ಕೂ ಸರಿ ಆದರೆ ಒಂದು ಮಾತ್ರ ಹಾಗೇ ಉಳಿದುಕೊಂಡಿತು ನೋಡು.

ಸತೀಶ್‌ : ಅದ್ಯಾವುದು?

ಗಿರೀಶ್‌ : ಹೆಂಡತಿ!

ರಂಗಿ : ನೀವು ನನ್ನನ್ನು ನೋಡಲು ಬಂದಾಗ, ನಾನು ತಲೆ ಎತ್ತಿ ಸಹ ನಿಮ್ಮನ್ನು ನೋಡಲಿಲ್ಲ.... ಮದುವೆಗೆ ಹಾಗೇ ಒಪ್ಪಿದ್ದೆ ಗೊತ್ತಾ?

ರಂಗ : ನಾನೆಂಥ ಬೆಪ್ಪುತಕ್ಕಡಿ ನೋಡು.... ನಿನ್ನನ್ನು ಸರಿಯಾಗಿ ನೋಡಿದ ಮೇಲೂ ಮದುವೆಗೆ ಒಪ್ಪಿದೆ ಅಂದ್ರೆ..... ಸಂದೇಹ ಪಡಲಿಕ್ಕೂ ಒಂದ ಲಿಮಿಟ್‌ ಇರಬೇಕೆಂತೆ. ರಂಗ ಆಗ ತಾನೇ ಆಫೀಸಿನಿಂದ ಮನೆಗೆ ಮರಳಿದ್ದ. ಎದುರು ಫ್ಲಾಟಿನ ರೋಜಾ ಸಹ ಸೂಟ್‌ಕೇಸ್‌ ಹಿಡಿದು ತವರಿನಿಂದ ಮನೆಗೆ ಬರುತ್ತಿದ್ದಳು. ಇಬ್ಬರೂ ಹಾಯಾಗಿ ನಗುನಗುತ್ತಾ ಮಾತನಾಡಿಕೊಳ್ಳುತ್ತಾ ಮೆಟ್ಟಿಲೇರಿ 4ನೇ ಮಹಡಿಗೆ ಬರುತ್ತಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ