ಧರ್ಮದ ಬಗ್ಗೆ ಸಮಾಜದ ಆಲೋಚನೆ ಬದಲಾಗುತ್ತಿದೆ. ಧರ್ಮದ ಅಂಧ ಭಕ್ತಿ ಈಗ ಕೊನೆಯಾಗುವ ಹಂತದಲ್ಲಿದೆ. ಈಗ ಜನ ಧರ್ಮದ ಬಗ್ಗೆ ಹಿಂದಿಗಿಂತಲೂ ಹೆಚ್ಚು ಮೆದುವಾದ ಧೋರಣೆ ಇಟ್ಟುಕೊಂಡಿದ್ದಾರೆ. ಧರ್ಮದ ಬಗ್ಗೆ ಹಿಂದೆ ಮಾಡುತ್ತಿದ್ದಂತಹ ಕಪಟತನಗಳು ಈಗ ಕಡಿಮೆಯಾಗುತ್ತಿವೆ. ಜನ ಧರ್ಮವನ್ನು ವಿರೋಧಿಸುತ್ತಿಲ್ಲ. ಆದರೆ ಅದರ ಕಟ್ಟಾ ಸಮರ್ಥಕರು ಕಡಿಮೆಯಾಗುತ್ತಿದ್ದಾರೆ.

ಈ ಕಾರಣದಿಂದಲೇ ಧಾರ್ಮಿಕ ಹಬ್ಬಹರಿದಿನಗಳಲ್ಲಷ್ಟೇ ಅಲ್ಲ, ಧರ್ಮವನ್ನು ಆಧರಿಸಿ ತಯಾರಾಗುತ್ತಿರುವ ಟಿ.ವಿ ಧಾರಾವಾಹಿಗಳಲ್ಲೂ ಧರ್ಮದ  ಜಾಗದಲ್ಲಿ ಧರ್ಮದ ಸಾಮಾಜಿಕ ಮಜಲುಗಳನ್ನು ತೋರಿಸುವ ಪ್ರಯತ್ನ ಶುರುವಾಗಿದೆ. ಸಮಾಜದಲ್ಲಿ ಮಹಿಳೆಯರ ವಿಷಯದಲ್ಲಿ ಹೇಗೆ ಆಲೋಚನೆಗಳು ಬದಲಾಗಿವೆಯೋ ಅದೇ ರೀತಿ ಧಾರ್ಮಿಕ ಸೀರಿಯಲ್ಗಳು ಈಗ ಧರ್ಮದ ಪಾಕದಲ್ಲಿ ಅದ್ದಿರುವ ಸಾಮಾಜಿಕತೆಯನ್ನು ಉಣಿಸುತ್ತಿವೆ.

ಸಾಮಾಜಿಕತೆಯ ಜೊತೆ ಜೊತೆಗೆ ಅವುಗಳಲ್ಲಿ ಫ್ಯಾಷನ್‌ ಮತ್ತು ಗ್ಲಾಮರಸ್‌ ಹೊಳಪನ್ನು ತುಂಬಲಾಗುತ್ತಿದೆ. ಹಿಂದಿನ ಸೀರಿಯಲ್ಗಳಂತೆ ಉಡುಪುಗಳು ಮತ್ತು ರೂಪುರೇಷೆಗಳನ್ನು ಇವುಗಳಲ್ಲಿ ಕಾಣಲಾಗುತ್ತಿಲ್ಲ. ಇದರ ಹೊರತಾಗಿ ಈ ಸೀರಿಯಲ್ಗಳು ಇನ್ನೂ ಧಾರ್ಮಿಕ ಪ್ರಚಾರವನ್ನೇ ಅವಲಂಬಿಸಿವೆ.

ಸಾಮಾಜಿಕ ವಿಷಯಗಳಿಗೆ ಆದ್ಯತೆ

ಧಾರ್ಮಿಕ ಸೀರಿಯಲ್ಗಳಲ್ಲಿ `ರಾಮಾಯಣ’ ಆಧರಿಸಿ ಇದುವರೆಗೆ ಅತ್ಯಂತ ಹೆಚ್ಚು ಸೀರಿಯಲ್ಗಳು ತಯಾರಾಗಿವೆ. ಪ್ರತಿ ಸೀರಿಯಲ್ ಗಳನ್ನು ನೋಡಿದ ನಂತರ ಇನ್ನು ಇದರಲ್ಲಿ ಏನಾದರೂ ಹೊಸದನ್ನು ತೋರಿಸಲು ಉಳಿದಿಲ್ಲ ಎನ್ನಿಸುತ್ತದೆ.

ಸ್ಟಾರ್‌ ಪ್ಲಸ್‌ನಲ್ಲಿನ `ರಾಮಾಯಣ’ ಆಧರಿಸಿದ ಸೀರಿಯಲ್ `ಸಿಯಾ ಕೆ ರಾಮ್’ನಲ್ಲಿ ಸೀತೆ ಮತ್ತು ರಾಮಾಯಣದಲ್ಲಿ ಉಪೇಕ್ಷಿತರಾದ ಮಹಿಳಾ ಪಾತ್ರಧಾರಿಗಳ ಮರೆಯಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸಾಮಾಜಿಕ ವಿಷಯಗಳನ್ನು ಎತ್ತಿಕೊಳ್ಳಲಾಗುತ್ತಿದೆ. ಅದರಿಂದ ಧಾರ್ಮಿಕ ಸೀರಿಯಲ್ಲನ್ನು ಹೊಸ ನೋಟದೊಂದಿಗೆ ಪ್ರಸ್ತುತಪಡಿಸಲಾಗುತ್ತಿದೆ.

ಅಂದಹಾಗೆ, ಧಾರ್ಮಿಕ ಸೀರಿಯಲ್ ಗಳು ಸತತವಾಗಿ ತಯಾರಾಗುತ್ತಿದ್ದು, ಅವು ಭಾರಿ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಕಳೆದುಕೊಂಡಿದ್ದವು. ಧಾರ್ಮಿಕ ಸೀರಿಯಲ್ ಗಳೊಂದಿಗೆ ಪ್ರೇಕ್ಷಕರನ್ನು ಮತ್ತೆ ಹೊಂದಿಸಲು ಅವಕ್ಕೆ ಸಾಮಾಜಿಕತೆ ಹಾಗೂ ಫ್ಯಾಷನ್‌ನ ಬಣ್ಣ ಕೊಡಲಾಗುತ್ತಿದೆ. `ಸಿಯಾ ಕೆ ರಾಮ್’ ಸೀರಿಯಲ್ ನಲ್ಲಿ ಸೀತಾ ಇಂತಹ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಾಳೆ. ಈ ಹಿಂದಿನ `ರಾಮಾಯಣ’ ಆಧರಿಸಿದ ಯಾವುದೇ ಸೀರಿಯಲ್ ನಲ್ಲೂ ತೋರಿಸಿಲ್ಲ.

ಸಾಮಾನ್ಯವಾಗಿ ಇಂತಹ ಧಾರ್ಮಿಕ ಸೀರಿಯಲ್ ಗಳ ಶೂಟಿಂಗ್‌ ಸ್ಟುಡಿಯೋದಲ್ಲೆ ಆಗುತ್ತಿತ್ತು. `ಸಿಯಾ ಕೆ ರಾಮ್’ನ ಶೂಟಿಂಗ್‌ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಾಡಲಾಯಿತು. ಅದರಿಂದ ಪ್ರೇಕ್ಷಕರಿಗೆ ವಾಸ್ತವ ಅರ್ಥವಾಯಿತು. ಅಯೋಧ್ಯಾ ಮತ್ತು ಮಿಥಿಲಾ ಎಂಬ 2 ಬೇರೆ ಬೇರೆ ಶೂಟಿಂಗ್‌ ಲೊಕೇಶನ್‌ಗಳನ್ನು ಮಾಡಲಾಯಿತು. ಈ ಸೀರಿಯಲ್ ನಲ್ಲಿ ಆಗಿನ ಕಾಲದ ಸಾಮಾಜಿಕತೆಯನ್ನು ತೋರಿಸಲಾಗಿದೆ ಎಂದು ಒಂದು ಕಡೆ ಹೇಳಲಾಗುತ್ತದೆ. ಇನ್ನೊಂದು ಕಡೆ  ಇದನ್ನು ಪ್ರಚಾರ ಮಾಡಲು `ಧನುಷ್‌ ಯಾತ್ರಾ’ವನ್ನೂ ಆಯೋಜಿಸಲಾಗುತ್ತದೆ. ಈ `ಧನುಷ್‌ ಯಾತ್ರೆ’ಯ ಉದ್ದೇಶ ಸೀರಿಯಲ್ ನ ಪ್ರಚಾರಕ್ಕಾಗಿ ಮಾತ್ರ. ದೇಶದ ಹಲವಾರು ದೊಡ್ಡ ನಗರಗಳಲ್ಲಿ ಇದನ್ನು ಆಯೋಜಿಸಲಾಯಿತು. ಸೀರಿಯಲ್ ನ ಕಲಾವಿದರಿಗೆ ಈ ಯಾತ್ರೆಯ ಪ್ರಚಾರದ ಕೆಲಸ ವಹಿಸಲಾಯಿತು. ಶೂಟಿಂಗ್‌ ಮಾಡುವಾಗ ಸೀರಿಯಲ್ ನಲ್ಲಿ ಧರ್ಮ ಮತ್ತು ಧಾರ್ಮಿಕ ಚಿಹ್ನೆಗಳಿಗೆ ಪ್ರಾಮುಖ್ಯತೆ ಕೊಡಲಾಯಿತು. ಏಕೆಂದರೆ ಜನ ಧರ್ಮದ ಹೊಸ ಸ್ವರೂಪದಲ್ಲಿ ಸಿಕ್ಕಿರಲೆಂದು. ಸೀರಿಯಲ್ ಗೆ ಸಿನಿಮಾಗಳ ಭವ್ಯತೆ ಕೊಟ್ಟು ಪ್ರೇಕ್ಷಕರ ಕಣ್ಣು ಕುಕ್ಕಿಸಲು ಎಲ್ಲ ವ್ಯವಸ್ಥೆ ಮಾಡಲಾಯಿತು.

ಫ್ಯಾಷನ್‌ನ ಬಣ್ಣ `ಸಿಯಾ ಕೆ ರಾಮ್’ನಲ್ಲಿ ಸೀತಾಳ ಲುಕ್‌ನ್ನು ವಿಶೇಷ ರೀತಿಯಲ್ಲಿ ಪ್ರಸ್ತುತಪಡಿಸಲಾಯಿತು. ಅದರೊಂದಿಗೆ ಇತರ ಮಹಿಳಾ ಪಾತ್ರಧಾರಿಗಳನ್ನು ಅಂದರೆ ಸುನಯನಾ ಪಾತ್ರದ ಭಾರ್ಗವಿ,  ಕೌಸಲ್ಯಾ ಪಾತ್ರಧಾರಿ ಸ್ನಿಗ್ಧಾ ಅಕೋಲಸ್‌, ಸುಮಿತ್ರಾಳ ಪಾತ್ರಧಾರಿ ಸಂಪದಾ ರಾಜೆ ಮತ್ತು ಕೈಕೇಯಿ ಪಾತ್ರದ ಗ್ರೂಶಾ ಕಪೂರ್‌, ಗಾರ್ಗಿ ಪಾತ್ರದ ರಿಚಾ ಸೋನಿ ಮುಂತಾದವರ ಡ್ರೆಸ್‌ಗೆ ಆಧುನಿಕ ಗ್ಲಾಮರಸ್‌ ಲುಕ್‌ ಕೊಡಲಾಗಿದೆ. ಕಿರೀಟ ಧರಿಸಿ ಬಿಲ್ಲಿನಿಂದ ಹೂಬಾಣಗಳನ್ನು ಬಿಡುವ ಚಮತ್ಕಾರದ ದೃಶ್ಯಗಳ ಬದಲಿಗೆ ವಾಸ್ತವದ ದೃಶ್ಯಗಳನ್ನು ತೋರಿಸಲಾಗಿದೆ. ಈ ಬದಲಾವಣೆಯನ್ನು ಧಾರ್ಮಿಕ ಸೀರಿಯಲ್ ಗಳ ಪ್ರೇಕ್ಷಕರನ್ನು ಸೆಳೆಯಲು ಮಾಡಲಾಗಿದೆ. ಈ ಕಾರಣದಿಂದ ಈ ಪ್ರಶ್ನೆಗಳನ್ನು, ದೃಶ್ಯಗಳನ್ನು ಪ್ರಾಮುಖ್ಯತೆಯಿಂದ ತೋರಿಸಲಾಗಿದೆ. ಈಗ ಇಂತಹ ಧಾರ್ಮಿಕ ಸೀರಿಯಲ್ ಗಳಲ್ಲಿ ಸಾಮಾಜಿಕತೆ ಅಷ್ಟೇ ಅಲ್ಲ ಫ್ಯಾಷನ್‌ನ ಬಣ್ಣವನ್ನೂ ತುಂಬಲಾಗುತ್ತಿದೆ.

ಧಾರ್ಮಿಕ ಕಥೆಗಳು ಕಳೆಗುಂದುತ್ತಿವೆಯೇ?

ಧಾರ್ಮಿಕ ಸೀರಿಯಲ್ ಗಳಲ್ಲಿ ಯಾವ ರೀತಿಯಲ್ಲಿ ಕಥೆಗಳನ್ನು ಇದುವರೆಗೆ ಪ್ರಸ್ತುತಪಡಿಸುತ್ತಿದ್ದರೋ, ಈಗ ಸಮಾಜದಲ್ಲಿ ಅದರ ಬಗ್ಗೆ ಜಾಗೃತಿ ಮೂಡಿದೆ. ಇಂತಹ ಕಥೆಗಳನ್ನು ಪ್ರೇಕ್ಷಕರು ಸಹಜ ಭಾವನೆಯಿಂದ ಸ್ವೀಕರಿಸುತ್ತಿಲ್ಲ. ಅತ್ಯಂತ ಹೆಚ್ಚು ತೊಂದರೆ ಮಹಿಳೆಯರ ವಿಷಯಕ್ಕೆ ಸಂಬಂಧಿಸಿದಂತೆ ಬರುತ್ತಿದೆ. ಧರ್ಮದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳನ್ನು ಇದುವರೆಗೆ ಉಪೇಕ್ಷಿತ ರೂಪದಲ್ಲಿ ತೋರಿಸಲಾಗುತ್ತಿತ್ತು.

ಇಂದಿನ ಪ್ರೇಕ್ಷಕರಿಗೆ ತರ್ಕ ಸಹಜವೆಂದು ಅನ್ನಿಸುವುದಿಲ್ಲ. ಅವರು ಕಥೆಯೊಂದಿಗೆ ತಮ್ಮನ್ನು ಹೊಂದಿಸಿಕೊಳ್ಳುವುದಿಲ್ಲ. ಹೀಗಿರುವಾಗ ಧಾರ್ಮಿಕ ಸೀರಿಯಲ್ ಗಳ ಟಿಆರ್‌ಪಿ ಮಂದವಾಗಿರುತ್ತದೆ. ಧಾರ್ಮಿಕ ಸೀರಿಯಲ್ ಗಳ ಬಣ್ಣ ಕಳಚುತ್ತಿರುವಾಗ ಇವುಗಳಲ್ಲಿ ಸಾಮಾಜಿಕತೆ ಮತ್ತು ಫ್ಯಾಷನ್‌ನ ಬಣ್ಣವನ್ನು ಸೇರಿಸಲಾಗುತ್ತಿದೆ. ಈಗ ಸೀರಿಯಲ್ ಗಳಲ್ಲಿ ಧಾರ್ಮಿಕ ಕಥೆಗಳನ್ನಂತೂ ತೋರಿಸಲಾಗುತ್ತಿದೆ. ಆದರೆ ಅವುಗಳ ಮತಾಂಧತೆಯ ರೂಪವನ್ನು ಮುಚ್ಚುವ ಕೆಲಸ ಶುರುವಾಗಿದೆ.

ಈಗ ಧಾರ್ಮಿಕ ಸೀರಿಯಲ್ ಗಳು ಹೆಸರಿಗೆ ಮಾತ್ರ ಧಾರ್ಮಿಕವಾಗಿವೆ. ಅವುಗಳ ಸ್ವರೂಪ ಬದಲಾಗಿದೆ. ನಮ್ಮ ಸಮಾಜದಲ್ಲಿ ಧರ್ಮದ ಆಲೋಚನೆಯಿಂದ ಮುಕ್ತರಾಗಿ ಜೀವನ ದೂಡುವುದು ಕಷ್ಟವಾಗುತ್ತದೆ. ಈ ಕಾರಣದಿಂದ ಸೀರಿಯಲ್ ಗಳಲ್ಲಿ ಧರ್ಮದ ಬಗ್ಗೆ ಪ್ರಶ್ನೆ ಮಾಡದೆ ಹಿಂದೆ ದೂರ ಮಾಡಲಾಗುತ್ತಿದ್ದ ವಿಷಯಗಳಿಗೆ ಜೀವ ತುಂಬಲಾಗುತ್ತಿದೆ. ಟಿ.ವಿ.ಯ ಸಂತೋಷೀಮಾ ಸೀರಿಯಲ್ ನಲ್ಲಿ ಸಂತೋಷೀಮಾಗಿಂತ ಹೆಚ್ಚಾಗಿ ಸಂತೋಷಿ ಎಂಬ ಸಾಧಾರಣ ಹುಡುಗಿಯ ಕಥೆ ತೋರಿಸಲಾಗಿದೆ. ಸಂತೋಷಿಯ ಪಾತ್ರ ನಿರ್ವಹಿಸುತ್ತಿರುವ ರತನ್‌ ರಾಜ್‌ಪೂತ್‌ ಈ ಸೀರಿಯಲ್ ನಲ್ಲಿ ಸಮಾಜದ ವಿಷಯಗಳಿಗೆ ಹೆಚ್ಚು ಮಹತ್ವ ಕೊಡಲಾಗಿದೆ ಎಂದು ಹೇಳಿದರು.

ಟಿ.ವಿ. ಕಾರ್ಯಕ್ರಮಗಳ ಬಗ್ಗೆ ಬರೆಯುವ ರಜನೀಶ್‌ ರಾಜ್‌ ಹೀಗೆ ಹೇಳುತ್ತಾರೆ, “ಹೊಸ ಪೀಳಿಗೆ ಧರ್ಮದ ಕಂದಾಚಾರಗಳನ್ನು ಸ್ವೀಕರಿಸುತ್ತಿಲ್ಲ. ಹೀಗಿರುವಾಗ ಈ ಕಥೆಗಳನ್ನು ಸಾಮಾಜಿಕತೆಯ ಪಾಕದಲ್ಲಿ ಹಾಕಿ ಪ್ರಸ್ತುತಪಡಿಸಲಾಗುತ್ತಿದೆ. ಯುವಕರಿಗೆ ಸುಲಭವಾಗಿ ಅರ್ಥ ಆಗುವಂತೆ ತೋರಿಸಲಾಗುತ್ತದೆ. ಧಾರ್ಮಿಕ ಸೀರಿಯಲ್ ಗಳನ್ನು ಸಣ್ಣ ಪರದೆಯಲ್ಲಿ ಪ್ರಸ್ತುತಪಡಿಸುವ ಹೊಸ ಶೈಲಿ ಇದು. ಈ ಕಥೆಗಳನ್ನು ಇಂದಿನ ಸಮಸ್ಯೆಗಳು ಹಾಗೂ ರೀತಿನೀತಿಗಳನ್ನು ಎದುರಿಗಿಟ್ಟು ಪ್ರಸ್ತುತಪಡಿಸಲಾಗುತ್ತಿದೆ.

ಧಾರ್ಮಿಕ ಸೀರಿಯಲ್ ಗಳ ಕಥಾವಸ್ತುಗಳ ಮೂಲಕ, ಇನ್ನೂ ಕಂದಾಚಾರಿಗಳು ಪೂಜೆ, ಪುನಸ್ಕಾರ, ಸೌಭಾಗ್ಯಗಳಿಗೆ ಮಹತ್ವ ಕೊಡುತ್ತಿದ್ದಾರೆ. ಋಷಿಗಳು ಶಾಪ ಕೊಟ್ಟಾಗ ಬಹಳಷ್ಟು ಕೆಡುಕಾಗುತ್ತಿತ್ತು. ದೇವತೆಗಳನ್ನು  ಖುಷಿಯಾಗಿಡಲು ವ್ರತ ಆಚರಿಸಬೇಕು. `ಸಂತೋಷೀಮಾ’ ಸೀರಿಯಲ್ ನಲ್ಲಿ ಒಂದುಕಡೆ ಸಂತೋಷಿಯ ಪಾತ್ರವಿದೆ. ಇನ್ನೊಂದು ಕಡೆ ದ್ವೇಷದ ದೇವಿ ಪೋಮಿಯ ಪಾತ್ರವನ್ನು ತೋರಿಸಲಾಗುತ್ತದೆ. ಹೀಗಿರುವಾಗ ಧರ್ಮದ ಕಂದಾಚಾರಕ್ಕೆ ಮಹತ್ವ ಕೊಡಲು ಧಾರ್ಮಿಕ ಭಯವಿರುವ ಜನರ ಹೃದಯದಲ್ಲಿ ಕೂಡಿಸಲಾಗುತ್ತಿದೆ. ತೋರಿಕೆಗಾಗಿ ಧಾರ್ಮಿಕ ಸೀರಿಯಲ್ ಗಳು ಸಾಮಾಜಿಕತೆ ಮತ್ತು ಹೊಸತನದ ಬಗ್ಗೆ ಹೇಳುತ್ತವೆ. ಧರ್ಮದ ಕಂದಾಚಾರಗಳನ್ನು ಸಂಪೂರ್ಣವಾಗಿ ತ್ಯಾಗ ಮಾಡಿದಾಗಲೇ ಸೀರಿಯಲ್ ಗಳು ಸಾಮಾಜಿಕತೆಯ ಬಗ್ಗೆ ಹೇಳಬಹುದು.

ಹೊಸ ಶೈಲಿಯ ಆಡಂಬರ ಧಾರ್ಮಿಕ ಸೀರಿಯಲ್ ಗಳಲ್ಲಿ ಹಿಂದೆ ಬಹಳಷ್ಟು ಕಠಿಣ ಭಾಷೆಯನ್ನು ಪ್ರಯೋಗಿಸಲಾಗುತ್ತಿತ್ತು. ಈಗ ಧಾರ್ಮಿಕ ಸೀರಿಯಲ್ ಗಳಲ್ಲಿ ಸರಳವಾದ ಭಾಷೆ ಬಳಸಲು ಶುರುಮಾಡಿದೆ. ಸಂಭಾಷಣೆ ಬರೆಯುವವರು ಈಗ ಭಾಷೆಯನ್ನು ಸರಳರೂಪದಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ. ಹಿಂದಿನಂತೆ ಕಠಿಣ ಶಬ್ದಗಳನ್ನು ಬಳಸುತ್ತಿಲ್ಲ. ಭಾಷೆ ಬರದೇ ಇರುವ ಕಲಾವಿದರಿಂದ ಇಂತಹ ಸರಳ ಭಾಷೆಯ ಪದಗಳನ್ನು ಕೇಳಿ ಪ್ರೇಕ್ಷಕರಿಗೆ ಒಂದು ಬೇರೆಯೇ ಆದ ಅನುಭೂತಿ ಸಿಗುತ್ತಿದೆ.

ಸುನಯನಾ ಪಾತ್ರಧಾರಿ ಭಾರ್ಗವಿ ಹೀಗೆ ಹೇಳುತ್ತಾರೆ, “ಶುದ್ಧ ಭಾಷೆ  ಶಬ್ದಗಳ ಪ್ರಯೋಗ ಹಿಂದಿನಂತೆ ಕಠಿಣವಾಗಿಲ್ಲ. ನಮ್ಮಂತಹ ಕಲಾವಿದರಿಗೂ ಇಂತಹ ಡೈಲಾಗ್‌ ಹೇಳುವಾಗ ಒಳ್ಳೆಯ ಅನುಭವವಾಯಿತು. ಇಷ್ಟು ಸರಳ ರೀತಿಯಲ್ಲಿರುವ ಡೈಲಾಗ್‌ ಹೇಳುವಾಗಷ್ಟೇ ಅಲ್ಲ, ಅದನ್ನು ಕೇಳಲೂ ಬಹಳ ಚೆನ್ನಾಗಿರುತ್ತದೆ.”ಧಾರ್ಮಿಕ ಸೀರಿಯಲ್ ಗಳು ತಮ್ಮ ಶೈಲಿ ಮತ್ತು ಹೊಸ ಬಣ್ಣದಲ್ಲಿ ಧಾರ್ಮಿಕ ಕಂದಾಚಾರಗಳನ್ನು ಬಿಡುತ್ತಿರುವುದು ಕಂಡುಬರುತ್ತಿದೆ. ಆದರೆ ಅವು ಇನ್ನೂ ಧರ್ಮದ ಆಡಂಬರದಲ್ಲಿ ಪ್ರಶ್ನೆ ಹಾಕಲು ಹಿಂದೇಟು ಹಾಕುತ್ತಿವೆ. ಎಲ್ಲಿಯವರೆಗೆ ಧಾರ್ಮಿಕ ಕಥೆಗಳಲ್ಲಿ ತೋರಿಸುತ್ತಿರುವ ಮಹಿಳೆ ಹಾಗೂ ಉಪೇಕ್ಷಿತ ಸಮಾಜದ ಸತ್ಯ ಸ್ವೀಕರಿಸಲಾಗುದಿಲ್ಲವೋ. ಈ ಕಥೆಗಳಿಗೆ ಸಮಾಜದ ವಿಷಯ ಹೇಳುವುದು ಒಪ್ಪುವುದಿಲ್ಲ. ಧಾರ್ಮಿಕ ಸೀರಿಯಲ್ ಗಳ ಹೊಸ ಶೈಲಿ ಬರೀ ಹೇಳುವುದರಿಂದ ಸಮಾಜಕ್ಕೆ ಒಳ್ಳೆಯದಾಗುವುದಿಲ್ಲ. ಅಗತ್ಯವಾದ ವಿಷಯವೇನೆಂದರೆ ಈ ಕಥೆಗಳ ಮೂಲಕ ಧರ್ಮದ ಕಂದಾಚಾರಗಳು ಮತ್ತು ಆಡಂಬರಕ್ಕೆ ಸವಾಲು ಹಾಕಬೇಕು. ಅದರಿಂದ ಸಮಾಜಕ್ಕೆ ಸತ್ಯದ ಅನುಭವವಾಗಬೇಕು. ಇಲ್ಲದಿದ್ದರೆ ಇಂತಹ ಬದಲಾವಣೆಗಳನ್ನು ಸಾರ್ಥಕವೆಂದು ಹೇಳಲಾಗುವುದಿಲ್ಲ.

– ಕೆ. ಸುಮಲತಾ

ಆರೋಗ್ಯಕರ ಮೂಳೆಗಾಗಿ ಇವನ್ನು ಸೇವಿಸಿ

ಸದೃಢವಾದ ಮೂಳೆಗಳಿಗೆ ಅಗತ್ಯವಾದ ಅಂಶಗಳು ಆಹಾರದಲ್ಲಿ ಸಿಗುತ್ತಿವೆ ಎಂಬುದನ್ನು ತಿಳಿಯೋಣ ಬನ್ನಿ…..

ಕ್ಯಾಲ್ಶಿಯಂ : ಶರೀರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸಿಗುವ ಅಂಶ ಕ್ಯಾಲ್ಶಿಯಂ. ಶರೀರದ ಶೇ.99ರಷ್ಟು ಕ್ಯಾಲ್ಶಿಯಂ ಮೂಳೆಗಳಲ್ಲಿ ಸಂಗ್ರಹವಾಗಿ ಇರುತ್ತದೆ. ಆದರೆ ಶರೀರದ ವಿಭಿನ್ನ ಕ್ರಿಯೆಗಳಲ್ಲಿ ಕೇವಲ ಶೇ.1ರಷ್ಟು ಮಾತ್ರ ಇದನ್ನು ಉಪಯೋಗಿಸಲಾಗುತ್ತದೆ. ಒಬ್ಬ ಸಾಧಾರಣ ವ್ಯಕ್ತಿಗೆ ದಿನಕ್ಕೆ 1000 ದಿಂದ 1200 ಮಿ.ಗ್ರಾಂ ಕ್ಯಾಲ್ಶಿಯಂ ಅಗತ್ಯ ಇದೆ. ಹಸಿರು ಎಲೆಗಳ ತರಕಾರಿಗಳು ಕ್ಯಾಲ್ಶಿಯಂನ ಒಳ್ಳೆಯ ಸ್ರೋತವಾಗಿದೆ. ಇದಲ್ಲದೆ, ಮೀನು, ಕಾಳುಗಳು, ಬಾಳೆಹಣ್ಣು, ಬ್ರೆಡ್‌, ಪಾಸ್ತಾ, ಸೋಯಾಹಾಲು, ಟೋಫು ಮತ್ತು ಬಾದಾಮಿ ಕ್ಯಾಲ್ಶಿಯಂನ ಉತ್ತಮ ಸ್ರೋತವಾಗಿದೆ. ಕಡಿಮೆ ಕೊಬ್ಬು ಇರುವ ಡೇರಿ ಪ್ರಾಡಕ್ಟ್ ಗಳಲ್ಲಿ ಕೊಬ್ಬು ಇರುವ ಡೇರಿ ಪ್ರಾಡಕ್ಟ್ ಗಳಿಗೆ ಹೋಲಿಸಿದರೆ ಹೆಚ್ಚು ಕ್ಯಾಲ್ಶಿಯಂ ಇರುತ್ತದೆ.

ವಿಟಮಿನ್‌ ಡಿ : ವಿಟಮಿನ್‌ `ಡಿ’ ಕೊರತೆಯಿಂದ ಮೂಳೆಗಳು ಬಲಹೀನ ಹಾಗೂ ಮೃದುವಾಗುತ್ತವೆ. ಸೂರ್ಯನ ಬೆಳಕು ವಿಟಮಿನ್‌ `ಡಿ’ಯ ಒಳ್ಳೆಯ ಸ್ರೋತವಾಗಿದೆ. ಅದಲ್ಲದೆ, ಹಾಲು, ಮೊಟ್ಟೆ, ಚಿಕನ್‌, ಮೀನು ಇತ್ಯಾದಿ ಕೂಡ ವಿಟಮಿನ್‌ `ಡಿ’ಯ ಉತ್ತಮ ಸ್ರೋತವಾಗಿದೆ.

ಪೊಟ್ಯಾಶಿಯಂ : ಪೊಟ್ಯಾಶಿಯಂನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವವರ ಮೂಳೆಗಳ ಆರೋಗ್ಯ ಉತ್ತಮವಾಗಿರುತ್ತದೆ. ಗೆಣಸು, ಸಿಪ್ಪೆ ಸಹಿತ ಆಲೂಗಡ್ಡೆ, ಮೊಸರು ಮತ್ತು ಬಾಳೆಹಣ್ಣು ಪೊಟ್ಯಾಶಿಯಂನ ಉತ್ತಮ ಸ್ರೋತವಾಗಿದೆ.

ಮೆಗ್ನೀಶಿಯಂ : ಪಾಲಕ್‌, ಬೀಟ್‌ರೂಟ್‌, ಟೊಮೇಟೊ, ಆಲೂಗಡ್ಡೆ, ಗೆಣಸು, ಒಣದ್ರಾಕ್ಷಿ ಇತ್ಯಾದಿ ಸೇವಿಸಿ. ಏಕೆಂದರೆ ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೀಶಿಯಂ ಸಿಗುತ್ತದೆ. ಅದು ಮೂಳೆಗಳನ್ನು ಸದೃಢಗೊಳಿಸುತ್ತದೆ.

ಪ್ರೋಟೀನ್‌ : ಪ್ರೋಟೀನ್‌ ಶರೀರದ ರಚನೆ ಮಾಡುವುದರಲ್ಲಿ ಅತ್ಯಂತ ಮಹತ್ವಪೂರ್ಣವಾಗಿದೆ. ಅದು ಮೂಳೆಗಳನ್ನು ಗಟ್ಟಿಯಾಗಿಡುತ್ತದೆ. ಪ್ರೋಟೀನ್‌ ಮೂಳೆಗಳಿಗಷ್ಟೇ ಅಲ್ಲ, ಊತಕಗಳು ಮತ್ತು ಲಿಗಮೆಂಟ್ಸ್ ಗೆ ಕೂಡ ಬಹಳ ಅಗತ್ಯ. ಮೆನೋಪಾಸ್‌ ನಂತರ ಯಾವ ಮಹಿಳೆಯ ಆಹಾರದಲ್ಲಿ ಪ್ರೋಟೀನ್‌ನ ಪ್ರಮಾಣ ಕಡಿಮೆ ಇರುತ್ತದೋ ಅವರಲ್ಲಿ ಆಸ್ಟೋಪೊರೋಸಿಸ್‌ನ ಅಪಾಯ ಶೇ.30 ರಷ್ಟು ಹೆಚ್ಚುತ್ತದೆ.

ವಿಟಮಿನ್‌ ಸಿ ಮತ್ತು ಕೆ : ಮೂಳೆಗಳನ್ನು ಆರೋಗ್ಯವಾಗಿಡಲು ವಿಟಮಿನ್‌ `ಸಿ’ ಮತ್ತು `ಕೆ’ ಬಹಳ ಅಗತ್ಯವಿದೆ. ಕೆಂಪು ಮೆಣಸಿನಕಾಯಿ, ಹಸಿರುಮೆಣಸಿನ ಕಾಯಿ, ಕಿತ್ತಳೆಹಣ್ಣು, ದ್ರಾಕ್ಷಿ, ಬ್ರೋಕ್ಲಿ, ಸ್ಟ್ರಾಬೆರಿ, ಮೊಳಕೆ ಬಂದ ಕಾಳುಗಳು, ಪರಂಗಿಹಣ್ಣು ಮತ್ತು ಪೈನಾಪಲ್ ವಿಟಮಿನ್‌ `ಸಿ’ನ ಒಳ್ಳೆಯ ಸ್ರೋತವಾಗಿವೆ. ಮೂಲಂಗಿ, ಪಾಲಕ್‌, ಸಾಸಿವೆ ಮತ್ತು ಮೆಂತ್ಯ ಇತ್ಯಾದಿಗಳಲ್ಲೂ ವಿಟಮಿನ್‌ `ಸಿ’ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.

– ಜಿ. ಪವಿತ್ರಾ

Tags:
COMMENT