ಡಿಂಪಲ್ ಯಾದವ್ ಉತ್ತರಾಖಂಡ ರಾಜ್ಯದ ನಿವಾಸಿ. ಅವರ ಪಾಲನೆ ಪೋಷಣೆ ನಡೆದದ್ದೆಲ್ಲ ಲಖ್ನೌನಲ್ಲೇ. ಅವರ ತಾಯಿ ಚಂಪಾ ರಾವತ್‌ ಅಪ್ಪಟ ಗೃಹಿಣಿ ಹಾಗೂ ತಂದೆ ಆರ್‌.ಸಿ. ರಾವತ್‌ ಆರ್ಮಿಯಲ್ಲಿ ಕರ್ನಲ್ ಆಗಿದ್ದರು. ಮಹಾರಾಷ್ಟ್ರದ ಪುಣೆಯಲ್ಲಿ ಹುಟ್ಟಿದ ಡಿಂಪಲ್ ಕಟ್ಟುನಿಟ್ಟಾದ ಮಿಲ್ಟ್ರಿ ಗರಡಿಯಲ್ಲಿ ಬೆಳೆದವರು. ಆಕೆಯ ಆರಂಭದ ಕಲಿಕೆ ಆರ್ಮಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಆಯಿತು. ನಂತರ ಆಕೆ ಲಖ್ನೌನ ವಿ.ವಿ.ಯಲ್ಲಿ ಬಿ.ಕಾಂ. ಪದವಿ ಪಡೆದರು. ಅಲ್ಲಿಯೇ ಅವರು ಅಖಿಲೇಶ್‌ ಯಾದವ್‌ರನ್ನು ಭೇಟಿಯಾದದ್ದು. ಇಬ್ಬರ ಸ್ನೇಹ ಪ್ರೇಮದಲ್ಲಿ ಬದಲಾಗಿ 1999ರಲ್ಲಿ ಮದುವೆಯಲ್ಲಿ ಮುಗಿಯಿತು. ಇವರಿಗೆ ಮೂರು ಮಕ್ಕಳು ಅದಿತಿ, ಟೀನಾ ಹಾಗೂ ಅರ್ಜುನ್.

ರಾಜಕೀಯದ ಕೆರಿಯರ್ ಆರಂಭ

ಡಿಂಪಲ್ ಯಾದವ್ 2009ರಲ್ಲಿ ತಮ್ಮ ರಾಜಕೀಯದ ಕೆರಿಯರ್‌ನ್ನು ಆರಂಭಿಸಿದಾಗ, ಅದಾಗಲೇ ವೈವಾಹಿಕ ಜೀವನದ 10 ವಸಂತಗಳನ್ನು ದಾಟಿದ್ದರು. ಫಿರೋಜಾಬಾದ್‌ ಲೋಕಸಭೆಯ ಸೀಟ್‌ನ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಜ್‌ ಬಬ್ಬರ್‌ಹಾಗೂ ಡಿಂಪಲ್ ಯಾದವ್‌ರ ಪೈಪೋಟಿ ಬಲು ಜೋರಾಗಿತ್ತು. ರಾಜ್‌ ಬಬ್ಬರ್‌ ಜನಪ್ರಿಯ ಹಿಂದಿ ನಟ, ಜನರ ನಡುವೆ ಒಳ್ಳೆಯ ಕಾಂಟ್ಯಾಕ್ಟ್ ಇತ್ತು. ಆ ಆಕರ್ಷಣೆಯ ಕಾರಣ ಆತ ಗೆದ್ದಾಗ, ಡಿಂಪಲ್ ತಮ್ಮ ಮೊದಲ ಸೋಲನ್ನು ಅನುಭವಿಸಬೇಕಾಯ್ತು.

ಅಖಿಲೇಶ್‌ ಯಾದವ್ ರಾಜೀನಾಮೆ ನೀಡಿದ್ದರಿಂದ ಫಿರೋಜಾಬಾದ್‌ ಸಂಸದೀಯ ಸೀಟು ಖಾಲಿ ಆಗಿತ್ತು. ಅಖಿಲೇಶ್‌, ಫಿರೋಜಾಬಾದ್‌ ಮತ್ತು ಕನೌಜ್‌ನ 2 ಸಂಸದೀಯ ಸೀಟುಗಳಿಂದ ಲೋಕಸಭೆಯ ಚುನಾಣೆಯಲ್ಲಿ ಜಯ ಗಳಿಸಿದ್ದರು. ಕನೌಜ್‌ಸೀಟ್‌ನ್ನು ತಮ್ಮದಾಗಿರಿಸಿಕೊಂಡ ಅಖಿಲೇಶ್‌, ಫಿರೋಜಾಬಾದ್‌ಸೀಟನ್ನು ಬಿಟ್ಟುಕೊಟ್ಟರು. ಈ ಕಾರಣ ಉಪಚುನಾವಣೆ ನಡೆಯಿತು, ಅದರಲ್ಲಿ ಡಿಂಪಲ್ ಸೋತರು. ಆದರೆ ಈ ಸೋಲು ಅವರ ಉತ್ಸಾಹ ತಗ್ಗಿಸಲಿಲ್ಲ. ಅವರು ಜನತೆಯ ಮಧ್ಯೆ ಎಂದಿನಂತೆ ಸಕ್ರಿಯರಾಗಿ ಇರತೊಡಗಿದರು.

2012ರಲ್ಲಿ ಉ.ಪ್ರ.ದ ವಿಧಾನಸಭೆಯ ಚುನಾವಣೆ ನಡೆದಾಗ, ಸಮಾಜವಾದಿ ಪಾರ್ಟಿ ಬಹುಮತದಿಂದ ಸರ್ಕಾರ ರಚಿಸಿತು, ಅಖಿಲೇಶ್‌ ಯಾದವ್ ಆ ರಾಜ್ಯದ ಮುಖ್ಯಮಂತ್ರಿ ಆದರು. ಸಿ.ಎಂ. ಆದಮೇಲೆ ಅಖಿಲೇಶ್‌, ಕನೌಜ್‌ ಲೋಕಸಭೆಯ ಸೀಟ್‌ಗೆ ರಾಜೀನಾಮೆ ಕೊಡಬೇಕಾಯಿತು. ಆ ಕಾರಣ ಕನೌಜ್‌ ಲೋಕಸಭೆಯ ಸೀಟ್‌ಗಾಗಿ ಡಿಂಪಲ್ ಯಾದವ್ ಚುನಾವಣೆಯಲ್ಲಿ ಸ್ಪರ್ಧಿಸಿದರು.

ಡಿಂಪಲ್ ದೇಶದಲ್ಲೇ 44ನೇ ಅವಿರೋಧ ಸಂಸದೆಯಾಗಿ ಆರಿಸಲ್ಪಟ್ಟರು. ಉ.ಪ್ರ.ದಲ್ಲಂತೂ ಆಕೆ ಪ್ರಪ್ರಥಮ ಅವಿರೋಧ ಸಂಸದೆಯಾಗಿ ಆರಿಸಲ್ಪಟ್ಟಿದ್ದರು. 2014ರ ಲೋಕಸಭೆಯ ಚುನಾಣೆಯನ್ನೂ ಡಿಂಪಲ್ ಕನೌಜ್‌ನಿಂದಲೇ ಸ್ಪರ್ಧಿಸಿ ವಿಜೇತರಾದರು. ಫಿರೋಜಾಬಾದ್‌ ಚುನಾವಣೆಯ ಸೋಲಿನಿಂದ ಎಂದೂ ಆಕೆ ಉತ್ಸಾಹ ಕಳೆದುಕೊಂಡಿರಲಿಲ್ಲ. ಅದರಲ್ಲೂ ಮೊದಲ ಚುನಾವಣೆಯ ಸೋಲು ಎಂಥವರನ್ನೂ ನಡುಗಿಸಿಬಿಡುತ್ತದೆ, ಆದರೆ ಡಿಂಪಲ್ ಮಾತ್ರ ಈ ಮೊದಲ ಸೋಲನ್ನು ತಮ್ಮ ಮುಂದಿನ ಗೆಲುವಿನ ಸೋಪಾನವಾಗಿ ಮಾಡಿಕೊಂಡರು.

ಶಿಸ್ತಿನ ಮಹತ್ವ ರಾಜಕೀಯ ಪರಿವಾರದ ಸೊಸೆ, 3 ಮಕ್ಕಳ ತಾಯಿ, ಮುಖ್ಯಮಂತ್ರಿಯ ಪತ್ನಿ, ಯಶಸ್ವೀ ರಾಜಕಾರಣಿ ಇತ್ಯಾದಿ ವಿಭಿನ್ನ ಪಾತ್ರಗಳನ್ನು ಏಕೀಕರಿಸಿ, ಡಿಂಪಲ್ ತಮ್ಮ ವ್ಯಕ್ತಿತ್ವ ನಿಭಾಯಿಸುತ್ತಾರೆ. ಹಾಗಿರುವಾಗ ಕಟ್ಟುನಿಟ್ಟಾದ ಶಿಸ್ತುಬದ್ಧ ಜೀವನಕ್ರಮ ಮಾತ್ರ ಅವರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಸಹಾಯ ಮಾಡಬಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ