ಫ್ಯಾಷನ್‌ ಲೋಕದಲ್ಲಿ ಫ್ರೆಶ್‌ ಮತ್ತು ಪ್ರತಿಭಾಶಾಲಿ ಡಿಸೈನರ್‌ ಬಗ್ಗೆ ಮಾತಾಡುವಾಗ ನಿಶ್ಕಾ ಲುಲ್ಲಾರ ಹೆಸರು ಮೊದಲು ಬರುತ್ತದೆ. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಅವರು ಫ್ಯಾಷನ್‌ ಲೋಕಕ್ಕೆ ಕಾಲಿಟ್ಟರು. ನಮ್ರ ಸ್ವಭಾವದ ನಿಶ್ಕಾರಿಗೆ ಚಿಕ್ಕಂದಿನಿಂದಲೇ ಡಿಸೈನರ್‌ ಆಗುವ ಇಚ್ಚೆ ಇತ್ತು. ಶಾಲೆ ಮುಗಿಸಿದ ನಂತರ ಅವರು ಎಸ್‌ಎನ್‌ಡಿಟಿ ಕಾಲೇಜ್‌ನಿಂದ ಫ್ಯಾಷನ್‌ನಲ್ಲಿ ಡಿಗ್ರಿ ಪಡೆದರು.

ಡಿಸೈನರ್‌ ಆಗುವುದು ನನಗೆ ತಿಳಿಯದೇ ಬಂದ ಇಚ್ಛೆಯಾಗಿತ್ತು ಎನ್ನುವ ನಿಶ್ಕಾ, ``ಶಾಲೆ ಮುಗಿಸಿದ ನಂತರ ನನಗೆ ಡಿಸೈನರ್‌ಆಗಬೇಕೆನಿಸಿತು. ನಾನು ಅದೇ ದಿಕ್ಕಿನಲ್ಲಿ ಕೆಲಸ ಮಾಡತೊಡಗಿದೆ. ನನ್ನ ಅಮ್ಮನೇ ನನಗೆ ಪ್ರೇರಣೆ. ಫ್ಯಾಷನ್‌ ಡಿಸೈನಿಂಗ್ ಕೋರ್ಸ್‌ ಮುಗಿಸಿದ ನಂತರ ಅವರೊಂದಿಗೆ ಸಾಕಷ್ಟು ದಿನಗಳು ಕೆಲಸ ಮಾಡಿದೆ. ನಮ್ಮಿಬ್ಬರ ಸಂಬಂಧ ಸ್ನೇಹಿತರಂತೆ ಇದೆ. ಯಾವ ರೀತಿ ಪ್ರೊಫೆಶನಲ್ ಆ್ಯಟಿಟ್ಯೂಡ್‌ ಇಟ್ಟುಕೊಳ್ಳಬೇಕೆಂದು ಅವರು ನನಗೆ ಹೇಳಿದರು. ಅವರ ಪರಿಶ್ರಮ ಮತ್ತು ಏಕಾಗ್ರತೆಯಿಂದ ನಾನು ಪ್ರಭಾವಿತಳಾಗಿದ್ದೇನೆ,'' ಎನ್ನುತ್ತಾರೆ.

ತಮ್ಮದೇ ಐಡೆಂಟಿಟಿ ಮೂಡಿಸಿದರು

ನಿಶ್ಕಾ ತಮ್ಮ ಕ್ರಿಯೇಟಿವಿಟಿಯಿಂದ ಫ್ಯಾಷನ್‌ ಲೋಕದಲ್ಲಿ ತಮ್ಮದೇ ವಿಭಿನ್ನ ಐಡೆಂಟಿಟಿ ರೂಪಿಸಿಕೊಂಡರು. ಅವರ ಡ್ರೆಸ್‌ಗಳು ಹೆಚ್ಚಾಗಿ ಸಾಫ್ಟ್ ಮತ್ತು ಇಂಡೋವೆಸ್ಟರ್ನ್‌ ಲುಕ್‌ನ್ನು ಆಧರಿಸುತ್ತದೆ. ಅವರು ಯಂಗ್‌ ಆಗಿರುವುದರಿಂದ ಯುವತಿಯರ ಚಾಯ್ಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ, ``ನಮ್ಮ ಸ್ಟೈಲ್‌ಗೆ ಬೇರೆಯದೇ ಆದ ಐಡೆಂಟಿಟಿ ಪಡೆಯುವುದು ಸುಲಭವಲ್ಲ. ನನ್ನ ಅಮ್ಮನೂ ಈ ಕ್ಷೇತ್ರದಲ್ಲೇ ಇದ್ದಾರೆ. ಅವರ ಐಡೆಂಟಿಟಿಯೇ ಬೇರೆ. ನಾನೂ ಸಹ ನನ್ನದೇ ಆದ ಐಡೆಂಟಿಟಿ ಮಾಡಿಕೊಳ್ಳಬೇಕಿತ್ತು. ಅಮ್ಮ ಈ ಕ್ಷೇತ್ರದಲ್ಲಿ ಇರುವುದರಿಂದ ಜನ ನನ್ನಿಂದ ಹೆಚ್ಚು ನಿರೀಕ್ಷೆ ಮಾಡುತ್ತಾರೆ. ಆದ್ದರಿಂದ ನಾನು ಯುವ ಜನರ ಆಲೋಚನೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ,'' ಎಂದು ಅವರು ಹೇಳುತ್ತಾರೆ.

``ನನ್ನ ಡಿಸೈನಿಂಗ್‌ ನನ್ನ ಮೂಡ್‌ನ್ನು ಅಲಂಬಿಸುತ್ತದೆ. ನನಗೆ ಬೇರೆ ಬೇರೆ ಸ್ಥಳಗಳಲ್ಲಿ ಸುತ್ತಾಡಿ ಅಲ್ಲಿನ ಸಂಸ್ಕೃತಿ ಅಭ್ಯಾಸ ಮಾಡಿದಾಗ ಐಡಿಯಾಗಳು ಸಿಗುತ್ತವೆ. ನಾನು ಮೊದಲು ನನ್ನ ಐಡೆಂಟಿಟಿಯನ್ನು ಲ್ಯಾಕ್ಮೆ ಫ್ಯಾಷನ್‌ ವೀಕ್‌ನ `50 ಇಯರ್ಸ್‌ ಆಫ್‌ ಬಾರ್ಬಿಯಿಂದ ಮಾಡಿಕೊಂಡೆ. ಅದನ್ನು ಎಲ್ಲರೂ ಪ್ರಶಂಸಿಸಿದರು. ಅದರಲ್ಲಿ ಲೈಟ್‌ ಮತ್ತು ಸ್ಮೂಥ್‌ ಕಲರ್‌ಹೆಚ್ಚಾಗಿದೆ.''

ಸಮ್ಮರ್‌ ಸೀಸನ್‌ನಲ್ಲಿ ಲಾಂಚ್‌ ಆದ ತಮ್ಮ ಹೊಸ ಕಲೆಕ್ಷನ್ಸ್ ಬಗ್ಗೆ ನಿಶ್ಕಾ ಹೀಗೆ ಹೇಳುತ್ತಾರೆ, ``ಈ ಸೀಸನ್‌ನಲ್ಲಿ ನಾನು ರೆಡಿ ಟು ವೇರ್‌ ಉಡುಪುಗಳನ್ನು ಹೊರತರಲು ಬಯಸುತ್ತೇನೆ. ಅವು ನನ್ನ ಅನುಭದ ಆಧಾರದಲ್ಲಿ ಸಂಪೂರ್ಣ ಇಂಡಿಯನ್‌ ಫ್ಯಾಬ್ರಿಕ್ ಮತ್ತು ಮೋಟಿಫ್‌ನ್ನು ಆಧರಿಸಿರುತ್ತವೆ. ನಾನು ಪ್ರಿಂಟ್‌ಗಲ್ಲ, ಸ್ಟೈಲ್‌ಗೆ ಹೆಚ್ಚು ಒತ್ತು ಕೊಡುತ್ತೇನೆ. ಈ ಬೇಸಿಗೆಯಲ್ಲಿ ಶಾರ್ಟ್‌ ಡ್ರೆಸ್‌ಗಳು ಮತ್ತು ರಿಲ್ಯಾಕ್ಸ್ ಕೊಡುವಂತಹ ಬಟ್ಟೆಗಳು ಹೆಚ್ಚಾಗಿ ಕಂಡುಬರುತ್ತವೆ. ಏಕೆಂದರೆ ಇಂದಿನ ಯುವಜನರು ಈ ಬಟ್ಟೆಗಳನ್ನೇ ಸಹಜತೆಯಿಂದ ಧರಿಸುತ್ತಾರೆ.''

ನಿಶ್ಕಾರ ಫ್ಯಾಷನ್ಟ್ರೆಂಡ್

ಬೇಸಿಗೆಯಲ್ಲಿ ತಮ್ಮ ಉಡುಪುಗಳ ಬಗ್ಗೆ ಹೆಚ್ಚು ಗಮನಕೊಡುವ ಅಗತ್ಯವಿದೆಯೆಂದು ನಿಶ್ಕಾ ಹೇಳುತ್ತಾರೆ. ಈ ಹವಾಮಾನದಲ್ಲಿ ಹೆಚ್ಚು ರಾಶಸ್‌ ಆಗುತ್ತದೆ. ಆದ್ದರಿಂದ ಮಸ್ಲಿನ್‌, ಜಾರ್ಜೆಟ್‌, ಕ್ರೇಪ್‌ ಕಾಟನ್‌ ಇತ್ಯಾದಿ ಉಡುಪುಗಳು ಹೆಚ್ಚು ಧರಿಸಲಾಗುತ್ತದೆ. ಇವುಗಳ ಮೇಲೆ ಕ್ರೋಶಾದಿಂದ ತಯಾರಿಸಿದ ಫೆಮಿನೈನ್‌ ಲುಕ್‌ ಕೊಡುತ್ತದೆ. ಈ ವರ್ಷ ಬಿಳಿಯ ಹೊರತಾಗಿ ಇಂಡಿಗೋ ಬ್ಲ್ಯೂ, ಲೈಟ್‌ ಪಿಂಕ್‌, ಲ್ಯಾವೆಂಡರ್‌, ಯೆಲ್ಲೋ ಇತ್ಯಾದಿ ಬಣ್ಣಗಳು ಹೆಚ್ಚಾಗಿ ಇರುತ್ತವೆ. ಪ್ಯಾಂಟ್‌ ಮತ್ತು ಟೀ ಶರ್ಟ್‌ ಅಲ್ಲದೆ ಈ ಸೀಸನ್‌ನಲ್ಲಿ ಶಾರ್ಟ್‌ ಡ್ರೆಸ್‌ಗಳು ಬೇರೆ ಬೇರೆ ರೀತಿಯಲ್ಲಿ ಮಿಕ್ಸ್ ಅಂಡ್‌ ಮ್ಯಾಚ್‌ ಮಾಡಿ ಧರಿಸಬಹುದು. ಎಲ್ಲ ಹುಡುಗಿಯರ ವಾರ್ಡ್‌ರೋಬ್‌ನಲ್ಲಿ ಈ ಸೀಸನ್‌ನಲ್ಲಿ ಶಾರ್ಟ್‌ ಡ್ರೆರ್ಸ್‌ಗಳು ಇರಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ