ಬಂಜಾರಾ ಸ್ಕೂಲ್ ಆಫ್‌ ಡ್ಯಾನ್ಸ್, ನಂ.2, ಥರ್ಡ್‌ ಫ್ಲೋರ್‌, ಹೌಸ್‌ ಖಾಸ್‌ ವಿಲೇಜ್‌ ಮಾರ್ಕೆಟ್‌, ನವದೆಹಲಿ.

ಇದು ಬ್ಯಾಲೆ ಡ್ಯಾನ್ಸರ್‌ ಮೆಹರ್‌ ಮಲಿಕ್‌ ಅವರ ನೃತ್ಯ ಕಾರ್ಯಸ್ಥಳ. ಇಲ್ಲಿ ಮುಂಜಾನೆಯಿಂದ ಸಂಜೆ ತನಕ ನೂರಾರು ವಿದ್ಯಾರ್ಥಿಗಳಿಗೆ ಬ್ಯಾಲೆ ನೃತ್ಯ ಕಲಿಸಿದರೂ ಅವರಲ್ಲಿ ಎಳ್ಳಷ್ಟೂ ದಣಿವು ಕಾಣಿಸುವುದಿಲ್ಲ. ದಣಿವು ಬರುವುದಾದರೂ ಹೇಗೆ? ನೃತ್ಯ ಕಲಿಸುವುದು ಹಾಗೂ ನೃತ್ಯ ಮಾಡುವುದನ್ನು ನೋಡುವುದು ಅವರ ಪ್ಯಾಶನ್‌ ಆಗಿದೆ.

ಈ ಕುರಿತಂತೆ ಮೆಹರ್‌ ಹೀಗೆ ಹೇಳುತ್ತಾರೆ, ``ಜನರ ದೃಷ್ಟಿಯಲ್ಲಿ ಬ್ಯಾಲೆ ನೃತ್ಯ ಈಗಲೂ ಅಸಹಜ ನೃತ್ಯವಾಗಿದೆ. ಭಾರತದಲ್ಲಿ ಕೆಲವರು ಈ ರೀತಿಯ ನೃತ್ಯವನ್ನು ಕ್ಯಾಬರೆ ನೃತ್ಯದೊಂದಿಗೆ ಹೋಲಿಸಿ ನೋಡುತ್ತಾರೆ. ಆದರೆ ಈ ತೆರನಾದ ಯೋಚನೆ ಮಾಡುವವರ ಬಗ್ಗೆ ನನಗೆ ಅನುಕಂಪ ಉಂಟಾಗುತ್ತದೆ. ಏಕೆಂದರೆ ಅವರಿಗೆ ಈ ನೃತ್ಯದ ಕಲಾತ್ಮಕತೆ ಮತ್ತು ಸೃಜನಶೀಲತೆಯನ್ನು ಅರಿಯುವ ಶಕ್ತಿ ಇಲ್ಲ.''

ಮೆಹರ್‌ ತಮ್ಮ ಕ್ರಿಯೇಟಿವಿಟಿಯನ್ನು ಬೇರೆಯವರಿಗೆ ತಲುಪಿಸಲು ಮತ್ತು ಬ್ಯಾಲೆ ನೃತ್ಯದ ಬಗ್ಗೆ ಜನರ ಯೋಚನೆಯನ್ನು ಬದಲಿಸಲು ಸಾಕಷ್ಟು ಮಟ್ಟಿಗೆ ಯಶಸ್ವಿ ಕೂಡ ಆಗಿದ್ದಾರೆ. ಇದೇ ಕಾರಣದಿಂದ ಮೆಹರ್‌ ಪ್ರತಿವರ್ಷ 5000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬ್ಯಾಲೆ ಡ್ಯಾನ್ಸರ್‌ ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೇಗೆ ಶುರುವಾಯಿತು?

ಅರಬ್‌ ದೇಶದಲ್ಲಿ ಇದ್ದ ಕಾರಣದಿಂದ ಮೆಹರ್‌ ಅಲ್ಲಿನ ಭಾಷೆ, ಹಾವಭಾವ ಹಾಗೂ ನಡೆನುಡಿಯ ಬಗ್ಗೆ ಪ್ರಭಾವಿತರಾಗಿದ್ದರು. ಮಧ್ಯಪ್ರಾಚ್ಯ ದೇಶಗಳಲ್ಲಿ ಮಹಿಳೆಯರು ತಮ್ಮ ಖುಷಿ ಮತ್ತು ಮದುವೆಯ ಸಂಭ್ರಮವನ್ನು ಬ್ಯಾಲೆ ಡ್ಯಾನ್ಸ್ ಮೂಲಕ ತೋರಿಸುತ್ತಿದ್ದರು. ಓಮನ್‌ ದೇಶದಲ್ಲಿ ಮುಸ್ಲಿಂ ಸ್ತ್ರೀಯರು ಪುರುಷರ ಮುಂದೆ ಅಥವಾ ಅವರ ಜೊತೆ ಡ್ಯಾನ್ಸ್ ಮಾಡುವ ಅನುಮತಿ ಇರಲಿಲ್ಲ. ಹೀಗಾಗಿ ಅವರು ಪರಸ್ಪರರ ಎದುರು ಡ್ಯಾನ್ಸ್ ಮಾಡುತ್ತಿದ್ದರು. `ನಾನು ಅದನ್ನು ನೋಡಿ ಸ್ವಲ್ಪ ಸ್ವಲ್ಪ ಕಲಿತುಕೊಂಡೆ,' ಎನ್ನುತ್ತಾರೆ.

ಮೆಹರ್‌ಗೆ ನೃತ್ಯ ಪ್ರಕಾರವನ್ನು ಪ್ರೊಫೆಶನ್‌ ಆಗಿ ಕಲಿತುಕೊಳ್ಳುವ ಅವಕಾಶ ದೊರೆತದ್ದು ತಮ್ಮ ತಂದೆತಾಯಿಯರ ಜೊತೆ ಈಜಿಪ್ಟ್ ದೇಶಕ್ಕೆ ಕ್ರೂಜ್ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಹೋದಾಗ.

ಈ ಕುರಿತಂತೆ ಮೆಹರ್‌ ಹೀಗೆ ಹೇಳುತ್ತಾರೆ, ``ಹಿಂದಿ ಚಿತ್ರೋದ್ಯಮಕ್ಕೆ ಮುಂಬೈನ ಪ್ರಸ್ತಾಪ ಹೇಗೆ ಮಾಡುತ್ತಾರೊ, ಹಾಗೆಯೇ ಅರಬ್‌ ಜಗತ್ತಿನಲ್ಲಿ ಈಜಿಪ್ಟ್ ಪಡೆದುಕೊಂಡಿದೆ. ಅಲ್ಲಿಗೆ ಹೋದ ಬಳಿಕವೇ ಬ್ಯಾಲೇ ನೃತ್ಯ ಕದ್ದುಮುಚ್ಚಿ ಮಾಡುವ ನೃತ್ಯ ಪ್ರಕಾರವಲ್ಲ ಎನ್ನುವುದು ಮನವರಿಕೆಯಾಯಿತು.

``ಏಕೆಂದರೆ ಅಲ್ಲಿ ಮಹಿಳೆಯರು ವೇದಿಕೆಯ ಮೇಲೆ ಪುರುಷರ ಜೊತೆಯೇ ಮುಕ್ತವಾಗಿ ನೃತ್ಯ ಮಾಡುತ್ತಿದ್ದರು. ಅವರು ಸಮತೋಲನದ ರೀತಿಯಲ್ಲಿ ತಮ್ಮ ದೇಹದ ಭಾಗಗಳನ್ನು ಅಲ್ಲಾಡಿಸುತ್ತಿದ್ದರು. ಅವರ ಆ ನೃತ್ಯದಲ್ಲಿ ನನಗೆ ಕ್ರಿಯೇಟಿವಿಟಿ ಮಾತ್ರ ಕಂಡುಬರುತ್ತಿತ್ತು. ಒಬ್ಬ ಡ್ಯಾನ್ಸರ್‌ ನನ್ನನ್ನು ಕೂಡ ವೇದಿಕೆಗೆ ಕರೆದಳು.

``ನಾನು ಚೆನ್ನಾಗಿ ಡ್ಯಾನ್ಸ್ ಮಾಡಲಿಲ್ಲ. ಆದರೆ ನನಗೂ ಬ್ಯಾಲೆ ಡ್ಯಾನ್ಸ್ ಮಾಡಲು ಬರುತ್ತದೆ ಎಂಬುದು ಮೊಟ್ಟ ಮೊದಲ ಬಾರಿಗೆ ಗೊತ್ತಾಯಿತು. ಅದನ್ನು ಪ್ರೊಫೆಶನ್ ಆಗಿ ಕಲಿಯುವ ಅಗತ್ಯವಿದೆ ಎಂಬುದು ನನಗೆ ಮನದಟ್ಟಾಯಿತು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ