ಕುಕಿಂಗ್‌ ರಿಯಾಲಿಟಿ ಶೋನ `ಮಾಸ್ಟರ್‌ ಶೆಫ್‌ ಇಂಡಿಯಾ' ಸೀಸನ್‌ ಇದರ ವಿಜೇತೆ ಎನಿಸಿದ ಶಿಪ್ರಾ ಖನ್ನ, ಪ್ರಖ್ಯಾತ ಶೆಫ್ ಎನಿಸಿದ್ದಾರೆ. ಮಾಸ್ಟರ್‌ ಶೆಫ್‌ನ ಬಿರುದು ಗಳಿಸಿದ ಬಳಿಕ ಆಕೆ ತಮ್ಮ ಕುಕಿಂಗ್‌ ಶೋ `ಕಿಚನ್‌ ಸ್ಟಾರ್‌ ಕಾ ಸಫರ್‌' ಶುರು ಮಾಡಿದರು. ಆಕೆ ಕೇವಲ ಶೆಫ್‌ ಮಾತ್ರವಲ್ಲದೆ ಕನ್ಸಲ್ಟೆಂಟ್‌, ಲೇಖಕಿ, ಟಿ.ವಿ.ಶೋ ಆ್ಯಂಕರ್‌ ಕೂಡ. ಆಕೆ ಎಲ್ಲರಿಗಿಂತ ಯಂಗೆಸ್ಟ್, ಎಲ್ಲರಿಗಿಂತ ಗ್ಲಾಮರಸ್‌ ಶೆಫ್‌ ಎನಿಸುತ್ತಾರೆ. ಈಕೆಯ `ಶಿಪ್ರಾಸ್‌ ಕಿಚನ್‌' ಯೂಟ್ಯೂಬ್‌ನಲ್ಲಿ ಬಲು ಜನಪ್ರಿಯ ಎನಿಸಿದೆ.

ಪಾಕಕಲೆಯ ಪಯಣ

ಈ ಫೀಲ್ಡ್ ನಲ್ಲಿ ಇವರ ಪಯಣ ಆರಂಭಗೊಂಡಿದ್ದೇ ಅಮ್ಮನ ಪ್ರೋತ್ಸಾಹದಿಂದ. ``ನಾನು 9 ವರ್ಷದವಳಾಗಿದ್ದಾಗ, ಅಡುಗೆಮನೆಗೆ ಹೋಗಿ ತಿಂಡಿ ತಯಾರಿಸಲು ಆರಂಭಿಸಿದೆ. ಅಲ್ಲಿದ್ದ ತರಕಾರಿ, ಈರುಳ್ಳಿ, ಟೊಮೇಟೊ ಇತ್ಯಾದಿ ಸೇರಿಸಿ ಅತಿ ಸುಲಭದ ತಿಂಡಿ ಉಪ್ಪಿಟ್ಟು ತಯಾರಿಸಿದೆ. ಆದರೆ ಖಂಡಿತಾ ಅದು ಸರಿಯಾಗಿ ಬರಲಿಲ್ಲ, ಎಲ್ಲಾ ಮುದ್ದೆ ಮುದ್ದೆ ಆಯ್ತು! ಅಂದಿನಿಂದ ಅಮ್ಮ, ಅಜ್ಜಿ ಬಳಿ ಅಡುಗೆ ಕಲೆಯಲ್ಲಿ ತರಬೇತಿ ಪಡೆಯತೊಡಗಿದೆ.

``ಮುಂದೆ ಮದುವೆ ಆದಾಗ ಪತಿ ಬಯಸಿದ ತಿನಿಸನ್ನು ಕ್ಷಣ ಮಾತ್ರದಲ್ಲಿ ತಯಾರಿಸುತ್ತಿದ್ದೆ. ಮಗಳು ಹುಟ್ಟಿದ ಮೇಲೆ ಅವಳು ಬಯಸಿದ ಬಗೆಬಗೆಯ ಡಿಶೆಸ್‌ ತಯಾರಿಸತೊಡಗಿದೆ. ಇದಾದ ಮೇಲೆ ನನ್ನ ಜೀವನದಲ್ಲಿ ಹಲವಾರು ಏರುಪೇರುಗಳಾದವು.

``ಮುಂದೆ ನಾನು ವಿಚ್ಛೇದನ ಪಡೆದುಕೊಂಡೆ ಹಾಗೂ ಅಮ್ಮನ ಬಳಿಯೇ ಇರತೊಡಗಿದೆ. ಹೊಸ ವ್ಯಂಜನಗಳನ್ನು ತಯಾರಿಸುವ ನನ್ನ ಹವ್ಯಾಸ ಮುಂದುವರಿಯಿತು. ಫುಡ್‌ ತಯಾರಿಸುವಾಗ ಏನಾದರೂ ಕ್ರಿಯೇಟಿವ್ ‌ಮಾಡಬೇಕೆಂಬುದು ನನ್ನ ವಿಶ್ವಾಸ. ಆಗ ಮಾಸ್ಟರ್‌ ಶೆಫ್‌ನ ಆಡಿಶನ್‌ ಆರಂಭವಾಯ್ತು. ನಾನು ಅದರಲ್ಲಿ ಭಾಗಹಿಸಲೇಬೇಕು ಎಂದು ಅಮ್ಮ ಹಠ ಹಿಡಿದರು. ಅಂತೂ ಅಮ್ಮನ ಹಾರೈಕೆಯಂತೆ ಅದರಲ್ಲಿ ಭಾಗವಹಿಸಿ ವಿಜೇತಳಾದೆ.''

ಮಾಸ್ಟರ್‌ಶೆಫ್‌ನ ಕಾರಣ ನನಗೊಂದು ಫ್ಲಾಟ್‌ ಫಾರ್ಮ್ ಸಿಕ್ಕಿತು. ಅಲ್ಲಿಂದ ನಾನು ರಮ್ಯ ಕನಸು ಕಾಣತೊಡಗಿದೆ. ಹೀಗೆ ಪಾಕಕಲೆಯ ಅದ್ಭುತ ಪಯಣ ಆರಂಭಗೊಂಡಿತು, ಎನ್ನುತ್ತಾರೆ ಶಿಪ್ರಾ.

ಶಿಪ್ರಾರನ್ನು ಗ್ಲಾಮರಸ್‌ ಶೆಫ್‌ ಎಂದೇ ಬಿಂಬಿಸಲಾಗಿದೆ. ``ಸಾಮಾನ್ಯವಾಗಿ ಅಡುಗೆ ಮುಗಿಸಿದ ಮೇಲೆ ಎಲ್ಲರೂ ವ್ಯಂಜನವನ್ನು ತಟ್ಟೆಗೆ ಹಾಕಿ ಕೊಡುತ್ತಾರೆ. ಆದರೆ ನನ್ನ ಅಭಿಪ್ರಾಯದಲ್ಲಿ, ಬಡಿಸುವ ಪ್ರಕ್ರಿಯೆ ಬಹಳು ನಾಜೂಕಾಗಿರಬೇಕು. ವ್ಯಂಜನವನ್ನು ನೀಟಾಗಿ ಅಲಂಕರಿಸಬೇಕು. ಅದನ್ನು ಪ್ರೆಸೆಂಟೆಬಲ್ ಆಗಿ ನೀಡಿದರೆ, ಸವಿಯುವವರ ಹಸಿ ಹೆಚ್ಚುವುದಲ್ಲದೆ, ಅದು ಪರ್ಫೆಕ್ಟ್ ಡಿಶ್ ಎಂದೆನಿಸುತ್ತದೆ.

``ಅದೇ ತರಹ ನಮ್ಮನ್ನು ನಾವು ಸದಾ ಪ್ರೆಸೆಂಟೆಬಲ್ ಆಗಿ ಇರಿಸಿಕೊಳ್ಳಬೇಕು. ಇದರಿಂದ ನಿಮ್ಮ ಚಾಯ್ಸ್  ಟೇಸ್ಟ್ ಎಂಥದೆಂಬುದು ಗೊತ್ತಾಗುತ್ತದೆ. ಜೊತೆಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ, ಕೆಲಸಕ್ಕೆ ಹೊಸ ಗುರಿ ಸಿಗುತ್ತದೆ. ನಾನು ಎಲ್ಲಾ ಗೃಹಿಣಿಯರಿಗೂ ಹೇಳುವುದು ಒಂದೇ ಮಾತು. ಅವರು ತಮ್ಮ ಕುಟುಂಬದ ಕಡೆ ಮಾತ್ರವಲ್ಲ, ವೈಯಕ್ತಿಕವಾಗಿ ತಮ್ಮ ಕಡೆಗೂ ಅಷ್ಟೇ ಗಮನಕೊಡಬೇಕು. ತಮಗಾಗಿ ಕಿಂಚಿತ್ತೂ ಸಮಯ ಸಿಗುವುದೇ ಇಲ್ಲ ಎಂಬುದು ಎಲ್ಲರ ಅಂಬೋಣ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ