ಅದೆಷ್ಟೋ ಸಂಗತಿಗಳನ್ನು ಅರಿತುಕೊಂಡಾಗ್ಯೂ ಗೃಹಿಣಿಯರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ...... ಎಷ್ಟೋ ಸಲ ಅವುಗಳಿಗೆ ಪರಿಹಾರ ಕಂಡುಕೊಳ್ಳುದು ಕಷ್ಟದಾಯಕ ಎನಿಸುತ್ತದೆ. ಇಲ್ಲವೇ ಅಂಥದೇ ಕೆಲವೇ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗಿದೆ.

ಉಣ್ಣೆ ಬಟ್ಟೆಯಲ್ಲಿ ಎಳೆಗಳು ಮೇಲೆದ್ದಿದ್ದರೆ ಅದು ಒಂದು ರೀತಿಯಲ್ಲಿ ಅಸಹ್ಯವಾಗಿ ಕಾಣಿಸುತ್ತವೆ. ಅಂತಹ ಸ್ಥಿತಿಯಲ್ಲಿ ಸ್ಪಾಂಜ್‌ನ್ನು ಒದ್ದೆ ಮಾಡಿಕೊಂಡು, ಬಳಿಕ ಅದನ್ನು ಎಳೆ ಎದ್ದಿರುವ ಜಾಗದಲ್ಲಿ ನಿಧಾನವಾಗಿ ಉಜ್ಜಿ. ಎಲ್ಲ ಎಳೆಗಳು ನಿವಾರಣೆಯಾಗುತ್ತವೆ. ಮತ್ತೊಂದು ಉಪಾಯವೆಂದರೆ, ಅಗಲವಾದ ಸೆಲೋಟೇಪ್‌ವೊಂದನ್ನು ಬೆರಳಿಗೆ ಸುತ್ತಿಕೊಳ್ಳಿ. ಅಂಟು ಇರುವ ಭಾಗ ಮೇಲ್ಭಾಗದಲ್ಲಿ ಬರುವಂತೆ ಹಿಡಿದುಕೊಳ್ಳಿ. ನಂತರ ಅದನ್ನು ಎಳೆಗಳ ಮೇಲೆ ಸುತ್ತಾಡಿಸಿ. ಎಲ್ಲಾ ಎಳೆಗಳು ಟೇಪ್‌ಗೆ ಅಂಟಿಕೊಂಡು ಸುಲಭವಾಗಿ ನಿವಾರಣೆಯಾಗುತ್ತವೆ.

ಮನೆಯಲ್ಲಿ ಯಾವುದಾದರೂ ಗಾಜಿನ ಸಾಮಾನು ಒಡೆದರೆ, ಅದರ ತುಂಡುಗಳನ್ನು ನಿವಾರಿಸಲು ಏನು ಮಾಡಬೇಕು ಗೊತ್ತೆ? ಕೈಯಲ್ಲೊಂದು ಹಳೆಯ ಬಟ್ಟೆ ಹಿಡಿದುಕೊಂಡು ದೊಡ್ಡ ತುಂಡುಗಳನ್ನು ಮೊದಲು ನಿವಾರಿಸಿ. ಬಳಿಕ ಚಿಕ್ಕ ತುಂಡುಗಳನ್ನು ನಿಧಾನವಾಗಿ ವೃತ್ತಾಕಾರದಲ್ಲಿ ಬಟ್ಟೆಯಿಂದ ಎತ್ತಿಕೊಳ್ಳಿ. ಬಳಿಕ ಬಟ್ಟೆಯನ್ನು ಒಗೆದು ಸ್ವಚ್ಛಗೊಳಿಸದೆ, ಅದನ್ನು ಎಸೆದುಬಿಡುವುದೇ ಉತ್ತಮ. ಸಣ್ಣ ಗಾಜಿನ ತುಂಡುಗಳನ್ನು ಎತ್ತಿಕೊಳ್ಳಲು ಬ್ರೆಡ್‌ ಸ್ಲೈಸ್‌ ಕೂಡ ಉಪಯೋಗಿಸಬಹುದು.

ಒಂದು ವೇಳೆ ನಲ್ಲಿ ಸೋರುತ್ತಿದ್ದರೆ ಅದನ್ನು ಆದಷ್ಟು ಬೇಗ ದುರಸ್ತಿ ಮಾಡಲು ಪ್ರಯತ್ನಿಸಿ. ಒಂದು ವೇಳೆ ದುರಸ್ತಿ ಮಾಡುವುದು ತಡವಾದಲ್ಲಿ ನಲ್ಲಿಯಿಂದ ಬೀಳುವ ಹನಿಯ ಸದ್ದು ಕಿರಿಕಿರಿ ಉಂಟು ಮಾಡಬಹುದು. ಅದರಿಂದ ಬಚಾವ್ ‌ಆಗಲು ನೀರು ಬೀಳುವ ಜಾಗದಲ್ಲಿ ಒಂದು ಟಿಶ್ಶು ಪೇಪರ್‌ನ್ನು ಮಡಚಿ ಇಡಿ. ಇಲ್ಲವೇ ನಲ್ಲಿಯಿಂದ ನೆಲದ ತನಕ ದಾರನ್ನು ಇಳಿಬಿಡಿ. ನೀರು ದಾರದ ಮೂಲಕ  ನಿಧಾನವಾಗಿ ಹರಿಯುತ್ತಿರುತ್ತದೆ.

ಫೆವಿಕ್ವಿಕ್‌ನ್ನು ಯಾವುದೇ ವಸ್ತು ಜೋಡಿಸುವಾಗ ಬಳಸುತ್ತೇವೆ. ಒಂದು ವೇಳೆ ಅದು ಬೆರಳುಗಳಿಗೆ ಪರಸ್ಪರ ಅಂಟಿಕೊಂಡಿದ್ದರೆ ನೇಲ್ ಪಾಲಿಶ್‌ ರಿಮೂರ್‌ಲೇಪಿಸಿ. ಬೆರಳುಗಳು ಬಿಡಿಸಿಕೊಳ್ಳುತ್ತವೆ.

ಈಚೆಗೆ ಉದ್ದನೆಯ ಜುಮಕಿ ಹಾಗೂ ಲೋಲಾಕುಗಳನ್ನು ಧರಿಸುವ ಫ್ಯಾಶನ್‌ ಇದೆ. ಆದರೆ ಅವು ಪರಸ್ಪರ ಒಂದಕ್ಕೊಂದು ಸಿಲುಕಿಕೊಳ್ಳುವ ಸಮಸ್ಯೆ ಉಂಟಾಗುತ್ತದೆ. ಅದಕ್ಕಾಗಿ ಸ್ವೆಟರ್‌ ಹೆಣೆಯುವ ಕಡ್ಡಿ (10ನೇ ನಂಬರ್‌ ಅಥವಾ ಅದಕ್ಕೂ ತೆಳ್ಳಗಿನದು) ತೆಗೆದುಕೊಂಡು ಅದರ ಮೇಲೆ ನಿಮ್ಮ ಇಷ್ಟದ ರಬ್ಬರ್‌ ಅಥವಾ ಲೇಸ್‌ ಸುತ್ತಿ. ಅದರ ಎರಡೂ ತುದಿಯ ಮೇಲೆ ದುಂಡನೆಯ ಗುಂಡು ಮಾಡಿ ಒತ್ತಿ ಅದನ್ನು ಒಣಗಲು ಬಿಡಿ. ಈಗ ನಿಮ್ಮ ಡ್ರೆಸ್ಸಿಂಗ್‌ ಟೇಬಲ್ಲಿನ ಒಳಭಾಗದಲ್ಲಿ ಎರಡು ಮೊಳೆ ಹೊಡೆದು ಅವನ್ನು ಅಲ್ಲಿ ತೂಗು ಬಿಡಿ, ಅವು ಸುರಕ್ಷಿತವಾಗಿರುತ್ತವೆ.

Rolling-drwer

ಮನೆಯಲ್ಲಿ ಹಳೆಯ ಡ್ರಾಯರ್‌ಗಳು ವ್ಯರ್ಥವಾಗಿ ಬಿದ್ದಿದ್ದರೆ ಅವುಗಳ ಕೆಳಗೆ ಗಾಲಿಗಳನ್ನು ಅಳವಡಿಸಿ. ಅದರಲ್ಲಿ ಮನೆಯ ಹಳೆಯ ಆಟಿಕೆ, ಪೇಂಟ್‌ ಸಲಕರಣೆಗಳು, ಹಳೆಯ ಪುಸ್ತಕಗಳನ್ನು ಹಾಕಿ ಟೇಬಲ್ ಕೆಳಗಡೆ ಅಥವಾ ಮಂಚದ ಸರಿಸಿಬಿಡಿ. ಡ್ರಾಯರ್‌ನ್ನು ಗಾಲಿಗಳ ರಹಿತವಾಗಿಯೂ ಬಳಸಬಹುದು. ನೀವು ಸಾಮಾನುಗಳನ್ನು ಬಚ್ಚಿಡಬೇಕೆಂದರೆ ಅದರ ಮೇಲೆ ಕಾರ್ಡ್‌ಬೋರ್ಡ್‌ನಿಂದ ಡ್ರಾಯರ್‌ ಆಕಾರದಲ್ಲಿ ರೆಡಿ ಮಾಡಿಕೊಂಡು ಅದರ ಮೇಲೆ ಬಚ್ಚಿಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ