ಡಾ. ಪ್ರಕೃತಿ ಪೋದ್ದಾರ್ ಹೆಸರಾಂತ ಮನೋರೋಗ ತಜ್ಞೆ. ಅವರು ತರಬೇತಿ ಪಡೆದ ಟ್ಯಾಸೊ ರಿಗ್ರೆಶನ್ ಥೆರಪಿಸ್ಟ್. ಎನ್.ಎಲ್.ಪಿ ಪ್ರ್ಯಾಕ್ಟೀಶನರ್, ಸರ್ಟಿಫೈಡ್ ಕೌನ್ಸೆಲರ್, ನ್ಯೂರೊ ಫೀಡ್‌ಬ್ಯಾಕ್ ಥೆರಪಿಸ್ಟ್, ಇಮೇಜ್ ಕನ್ಸಲ್ಟೆಂಟ್ ಮತ್ತು ಪರ್ಯಾಯ ಚಿಕಿತ್ಸಾ ಪದ್ಧತಿಯ ಡಾಕ್ಟರ್ ಕೂಡ ಆಗಿದ್ದಾರೆ.
ಡಾ. ಪ್ರಕೃತಿ, ಮೈಂಡ್ ಓವರ್ ಇಮೇಜ್‌ನ (ಪೋದ್ದಾರ್ ವೆಲ್‌ನೆಸ್ ಲಿಮಿಟೆಡ್‌ನ ಶಾಖೆ) ಸಿಇಓ ಆಗಿದ್ದಾರೆ. ಇದು ಭಾರತದ ಏಕೈಕ ಹೋಲಿಸ್ಟಿಕ್ ಮೆಂಟಲ್ ವೆಲ್‌ನೆಸ್ ಸೆಂಟರ್ ಆಗಿದೆ. ಅಲ್ಲಿ ಮಾನಸಿಕ ಆರೋಗ್ಯ ಸುಧಾರಣೆಗಾಗಿ ಪಾರಂಪರಿಕ ಕೌನ್ಸೆಲಿಂಗ್‌ನ್ನು ಆಧುನಿಕ ತಂತ್ರಜ್ಞಾನದ ಸಂಶೋಧನೆಗಳೊಂದಿಗೆ ಬೆರೆಸಲಾಗಿದೆ.
ಈ ಹಂತಕ್ಕೆ ತಲುಪಲು ಅವರು ಎಷ್ಟು ಕಷ್ಟ ಅನುಭವಿಸಿದರು ಎನ್ನುವುದನ್ನು ಅವರಿಂದಲೇ ಕೇಳಿ ತಿಳಿದುಕೊಳ್ಳೋಣ :
ನೀವು ಈ ಹಂತಕ್ಕೆ ತಲುಪಲು ಎಷ್ಟರ ಮಟ್ಟಿಗೆ ಸಂಘರ್ಷ ನಡೆಸಬೇಕಾಯಿತು?
ನಾನು ಜೀವನದಲ್ಲಿ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ನಮ್ಮ ಕುಟುಂಬದ ಹೆಚ್ಚಿನ ಜನರು ಮಾಡಿಕೊಂಡು ಬರುತ್ತಿದ್ದ ಕೆರಿಯರ್‌ನ್ನೇ ನಾನೂ ಮಾಡಬೇಕೆಂಬುದು ತಂದೆಯ ಆಶಯವಾಗಿತ್ತು. ಅದೇ ಬ್ಯಾಂಕಿಂಗ್ ಕ್ಷೇತ್ರ. ನಾನು 13 ವರ್ಷದವಳಿರುವಾಗಲೇ ಹೀಲರ್ ಆಗಬೇಕೆಂದು ಬಯಸಿದ್ದೆ. ನಾನು ಕೆನಡಾದಲ್ಲಿ ಒಂದು ಇಂಟರ್‌ನೆಟ್ ಕಂಪನಿಯೊಂದಿಗೆ ಕೆಲಸ ಮಾಡಿದೆ. ನಾನು ಯಾವಾಗಲಾದರೂ ಟ್ರೇಡ್ ಶೋಗೆ ಹೋದಾಗೆಲ್ಲ ಜನಸಮೂಹಕ್ಕೆ ಸಲಹೆ ಕೊಡುತ್ತಿದ್ದೆ. ಆ ಬಳಿಕ ನಾನು ಆ ವೃತ್ತಿ ಬಿಟ್ಟುಬಿಟ್ಟೆ. ಸಾಕಷ್ಟು ಅಡೆತಡೆಗಳ ನಡುವೆ ನಾನು ಏನು ಮಾಡಬೇಕೆಂದುಕೊಂಡಿದ್ದೆನೋ ಅದನ್ನೇ ಮಾಡಲು ಆರಂಭಿಸಿದೆ.
2000ದಲ್ಲಿ ನಾನು `ಮೈಂಡ್ ಓವರ್ ಇಮೇಜ್ ಕನ್ಸಲ್ಟಿಂಗ್' ಕಂಪನಿ ಶುರು ಮಾಡಿದೆ. ಹಲವು ವರ್ಷಗಳ ಕಾಲ ಕಾರ್ಪೊರೇಟ್‌ಪ್ರೊಫೆಶನಲ್ಸ್ ಮತ್ತು ಅಪ್ಪರ್ ಮಿಡಲ್ ಕ್ಲಾಸ್‌ನ ಭಾರತೀಯರ ಜೊತೆಗೆ ಕೆಲಸ ಮಾಡಿದ ಬಳಿಕ ಮಾನಸಿಕ ಆರೋಗ್ಯದ ಜಾಗರೂಕತೆಯನ್ನು ತಳಮಟ್ಟದಲ್ಲಿ ತೆಗೆದುಕೊಂಡು ಹೋಗುವ ಅಗತ್ಯವಿದೆ ಎನಿಸಿತು. ಆಗ ನಾನು ನನ್ನ ಗಮನವನ್ನು ಸೌಲಭ್ಯ ವಂಚಿತ ಭಾರತೀಯರ ಕಡೆ ಹರಿಸಿದೆ. ಅವರಿಗೆ ಮಾನಸಿಕ ಆರೋಗ್ಯ ಎನ್ನುವುದು ಸದಾ ನಿರ್ಲಕ್ಷಿತ ವಿಷಯವಾಗಿತ್ತು. ನನ್ನ ಆ ಯೋಚನೆಯೇ 2014ರಲ್ಲಿ `ಪೋದ್ದಾರ್ ಫೌಂಡೇಶನ್' ಸ್ಥಾಪನೆಗೆ ಕಾರಣವಾಯಿತು. ಬಳಿಕ 2018ರಲ್ಲಿ `ಪೋದ್ದಾರ್ ವೆಲ್‌ನೆಸ್ ಲಿಮಿಟೆಡ್' ಶುರುವಾಯಿತು.
ಮಹಿಳೆಯರು ಮಾನಸಿಕವಾಗಿ ಅನಾರೋಗ್ಯ ಪೀಡಿತರಾಗುವ ಸಾಧ್ಯತೆ ಇದೆಯೇ?
2001ರ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಹಿಳೆಯರಲ್ಲಿ ಉಂಟಾಗುವ ನ್ಯೂರೋ ಸೈಕಿಯಾಟ್ರಿಕ್ ಡಿಸೆಬಿಲಿಟಿಯಲ್ಲಿ ಖಿನ್ನತೆಯ ಪಾಲು ಶೇ.41.9ರಷ್ಟು ಇರುತ್ತದೆ. ಅದೇ ಪುರುಷರಲ್ಲಿ ಇದರ ಪ್ರಮಾಣ ಶೇ.29ರಷ್ಟು ಮಾತ್ರ ಇರುತ್ತದೆ. ಮಹಿಳೆಯರಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚಾಗಲು ಏನು ಕಾರಣ ಎಂಬುದರ ಬಗ್ಗೆ ಈಗಲೂ ಮೆಡಿಕಲ್ ಫ್ರೆಟಿರ್ನಿಟಿ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ.
ಚೆನ್ನಾಗಿ ಕಂಡುಬರಲು `ಮೇಕ್ ಓವರ್'ಗಿಂತ ಹೆಚ್ಚಾಗಿ `ಮೈಂಡ್ ಓವರ್' ಅಗತ್ಯ ಯಾಕೆ?
`ಮೇಕ್ ಓವರ್'ಗಿಂತ `ಮೈಂಡ್ ಓವರ್'ನ ಅವಶ್ಯಕತೆ ಏಕಿದೆ ಎಂದರೆ ಮೆದುಳಿನ ಆರೋಗ್ಯ ಹೆಚ್ಚು ಮಹತ್ವದ್ದು. ನಮ್ಮ ಮೆದುಳು ಚೆನ್ನಾಗಿದ್ದಾಗ ನಮ್ಮ ದೇಹ ಕೂಡ ಚೆನ್ನಾಗಿರುತ್ತದೆ. ಏಕೆಂದರೆ ಯಾವುದೇ ಸಮಸ್ಯೆ ಉಂಟಾದಾಗ ನಮ್ಮ ಮೆದುಳೇ ಎಲ್ಲಕ್ಕೂ ಮೊದಲು ಪ್ರತಿಕ್ರಿಯೆ ನೀಡುತ್ತದೆ.