ಸ್ವಚ್ಛವಿರಲಿ ಸುತ್ತಲ ಪರಿಸರ

ರೋಗ ರುಜಿನಗಳು ಇರಲಿ ದೂರ

ನೆಮ್ಮದಿ ಬದುಕಿಗೆ ಇದುವೇ ಆಧಾರ

ಹಸಿರು ಹಸನಾದರೆ ಬಾಳು ಬಂಗಾರ

 

ಎಲ್ಲೆಡೆ ಹರಡಿದೆ ಮಾಲಿನ್ಯದ ಭೀತಿ

ಮಾನವರಲ್ಲಿ ಮರೆಯಾಗಿದೆ ನೀತಿ

ಬದಲಾಗಲಿ ನಾವು ಬದುಕುವ ರೀತಿ

ಸಮೃದ್ಧ ಜೀವನಕೆ ಪರಿಸರವೇ ಸ್ಪೂರ್ತಿ

 

ತ್ಯಜಿಸುವ ನಮ್ಮಯ ಲೋಭ ದುರಾಸೆ

ಅಳಿಸುತ ಮನದ ದ್ವೇಷ ಹತಾಶೆ

ಎಲ್ಲರೂ ಇಲ್ಲಿ ಪ್ರಕೃತಿಯ ಕೂಸೇ

ಸಹಬಾಳ್ವೆಯೇ ಎಂದಿಗೂ ನಿಸರ್ಗದ ಭಾಷೆ

 

~ ಚೇತನ ಭಾರ್ಗವ

ಅರಮನೆತೋಟ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ