ಗೋವಾದ ಅರ್ಪೋರಾ ಗ್ರಾಮದ ಬಳಿಯ “ಬಿರ್ಚ್​ ಬೈ ರೊಮಿಯೋ ಲೇನ್​” ನೈಟ್‌ಕ್ಲಬ್‌ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲಬ್‌ನ ಮ್ಯಾನೇಜರ್‌ನನ್ನು  ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದು, ಕ್ಲಬ್‌ ಮಾಲೀಕರ ವಿರುದ್ಧ ಅರೆಸ್ಟ್‌ ವಾರಂಟ್‌ ಜಾರಿಗೊಳಿಸಿದ್ದಾರೆ.

ಪ್ರಕರಣ ಸಂಬಂಧ ಅರ್ಪೋರಾ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಅಗ್ನಿ ಸುರಕ್ಷತಾ ನಿಯಮ ಪಾಲಿಸದೇ ನಿರ್ಲಕ್ಷ್ಯ ವಹಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ನೈಟ್​ ಕ್ಲಬ್  ಮಾಲೀಕರಾದ ಸೌರಭ್​ ಲೂಥ್ರಾ, ಗೌರವ್​ ಲೂಥ್ರಾ , ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕ್ಲಬ್​ನ ಹಿರಿಯ ಅಧಿಕಾರಿ ರಾಜೀವ್​ ಮೋದಕ್​ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಬಂಧಿಸಲಾಗಿದೆ. ಗ್ರಾಮದ ಸರಪಂಚ್​ ರೋಶನ್​ ರೇಡ್ಕರ್​ ಅವರನ್ನು ವಶಕ್ಕೆ ಪಡೆಯಲಾಗಿದೆ. ಕ್ಲಬ್​ ಮಾಲೀಕರ ಬಂಧನಕ್ಕೆ ಗೋವಾ ಪೊಲೀಸ್​ ತಂಡವು ದಿಲ್ಲಿಗೆ ಪ್ರಯಾಣ ಬೆಳೆಸಿದೆ.ಘಟನೆ ಕುರಿತು ಸಿಎಂ ಪ್ರಮೋದ್​ ಸಾವಂತ್​ ಮ್ಯಾಜಿಸ್ಟೀಯರ್​ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ ವಿದ್ಯುತ್ ರೂಪದ ಪಟಾಕಿ ಸಿಡಿತದಿಂದ (ಎಲೆಕ್ಟ್ರಿಕಲ್​ ಪೈರ್ ಕ್ರ್ಯಾಕರ್ಸ್​) ಅಗ್ನಿ ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ. ಈ ಮೊದಲು ಸಿಲಿಂಡರ್​ ಸ್ಫೋಟದಿಂದ ದುರಂತ ಸಂಭವಿಸಿದೆ ಎಂದು ಹೇಳಲಾಗಿತ್ತು. ಅಗ್ನಿ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನೈಟ್​ ಕ್ಲಬ್​ ನಿರಾಕ್ಷೇಪಣಾ ಪತ್ರ ಪಡೆದಿರಲಿಲ್ಲ. ಪ್ರವೇಶ ಹಾಗೂ ನಿರ್ಗಮನದ ದ್ವಾರವೂ ಬಹಳ ಕಿರಿದಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಮೃತಪಟ್ಟವರಲ್ಲಿ 20 ಮಂದಿ ಕ್ಲಬ್​ ಸಿಬ್ಬಂದಿಯಾಗಿದ್ದು, ಐವರು ಪ್ರವಾಸಿಗರು ಎಂದು ತಿಳಿದುಬಂದಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ