ಗಾಸಿಪ್‌ನ ಸೊಗಸು : ಮೂರು ನಟಿಯರು ಹೀಗೆ ಕಲೆತಾಗ ಗೆಳೆತನ ಬೆಳೆಯುವುದು ಸಹಜ. ಹಾಲಿವುಡ್‌ನ ವಿಖ್ಯಾತ ಕೇಟ್ ಬ್ಲ್ಯಾಂಚೆಟ್, ಕೇಟ್ ವಿಂಸ್ಲೆಟ್ (ಟೈಟಾನಿಕ್) ಬ್ರಾರ್ಟ್ ವಾರ್ಸನ್ ಹೀಗೆ ಒಟ್ಟುಗೂಡಿದಾಗ ಹರಟೆಯಲ್ಲಿ ತಲ್ಲೀನರಾದರು. ಗೆಳತಿಯರು ಅಪರೂಪಕ್ಕೆ ಹೀಗೆ ಸೇರಿದಾಗ ಗಾಸಿಪ್ ಸೆಶನ್ ನಡೆಸುವುದು ಮಾಮೂಲಲ್ಲವೇ? ಗಾಸಿಪ್ ಯಾರಿಗೆ ತಾನೇ ಪ್ರಿಯವಲ್ಲ...?
ಇದಲ್ಲವೇ ಕಲೆ? : ಇವು ಕೋಣಾರ್ಕ್‌ನ ಶಿಲ್ಪಗಳಲ್ಲ, ಜೀವಂತ ಕಲಾವಿದರು ಒಂದೇ ಕಲ್ಲಿನಿಂದ ಕೆತ್ತಲ್ಪಟ್ಟವರಂತೆ ಹೀಗೆ ಪೋಸ್ ನೀಡಿ ವೀಕ್ಷಕರನ್ನು ಬೆರಗುಗೊಳಿಸಿದ್ದಾರೆ. ಕೆನಡಾದ ಜಿಮ್ನಾಸ್ಟಿಕ್ಸ್ ನಲ್ಲಿ `ಸರ್ಕಸ್ ದಿ ಸೋಲಿವ್' ಎಂಬ ಪ್ರಕಾರವಿದು. ಸರ್ಕಸ್ ಕಂಪನಿಗಳು ಪ್ರಾಣಿಗಳಿಗೆ ಬದಲಾಗಿ ಮಾನವರನ್ನು ಇಂಥ ಕಲೆಗಾಗಿ ಬಳಸುತ್ತಿವೆ. ಯಾರು ತಾನೇ ಇದಕ್ಕೆ ಬೆರಗಾಗುವುದಿಲ್ಲ?
ತಂಗಾಳಿಯ ಮಜಾ ಪಡೆಯಲು : ಈಗೆಲ್ಲ ಬಣ್ಣ ಬಣ್ಣದ ಡ್ರೆಸ್ ಧರಿಸಿ ದೆಹಲಿಯಂಥ ಪ್ರಮುಖ ನಗರಗಳಲ್ಲಿ ಓಡಾಡುವುದೇ ದುಸ್ತರ. ಏಕೆಂದರೆ ಮಾರೆಲ್ ಪೊಲೀಸ್‌ಗಿರಿ ಹೆಸರಲ್ಲಿ ಭಗ್ವಾಧಾರಿಗಳು ಸಾರ್ಜನಿಕನಾಗಿ ಜನ ಏನನ್ನು ಧರಿಸಬೇಕು, ತಿನ್ನಬೇಕು, ಹಾಡಬೇಕು, ಮಾತನಾಡಬೇಕು ಇತ್ಯಾದಿಗಳಲ್ಲಿ ಮೂಗು ತೂರಿಸುತ್ತಾರೆ. ಆದರೆ ಈ ದೃಶ್ಯ ನೋಡಿ, ವಿದೇಶದ ಮಹಡಿಯೊಂದರ ಮೇಲೆ ಹೆಂಗಸರು ಹಾಯಾಗಿ ತಂಗಾಳಿಗೆ ಮೈಯೊಡ್ಡಿ ನಿರ್ಲಿಪ್ತರಾಗಿ ಅದರ ಮಜಾ ಸವಿಯುತ್ತಿದ್ದಾರೆ.
ಇಲ್ಲಿ ಎಲ್ಲದಕ್ಕೂ ವಿನಾಯಿತಿ ಉಂಟು : ಯೂರೋಪಿಯನ್ ದೇಶಗಳಲ್ಲಿ ಖುಲ್ಲಂಖುಲ್ಲ ದೇಶದ ಪ್ರಮುಖ ನಾಯಕರನ್ನು ಛೇಡಿಸಿ ತಮಾಷೆ ಮಾಡುವ ಅವಕಾಶವಿದೆ. ಸ್ಪೇನ್ ನಗರದ ಒಂದು ಪೆರೇಡ್‌ನಲ್ಲಿ ರೂಪಿಸಲಾದ ಒಂದು ಮ್ಯಾಸ್ಕಾಟ್ ಅಲ್ಲಿನ ಪ್ರಧಾನಮಂತ್ರಿ ಮರಿಯಾನೋ ರಾಜೋಯ್‌ರಿಗೆ ಸಾಕಷ್ಟು ಕೋಪ ಕೆರಳಿಸುವಂತಿತ್ತು. ಆದರೆ ಪಾಪ, ಆತ ಸುಮ್ಮನಿರುವುದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯ? ಎಲ್ಲವನ್ನೂ ಲೈಟಾಗಿ ತೆಗೆದುಕೊಳ್ಳಬೇಕಷ್ಟೆ.
ಇಷ್ಟೊಂದು ಸಿಟ್ಟಾದರೂ ಏಕೆ? : ಈ ಡ್ರೆಸ್ ನೋಡಿ ಮಾಲ್ ಫಂಕ್ಷನ್ ಆಗಿರಬಹುದೇ ಎಂದುಕೊಳ್ಳಬೇಡಿ. ಈ ಡ್ರೆಸ್ ಇರುವುದೇ ಹೀಗೆ. ಬ್ಲೌಸ್ ಎಂದ ಮೇಲೆ ಎರಡೂ ಕಡೆ ಸಮಾನ ಆಕಾರ ಇರಲೇಬೇಕು ಎಂದೇನಿಲ್ಲವಲ್ಲ? ಸೀರೆಯ ಸೆರಗು ಒಂದೇ ಬದಿ ಇರಬಹುದಾದರೆ, ಈ ಬಾಲೆಯ ಬ್ಲೌಸ್ ಈ ತರಹ ಏಕಿರಬಾರದು?
ನೀವು ಹೋಗಿ ಬನ್ನಿ ಹೈದರಾಬಾದ್ಗೆ : ಭಾರತದ ಟೆನಿಸ್ ಕ್ಷೇತ್ರದ ಸೂಪರ್ ಸ್ಟಾರ್ ಸಾನಿಯಾ ಮಿರ್ಜಾ, ತೆಲಂಗಾಣ ರಾಜ್ಯದ ಬ್ರ್ಯಾಂಡ್ ಅಂಬಾಸೆಡರ್ ಎನಿಸಿದ್ದಾಳೆ, ಹೀಗಾಗಿ ಪ್ರವಾಸಿಗರನ್ನು ಹೈದರಾಬಾದ್‌ಗೆ ಬನ್ನಿರೆಂದು ಕೈಬೀಸಿ ಕರೆಯುತ್ತಿದ್ದಾಳೆ. ನೀವು ಅಲ್ಲಿಗೆ ಹೋದಾಗ ಸಾನಿಯಾ ನಿಮಗೆ ಸಿಗುತ್ತಾಳೋ ಇಲ್ಲವೋ ಗೊತ್ತಿಲ್ಲ, ಅಲ್ಲಿನ ಹುಸೇನ್ ಸಾಗರ್ ಲೇಕ್‌ನಲ್ಲಿ ಅವಳು ಲಾಂಚ್‌ಮಾಡಿದ `ಯಾಚ್ ನೌಕೆ' ಖಂಡಿತಾ ಸಿಗುತ್ತದೆ.