ಮದುವೆ ಅನುಬಂಧವಾಗಿರಲಿ

ಧಾರ್ಮಿಕ ವ್ಯವಸ್ಥೆಯಲ್ಲೆ ವೈವಾಹಿಕ ವಿವಾದ ಹೊಸದೇನಲ್ಲ. ಆದರೆ ಈಗ ವೈವಾಹಿಕ ವಿವಾದಗಳಿಂದಾಗಿ ಆತ್ಮಹತ್ಯೆಗಳು ಅಥವಾ ವಿಮಾನ ಅಪಹರಣದಂತಹ ಘಟನೆಗಳವರೆಗೆ ವಿಶ್ವವಿಡೀ ಪ್ರಮುಖ ಸುದ್ದಿಗಳಾಗುತ್ತವೆ. ವಿವಾಹದ ನಂತರ ಸ್ತ್ರೀ ಪುರುಷರಿಗೆ ಅವರು ಕಲ್ಪಿಸಿಕೊಂಡಿದ್ದ ಸುರಕ್ಷತೆ ಹಾಗೂ ಜೊತೆ ಸಿಗುವುದಿಲ್ಲ. ಈಗ ನಾಟಕೀಯ ರೀತಿಯಲ್ಲಿ 5ನೇ ಮಹಡಿಯಿಂದ ದುಮುಕುವುದು ಅಥವಾ ಮೈಮೇಲೆ ಪೆಟ್ರೋಲ್ ‌ಸುರಿದುಕೊಳ್ಳುವುದು ಹೆಚ್ಚಾಗಿ ಮದುವೆ ಪ್ರಭಾವಶಾಲಿ ಅಂತ ಅನಿಸುತ್ತದೆ. ಮಹಿಳೆಯರು ಇವೆಲ್ಲವನ್ನೂ ಮಾಡುತ್ತಾರೆ. ಗಂಡಸೂ ಸಹ ಕಡಿಮೆಯೇನಲ್ಲ. ತಮ್ಮ ನೋವನ್ನು ತಪ್ಪು ರೀತಿಯಲ್ಲಿ ಪ್ರಕಟಿಸುತ್ತಾರೆ.

ವೈವಾಹಿಕ ಸಂಸ್ಥೆ ಈಗ ಅಸಲಿಗೆ ಒಂದು ಹೊಸ ತಿರುವಿನಲ್ಲಿದೆ. ಹಿಂದೆ ಸ್ತ್ರೀ-ಪುರುಷರಿಗೆ ಲೈಂಗಿಕ ತೃಪ್ತಿ ಮತ್ತು ಮಕ್ಕಳ ಪಾಲನೆಗೆ ಮದುವೆಯಾಗುವ ಅನಿವಾರ್ಯತೆ ಇತ್ತು. ಈಗ ಪತಿಪತ್ನಿಯರು ಇಚ್ಛಿಸಿದಾಗಲೇ ಮಕ್ಕಳಾಗುತ್ತಾರೆ. ಒಂದು ವೇಳೆ ಮಕ್ಕಳಾಗದಿದ್ದರೆ ಮದುವೆ ಏಕಾಗಬೇಕು ಎಂಬ ಪ್ರಶ್ನೆ ಏಳುತ್ತದೆ. ಒಂದುವೇಳೆ ಮದುವೆ ಆಗಿ, ಸಂಗಾತಿ ಒಳ್ಳೆಯ ರಕ್ಷಕ ಅಥವಾ ಮಿತ್ರನಾಗದಿದ್ದಲ್ಲಿ ಈ ಸಂಬಂಧವನ್ನು ಮುರಿದುಕೊಳ್ಳಬೇಕೆಂದು ಯೋಚಿಸತೊಡಗುತ್ತಾರೆ. ಸಂಬಂಧವನ್ನು ಮುರಿದುಕೊಂಡರೆ ಹಗಲು ರಾತ್ರಿ ನೆಮ್ಮದಿ ಇರುವುದಿಲ್ಲ. ವ್ಯಕ್ತಿತ್ವಕ್ಕೆ ಧಕ್ಕೆ ಬರುತ್ತದೆ ಅಥವಾ ಬಹಳಷ್ಟು ಹಣ ಖರ್ಚಾಗುತ್ತದೆ.

ಇಷ್ಟೊಂದು ವಿಚ್ಛೇದನಗಳು ಆಗುತ್ತಿರುವಾಗ ಮದುವೆ ಒಂದು ಟೆಂಪರರಿ ಸಲ್ಯೂಶನ್‌ ಆದರೆ ಮಾಡುವುದಾದರೂ ಏನು ಎಂದು ಯೋಚಿಸಬೇಕಾಗುತ್ತದೆ. 3000-4000 ವರ್ಷಗಳ ಈ ಹಳೆಯ ಪದ್ಧತಿಯನ್ನು ನಾವು ಹೊರಲಾಗುತ್ತದೆಯೇ?

ಸರಿಸುಮಾರು ಪ್ರತಿ ದೇಶದಲ್ಲಿಯೂ ವೈವಾಹಿಕ ಕಾನೂನುಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಲವೆಡೆ ಸಲಿಂಗಿಗಳಿಗೆ ಮದುವೆಯಾಗುವ ಹಕ್ಕು ಕೊಡುವ ಸವಾಲಿದೆ. ಕೆಲವೆಡೆ ಒಂದಕ್ಕಿಂತ ಹೆಚ್ಚು ಮದುವೆಯಾಗುವ ವಿವಶತೆ ಅಥವ ಅದರಿಂದ ಮುಕ್ತಿಯ ಬಗ್ಗೆ ವಿವಾದವಿದೆ. ಕೆಲವೆಡೆ ವಿಚ್ಛೇದನದ ನಂತರದ ತೊಂದರೆಗಳು ಮತ್ತು ಮುಂದೆ ಮಕ್ಕಳ ರಕ್ಷಣೆಯ ವಿಷಯಗಳ ಚರ್ಚೆ.

ಮದುವೆಯ ಮೇಲೆ ಧರ್ಮದ ಪ್ರಭಾವದಿಂದಲೇ ಹೆಚ್ಚು ತೊಂದರೆಗಳು ಉಂಟಾಗುತ್ತಿವೆ. ಅಸಲಿಗೆ ಮದುವೆ ಒಂದು ಅನುಬಂಧವಾಗಬೇಕು. ಅದನ್ನು ಕರಾರು ಮತ್ತು ಕಾನೂನಿನ ಮೂಲಕ ಮುರಿಯಬಹುದು. ಕಾರ್ಮಿಕರು 6-7 ರ್ಷಗಳ ಕಾಲ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಾರೆ, ಸಂಪಾದಿಸುತ್ತಾರೆ, ಗೆಳೆಯರಾಗುತ್ತಾರೆ. ಮುಂದೆ ಟಾಟಾ, ಬೈ ಬೈ ಹೇಳಿ ಇನ್ನೊಂದು ಕಂಪನಿಗೆ ಸೇರುತ್ತಾರೆ. ಮದುವೆಯಲ್ಲಿ ಹೀಗೇಕೆ ಆಗಬಾರದು?

ಮದುವೆಯ ಮಹತ್ವವನ್ನು ಮತ್ತು ವೈವಾಹಿಕ ಸಂಸ್ಥೆಯ ಉಪಯೋಗವನ್ನು ಕೀಳಾಗಿ ಕಾಣಲು ಹೀಗೆ ಹೇಳುತ್ತಿಲ್ಲ. ಇದನ್ನು ಏಕೆ ಹೇಳಲಾಗುತ್ತಿದೆಯೆಂದರೆ ಮದುವೆಯಿಂದ ಆತ್ಮಹತ್ಯೆಗಳು, ಹತ್ಯೆಗಳು ನಡೆಯಬೇಕೆ? ಕೋರ್ಟುಗಳಿಗೆ ಸುತ್ತುತ್ತಿರಬೇಕೆ? ಹೆಂಡತಿಯರು ಗಂಡನ ಕೈಯಲ್ಲಿ ಏಟು ತಿನ್ನುತ್ತಿರಬೇಕೆ? ಆಸ್ತಿ ಹಂಚಿಕೊಳ್ಳುವ ಹಕ್ಕು ಮದುವೆಯಿಂದಲೇ ಸಿಗಬೇಕೆ? ಇಂದು ಮದುವೆಯನ್ನು ದೇವರ ಕೊಡಗೆಯೆಂದು ಒಪ್ಪಿ ಸಾಯುವವರೆಗೆ ಇಡೀ ಜೀವನ ಒಟ್ಟಿಗೆ ಇರುತ್ತೇವೆಂದು ಯೋಚಿಸಲಾಗುತ್ತದೆ. ಹಾಗೆ ಆಗದಿದ್ದರೆ ದೇವರು ನಮ್ಮನ್ನು ಶಿಕ್ಷಿಸುತ್ತಿದ್ದಾನೆ ಎಂದುಕೊಳ್ಳುತ್ತಾರೆ.

ಮದುವೆ ದೇವರ ಅಥವಾ ಪ್ರಕೃತಿಯ ಕೊಡುಗೆ ಅಲ್ಲ. ಮನುಷ್ಯ ತಾನೇ ಮಾಡಿಕೊಂಡ ಒಂದು ಏರ್ಪಾಡು. ಅದರಿಂದ ಸ್ತ್ರೀ-ಪುರುಷರ ಸಂಬಂಧ ಕೆಲವು ನಿಮಿಷಗಳಲ್ಲ, ಅನೇಕ ವರ್ಷಗಳು ಇರುವಂಥದ್ದು. ಮದುವೆ ಸ್ಥಿರತೆ ಕೊಡುತ್ತದೆ. ಇಬ್ಬರಿಗೂ ರಕ್ಷಣೆ ಕೊಡುತ್ತದೆ. ಸಹಾನುಭೂತಿ ನೀಡುತ್ತದೆ. ಇಬ್ಬರೂ ಒಟ್ಟಿಗೇ ಬದುಕು ವಚನ ಕೊಟ್ಟಿದ್ದು ಕಾಯಿಲೆ ಕಷ್ಟಗಳ ಸಂದರ್ಭದಲ್ಲಿ ಕೆಲಸಕ್ಕೆ ಬರುತ್ತದೆ. ಒಬ್ಬರಿಗೆ ತಗುಲಿದ ಪೆಟ್ಟು ಇನ್ನೊಬ್ಬರಿಗೆ ನೋಂಟು ಮಾಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ