ಸಾಮಾನ್ಯವಾಗಿ ಅಡುಗೆ ಮಾಡುವ ಕೆಲಸ ಮಹಿಳೆಯರದ್ದೇ ಆಗಿರುತ್ತದೆ. ಶತಮಾನಗಳಿಂದ ಮಹಿಳೆಯರು ಅಡುಗೆ ಮನೆಯ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಇದು ಒಂದು ರೀತಿಯ ಸಂಪ್ರದಾಯದಂತಾಗಿದೆ. ನಿಜವಾಗಿಯೂ ಕುಟುಂಬ ಗಂಡ ಹೆಂಡತಿ ಇಬ್ಬರಿಗೂ ಸೇರಿದ್ದು ಎಂಬುದಾದರೆ, ಇಬ್ಬರೂ ಒಟ್ಟಿಗೆ ಸೇರಿ ಕೆಲಸ ಮಾಡುವುದರಲ್ಲಿ ತಪ್ಪೇನಿದೆ....?

ನಾವು ಯಾವಾಗಲಾದರೂ ಕಣ್ಣು ಮುಚ್ಚಿಕೊಂಡು ಅಡುಗೆಮನೆಯಲ್ಲಿ ಯಾರಿದ್ದಾರೆ ಎಂದು ಕಲ್ಪಿಸಿಕೊಂಡರೆ, ಅಲ್ಲಿ ನಮ್ಮ ಕಣ್ಣೆದುರು ಯಾರು ಕಾಣುತ್ತಾರೆ ಹೇಳಿ? ಹೌದು. ಖಂಡಿತವಾಗಿಯೂ, ನಮ್ಮ ತಾಯಿ, ಸಹೋದರಿ, ಹೆಂಡತಿ ಅಥವಾ ಇನ್ನೂ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಅಲ್ಲಿ ಒಬ್ಬ ಮಹಿಳೆಯ ಚಿತ್ರಣ ನಮ್ಮ ಕಣ್ಮುಂದೆ ಬರುತ್ತದೆ. ಅದು ಏಕೆ ಅಂತ ನಾವು ಎಂದಾದರೂ ಯೋಚನೆ ಮಾಡಿದ್ದೇವೆಯೇ? ಅಡುಗೆಮನೆಯಲ್ಲಿ ಅಡುಗೆ ಮಾಡುವ ತಂದೆ, ಸಹೋದರ ಅಥವಾ ಬೇರೆ ಯಾವುದೇ ಪುರುಷನ ಚಿತ್ರ ನಮ್ಮ ಕಣ್ಮುಂದೆ ಏಕೆ ಬರುವುದಿಲ್ಲ? ಮತ್ತೊಂದೆಡೆ, ನೀವು ಹೋಟೆಲ್‌, ರೆಸ್ಟೋರೆಂಟ್‌ ಅಥವಾ ಡಾಬಾಗಳಂತಹ ಸ್ಥಳಗಳ ಬಗ್ಗೆ ಮಾತನಾಡುವುದಾದರೆ, ನಾವು ಎಂದಿಗೂ ಅಲ್ಲಿ ಮಹಿಳೆಯರನ್ನು ನೋಡುವುದಿಲ್ಲ. ಅಲ್ಲಿ ಮಹಿಳೆ ಕಂಡುಬರುವುದು ಬಹಳ ವಿರಳ.

ವಾಸ್ತವವಾಗಿ, ಈ ಕೆಲಸಕ್ಕೆ ಯಾವುದೇ ಹಣವನ್ನೂ ಪಾವತಿಸಲು ಆಗುವುದಿಲ್ಲ. ಸಾಮಾನ್ಯವಾಗಿ ಪುರುಷ ಪ್ರಾಬಲ್ಯ ಇಲ್ಲಿ ಹೆಚ್ಚಾಗಿರುತ್ತದೆ. ಸಮಾಜದ ಈ ಪಿತೃಪ್ರಧಾನ ನಿಯಮಗಳು ಜನರಲ್ಲಿ ಆರಿಸಿಕೊಂಡಿವೆ. ಕುಟುಂಬದ ಎಲ್ಲಾ ನಿಯಮ ಮತ್ತು ನಿಬಂಧನೆಗಳು ಅದಕ್ಕೆ ಅನುಗುಣವಾಗಿಯೇ ರಚಿಸಲಾಗಿದೆ.

ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಅಡುಗೆ ಮಾಡುವುದು ಮಹಿಳೆಯರ ಕೆಲಸವಾಗಿದೆ. ಶತಮಾನಗಳಿಂದ ಮಹಿಳೆಯರು ಮನೆಯ ಕೆಲಸಗಳಾದ ಶುಚಿಗೊಳಿಸುವುದು, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು, ಮಕ್ಕಳನ್ನು ನೋಡಿಕೊಳ್ಳುವುದೂ ಸೇರಿದಂತೆ ಮನೆಯ ಎಲ್ಲಾ ಜವಾಬ್ದಾರಿಗಳನ್ನೂ ನಿಭಾಯಿಸುತ್ತಾ ಬಂದಿದ್ದಾರೆ.

ಪುರುಷರು ಮನೆಯ ಹೊರಗೆ ಹೋಗಿ ಕೆಲಸ ಮಾಡುತ್ತಾರೆ ಎಂಬುದು ಸಂಪ್ರದಾಯವಾಗಿತ್ತು. ಮೊದಲೆಲ್ಲಾ, ಮನೆಗೆ ಆದಾಯ, ಖರ್ಚು ವೆಚ್ಚಕ್ಕಾಗಿ ದುಡಿಯುವುದು ಪುರುಷರ ಜವಾಬ್ದಾರಿಯಾಗಿತ್ತು. ಆದರೆ ಇಂದು ಬಹುತೇಕ ಮಹಿಳೆಯರು ಹೊರಗೆ ಹೋಗಿ ದುಡಿಯಲು ಆರಂಭಿಸಿದ್ದಾರೆ.

ಆಕೆ ಇಡೀ ದಿನ ಕಛೇರಿಯಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾಳೆ. ಇದರ ಜೊತೆ ಮನೆಯ ಕೆಲಸವನ್ನೂ ಮಾಡಬೇಕಾಗುತ್ತದೆ. ಅವಳು ಎಷ್ಟೇ ಕಾರ್ಯನಿರತಳಾಗಿದ್ದರೂ, ಕೆಲಸಕ್ಕೆ ಹೊರಡುವುದು ಎಷ್ಟೇ ತಡವಾದರೂ, ಹೊರಡುವ ಮೊದಲು ಆಕೆ ತನ್ನ ಮನೆಯ ಎಲ್ಲಾ ಕೆಲಸಗಳನ್ನು ಮುಗಿಸಬೇಕು. ಆಕೆಗೆ ಆ ಕೆಲಸ ನಿರ್ವಹಿಸಲು ಸಾಧ್ಯವಾಗದಿದ್ದರೆ, ಆಕೆ ತನ್ನ ಕಛೇರಿಯ ಕೆಲಸವನ್ನು ಬಿಡುವಂತೆ ಸಲಹೆ ನೀಡಲಾಗುತ್ತದೆ.

ಮಗು ಚಿಕ್ಕದಾಗಿದ್ದರೂ, ಅದು ಆಕೆಯ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕುಟುಂಬ ಗಂಡ ಮತ್ತು ಹೆಂಡತಿ ಇಬ್ಬರಿಗೂ ಸೇರಿದ್ದು ಎಂದಾದರೆ, ಇಬ್ಬರೂ ಒಟ್ಟಿಗೆ ಸೇರಿ ಕೆಲಸ ಮಾಡಬಾರದೇಕೆ?

ಕೆಲಸ ಹಂಚಿಕೊಳ್ಳುವುದು

ನಾವು ಆಗಾಗ ಲಿಂಗ ಸಮಾನತೆಯ ಬಗ್ಗೆ ಮಾತನಾಡುತ್ತಿರುತ್ತೇವೆ. ಇದು ಇಂದು ಮಹಿಳೆಯರಿಗೆ ಬಹಳ ಅಗತ್ಯದ ಹಕ್ಕೂ ಹೌದು. ಇಲ್ಲಿ ಸಮಾನತೆ ಎಂದರೆ ಸಮಾನ ಅವಕಾಶ, ಸಮಾನ ಗೌರವ, ಸಮಾನ ಜವಾಬ್ದಾರಿ ಮತ್ತು ಸಮಾನ ಪ್ರಾಮುಖ್ಯತೆ. ಇಂದು ಪರಿಸ್ಥಿತಿಗಳು ಬಹಳಷ್ಟು ಬದಲಾಗಿವೆ. ಪುರುಷರು ಹಾಗೂ ಮಹಿಳೆಯರು ಇಬ್ಬರೂ ಅನೇಕ ಕೆಲಸಗಳನ್ನು ಮಾಡಬಲ್ಲರು. ಇದು ಹಿಂದಿನ ಕಾಲದಲ್ಲಿ ಸಾಧ್ಯವಾಗುತ್ತಿರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ