ಎಂಟನೇ ಶತಮಾನದ ಅಂತ್ಯ ಮತ್ತು ಒಂಬತ್ತನೇ ಶತಮಾನದಲ್ಲಿ ವಿವಿಧ ಧರ್ಮಗಳ ಸೆಳೆತಕ್ಕೆ ಸಿಕ್ಕಿ ಸನಾತನ ಧರ್ಮ ಆವಸಾನದ ಅಂಚಿನಲ್ಲಿದ್ದಾಗ ಹಿಂದೂ ಧರ್ಮದ ಪುನರುತ್ಥಾನದ ಆಶಾಕಿರಣವಾಗಿ ಶ್ರೀ ಶಂಕರಾಚಾರ್ಯರ ಆಗಮನವಾಗಿ ಅನ್ಯಧರ್ಮೀಯರನ್ನು ಸಮರ್ಥವಾಗಿ ವಾದದಲ್ಲಿ ಸೋಲಿಸಿ ತಮ್ಮ ಅಹಂ ಬ್ರಹ್ಮಾಸ್ಮಿ ಎನ್ನುವ ಅದ್ವೈತ ತತ್ವದ ಮೂಲಕ ಸನಾತನ ಧರ್ಮವನ್ನು ಎತ್ತಿಹಿಡಿದ ಪರಂಪರೆಯನ್ನು 10 ಮತ್ತು 11ನೇ ಶತಮಾನದಲ್ಲಿ ಮುಂದುವರಿಸಿದ ಕೀರ್ತಿ ಶ್ರೀ ರಾಮಾನುಜಾಚಾರ್ಯರಿಗೆ ಸಲ್ಲುತ್ತದೆ. ಈ ಇಬ್ಬರು ಮಹಾನ್ ಆಚಾರ್ಯರ ನಡುವೆ ಹಲವಾರು ಸಾಮ್ಯಗಳಿದ್ದು ಮೊದಲನೆಯದಾಗಿ ಈ ಇಬ್ಬರೂ ಮಹಾನುಭಾವರ ಜಯಂತಿಯು ಒಂದೇ ದಿನವಾಗಿದೆ. ಕೇರಳದಲ್ಲಿ ಹುಟ್ಟಿದ ಶ್ರೀ ಶಂಕರರು ಮತ್ತು ತಮಿಳುನಾಡಿನ ಶ್ರೀ ರಾಮಾನುಜರು ಇಬ್ಬರೂ ತಮ್ಮ ಪ್ರಾಭಲ್ಯವನ್ನು ಕರ್ನಾಟಕದ ಶೃಂಗೇರಿ ಮತ್ತು ಮೇಲುಕೋಟೆಯಲ್ಲಿ ಪಡೆದುಕೊಂಡಿರುವುದು ನಮ್ಮ ನಾಡಿನ ಸೌಭಾಗ್ಯವೇ ಸರಿ. ಶ್ರೀ ಶಂಕರಾಚಾರ್ಯರು ಜೀವಿತಾವಧಿ ಕೇವಲ 32 ವರ್ಷಗಳಾದರೆ, 120 ವರ್ಷಗಳ ಕಾಲವಿದ್ದ ಶ್ರೀ ರಾಮಾನುಜರು ತಮ್ಮ ಜೀವಿತಾವಧಿಯ 32ವರ್ಷಗಳಷ್ಟು ಕಾಲವನ್ನು ಕರ್ನಾಟಕದಲ್ಲಿಯೇ ಕಳೆದು ಈ ನಾಡಿನಾದ್ಯಂತ ಸಂಚರಿಸಿ ಭಕ್ತಿಯ ಸುಧೆಯನ್ನು ಎಲ್ಲರಿಗೂ ಪಸರಿಸಿದ್ದಲ್ಲದೇ ಅನೇಕ ದೇವಸ್ಥಾನಗಳನ್ನು ಕಟ್ಟಿಸಿದ ಕೀರ್ತಿಗೆ ಭಾಜನಾರಾಗಿದ್ದಾರೆ.

ತಮಿಳುನಾಡಿನ ಕಂಚಿ ಪಟ್ಟಣದ ಹತ್ತಿರ ಇರುವ ಶ್ರೀ ಪೆರಂಬದೂರಿನ (ಮಾಜೀ ಪ್ರಧಾನಿಗಳಾದ ಶ್ರೀ ರಾಜೀವ್ ಗಾಂಧಿಯವರ ಹತ್ಯೆಯಾದ ಸ್ಥಳ) ಶ್ರೀ ಅಸುರಿ ಕೇಶವ ಸೊಮಯಾಜಿ ದೀಕ್ಷೀತರು ಮತ್ತು ಕಾಂತಿಮತಿ ದಂಪತಿಗಳಿಗೆ 1017ರ ವೈಶಾಖ ಶುದ್ಧ ಪಂಚಮಿಯಂದು ಆರ್ದ್ರ ನಕ್ಷತ್ರದಲ್ಲಿ ಶ್ರೀ ರಾಮಾನುಜರ ಜನನವಾಗುತ್ತದೆ. ಕಾಲ ಕಾಲಕ್ಕೆ ಅನುಗುಣವಾಗಿ ಚೌಲ, ಉಪನಯನ, ವೇದಾಭ್ಯಾಸಗಳು ಆರಂಭವಾಗಿ ಅವರ 16ನೆಯ ವಯಸ್ಸಿಗೇ ವಿವಾಹವಾಗುತ್ತದೆ. ಅದೇ ಸಮಯದಲ್ಲಿ ಅವರಿಗೆ ಪಿತೃವಿಯೋಗವಾಗುತ್ತದೆ. ಅವರ ಕರ್ಮಾದಿಗಳನ್ನೆಲ್ಲಾ ಮುಗಿಸಿ ತಮ್ಮ ಮುಂದಿನ ಅಧ್ಯಯನಕ್ಕಾಗಿ ಸೂಕ್ತ ಗುರುಗಳ ಆಶ್ರಯಕ್ಕೆ ಅರಸುತ್ತಿದ್ದಾಗ. ಕಾಂಚಿಪುರದಲ್ಲಿದ ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸುತ್ತಿದ್ದ ಶ್ರೀ ಯಾದವ ಪ್ರಕಾಶರೆಂಬ ಪ್ರಸಿದ್ಧ ವಿದ್ವಾಂಸರ ಬಳಿ ಶಿಷ್ಯತ್ವವನ್ನು ಸ್ವೀಕರಿಸುತ್ತಾರೆ. ಇಲ್ಲಿ ಅನೇಕ ಸದ್ಗುಣಗಳ ಗಣಿಯಾಗಿ, ಶಾಸ್ತ್ರಾಧ್ಯಯನದ ವಿಧೇಯ ವಿಧ್ಯಾರ್ಥಿಯಾಗಿ, ಗುರುಗಳಲ್ಲಿ ವಿನೀತರಾಗಿ, ಭಗವಂತನ ಪರಮಭಕ್ತನಾಗಿ, ತನ್ನ ಸಮಾಜದ ಜನಗಳಲ್ಲಿ ಅಂತಃಕರಣವುಳ್ಳವರಾಗಿ, ಪರಮ ಸತ್ಯದ ಸ್ಪಷ್ಟ ದಾರ್ಶನಿಕರಾಗಿ, ಅದುವರೆವಿಗೂ ರಾಮಾನುಜರಾಗಿದ್ದವರು ಅಲ್ಲಿಂದ ಮುಂದೆ ಆಚಾರ್ಯ ರಾಮಾನುಜಾಚಾರ್ಯರಾಗಿ ಅನಾವರಣಗೊಳ್ಳುತ್ತಾರೆ. ಇದೇ ದಿನಗಳಲ್ಲಿ ರಾಮಾನುಜರು ತಮ್ಮ ಗುರುಗಳ ಅದ್ವೈತದ ನಿಲುವಿನ ವಿರುದ್ದ ನಿಂತು , ಪರಿಪೂರ್ಣ ಅದ್ವೈತ ವೇದಾಂತ ಅಂದರೆ ವಿಶಿಷ್ಟಾದ್ವೈತವನ್ನು ಬೋಧಿಸತೊಡಗಿದರು.

ಅದುವರೆವಿಗೂ ವೇದ ಅಪೌರುಷೀಯ ಎಂದು ನಂಬಿದ್ದ ಕಾಲ ಮತ್ತು ಅದ್ವೈತ ತತ್ವದಲ್ಲಿ ಆತ್ಮ ಮತ್ತು ಪರಮಾತ್ಮ ಎರಡೂ ಒಂದೇ. ಆ ಎರಡೂ ನಮ್ಮೊಳಗೇ ಇರುವ ಕಾರಣ ಅಹಂ ಬ್ರಹ್ಮಾಸ್ಮಿ ಎಂಬ ವಾದವಾದರೇ, ವಿಶಿಷ್ಠಾದ್ವೈತದ ಸಿದ್ಧಾಂತದ ಪ್ರಕಾರ ಪರಮಾತ್ಮ ಎಂದರೆ ಶ್ರೀಮನ್ನಾರಯಣ. ಹಾಗಾಗಿ, ಶ್ರೀಮನ್ನಾರಾಯಣನೇ ವಿಶಿಷ್ಟಾದ್ವೆತ್ರೖತ ಸಿದ್ಧಾಂತದ ಪ್ರಥಮಾಚಾರ‍್ಯ. ವೇದವು ಅವನಿಂದ ಉಪದಿಷ್ಟವಾದ ವಾಣಿ. ಆ ಭಗವಂತನ ಲೀಲೆಗಳನ್ನು ಕಂಡ ಆಳ್ವಾರರುಗಳು ಭಾವಾವೇಶದಿಂದ ಆಡಿದ ಮಾತುಗಳು, ಹಾಡಿದ ಪದ್ಯಗಳೆಲ್ಲವೂ ಆ ಪರಮಾತ್ಮನನ್ನು ಕುರಿತು ವರ್ಣಿಸಿರುವುದರಿಂದಲೇ ಹರಿಯೇ ಸರ್ವೋತ್ತಮ ಹಾಗಾಗಿ ಶ್ರೀ ವೈಷ್ಣವರ ಸಿದ್ಧಾಂತಕ್ಕೆ ವಿಶಿಷ್ಟಾದ್ವೆತ್ರೖತ ಸಿದ್ಧಾಂತ ಎಂಬ ಹೆಸರು ಬಂದಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ