ಯಾವುದೋ ನೆಂಟರ ಮದುವೆಗೆ ಹೋಗಲು ಗಂಡ ಹೆಂಡತಿ ಸಿದ್ದರಾಗುತ್ತಿದ್ದರು. ಹೆಂಡತಿ ಹೇಗೆ ಸಿದ್ಧಳಾದಳು ಅಂತೀರಾ? ಹೊರಡುವ ಮೊದಲು ಸಾಂಗೋಪಾಂಗವಾಗಿ ಈ ಕೆಳಗಿನ ಮೇಕಪ್‌ ಮುಗಿಸಿದಳು.

ಫೇಸ್‌ವಾಶ್‌    ಫೇಸ್‌ಸ್ಟಿಕ್‌    ಕನ್ಸೀಲರ್‌     ಐ ಶ್ಯಾಡೋ   ಮಸ್ಕರಾ     ಲಿಪ್‌ಸ್ಟಿಕ್‌    ಲಿಪ್‌ಪೆನ್ಸಿಲ್‌

ಐ ಲೈನರ್‌    ಫೇಸ್‌ಕ್ರೀಂ     ಫೇಸ್‌ ಪೌಡರ್‌ ಕಾಡಿಗೆ  ಬ್ಲಶ್‌ಆನ್‌    ನೇಲ್ಪಾಲಿಶ್‌   ಪರ್ಫ್ಯೂಮ್ ಇದೆಲ್ಲ ಆದ ಮೇಲೆ ಆಕರ್ಷಕ ಸೀರೆ ಉಟ್ಟು 28 ಕಡೆ ಪಿನ್‌ ಮಾಡಿ, 2 ವಿಧದ ಹೇರ್‌ಸ್ಟೈಲ್ ಬದಲಾಯಿಸಿ, ಹೈ ಹೀಲ್ಸ್ ಧರಿಸಿ, ಕೊನೆಗೆ    ಗೆಳೆತಿಗೆ ಫೋನ್‌ ಮಾಡಿದಳು, ``ಏ... ನನಗೆ ಅವಸರದಲ್ಲಿ ಏನೂ ರೆಡಿ ಮಾಡಿಕೊಳ್ಳಲಿಕ್ಕೆ ಆಗಿಲ್ಲ. ಹೂಂ, ಬೇಗ ಬರ್ತೀನಿ ಬಿಡು.....''

ಅದೇ ಗಂಡನೆಂಬ ಪ್ರಾಣಿ ಈಗಾಗಲೇ ಛತ್ರ ತಲುಪಿದ್ದ ಗೆಳೆಯನಿಗೆ ಪೋನ್‌ ಮಾಡಿ, ``ಸ್ನಾನ ಮಾಡಿ ನಂತರ ಹೊರಡು ಅಂತೀಯಾ ಗುರು?'' ಎಂದು ಕೇಳಿದ.

``ಯಾವ ಮಹಾ ಲಾರ್ಡ್‌ ಲಬಕ್‌ದಾಸ್‌ ಮದುವೆ ನಡೀತಿದೆ ಅಂತ.... ನಮ್ಮ ಕೊಟ್ರೇಶಿ ಮದ್ವೆ ತಾನೇ.... ಮುಖ ತೊಳ್ಕೊಂಡು ಬೇಗ ಬಾರ್ಲೇ.....''

 

ಅರವಿಂದಮ್ಮ ಏದುಸಿರು ಬಿಡುತ್ತಾ ಕೈಯಲ್ಲೊಂದು ಸುತ್ತಿಗೆ ಹಿಡಿದು ಹೈಸ್ಕೂಲ್ ಕಲಿಯುತ್ತಿದ್ದ ತಮ್ಮ ಮಗನ ಶಾಲೆ ತಲುಪಿದರು. ಅಲ್ಲಿ ಶಾಲೆ ಮುಂದಿದ್ದ ಜವಾನ ಸಿದ್ದನನ್ನು ಕೇಳಿದರು, ``ಏನಪ್ಪ, ಇಲ್ಲಿ ಶಾಂತಮೂರ್ತಿಗಳ ಕ್ಲಾಸ್‌ ಯಾವುದು?''

``ಅದೇಕೆ ಕೇಳ್ತಿದ್ದೀರಿ ತಾಯಿ?'' ಆಕೆಯ ಕೈಯಲ್ಲಿದ್ದ ಸುತ್ತಿಗೆ ಕಂಡು ಗಾಬರಿಗೊಂಡ ಸಿದ್ದ ಪ್ರಶ್ನಿಸಿದ.

``ಏ... ಅವರು ನಮ್ಮ ಮಗನ ಕ್ಲಾಸ್‌ ಟೀಚರ್‌ ಕಣಪ್ಪ....'' ಎಂದು ಸುತ್ತಿಗೆ ಝಳಪಿಸುತ್ತಾ ಹೇಳಿದರು. ಅದನ್ನು ಕೇಳಿ ಎದ್ದೆನೋ ಬಿದ್ದೆನೋ ಎಂದು ಸಿದ್ದ ಓಡೋಡಿ ಶಾಂತಮೂರ್ತಿಗಳ ಕ್ಲಾಸಿಗೆ ಹೋಗಿ, ``ಸಾರ್‌....ನಿಮ್ಮನ್ನು ಹುಡುಕಿಕೊಂಡು ಒಬ್ಬ ಹೆಂಗಸು ಸುತ್ತಿಗೆ ಸಮೇತ ಬಂದಿದ್ದಾರೆ. ಯಾವುದಕ್ಕೂ ಹುಷಾರಾಗಿರಿ!'' ಎಂದ.

ಅದನ್ನು ಕೇಳಿ ಅವರಿಗೆ ಚಳಿಜ್ವರ ಬಂತು. ತಕ್ಷಣ ಪ್ರಿನ್ಸಿಪಾಲ್‌ರ ಕೋಣೆಗೆ ಓಡಿದರು. ವಿಷಯ ತಿಳಿದ ಪ್ರಿನ್ಸಿಪಾಲರು ಅರವಿಂದಮ್ಮನನ್ನು ಹುಡುಕುತ್ತಾ ಶಾಲೆಯ ಮುಂಭಾಗಕ್ಕೆ ಬಂದರು.

ಈಕೆಯನ್ನು ಕಂಡದ್ದೇ ವಿನಯವಾಗಿ, ``ದಯವಿಟ್ಟು ಶಾಂತರಾಗಿ ತಾಯಿ... ವಿಷಯ ಏನು ಅಂತ ಹೇಳಿ.''

``ನಾನು ಶಾಂತವಾಗಿಯೇ ಇದ್ದೇನೆ, ಶಾಂತಮೂರ್ತಿಗಳ ಕ್ಲಾಸ್‌ ಹುಡುಕುತ್ತಿದ್ದೀನಷ್ಟೇ.''

``ಅದೇ.... ಯಾಕೆ ಅಂತ?''

``ಅಂದ್ರೆ.... ಅಲ್ಲಿ ನನ್ನ ಮಗ ಕೂರುವ ಬೆಂಚಿನಲ್ಲಿ 1 ತಿಂಗಳಿನಿಂದ ಯಾವುದೋ ಮೊಳೆ ಎದ್ದುಬಿಟ್ಟಿದೆ. ಅದನ್ನು ಸರಿ ಮಾಡಬೇಕು. ಮೊನ್ನೆ ಮೂರನೇ ಪ್ಯಾಂಟ್‌ ಹರಿದುಕೊಂಡು ಬಂದಿದ್ದಾನೆ ಅವನು,'' ಎಂದು ಶಾಂತವಾಗಿ ವಿವರಿಸಿದರು.

ಪತಿ ಪತ್ನಿ 2 ಗಂಟೆ ರಾತ್ರಿಯಲ್ಲಿ ಗೊರಕೆ ಹೊಡೆಯುತ್ತಿದ್ದರು. ಇದ್ದಕ್ಕಿದ್ದಂತೆ ಫ್‌ಓನ್‌ ರಿಂಗಾಯಿತು.

ಪತಿ : ಏನೇ.... ಅಮ್ಮ ರೈಲ್ವೆ ಸ್ಟೇಷನ್‌ಗೆ ಬಂದು ಕಾಯುತ್ತಿದ್ದಾರಂತೆ. ಏನು ಮಾಡು ಅಂತೀಯಾ?

ಪತ್ನಿ : ಅಯ್ಯೋ.... ಸುಮ್ನೆ ಬಿದ್ಕೊಳ್ರಿ, ಇಷ್ಟು ಹೊತ್ತಿನಲ್ಲಿ ಏನು ಮಾಡೋಕ್ಕಾಗುತ್ತೆ?

ಪತಿ : ಮತ್ತೆ ಮತ್ತೆ ಫೋನ್‌ ರಿಂಗಾಗ್ತಿದೆ ಏನು ಮಾಡಲಿ?

ಪತ್ನಿ : ಏನಾದ್ರೂ ಮಾಡಿ... ಏನೋ ಒಂದು ಹೇಳಿ ಆ ಮುದುಕೀನ ಹಾಗೇ ಸಾಗಹಾಕಿ. ಇಲ್ಲಿ ಯಾರು ಬಿಡುವಾಗಿದ್ದಾರೆ ಸೇವೆ ಮಾಡೋಕ್ಕೆ? ಅಂತೂ ಪತಿರಾಯ ಏನೋ ಹೇಳಿ ಫೋನ್‌ ಮತ್ತೆ ರಿಂಗ್‌ ಆಗದಂತೆ ಮಾಡಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ