ಮೋಹನ್ ಪಾರ್ಟಿ ಮುಗಿಸಿಕೊಂಡು ತಡವಾಗಿ ಮನೆ ತಲುಪಿದ. ಮಾರನೇ ದಿನ ಅವನ ಸಹೋದ್ಯೋಗಿ ರಾಬರ್ಟ್ ಅದೇ ವಿಚಾರವಾಗಿ ಅವನನ್ನು ಪ್ರಶ್ನಿಸಿದ. ಅದಕ್ಕೆ ಉತ್ತರಿಸಿದ ಮೋಹನ್, ``ಇಲ್ಲ...ಇಲ್ಲ.... ಅಂಥ ವಿಶೇಷ ಏನಿಲ್ಲ. ಮೇಲಿನ 2 ಹಲ್ಲು ಮೊನ್ನೇನೇ ಗಾಡಿಯಿಂದ ಬಿದ್ದಾಗ ಬಿದ್ದುಬಿಟ್ಟಿತ್ತು ಬಿಡು,'' ಎನ್ನುವುದೇ?
ಪ್ರಕಾಶ್ ಒಂದು ಹೊಸ ಕಾರ್ ಖರೀದಿಸಿದ. ಹೆಂಡತಿಗೆ ಆ ವಿಚಾರವನ್ನು ಒಂದು ಸರ್‌ಪ್ರೈಸ್ ಆಗಿ ಹೇಳೋಣ ಎಂದು ನಿರ್ಧರಿಸಿದ. ಹೀಗಾಗಿ ಮನೆಗೆ ಬಂದೊಡನೆ ಹೆಂಡತಿಗೆ ಕೂಗಿ ಹೇಳಿದ, ``ಡಾರ್ಲಿಂಗ್, ನಿನ್ನ ಹಲವು ವರ್ಷಗಳ ಕನಸು ನನಸಾಗಿದೆ... ಬೇಗ ಬಂದು ನೋಡು.....''
ಅಡುಗೆಮನೆಯಿಂದ ಓಡಿಬಂದ ಅವನ ಹೆಂಡತಿ ಸೆರಗಿಗೆ ಕೈ ಒರೆಸಿಕೊಳ್ಳುತ್ತಾ ಹಾಗೇ ಕೇಳಿದಳು, ``ಅಯ್ಯೋ ಪಾಪ.... ಏನ್ರಿ ಆಯ್ತು ನಿಮ್ಮಮ್ಮನಿಗೆ...?''
ಪುಢಾರಿ ಪುಟ್ಟಸ್ವಾಮಿಯ ಹೆಂಡತಿ ಕೈಗೆ ಹೊಸ ಕ್ಯಾಮೆರಾ ಬಂದೊಡನೆ ಗಂಡನ ಫೋಟೋ ತೆಗೆದದ್ದೂ ತೆಗೆದದ್ದೇ!
``ಇದೇನೇ ನಿನ್ನ ಹೊಸ ಅವತಾರ?'' ಎಂದು ಅವನು ವಿಚಾರಿಸಿದ.
``ಏನಿಲ್ಲ ರೀ, ಇವತ್ತು `ಅನಿಮಲ್ ಪ್ಲ್ಯಾನೆಟ್' ಚಾನೆಲ್‌ನಲ್ಲಿ ವೈಲ್ಡ್ ಲೈಫ್ ಫೋಟೋಗ್ರಫಿಗಾಗಿ ಸ್ಪರ್ಧೆ ಏರ್ಪಡಿಸಿದ್ದಾರೆ. ನಿಮ್ಮದೂ ಒಂದಿಷ್ಟು ಫೋಟೋ ಕಳುಹಿಸೋಣ ಅಂತ....'' ಎಂದು ಆಕೆ ಹೇಳುವುದೇ?
ಪತಿ : ನಮಗೆ ಮದುವೆಯಾಗಿ 2 ವರ್ಷಗಳಾಯ್ತು. ಆದರೂ ಗಾಯದ ಮೇಲೆ ಉಪ್ಪೆರಚುವ ನಿಮ್ಮಪ್ಪನ ಸ್ವಭಾವ ಇನ್ನೂ ಬದಲಾಗಿಲ್ಲ ನೋಡು.
ಪತ್ನಿ : ಅದ್ಯಾಕ್ರೀ? ಅವರೇನು ಹೇಳಿದರು?
ಪತಿ : `ಅಳಿಯಂದ್ರೆ, ನನ್ನ ಮಗಳ ಜೊತೆ ನಿಮ್ಮ ಜೀವನ ಸುಖವಾಗಿ ನಡೆಯುತ್ತಿದೆ ತಾನೇ,' ಅನ್ನುವುದೇ?
ಹೊಸದಾಗಿ ಮದುವೆಯಾದ ರಾಜು-ಗೀತಾ ತಮ್ಮ ಏರಿಯಾಗೆ ಹೊಸದಾಗಿ ಬಂದಿದ್ದ ಒಂದು ಪಾಶ್ ಹೋಟೆಲ್‌ಗೆ ಹೋದರು. ಇವರ ಆರ್ಡರ್ ಪ್ರಕಾರ ಮಾಣಿ ಊಟ ತಂದಿಟ್ಟ.
ರಾಜು : ಊಟದ ಒಂದೊಂದು ಐಟಂ ಕೂಡ ಬಲು ಬೊಂಬಾಟಾಗಿ ಇರುವಂತಿದೆ. ನೋಡಿದರೇನೇ ಹಸಿವು ಜಾಸ್ತಿ ಆಗ್ತಿದೆ. ಬೇಗ ಬೇಗ ಊಟ ಶುರು ಮಾಡೋಣ....
ಗೀತಾ : ಅದಿರಲಿ, ಮನೆಯಲ್ಲಿ ಊಟ ಶುರು ಮಾಡುವ ಮೊದಲು ಪ್ರಾರ್ಥನೆ ಮಾಡ್ತಿದ್ರಲ್ಲ, ಇಲ್ಲೇಕೆ ಹಾಗೇ ಶುರು ಮಾಡಿಬಿಟ್ರಿ?
ರಾಜು : ಮನೆಯಲ್ಲಿ ನಿನ್ನ ಕೈ ನಳಪಾಕ... ಇಲ್ಲಾದರೆ ನುರಿತ ಶೆಫ್‌ಗಳ ಕೈಚಳಕ ಅಲ್ಲವೇ?
ಪತಿ : ನಮ್ಮ ಮದುವೆಯ 10ನೇ ವಾರ್ಷಿಕೋತ್ಸವಕ್ಕೆ ನಾನು ನಿನ್ನನ್ನು ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಕರೆದೊಯ್ಯುತ್ತೀನಿ.
ಪತ್ನಿ : ಹೌದೇ? ಹೌ ನೈಸ್! ಮತ್ತೆ 25ನೇ ವಾರ್ಷಿಕೋತ್ಸವಕ್ಕೆ?
ಪತಿ : ಅಲ್ಲಿಗೆ ಬಂದು ವಾಪಸ್ ಕರೆದುಕೊಂಡು ಬರ್ತೀನಿ.
ಗಂಡ : ನಾನು ಹೊಸ ಬಟ್ಟೆ ಹಾಕಿಕೊಂಡು ಸಂತೆಗೆ ಹೋದಾಗೆಲ್ಲ ಬೇಕೆಂದೇ ತರಕಾರಿ ಬೆಲೆ ದುಬಾರಿ ಹೇಳುತ್ತಾರೆ. ಅದೇ ಹಳೇ ಬಟ್ಟೆ ಹಾಕಿಕೊಂಡು ಹೋದಾಗ ತರಕಾರಿ ಅಗ್ಗವಾಗಿ ಸಿಗುತ್ತದೆ. ಹೀಗೇಕೆ?
ಹೆಂಡತಿ : ಒಂದು ಕೆಲಸ ಮಾಡಿ, ಮುಂದಿನ ಸಲ ಚಿಂದಿಬಟ್ಟೆ ಹಾಕಿಕೊಂಡು ಕೈಯಲ್ಲಿ ಒಂದು ಅಲ್ಯುಮಿನಿಯಂ ತಟ್ಟೆ ಹಿಡಿದುಕೊಂಡು ಹೋಗಿ, ತರಕಾರಿ ಫ್ರೀಯಾಗಿ ಸಿಗಬಹುದು.