ಕೈಲಾಶ್‌ ಸತ್ಯಾರ್ಥಿಯವರ `ಬಾಲ್ಯ ಉಳಿಸಿ ಆಂದೋಲನ'ದ ಕುರಿತಂತೆ ಒಂದಿಷ್ಟು ವಿವರ....`

ಬಚ್‌ಪನ್‌ ಬಚಾವೋ ಆಂದೋಲನ'ದ (ಬಾಲ್ಯ ಉಳಿಸಿ ಆಂದೋಲನ) ಮೂಲಕ ಚಿರಪರಿಚಿತರಾದ ಕೈಲಾಶ್‌ ಸತ್ಯಾರ್ಥಿ ಅವರಿಗೆ ನೊಬೆಲ್ ‌ಪುರಸ್ಕಾರ ಹುಡುಕಿಕೊಂಡು ಬಂದಿರುವುದು ಈಗ ಅವರು ಈ ಆಂದೋಲನವನ್ನು ಇನ್ನಷ್ಟು ತೀವ್ರಗೊಳಿಸುವ ಅಗತ್ಯವಿದೆ.

ಕೇವಲ ಕೆಲವು ಉದ್ಯಮಗಳಿಂದ ಬಾಲಕಾರ್ಮಿಕರನ್ನು ನಿವಾರಿಸಿದರೆ ಸಾಲದು, ಸಮಾಜದ ಪ್ರತಿಯೊಂದು ನಿಟ್ಟಿನಲ್ಲೂ ಈ ಸಮಸ್ಯೆ ಇದೆ. ಅದನ್ನು ನಿವಾರಿಸಲು ನಾವು ಗಂಭೀರವಾಗಿ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ.

ಕೆಲವು ಉದ್ಯಮಗಳಲ್ಲಿ ಬಾಲಕಾರ್ಮಿಕರನ್ನು ಅತಿ ಹೆಚ್ಚು ಬಳಸಿಕೊಳ್ಳಲಾಗುತ್ತಿತ್ತು. `ಬಾಲ್ಯ ಉಳಿಸಿ' ಆಂದೋಲನದಿಂದಾಗಿ ಈ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ ಎಂಬುದು ಸತ್ಯ ಸಂಗತಿ.

ಬಾಲಕಾರ್ಮಿಕ ಪದ್ಧತಿಯನ್ನು ಸಮಾಜದಿಂದ ತೊಲಗಿಸಬೇಕೆಂದರೆ, ಇಡೀ ಸಮಾಜದ ವಿಕಾಸದ ಬಗ್ಗೆ ಗಮನ ಕೊಡಬೇಕು.

ಬಾಲಕಾರ್ಮಿಕ ಪದ್ಧತಿ ಜೀವಂತವಾಗಿರಲು ಒಮ್ಮೊಮ್ಮೆ ಕುಟುಂಬದ ಅವಶ್ಯಕತೆಯೂ ಕಾರಣವಾಗುತ್ತದೆ. ತಂದೆ ತಾಯಿ ಮಕ್ಕಳನ್ನು ಶಾಲೆಗೆ ಕಳಿಸುವ ಬದಲು ಕೆಲಸಕ್ಕೆ ಕಳಿಸಲು ಇಷ್ಟಪಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವರ ಬಡತನ ಹಾಗೂ ಅಜ್ಞಾನ.

ನೊಬೆಲ್ ಪುರಸ್ಕಾರ ದೊರೆತಿರುವುದರಿಂದ `ಬಚ್‌ಪನ್‌ ಬಚಾವೋ' ಆಂದೋಲನಕ್ಕೆ ವಿಶ್ವಮಟ್ಟದ ಮಾನ್ಯತೆ ದೊರಕಿದೆ. ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲಗೊಳಿಸಲು ಸರ್ಕಾರ ಹಾಗೂ ಸಮಾಜದ ಜೊತೆ ಜೊತೆಗೆ ಮಕ್ಕಳ ತಂದೆತಾಯಿಗಳು ಕೂಡ ಕಾರ್ಯಪ್ರವೃತ್ತರಾಗಬೇಕು.

ಬಾಲಕಾರ್ಮಿಕ ಪದ್ಧತಿ ಒಂದು ರೀತಿಯ ಸಾಮಾಜಿಕ ಅನಿಷ್ಟ. ಇದರಿಂದ ಕೇವಲ ಮಗುವಿಗಷ್ಟೇ ಅಲ್ಲ, ದೇಶದ ವಿಕಾಸದ ಮೇಲೂ ಗಂಭೀರ ಪರಿಣಾಮ ಉಂಟಾಗುತ್ತದೆ.

ಬಾಲಕಾರ್ಮಿಕ ಪದ್ಧತಿಯ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ನಾವು ಧಾರ್ಮಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವ ಮಕ್ಕಳ ಬಗ್ಗೆ ಗಮನವನ್ನೇ ಕೊಡುವುದಿಲ್ಲ. ಅಲ್ಲಿ ಕೆಲವೊಮ್ಮೆ ಮಕ್ಕಳು ವಿವಿಧ ವೇಷಧಾರಣೆ ಮಾಡಿ ದೇವಿದೇವತೆಯರಂತೆ ಕಾಣುವ ರೀತಿಯಲ್ಲಿ ಜನರನ್ನು ಆಕರ್ಷಿಸುತ್ತಾರೆ.

ಬಾಲಕಾರ್ಮಿಕ ಪದ್ಧತಿಯನ್ನು ನಿವಾರಣೆ ಮಾಡುವ ನೆಪದಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ಕಾರ್ಖಾನೆ ಹಾಗೂ ಇತರೆ ಕೆಲವು ಘಟಕಗಳಲ್ಲಿನ ಮಾಲೀಕರಿಂದ ಸಾಕಷ್ಟು ಹಣ ಸುಲಿಗೆ ಮಾಡುತ್ತಾರೆ. ಭಿಕ್ಷೆ ಬೇಡುವ ಮಕ್ಕಳನ್ನು ಸರಿದಾರಿಯಲ್ಲಿ ತರುವ ಪ್ರಯತ್ನವನ್ನು ಅಧಿಕಾರಿಗಳು ಮಾಡುವುದೇ ಇಲ್ಲ. ಬಾಲಕಾರ್ಮಿಕರು ಹಾಗೂ ಜೀತ ಪದ್ಧತಿಯನ್ನು ನಿವಾರಿಸಲು ಪ್ರಯತ್ನಶೀಲರಾಗಿರುವ ಕೈಲಾಶ್‌ ಸತ್ಯಾರ್ಥಿ ಅವರಿಗೆ ನೊಬೆಲ್ ಪುರಸ್ಕಾರ ದೊರೆತ ಬಳಿಕ ಈ ಸಮಸ್ಯೆಯನ್ನು ನಿವಾರಿಸುವ ಸವಲು ಇಮ್ಮಡಿಗೊಂಡಿದೆ.

ಆಂದೋಲನದ ಆರಂಭ

hargovind-khurana

ಕೈಲಾಶ್‌ ಸತ್ಯಾರ್ಥಿ ಮಧ್ಯಪ್ರದೇಶದ ವಿದಿಶಾದವರು. ಪ್ರಸ್ತುತ ಅವರ ವಾಸ ದೆಹಲಿಯಲ್ಲಿ. ಅವರ ಕುಟುಂಬದ ಇತರೆ ಸದಸ್ಯರು ಈಗಲೂ ವಿದಿಶಾದಲ್ಲೇ ವಾಸಿಸುತ್ತಿದ್ದಾರೆ.

ವಿದಿಶಾದಲ್ಲಿಯೇ ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಣ ಮುಗಿಸಿದ ಅವರು, ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.

ಸತ್ಯಾರ್ಥಿ ಅವರು ಶಾಲಾ ದಿನಗಳಲ್ಲಿಯೇ ಬಾಲಕಾರ್ಮಿಕ ಪದ್ಧತಿಯನ್ನು ಅತ್ಯಂತ ಹತ್ತಿರದಿಂದ ಕಂಡಿದ್ದರು. ಶಾಲೆಯಲ್ಲಿ ಓದುತ್ತಿದ್ದಾಗ ಒಂದು ಸಲ ಒಬ್ಬ ಪುಟ್ಟ ಹುಡುಗ ಬೂಟ್‌ ಪಾಲಿಶ್‌ ಮಾಡುವುದನ್ನು ಕಂಡಿದ್ದರು. ಈ ಕುರಿತಂತೆ. ಅವರು ತಮ್ಮ  ಕ್ಲಾಸ್‌ ಟೀಚರ್‌ ಜೊತೆ ಚರ್ಚಿಸಿದ್ದರು. ಅದು ಅವರ ಕೆಲಸ ಎಂದು ಶಿಕ್ಷಕರು ಅಸಡ್ಡೆಯಿಂದ ಉತ್ತರ ನೀಡಿದ್ದರು. ಬಳಿಕ ಆ ಹುಡುಗನನ್ನು ಮಾತನಾಡಿಸಿದಾಗ ಅವನೂ ಕೂಡ ಶಿಕ್ಷಕರು ಹೇಳಿದಂತೆ ಉತ್ತರ ಕೊಟ್ಟ. ಆಗಿನಿಂದಲೇ ಕೈಲಾಶ್‌ ಅವರು ಮಕ್ಕಳನ್ನು ಓದಿನತ್ತ ಗಮನಹರಿಸುವ ಆಂದೋಲನಕ್ಕೆ ನಾಂದಿ ಹಾಡಿದರು. ಪುಸ್ತಕಗಳನ್ನು ಸಂಗ್ರಹಿಸಿ ಬಡ ಮಕ್ಕಳಿಗೆ ವಿತರಿಸುತ್ತಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ