ಭಾರತದ ಹುಡುಗಿಯರು ಈಗ ವಿಶ್ವ ಚಾಂಪಿಯನ್ನರು. ಹೌದು. ಮಹಿಳಾ ಏಕದಿನ ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ ಭಾರತದ ವನಿತೆಯರು ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ನವಿಮುಂಬೈನಲ್ಲಿ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್​ಗಳ ರೋಚಕ ಜಯ ದಾಖಲಿಸಿದ್ದಾರೆ. ಎರಡು ಬಾರಿ ಫೈನಲ್ ಪ್ರವೇಶಿಸಿ ವಿಶ್ವಕಪ್ ಗೆಲ್ಲದೇ ನಿರಾಸೆ ಅನುಭವಿಸಿದ್ದ ಭಾರತದ ಮಹಿಳಾ ತಂಡ ಕೊನೆಗೂ ಈ ಬಾರಿ ವಿಶ್ವಕಪ್​ ಗೆ ಮುತ್ತಿಟ್ಟಿದೆ.ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಬಿಗ್​ ಫೈಟ್​ ಮ್ಯಾಚ್​​ನಲ್ಲಿ ಹರ್ಮನ್​ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಟಾಸ್ ಸೋತು ಮೊದಲು ಬ್ಯಾಟ್ ಮಾಡಿತು. ಮಳೆಯಿಂದಾಗಿ 2 ಗಂಟೆ ತಡವಾಗಿ ಆರಂಭವಾದ ಫೈನಲ್ ಪಂದ್ಯದಲ್ಲಿ ಭಾರತ 7 ವಿಕೆಟ್​ ನಷ್ಟಕ್ಕೆ 298 ರನ್ ಕಲೆಹಾಕಿತು. ಸ್ಮೃತಿ ಮಂದಾನಾ ಜೊತೆ ಇನ್ನಿಂಗ್ಸ್ ಆರಂಭಿಸಿದ ಶಫಾಲಿ ಶರ್ಮಾ 104ರನ್ ಗಳ ಜೊತೆಯಾಟವಾಡಿದರು. ಬಳಿಕ ಸ್ಮೃತಿ 45 ರನ್​ ಗೆ ಔಟಾದರೂ ಕೂಡ ಶಫಾಲಿ ಮಾತ್ರ ತಮ್ಮ ಬಿರುಸಿನ ಆಟ ಪ್ರದರ್ಶಿಸಿದರು. 78 ಎಸೆತಗಳಲ್ಲಿ 87 ರನ್ ಸಿಡಿಸಿದ ಶಫಾಲಿ ವರ್ಮಾ ತಂಡದ ಮೊತ್ತ ಹಿಗ್ಗಿಸಿದರು. ಇನ್ನು ಸೆಮಿಫೈನಲ್​​​ಲ್ಲಿ ಸೆಂಚುರಿ ಬಾರಿಸಿದ ಜೆಮೀಮಾ ರೋಡ್ರಿಗಸ್​​ 24 ರನ್ ಗಳಿಸಿದರೆ, ನಾಯಕಿ ಹರ್ಮನ್​ಪ್ರೀತ್ ಕೌರ್ 20, ದೀಪ್ತಿ ಶರ್ಮಾ 58 ರನ್​, ರಿಚಾ ಘೋಷ್ 34 ರನ್​ ಬಾರಿಸಿದರು.

ಇನ್ನು 299 ರನ್ ಟಾರ್ಗೆಟ್ ಪಡೆದು ಚೇಸಿಂಗ್​ಗೆ ಇಳಿದ ದಕ್ಷಿಣ ಆಫ್ರಿಕಾದ ಆರಂಭ ಕೂಡ ಚೆನ್ನಾಗಿಯೇ ಇತ್ತು. ನಾಯಕಿ ಲಾರ ವೊಲ್ವಾರ್ಟ್​ ಅಮೋಘ ಆಟವಾಡಿ ಭರ್ಜರಿ ಶತಕ ಗಳಿಸಿದರು. 42ನೇ ಓವರ್​ವರೆಗೂ ಕ್ರೀಸ್​ನಲ್ಲೇ ಇದ್ದು 98 ಎಸೆತಗಳಲ್ಲಿ 101 ರನ್ ಗಳಿಸಿ ಗೆಲ್ಲುವ ಸನಿಹಕ್ಕೆ ತಂದಿಟ್ಟರು. ಆದರೆ, ಭಾರತದ ವನಿತೆಯರ ಮ್ಯಾಜಿಕ್ ಮುಂದೆ ಹರಿಣಿಗಳ ಆಟ ನಡೆಯಲೇ ಇಲ್ಲ. ಕೊನೆಗೆ ದಕ್ಷಿಣ ಆಫ್ರಿಕಾ 45.3 ಓವರ್ ಗಳಲ್ಲಿ 246 ರನ್​ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.  ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲೂ ಅಮೋಘ ಆಟ ಪ್ರದರ್ಶಿಸಿದ ದೀಪ್ತಿ ಶರ್ಮಾ 5 ವಿಕೆಟ್ ಕಿತ್ತರೆ, ಶಫಾಲಿ ವರ್ಮಾ 2 ವಿಕೆಟ್ ಪಡೆದು ಭಾರತದ ವಿಶ್ವ ಚಾಂಪಿಯನ್ ಆಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ಮಹಿಳಾ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್​ಗಳ ಭರ್ಜರಿ ಜಯ ದಾಖಲಿಸಿತು. 13ನೇ ಮಹಿಳಾ ವಿಶ್ವಕಪ್​ ಆವೃತ್ತಿಯಲ್ಲಿ ಭಾರತದ ವನಿತೆಯರು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ