ನವಿ ಮುಂಬೈಯ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳು ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನ ಕನಸು ಕಾಣುತ್ತಿವೆ. ಈ ಐತಿಹಾಸಿಕ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳ ಉತ್ಸಾಹ ತಾರಕ್ಕೇರಿದೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾಗುವ ಈ ಸಮರಕ್ಕೆ ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ.

ಟಿಕೆಟ್‌ಗಳ ಬೇಡಿಕೆ ಹೆಚ್ಚಿದ್ದು, ಐಸಿಸಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ಎಲ್ಲಾ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ. ಇದರಿಂದಾಗಿ ಅನಧಿಕೃತ ಮಾರ್ಗಗಳು ಸಕ್ರಿಯಗೊಂಡಿವೆ. ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳು ಟಿಕೆಟ್‌ಗಳನ್ನು ₹16,500ರಿಂದ ₹1,36,000 ವರೆಗೆ ಮಾರಾಟ ಮಾಡುತ್ತಿವೆ. ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಬೆಲೆ ₹1 ಲಕ್ಷ ದಾಟಿದೆ!

ಶನಿವಾರ ಕ್ರೀಡಾಂಗಣದ ಎದುರು ಸಾವಿರಾರು ಅಭಿಮಾನಿಗಳು ಟಿಕೆಟ್​ಗಾಗಿ ಪರದಾಡಿದ್ದಾರೆ. ಭಾರತ ನಾಯಕಿ ಹರ್ಮನ್‌ಪ್ರೀತ್ ಕೌರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಟಿಕೆಟ್ ಒದಗಿಸಲು ಪ್ರಯತ್ನಿಸುತ್ತಿದ್ದೇನೆ”ಎಂದು ಹೇಳಿದರು.

ಬಹುಮಾನ ಮೊತ್ತ: ಐಸಿಸಿ ಈ ಬಾರಿ ಮಹಿಳಾ ವಿಶ್ವಕಪ್ ಬಹುಮಾನವನ್ನು ಭಾರೀ ಏರಿಕೆ ಮಾಡಿದೆ. ಗೆಲ್ಲುವ ತಂಡಕ್ಕೆ 4.48 ಮಿಲಿಯನ್ ಯುಎಸ್ ಡಾಲರ್ (₹39.77 ಕೋಟಿ), ರನ್ನರ್-ಅಪ್‌ಗೆ 2.24 ಮಿಲಿಯನ್ ಡಾಲರ್ (₹19.88 ಕೋಟಿ) ಸಿಗಲಿದೆ. ಪುರುಷ ಮತ್ತು ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಇದು ಗರಿಷ್ಠ ಮೊತ್ತ. 2024ರ ಪುರುಷರ ಟಿ20 ವಿಶ್ವಕಪ್ ಗೆಲುವಿಗೆ ₹125 ಕೋಟಿ ನೀಡಿದ್ದ ಬಿಸಿಸಿಐ, ಮಹಿಳಾ ತಂಡ ಗೆದ್ದರೆ ಅದೇ ಮೊತ್ತ ನೀಡಲು ಸಿದ್ಧವಿದೆ ಎಂಬ ವರದಿಗಳೂ ಕೇಳಿಬಂದಿವೆ.

ಭಾರತಕ್ಕೆ ಇದು ಮೂರನೇ ಏಕದಿನ ವಿಶ್ವಕಪ್ ಫೈನಲ್. 2005 ಮತ್ತು 2017ರಲ್ಲಿ ಸೋತಿದ್ದ ತಂಡ, 2020ರ ಟಿ20 ಫೈನಲ್‌ನಲ್ಲೂ ಮುಗ್ಗರಿಸಿತ್ತು. ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಏಕದಿನ ಫೈನಲ್‌ಗೇರಿದೆ. ಆದರೆ ಕಳೆದ ಎರಡು ಟಿ20 ವಿಶ್ವಕಪ್ ಫೈನಲ್‌ಗಳಲ್ಲಿ ರನ್ನರ್-ಅಪ್ ಆಗಿತ್ತು. ಎರಡೂ ತಂಡಗಳು ಚೊಚ್ಚಲ ಗೆಲುವಿನ ಕಾತುರದಲ್ಲಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ