ಜೆಎಸ್‌ಡಬ್ಲ್ಯೂ ಸಮೂಹದ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ (IIS) ಮತ್ತು ಫೆಲ್ಡ್‌ಸ್ಪಾರ್ ಗ್ರೂಪ್ ಹೋಲ್ಡಿಂಗ್ಸ್ ಲಿಮಿಟೆಡ್ ದೀರ್ಘಕಾಲೀನ ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸಿವೆ. ಈ ಒಪ್ಪಂದದ ಅಡಿಯಲ್ಲಿ, ಏಷ್ಯಾದಲ್ಲೇ ಮೊದಲ ಬಾರಿಗೆ IIS ಹೈ-ಪರ್ಫಾರ್ಮೆನ್ಸ್ ಕೇಂದ್ರದಲ್ಲಿ ಫೆಲ್ಡ್‌ಸ್ಪಾರ್‌ನ ಅತ್ಯಾಧುನಿಕ 'ಸ್ಮಾರ್ಟ್ ಸರ್ಫೇಸ್' ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ.

ಈ ಪಾಲುದಾರಿಕೆಯ ಭಾಗವಾಗಿ, IIS ನ ಹೈ ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ 45-ಮೀಟರ್ ಉದ್ದದ 'ಫೆಲ್ಡ್‌ಸ್ಪಾರ್ ಸ್ಮಾರ್ಟ್ ಸರ್ಫೇಸ್ ಟ್ರ್ಯಾಕ್' ಅನ್ನು ಸ್ಥಾಪಿಸಲಾಗುತ್ತಿದೆ.  ಈ ಟ್ರ್ಯಾಕ್‌ನಲ್ಲಿ ಅತ್ಯಾಧುನಿಕ ಸೆನ್ಸಾರ್‌ ಗಳಿದ್ದು, ಕ್ರೀಡಾಪಟುಗಳು ಓಡುವಾಗ ಅವರ ಪ್ರತಿಯೊಂದು ಹೆಜ್ಜೆಯನ್ನೂ ಇದು ಗಮನಿಸುತ್ತದೆ. ಎಷ್ಟು ಬಲದಿಂದ ಓಡುತ್ತಿದ್ದಾರೆ, ವೇಗವೆಷ್ಟು, ಹೆಜ್ಜೆ ಹಾಕುವ ಸ್ಟೈಲ್ ಹೇಗಿದೆ – ಹೀಗೆ ಪ್ರತಿಯೊಂದು ಮಾಹಿತಿಯೂ ತಕ್ಷಣವೇ ಸಿಗುತ್ತದೆ. ಇದರಿಂದ ತರಬೇತುದಾರರಿಗೆ ಕ್ರೀಡಾಪಟುವಿನ ಸಾಮರ್ಥ್ಯವನ್ನು ಪರೀಕ್ಷಿಸಲು ಮತ್ತು ತಪ್ಪುಗಳನ್ನು ಸರಿಪಡಿಸಲು ಸುಲಭವಾಗಲಿದೆ.

ಫೆಲ್ಡ್‌ಸ್ಪಾರ್‌ನ ಸಂಸ್ಥಾಪಕಿ ಅಲ್ವಿನಾ ಚೆನ್ ಹೇಳುವಂತೆ, ಇದು ಬರೀ ಟ್ರ್ಯಾಕ್ ಅಲ್ಲ, ಕ್ರೀಡಾಪಟುವಿನ ದೇಹದ ಚಲನೆಯನ್ನು ಅರ್ಥಮಾಡಿಕೊಳ್ಳುವ ಒಂದು ಹೊಸ ದಾರಿ ಎಂದಿದ್ದಾರೆ.  ಇನ್ನು IIS ನ ಮನೀಷಾ ಮಲ್ಹೋತ್ರಾ ಮಾತನಾಡಿ, ನಮ್ಮ ಕ್ರೀಡಾಪಟುಗಳಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಕೊಡುವುದು ನಮ್ಮ ಗುರಿ, ಈ ತಂತ್ರಜ್ಞಾನದಿಂದ ನಮ್ಮವರು ಏಷ್ಯಾದಲ್ಲೇ ನಂಬರ್ ಒನ್ ಆಗಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

IIS ನ ಹೈ ಪರ್ಫಾರ್ಮೆನ್ಸ್ ಡೈರೆಕ್ಟರ್ ಗ್ಯಾರಿ ಹಾಲ್ ಪ್ರಕಾರ, ಈ ಟ್ರ್ಯಾಕ್ ಪ್ರಯೋಗಾಲಯದ ತರಬೇತಿಯನ್ನು ಮೈದಾನಕ್ಕೆ ತಂದಿದೆ. ಇಲ್ಲಿ ಓಡುವುದರಿಂದ ಕ್ರೀಡಾಪಟುಗಳಿಗೆ ಕಡಿಮೆ ಆಯಾಸವಾಗುತ್ತದೆ, ಅಷ್ಟೇ ಅಲ್ಲ, ಪ್ಯಾರಿಸ್ ಒಲಿಂಪಿಕ್ ಟ್ರ್ಯಾಕ್‌ಗಿಂತ ಶೇ 20 ರಷ್ಟು ಹೆಚ್ಚಿನ ಶಕ್ತಿ ಈ ಟ್ರ್ಯಾಕ್‌ನಿಂದ ಸಿಗುತ್ತದೆ ಎಂದಿದ್ದಾರೆ.

ಭವಿಷ್ಯದಲ್ಲಿ ಇಂತಹ ಸ್ಮಾರ್ಟ್ ಟ್ರ್ಯಾಕ್‌ಗಳನ್ನು ಭಾರತದಾದ್ಯಂತ ವಿಸ್ತರಿಸುವುದು ಜೆಎಸ್‌ಡಬ್ಲ್ಯೂನ ಗುರಿ. ಅಷ್ಟೇ ಅಲ್ಲ, ಈ ತಂತ್ರಜ್ಞಾನವನ್ನು ಕ್ರಿಕೆಟ್, ಫುಟ್‌ಬಾಲ್, ಕಬಡ್ಡಿ ಮತ್ತು ಹಾಕಿ ಅಂತಹ ಬೇರೆ ಕ್ರೀಡೆಗಳಿಗೂ ಬಳಸುವ ಆಲೋಚನೆಯಿದ್ದು ಜಾಗತಿಕ ಮಟ್ಟದಲ್ಲಿ ಪದಕಗಳನ್ನು ಗೆಲ್ಲಬಲ್ಲ ಹೊಸ ತಲೆಮಾರಿನ ಕ್ರೀಡಾಪಟುಗಳನ್ನು ತಯಾರುಮಾಡುತ್ತಿದ್ದೇವೆ ಎಂದಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ