ಜೆಕೆ ಟೈರ್ ಪ್ರಾಯೋಜಿತ ಭಾರತೀಯ ರೇಸಿಂಗ್ ಉತ್ಸವ 2026ಕ್ಕೆ ಕೊಯಮತ್ತೂರಿನ ಕಾರಿ ಮೋಟಾರ್ ಸ್ಪೀಡ್‌ವೇಯಲ್ಲಿ ಭರ್ಜರಿ ಚಾಲನೆ ದೊರೆತಿದೆ. ಉತ್ಸವದ ಪ್ರಮುಖ ಸ್ಪರ್ಧೆಗಳಲ್ಲಿ ಒಂದಾದ  ಎಫ್4 ಭಾರತೀಯ ಚಾಂಪಿಯನ್‌ಶಿಪ್ ನ  ಮೊದಲ ಸುತ್ತಿನಲ್ಲಿ ಮೂರು ರೋಚಕ ಕಾರು ಓಟಗಳು ನಡೆದಿದ್ದು, ಅಗ್ರಸ್ಥಾನಕ್ಕಾಗಿ ಚಾಲಕರ ನಡುವೆ ತೀವ್ರ ಪೈಪೋಟಿ ಕಂಡುಬಂತು.

ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಪರವಾಗಿ ಸ್ಪರ್ಧಿಸಿದ ಆಸ್ಟ್ರೇಲಿಯಾದ ಅರಿಸ್ ಕಿರಿಯಾಕೌ ಮೊದಲ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಮೂರು ಓಟಗಳಲ್ಲಿ ಎರಡು ಬಾರಿ ದ್ವಿತೀಯ ಸ್ಥಾನ ಪಡೆದ ಅವರು, ಮೂರನೇ ಓಟದಲ್ಲಿ ಗೆಲುವು ಸಾಧಿಸುವ ಮೂಲಕ ಒಟ್ಟು 51 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.ಮೊದಲ ಸುತ್ತಿನ ಮೂರು ಓಟಗಳಲ್ಲಿ ಒಟ್ಟು ಏಳು ವಿಭಿನ್ನ ಚಾಲಕರು ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದು, ಈ ಬಾರಿಯ ಚಾಂಪಿಯನ್‌ಶಿಪ್‌ನಲ್ಲಿ ಪೈಪೋಟಿ ಎಷ್ಟು ತೀವ್ರವಾಗಿದೆ ಎಂಬುದನ್ನು ತೋರಿಸಿದೆ. ಎಫ್4 ಭಾರತೀಯ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತು ಕೂಡ ಇದೇ ಕಾರಿ ಮೋಟಾರ್ ಸ್ಪೀಡ್‌ವೇಯಲ್ಲಿ ನಡೆಯಲಿದೆ. ಆ ಬಳಿಕ ಆರು ಸುತ್ತುಗಳ ಚಾಂಪಿಯನ್‌ಶಿಪ್ ದೇಶದ ಇತರ ಓಟದ ಮೈದಾನಗಳಿಗೆ ತೆರಳಲಿದೆ.

ಲುವಿವೆ ಸಂಬುದ್ಲಾ ಗೆಲುವು: ಮೊದಲ ಓಟದಲ್ಲಿ ದಕ್ಷಿಣ ಆಫ್ರಿಕಾದ ಲುವಿವೆ ಸಂಬುದ್ಲಾ ಗಮನ ಸೆಳೆದರು. ಗೋವಾ ಏಸಸ್ ಜೆಎ ರೇಸಿಂಗ್ ತಂಡದ ಪರವಾಗಿ ಸ್ಪರ್ಧಿಸಿದ ಅವರು ಎಂಟನೇ ಸ್ಥಾನದಿಂದ ಓಟ ಆರಂಭಿಸಿ, ಆರಂಭದಲ್ಲೇ ಹಲವು ಚಾಲಕರನ್ನು ಹಿಂದಿಕ್ಕಿದರು. ಮೊದಲ ನಾಲ್ಕು ಸುತ್ತುಗಳಲ್ಲೇ ಅವರು ಮೊದಲ ಮೂರು ಸ್ಥಾನಗಳಿಗಾಗಿ ಪೈಪೋಟಿ ನಡೆಸುವ ಹಂತ ತಲುಪಿದರು.

ಓಟದ ಮಧ್ಯದಲ್ಲಿ ಸುರಕ್ಷತಾ ಕಾರು ಪ್ರವೇಶಿಸಿದ ಕಾರಣ ಚಾಲಕರ ನಡುವಿನ ಅಂತರ ಕಡಿಮೆಯಾಯಿತು. ಆದರೂ ಸಂಬುದ್ಲಾ ತಮ್ಮ ವೇಗವನ್ನು ಕಾಯ್ದುಕೊಂಡು 31 ನಿಮಿಷ 05.808 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿ ಗೆಲುವು ಸಾಧಿಸಿದರು. ಅರಿಸ್ ಕಿರಿಯಾಕೌ 2.245 ಸೆಕೆಂಡ್‌ಗಳ ಅಂತರದಲ್ಲಿ ಎರಡನೇ ಸ್ಥಾನ ಪಡೆದರೆ, ಮೊದಲ ಸ್ಥಾನದಿಂದ ಓಟ ಆರಂಭಿಸಿದ್ದ ಆರನ್ ಮೆಹ್ತಾ ಮೂರನೇ ಸ್ಥಾನ ಪಡೆದರು.ಇದೇ ವೇಳೆ 15 ವರ್ಷದ ಆರನ್ ಮೆಹ್ತಾ ಕೂಡ ಗಮನ ಸೆಳೆದರು. ಕೋಲ್ಕತ್ತಾ ರಾಯಲ್ ಟೈಗರ್ಸ್ ತಂಡದ ಪರವಾಗಿ ಸ್ಪರ್ಧಿಸಿದ ಸಿಂಗಾಪುರದ ಈ ಯುವ ಚಾಲಕ 1:05.652 ಸೆಕೆಂಡ್‌ಗಳ ವೇಗದ ಸುತ್ತು ದಾಖಲಿಸಿ, ಎಫ್4 ಭಾರತೀಯ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಮೊದಲ ಸ್ಥಾನದಿಂದ ಓಟ ಆರಂಭಿಸಿದ ಅತ್ಯಂತ ಕಿರಿಯ ಚಾಲಕ ಎಂಬ ದಾಖಲೆ ಬರೆದರು. ಓಟದಲ್ಲಿ ಮೂರನೇ ಸ್ಥಾನ ಪಡೆದ ಅವರು ತಮ್ಮ ಮೊದಲ ಸ್ಪರ್ಧೆಯಲ್ಲೇ ಉತ್ತಮ ಪ್ರದರ್ಶನ ನೀಡಿದರು.

ಆರ್ಯನ್ ನರೋಲಾಗೆ ಗೆಲುವು: ಭಾನುವಾರ ನಡೆದ ಎರಡನೇ ಓಟದಲ್ಲಿ ಮತ್ತೊಬ್ಬ 15 ವರ್ಷದ ಚಾಲಕ ಆರ್ಯನ್ ನರೋಲಾ ಮಿಂಚಿದರು. ಮೊದಲ ಸ್ಥಾನದಿಂದ ಓಟ ಆರಂಭಿಸಿದ ಗೋವಾ ಏಸಸ್ ಜೆಎ ರೇಸಿಂಗ್ ತಂಡದ ನರೋಲಾ, ಇಡೀ 26 ಸುತ್ತುಗಳ ಓಟದಲ್ಲಿ ಅರಿಸ್ ಕಿರಿಯಾಕೌ ಅವರ ನಿರಂತರ ಒತ್ತಡವನ್ನು ಎದುರಿಸಿ ಗೆಲುವು ಸಾಧಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ