ಸುಪ್ರೀಂ ಕೋರ್ಟ್‌ ನಲ್ಲಿ ಪ್ರಸ್ತುತಪಡಿಸಿದ ಅಂಕಿಅಂಶಗಳ ಪ್ರಕಾರ, ದೆಹಲಿಯಲ್ಲಿ ಮಹಿಳೆಯರ ವಿರುದ್ಧ ನಡೆದ ಅಪರಾಧಗಳ ಸಂಖ್ಯೆ ಈ ವರ್ಷ ಅನೇಕ ಪಟ್ಟು ಹೆಚ್ಚಾಗಿದೆ. ಈ ಹೆಚ್ಚಳ 16ನೇ ಡಿಸೆಂಬರ್‌ 2012ರಂದು ಬಸ್‌ ನಲ್ಲಿ ನಡೆದ ರೇಪ್‌ ಕಾಂಡದ ನಂತರ ಉಂಟಾದ ಜನಾಕ್ರೋಶದ ಕಾರಣದಿಂದಾಗಿ ಹೂಡಿದ ಎಲ್ಲ ಮೊಕದ್ದಮೆಗಳ ಬಗ್ಗೆ ಪೊಲೀಸರು ಪ್ರಥಮ ಮಾಹಿತಿ ವರದಿ ಸಲ್ಲಿಸಿದ್ದರಿಂದ ಉಂಟಾಗಿರಬಹುದು. ಆದರೆ ಇಂದಿನ ಮಹಿಳೆಯರು ಸುಶಿಕ್ಷಿತ ಹಾಗೂ ನಿರೀಕ್ಷೆಗಿಂತ ಹೆಚ್ಚು ಅಭಿವೃದ್ಧಿ ಹೊಂದಿದ ಯಾವ ಮಹಾನಗರದಲ್ಲೂ ಸುರಕ್ಷಿತರಲ್ಲ ಎಂಬುದರಲ್ಲಿ ಸಂದೇಹವಿಲ್ಲ.

ಅಕ್ಟೋಬರ್‌ 13ರವರೆಗೆ ದಾಖಲಾದ 1300 ಬಲಾತ್ಕಾರದ ಮೊಕದ್ದಮೆಗಳು (2012ರಲ್ಲಿ 590), ಮಾಲೆಸ್ಟೇಶನ್‌ನ 2,844 (2012ರಲ್ಲಿ 526), ಚುಡಾಯಿಸುವಿಕೆ ಬಗ್ಗೆ 793 (2012ರಲ್ಲಿ 154), ಅಪಹರಣ 2,906 (2012ರಲ್ಲಿ 1,750) ಮತ್ತು ಕೌಟುಂಬಿಕ ಹಿಂಸೆ ಬಗ್ಗೆ 2,487 (2012ರಲ್ಲಿ 1,605) ಮೊಕದ್ದಮೆಗಳು ದಾಖಲಾದವು. ಸುಪ್ರೀಂ ಕೋರ್ಟ್‌ ಈ ಮಾಹಿತಿ ಪಡೆದಿದ್ದೇಕೆಂದರೆ, ಪೊಲೀಸರು ಮೊಕದ್ದಮೆಗಳನ್ನು ಕ್ಲೋಸ್‌ ಮಾಡಿಬಿಡುತ್ತಾರೆಂದು ಒಂದು ಎನ್‌ಜಿಓ ದೂರಿತ್ತು.

ಡಿಸೆಂಬರ್‌ 16ರ ಘಟನೆಯ ನಂತರ ಜನಾಕ್ರೋಶ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದುದರಲ್ಲಿ ಆಶ್ಚರ್ಯವಿರಲಿಲ್ಲ. ಆದರೆ ಅದರಿಂದ ದುರಾಚಾರಿಗಳೂ, ಲಂಪಟರು ಗಾಬರಿಗೊಳ್ಳುತ್ತಾರೆಂದು ಯೋಚಿಸುವುದು ತಪ್ಪು. ಪೊಲೀಸರು ಈ ಕೇಸ್‌ ಗಳಲ್ಲಿ ಹೆಚ್ಚು ಆಸಕ್ತಿ ವಹಿಸುವುದಿಲ್ಲ. ಏಕೆಂದರೆ ಅವುಗಳಲ್ಲಿ ಅವರಿಗೆ ಹೆಚ್ಚಿನ ಹಣ ಸಿಗುವುದಿಲ್ಲ ಮತ್ತು ಅಪರಾಧಿಗಳಿಗೆ ಶಿಕ್ಷೆ ಕೊಡಿಸಿದ ನಂತರ ಯಾರೂ ಅವರ ಬೆನ್ನು ತಟ್ಟುವುದಿಲ್ಲ.

ಮಹಿಳೆಯರ ವಿರುದ್ಧದ ಹೆಚ್ಚಿನ ಕೇಸ್‌ ಗಳಲ್ಲಿ ಅಪರಾಧಿಗಳು ಪತ್ತೆಯಾಗುತ್ತಾರೆ. ಇಂತಹ ಕೇಸ್‌ ಗಳಲ್ಲಿ ಕಾನೂನಿನ ಪೇಪರ್‌ ವರ್ಕ್‌ ಹೆಚ್ಚಾಗಿರುತ್ತದೆ. ಕೊಲೆ, ಡಕಾಯಿತಿ, ಕನ್ನ ಹಾಕುವಿಕೆ ಇತ್ಯಾದಿಗಳಲ್ಲಿ ಅಪರಾಧಿ ಯಾವುದೇ ಸುಳಿ ಬಿಡದಿದ್ದಾಗ ಪೊಲೀಸರು ಏನಾದರೂ ಮಾಡಬಹುದಾಗಿದೆ. ಮಹಿಳೆಯರ ಕೇಸ್‌ ಗಳಲ್ಲಿ ಮಹಿಳೆಯರು ತಮ್ಮ ಪರಿಚಯದ ವ್ಯಕ್ತಿಯನ್ನು ಹಿಡಿದು ತರುತ್ತಾರೆ ಮತ್ತು ಕೋರ್ಟ್‌ ನಲ್ಲಿ ಮೊಕದ್ದಮೆ ಹೂಡುತ್ತಾರೆ. ಇದರಲ್ಲಿ ಪೊಲೀಸರಿಗೆ ಸಾಹಸ ಪ್ರದರ್ಶಿಸುವ ಅವಕಾಶ ಕಡಿಮೆ.

ಮಹಿಳೆಯರ ಬಗ್ಗೆ ಪೊಲೀಸರ ದೃಷ್ಟಿಕೋನ ಸಮಾಜಕ್ಕೆ ಇರುವಂತೆಯೇ ಇದೆ. ಗಂಡ ಬಿಟ್ಟವರು ಅಥವಾ ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ಪ್ರಾರಂಭದಿಂದಲೇ ದೋಷಿ ಎನ್ನುತ್ತಾರೆ ಮತ್ತು ಅದನ್ನು ಸಾಬೀತುಗೊಳಿಸಲು ಪ್ರಯತ್ನಿಸುತ್ತಿರುತ್ತಾರೆ.

ಬಹಳಷ್ಟು ಸಂದರ್ಭಗಳಲ್ಲಿ ಮಹಿಳೆಯರು ಕೇವಲ ಸೇಡು ತೀರಿಸಿಕೊಳ್ಳಲು ಪೊಲೀಸರ ಬಳಿ ಹೋಗುತ್ತಾರೆ. ಇದು ಬ್ಲ್ಯಾಕ್‌ ಮೇಲ್‌ಮಾಡಲು ಒಳ್ಳೆಯ ಮಾರ್ಗವಾಗಿದೆ. ವರದಕ್ಷಿಣೆ ಕಾನೂನಿನಲ್ಲಿ ಹುಡುಗಿಯ ಕಡೆಯವರು ಗಂಡನ ಮನೆಯಿಂದ ಇಲ್ಲಸಲ್ಲದ್ದನ್ನು ಕೇಳಿ ವಿಚ್ಛೇದನ ಕೇಳಲು ಸಿದ್ಧರಾಗುತ್ತಾರೆ. ಮಹಿಳೆಯರ ಮೇಲಿನ ಅಪರಾಧದ ಕೇಸ್‌ ಗಳಲ್ಲಿ ಬ್ಲ್ಯಾಕ್‌ ಮೇಲ್ ಮಾಡುವುದು ಬಹಳ ಸುಲಭ. ಏಕೆಂದರೆ ಕಾನೂನಿನ ಗಾಲಿಯಂತೂ ಮಹಿಳೆಯರ ಸಾಕ್ಷಿಯಿಂದಲೇ ಚಲಿಸುತ್ತದೆ. ಆರೋಪಿ ಎಷ್ಟೇ ಕೂಗಿ ಕಿರುಚಾಡಿದರೂ ಅವನು ಜೈಲಿಗೆ ಹೋಗಲೇಬೇಕು.

ಮಹಿಳೆಯರ ಮೇಲಿನ ಅಪರಾಧಗಳನ್ನು ಕಡಿಮೆಗೊಳಿಸಲು ಮನೆಗಳಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡುವ ಅಗತ್ಯವಿದೆ. ಕಳೆದ ಕೆಲವು ವರ್ಷಗಳಲ್ಲಿ ಸೋನಿಯಾ ಗಾಂಧಿ ಕೆಲವು ಕಾನೂನುಗಳನ್ನು ಮಾಡಿಸಿದ್ದಾರೆ. ಆದರೆ ಅವು ಒಂದು ಕಡೆ ತಿಳಿಯದೆ ಮಾಡಿದುದಾಗಿದೆ. ಇನ್ನೊಂದು ಕಡೆ ಸಂಪತ್ತಿಗೆ ಸಂಬಂಧಿಸಿದ್ದಾಗಿದೆ. ಕಾನೂನಿಗೆ ಎಂದಿಗೂ ವ್ಯವಹಾರ ಕಲಿಸಲಾಗುವುದಿಲ್ಲ, ಅದು ಕೇವಲ ಶಿಕ್ಷೆ ವಿಧಿಸಬಹುದಷ್ಟೆ. ಆದರೆ ಇಂತಹ ಕೇಸ್‌ ಗಳಲ್ಲಿ ದೂರು ನೀಡುವ ಮಹಿಳೆಯರು ಕೋರ್ಟುಗಳಲ್ಲಿ ವಿಚಾರಣೆ ಎದುರಿಸಿ ಪಾಟೀ ಸವಾಲುಗಳಿಗೆ ಉತ್ತರಿಸುವ ಶಿಕ್ಷೆ ಅನುಭವಿಸಬೇಕಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ