ಬಾಗಲಕೋಟೆ ಜಿಲ್ಲೆಯ ಮಹಾಕೂಟ ಜಿಲ್ಲಾ ಕೇಂದ್ರದಿಂದ 45 ಕಿ.ಮೀ., ಬಾದಾಮಿಯಿಂದ 15 ಕಿ.ಮೀ. ಅಂತರದಲ್ಲಿರುವ ದಕ್ಷಿಣ ಕಾಶಿ ಎಂದೇ ಕರೆಯಲಾಗುವ ಸ್ಥಳ ಮಹಾಕೂಟ. ಇದು ಕಲಾ ಪ್ರೇಮಿಗಳಿಗೆ ಶಿಲ್ಪಕಾಶಿಯಾದರೆ, ದೈವಭಕ್ತರಿಗೆ ದಕ್ಷಿಣ ಕಾಶಿಯಾಗಿದೆ.

ಮಹಾಕೂಟದಲ್ಲಿ ದ್ರಾವಿಡ ಶೈಲಿಯ ದೇವಾಲಯ ಹಾಗೂ ಇಪ್ಪತ್ತಕ್ಕೂ ಹೆಚ್ಚು ಸಣ್ಣಪುಟ್ಟ ದೇವಾಲಯಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಸಂಗಮೇಶ್ವರ, ವಿರೂಪಾಕ್ಷ, ಮುದಿ ಮಲ್ಲಿಕಾರ್ಜುನ, ವೀರಭದ್ರ, ಲಜ್ಜಾಗೌರಿ, ಕೋಟಿಲಿಂಗ ಮೊದಲಾದವುಗಳು. ಮುಕುಟೇಶ್ವರ ದೇವಾಲಯ ಬಾದಾಮಿ ಚಾಲುಕ್ಯರ ದೊರೆ ಒಂದನೇ ಕೀರ್ತಿವರ್ಮನ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿದ್ದು ವಿಕ್ರಮಾದಿತ್ಯನ ಕಾಲದಲ್ಲಿ ಗಜ ಪುಷ್ಪಾಕಾರದ ದೇವಾಲಯ, ರೇಖಾ ನಾಗರ ಶಿಖರವುಳ್ಳ ಸಣ್ಣಪುಟ್ಟ ದೇವಾಲಯಗಳು ಇಲ್ಲಿವೆ.

ಇಲ್ಲಿನ ದೇವಾಲಯಗಳಲ್ಲಿ ಪ್ರದಕ್ಷಿಣಾಪಥವಿದ್ದು ಇವುಗಳಲ್ಲಿ ಗರ್ಭಗೃಹ, ಸಭಾಮಂಟಪ, ಮುಖಮಂಟಪ ಒಳಗೊಂಡಿದ್ದು ಕೆಲವು ದೇವಾಲಯಗಳಲ್ಲಿ ಮಾತ್ರ ಗರ್ಭಗೃಹಕ್ಕೆ ಹೊಂದಿಕೊಂಡ ಸುಕನಾಸಿಗಳನ್ನು ಕಾಣಬಹುದು. ಸಾಮಾನ್ಯವಾಗಿ ದೇವಾಲಯಗಳನ್ನು ನದೀ ತೀರದಲ್ಲಿ, ಸಂಗಮ ಸ್ಥಳದಲ್ಲಿ ಹೊಂಡ ಬಾವಿಗಳ ಸಮೀಪದಲ್ಲಿ ಕಟ್ಟುವುದು ರೂಢಿಗತವಾಗಿದ್ದು, ಮಹಾಕೂಟದಲ್ಲಿಯ ದೇವಾಲಯಗಳನ್ನು ವಿಷ್ಣು ಪುಷ್ಕರಣಿಯ ದಂಡೆಯ ಮೇಲೆ ಕಟ್ಟಲಾಗಿದೆ. ದೇವಾಲಯಗಳಲ್ಲಿ ಗಾಳಿ ಬೆಳಕನ್ನು ಒದಗಿಸಲು ಜಾಲಂಧ್ರಗಳನ್ನು ಅಳವಡಿಸಿದ್ದು ಮುಕುಟೇಶ್ವರನ ದೇಗುಲದಲ್ಲಿ ಸ್ವಸ್ತಿಕ್‌ ಆಕಾರದ ಜಾಲಂಧ್ರವಿದೆ.

ಮುಕುಟೇಶ್ವರ ದೇವಾಲಯ ಪ್ರಸಿದ್ಧವಾಗಿದ್ದು, ಇಲ್ಲಿ ಕಾಶಿ ತೀರ್ಥ ಮತ್ತು ಶಿವ ಪುಷ್ಕರಣಿ ಎಂಬ ಎರಡು ಹೊಂಡಗಳಿವೆ. ಇಲ್ಲಿ ಪ್ರತಿದಿನ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಮಧ್ಯದಲ್ಲಿ ವಿಷ್ಣು ಪುಷ್ಕರಣಿ ಹೊಂಡವಿದೆ. ಅದರ ಮಧ್ಯದಲ್ಲಿರುವ ಮಂಟಪದಲ್ಲಿ ಚತುರ್ಮುಖ ಲಿಂಗವಿದೆ. ಇದನ್ನು ಅಗಸ್ತ್ಯ ಮುನಿ ನಿರ್ಮಿಸಿದನೆಂದು ಹೇಳಲಾಗುತ್ತದೆ. ಈ ಲಿಂಗ ಚತುರ್ಮುಖ ಬ್ರಹ್ಮನ ಸಂಕೇತವಾಗಿದೆ. ಅಗಸ್ತ್ಯ ಮುನಿ ಈ ಮಹಾಕೂಟದಲ್ಲಿ ವಾತಾಪಿ ಮತ್ತು ಇಲ್ವಲ ಎಂಬ ಇಬ್ಬರು ರಾಕ್ಷಸರನ್ನು ನಾಶ ಮಾಡಿದನೆಂದು ಹೇಳುವರು. ಇದು ನೂರಾರು ಶಿವಲಿಂಗಗಳ ಕೂಟವಾಗಿದ್ದರಿಂದ ಇದನ್ನು ಮಹಾಕೂಟ ಎಂದು ಕರೆಯುವರು. ಅನೇಕ ದೇಗುಲಗಳಲ್ಲಿ ದೇವರಿಗೆ ಎರಡು ಹೊತ್ತು ಪೂಜೆ ಸಲ್ಲುವುದನ್ನು ನಾವು ಕಾಣುತ್ತೇವೆ. ಆದರೆ ಇಲ್ಲಿನ ವಿಶೇಷತೆಯೆಂದರೆ ಮುಕುಟೇಶ್ವರನಿಗೆ ಮೂರು ಹೊತ್ತು ಪೂಜೆ ಸಲ್ಲಿಸುತ್ತಿರುವುದು. ಅಷ್ಟೇ ಅಲ್ಲ, ವರ್ಷದಲ್ಲಿ ಮೂರು ರಾತ್ರಿ ಚತುರ್ದಶಿ ಇದ್ದಾಗ ದೀಪಾರಾಧನೆ ಜರುಗಿಸಲಾಗುತ್ತದೆ. ಈ ಕಾರ್ಯ ಮುಗಿದ ನಂತರ, 5 ಗಂಟೆ ಅವಧಿ ಈ ಸ್ಥಳದಲ್ಲಿ ಯಾರೂ ಇರುವಂತಿಲ್ಲ.

ವರ್ಷದಲ್ಲಿ ಮೂರು ಸಲ ದೀಪಾರಾಧನೆ ಜರುಗಿಸುವ ಸಂದರ್ಭದಲ್ಲಿ ಭಕ್ತಜನರು ಈ ಕಾರ್ಯಕ್ಕೆ ಹಾಲು, ಮೊಸರು, ತುಪ್ಪ ಗೋಧಿ, ಅಕ್ಕಿಗಳನ್ನು ಸಮರ್ಪಿಸುವರು.

ಮಹಾಕೂಟೇಶ್ವರ ದೇವಾಲಯದ ಕಂಬಗಳ ಮೇಲೆ ಚಾಲುಕ್ಯ ಚಕ್ರವರ್ತಿ ವಿಜಯಾದಿತ್ಯ (696-733) ಹಾಗೂ ಬಪ್ಪರಸನ (ಕ್ರಿ.ಶ.934) ಕಾಲದ ದಾನಕ್ಕೆ ಸಂಬಂಧಿಸಿದ ಶಿಲಾಲಿಪಿಗಳಿವೆ. ಇಲ್ಲಿರುವ ಇನ್ನಿತರ ದೇವಾಲಯಗಳೆಂದರೆ ಚಂದ್ರಶೇಖರ, ಲಖುವೇಶ, ಬಸಲಿಂಗ, (ನಾಗರ ಶೈಲಿ) ಅರಿಕೇಶ್ವರ ದೇವಾಲಯ, ಸಂಗಮೇಶ್ವರ ದೇವಾಲಯ ಇತ್ಯಾದಿ. ಮುಖ್ಯವಾಗಿ ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯ ಇಲ್ಲಿನ ಪ್ರಮುಖ ದೇವಾಲಯಗಳು. ಇಲ್ಲಿ ಪ್ರತಿ ವರ್ಷ ವೈಶಾಖ ಶುದ್ಧ ಹುಣ್ಣಿಮೆಯಂದು ಮಹಾರಥೋತ್ಸವ ಜರುಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ