ಹ್ಞಾಂ! ನಾನು ಉಪಯೋಗಿಸುವ ಎಣ್ಣೆಗಿಂತಲೂ ಉತ್ತಮ ಎಣ್ಣೆ ಇನ್ಯಾವುದಿದೆ ಎಂದು ಹುಬ್ಬೇರಿಸುತ್ತಿರುವಿರಾ? ಸರಿ ಹಾಗಾದ್ರೆ, ಈ ಸರಳ ಲೇಖನವನ್ನು ಓದಿ ಖಾದ್ಯ ತೈಲಗಳ ಬಗ್ಗೆ ತಿಳಿಯಿರಿ.

ತೈಲಾಂಶಗಳು

ಎಲ್ಲಾ ಎಣ್ಣೆಗಳೂ ಸಾಕಷ್ಟು ವಿವಿಧ ಅಂಶಗಳಿಂದ ತಯಾರಿಸಲ್ಪಟ್ಟಿರುತ್ತವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಸ್ಯಾಚುರೇಟೆಡ್‌ಫ್ಯಾಟ್ಸ್, ಮಾನೊ ಅನ್‌ಸ್ಯಾಚುರೇಟೆಡ್‌ ಫ್ಯಾಟ್ಸ್ ಮತ್ತು ಪಾಲಿ ಅನ್‌ಸ್ಯಾಚುರೇಟೆಡ್‌ ಫ್ಯಾಟ್ಸ್. ಇವೆಲ್ಲವುಗಳನ್ನು ಎಣ್ಣೆಯ ಪ್ಯಾಕೆಟ್ ಮೇಲೆ ತಯಾರಕರು ಮುದ್ರಿಸಿಯೇ ಇರುತ್ತಾರೆ.

ಈ ತೈಲಾಂಶಗಳ ಬಗ್ಗೆ ಇನ್ನೂ ಸರಳವಾಗಿ ಹೇಳಬೇಕೆಂದರೆ, ಮಾನೊ ಸ್ಯಾಚುರೇಟೆಡ್‌ ಫ್ಯಾಟ್ಸ್ ಅತ್ಯುತ್ತಮ ಫ್ಯಾಟ್‌ಗಳಾಗಿವೆ. ಆದ್ದರಿಂದ ಅತಿ ಹೆಚ್ಚು ಮಾನೊ ಸ್ಯಾಚುರೇಟ್‌ ಅಂಶಗಳಿರುವ ಎಣ್ಣೆಯನ್ನು ಅತ್ಯುತ್ತಮ ಎಣ್ಣೆ ಎಂದು ಹೇಳಲಾಗುತ್ತದೆ. ವಿವಿಧ ತೈಲಗಳು, ಅವುಗಳಲ್ಲಿರುವ ಕೊಬ್ಬಿನಂಶ ಮತ್ತು ಜ್ವಲನ ಬಿಂದುವಿನ (ಸ್ಮೋಕ್‌ ಪಾಯಿಂಟ್‌) ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.

ಆಲಿವ್ ‌ಆಯಿಲ್‌ನಲ್ಲಿ ಅತ್ಯುತ್ತಮ ಮಾನೊ ಸ್ಯಾಚುರೇಟೆಡ್‌ ಅಂಶಗಳಿರುವುದಂತೂ ಸರ್ವವಿಧಿತ. ಇದರ ಜ್ವಲನ ಬಿಂದು ಅತಿ ಕಡಿಮೆ ಇರುವುದರಿಂದ, ಹುರಿಯಲು ಮತ್ತು ಕರಿಯಲು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೆ, ಇದರಲ್ಲಿ ಅತಿ ಹೆಚ್ಚು ಸ್ಯಾಚುರೇಟೆಡ್‌ ಕೊಬ್ಬಿನಂಶ ಕಂಡುಬರುತ್ತದೆ.

ಇನ್ನೊಂದು ಬಹುಮುಖ್ಯ ಅಂಶವೆಂದರೆ, ಸ್ಯಾಚುರೇಟೆಡ್‌ ಕೊಬ್ಬಿನಂಶ. ಈ ಕೊಬ್ಬಿನಂಶಗಳನ್ನು ಅರಗಿಸಿಕೊಳ್ಳುವುದು ದೇಹಕ್ಕೆ ಸ್ವಲ್ಪ ಕಷ್ಟಸಾಧ್ಯವೇ ಸರಿ. ಅಧ್ಯಯನಗಳ ಪ್ರಕಾರ ತಿಳಿದುಬಂದಿದ್ದು ಏನೆಂದರೆ, ಈ ಕೊಬ್ಬಿನಂಶಗಳು ಕಾರ್ಡಿಯೋ ವ್ಯಾಸ್ಕುಲಾರ್‌ ತೊಂದರೆಗಳಿಗೆ ಕಾರಣವಾಗುತ್ತದೆಂದು ಹೇಳಲಾಗುತ್ತದೆ. ಆದ್ದರಿಂದ ಅತಿ ಕಡಿಮೆ ಸ್ಯಾಚುರೇಟೆಡ್‌ ಕೊಬ್ಬಿನಂಶ ಇರುವ ಖಾದ್ಯ ತೈಲವನ್ನೇ ಬಳಸಬೇಕು. ಇದಕ್ಕೆ ಸೂರ್ಯಕಾಂತಿ ಎಣ್ಣೆ ಉತ್ತಮವಾಗಿದ್ದು ಸಮಲತೋಲನವನ್ನು ಕಾಯ್ದುಕೊಳ್ಳುವುದರೊಂದಿಗೆ, ಇದರಲ್ಲಿ ಕಡಿಮೆ ಸ್ಯಾಚುರೇಟೆಡ್‌ ಕೊಬ್ಬಿನಂಶ ಮತ್ತು ಅಧಿಕ ಪಾಲಿ ಹಾಗೂ ಮಾನೊ ಸ್ಯಾಚುರೇಟೆಡ್‌ ಕೊಬ್ಬಿನಂಶಗಳು ಪ್ರಯೋಜನಕಾರಿಯಾಗಿವೆ.

ಇನ್ನು ಕೊನೆಯ ಅಂಶವೇನೆಂದರೆ, ಪಾಲಿ ಸ್ಯಾಚುರೇಟೆಡ್‌. ಇದು ಮಾನೊ ಸ್ಯಾಚುರೇಟೆಡ್‌ ಕೊಬ್ಬಿನಂಶದಂತೆ ಇದ್ದು, ಕಾರ್ಡಿಯೋ ವ್ಯಾಸ್ಕುಲಾರ್‌ ತೊಂದರೆಗಳನ್ನು ದೂರ ಮಾಡುತ್ತದೆ ಮತ್ತು ಹೃದಯಾಘಾತದ ಅಪಾಯದಿಂದಲೂ ದೂರವಿರಿಸುತ್ತದೆ. ಸೂರ್ಯಕಾಂತಿ ಎಣ್ಣೆಯಲ್ಲಿ ವಿಫುಲವಾದ ಪಾಲಿ ಅನ್‌ಸ್ಯಾಚುರೇಟೆಡ್‌ ಕೊಬ್ಬಿನಂಶ ದೊರೆಯುತ್ತದೆ.

ತೈಲ ಸಂರಕ್ಷಣೆ

ಬಹುತೇಕ ಎಲ್ಲ ಕಂಪನಿಗಳೂ ತೈಲ ಸಂರಕ್ಷಣೆಗೆ ್ಡ್‌ (319)  ಮತ್ತು ್‌(320) ಮಾದರಿಗಳನ್ನು ಅನುಸರಿಸುತ್ತವೆ. ಈ ರೀತಿಯ ಸಂರಕ್ಷಣೆಯಿಂದಾಗಿ ಕ್ಯಾನ್ಸರ್‌ ಮತ್ತು ಹೊಟ್ಟೆಯಲ್ಲಿ ಗೆಡ್ಡೆಯಾಗುವುದೆಂಬ ಕಾರಣದಿಂದಾಗಿ, ಜಪಾನ್‌ ಮತ್ತು ಯೂರೋಪ್‌ನಂತಹ ರಾಷ್ಟ್ರಗಳು ಈ ಮಾದರಿಯನ್ನು ನಿರ್ಬಂಧಿಸಿವೆ. ಇನ್ನು ಕೆಲವು ಕಂಪನಿ ಸಿಟ್ರಿಕ್‌ ಆ್ಯಸಿಡ್‌ ಮಾದರಿಯ ಸಂರಕ್ಷಣೆಯನ್ನು ಬಳಸುತ್ತದೆ.

ಒಟ್ಟಾರೆ ಯಾವುದೇ ಕಂಪನಿಯಾಗಲಿ, ಸಂರಕ್ಷಣಾ ವಿಧಾನವನ್ನು ಅನುಸರಿಸುತ್ತಿದೆಯೋ ಇಲ್ಲವೋ ಎಂಬುದನ್ನು ಗಮನಿಸಬೇಕು. ಆದ್ದರಿಂದ ತೈಲ ಸಂರಕ್ಷಣಾ ವಿಧಾನಗಳನ್ನು ಅನುಸರಿಸದೇ ಇರುವಂತಹ ಎಣ್ಣೆಯನ್ನೇ ಆಯ್ದುಕೊಳ್ಳಬೇಕು ಮತ್ತು ತೈಲಾಂಶಗಳಲ್ಲಿ ಕಡಿಮೆ ಸ್ಯಾಚುರೇಟೆಡ್‌ ಕೊಬ್ಬಿನಂಶ ಹಾಗೂ ಪಾಲಿ ಸ್ಯಾಚುರೇಟೆಡ್‌ ಕೊಬ್ಬಿನಂಶಗಳಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ತಯಾರಿಕಾ ವಿಧಾನ

ಎಣ್ಣೆ ಉತ್ಪಾದಿಸುವುದು ಕೂಡ ಅಡುಗೆ ಮಾಡಿದಂತೆಯೇ ಇರುತ್ತದೆ. ಎಣ್ಣೆ ಉತ್ಪಾದನೆಗೆ ಒಂದು ನಿರ್ದಿಷ್ಟ ವಿಧಾನವಿದ್ದರೂ ಕೂಡ, ಎಲ್ಲರೂ ಒಂದೇ ಗುಣಮಟ್ಟದ ಎಣ್ಣೆ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಎಣ್ಣೆಯ ರುಚಿ ನೋಡುವುದರ ಮೂಲಕ ಅದರ ಗುಣಮಟ್ಟವನ್ನು ಸುಲಭವಾಗಿ ಅರಿಯಬಹುದಾಗಿದೆ. ಹೀಗೆ ಬೇರೆ ಬೇರೆ ಕಂಪನಿಗಳ ಎಣ್ಣೆಗಳ ರುಚಿ ನೋಡಿದಾಗ ವ್ಯತ್ಯಾಸ ಕಂಡುಬರುತ್ತದೆ. ಆದಾಗ್ಯೂ, ಇನ್ನೂ ನಿಖರವಾಗಿ ಪರೀಕ್ಷಿಸಬೇಕು ಎಂದರೆ, ಎರಡು ಚಮಚ ಎಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಂಡು ಬಾಯಿಯ ಎಲ್ಲ ಭಾಗಗಳನ್ನೂ ಸ್ಪರ್ಷಿಸುವಂತೆ ಮುಕ್ಕಳಿಸಿ ಉಗಿಯಬೇಕು. ಈ ಕಚ್ಚಾ ಎಣ್ಣೆಯ ರುಚಿ ಮೂಲಕ ಅಡುಗೆ ಎಣ್ಣೆಯ ಗುಣಮಟ್ಟವನ್ನು ತಿಳಿಯಬಹುದಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ